SOCIAL MEDIA

Newsletter

PARTNER SITES
Select Language Select State

Actress Ambika : ಸ್ವಂತ ತಂಗಿಯಿಂದಲೇ ನಟಿ ಅಂಬಿಕಾ ಮೇಲೆ 46 ಕೋಟಿ ರೂ. ವಂಚನೆ ಆರೋಪ

Actress Ambika: ಚಕ್ರವ್ಯೂಹ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಜೊತೆ ತೆರೆ ಹಂಚಿಕೊಂಡಿದ್ದ ಅಂಬಿಕಾ ವಿರುದ್ಧ ದೂರು ದಾಖಲಾಗಿದೆ.

Reported By Chetana Devarmani Written By Chetana Devarmani
Published: Sep 21, 2026, 04:19 PM IST | Updated: Sep 21, 2026, 04:24 PM IST
Join

Actress Ambika cheque fraud case : ಅಂಬಿಕಾ ಕನ್ನಡದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು. ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅಂಬಿಕಾ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ನಟಿ ತ್ರಿಷಾ ಕೃಷ್ಣನ್‌ ಬಗ್ಗೆ ಮಾತನಾಡಿ ಅಂಬಿಕಾ ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಅಂಬಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಅಂಬಿಕಾ ಮತ್ತು ರಾಧಾ ಒಂದು ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯರಾಗಿದ್ದರು. ಇವರಿಬ್ಬರೂ ಸಹೋದರಿಯರು ಕೂಡ ಹೌದು. ಆದರೆ ಇದೀಗ ಇವರಿಬ್ಬರ ಕೌಟುಂಬಿಕ ಹಾಗೂ ಆಸ್ತಿ ವಿವಾದ ಪೊಲೀಸರ ಮೊರೆ ಹೋಗಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಟಿ ರಾಧಾ ಅವರು ತಮ್ಮ ಅಕ್ಕ ಹಾಗೂ ಖ್ಯಾತ ನಟಿ ಅಂಬಿಕಾ ಹಾಗೂ ಅವರ ಸಹೋದರ ಮಲ್ಲಿಕಾರ್ಜುನ್ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಗೆ ಚೆಕ್ ವಂಚನೆ ಆರೋಪದಡಿ ದೂರು ದಾಖಲಿಸಿದ್ದಾರೆ. ನಟಿ ರಾಧಾ ಅವರ ದೂರಿನ ಪ್ರಕಾರ, ಮೊದಲು ಅವರು ವ್ಯಾಪಾರ ಉದ್ದೇಶಗಳಿಗಾಗಿ ಕೆಲವು ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಅವರು ಹಳೆಯ ಚೆಕ್‌ಬುಕ್ ಬಳಸುವುದನ್ನು ನಿಲ್ಲಿಸಿದ ನಂತರವೂ, ಕೆಲವು ಚೆಕ್‌ಗಳನ್ನು ತನಗೆ ತಿಳಿಯದಂತೆ ತೆಗೆದುಕೊಂಡು ಬಳಸಲಾಗಿದೆ ಎಂದು ನಟಿ ರಾಧಾ ಆರೋಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಐದು ಹಳೆಯ ಚೆಕ್‌ಗಳನ್ನು ಕದ್ದು 46 ಕೋಟಿ ರೂ. ಗಳನ್ನು ಬ್ಯಾಂಕ್‌ಗೆ ಜಮಾ ಮಾಡಲು ಯತ್ನಿಸಿದ್ದರು ಎಂದು ನಟಿ ರಾಧಾ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಚೆಕ್‌ಗಳಿಂದ ನಟಿ ಅಂಬಿಕಾ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ಸುದ್ದಿ ಬಹಿರಂಗವಾಗಿದೆ.

ನಟಿ ರಾಧಾ ಪ್ರಕಾರ, ಸೆಪ್ಟೆಂಬರ್ 16 ರಂದು ಅವರ ಬ್ಯಾಂಕ್ ಖಾತೆಯ ಚೆಕ್ ವಿವರಗಳ ಬಗ್ಗೆ ಸಂದೇಶವನ್ನು ಸ್ವೀಕರಿಸಿದಾಗ ಈ ವಿಷಯ ತಮ್ಮ ಗಮನಕ್ಕೆ ಬಂದಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಬ್ಯಾಂಕ್ ನ್ನು ಸಂಪರ್ಕಿಸಿದಾಗ ಸಂಬಂಧಪಟ್ಟ ಚೆಕ್ ಗಳಿಗೆ ಸ್ಟಾಪ್ ಪೇಮೆಂಟ್ ವಿಧಿಸಿದೆ ಎಂದರು. ಈ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ರಾಧಾ ತಿಳಿಸಿದ್ದಾರೆ ಎಂದು ವರದಿ ಮಾಡಿದೆ. ಸೆಪ್ಟೆಂಬರ್ 18 ರಂದು ಮತ್ತೊಂದು ಸಲ ಹಣ ಡ್ರಾ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ತಮಗೆ ಅರಿವಿಲ್ಲದೆ ಚೆಕ್‌ಗಳು ಹೇಗೆ ಹೋದವು? ಅವುಗಳಲ್ಲಿ ಹಣದ ಮೊತ್ತವನ್ನು ನಮೂದಿಸಿದವರು ಯಾರು? ಬ್ಯಾಂಕ್‌ನಿಂದ ಹಣ ತೆಗೆಯಲು ಯತ್ನಿಸಿದವರು ಯಾರು? ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ರಾಧಾ ಕೋರಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರದಲ್ಲಿ ರಾಧಾ ತನ್ನ ಅಕ್ಕ ಅಂಬಿಕಾ ಜೊತೆಗೆ ಸಹೋದರ ಮಲ್ಲಿಕಾರ್ಜುನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಆರೋಪಗಳ ಬಗ್ಗೆ ಪೊಲೀಸ್ ತನಿಖೆ ನಂತರವೇ ಹೆಚ್ಚಿನ ವಿವರಗಳು ತಿಳಿಉ ಬರಲಿವೆ. ಚೆಕ್‌ಗಳ ಜೊತೆಗೆ ತಮ್ಮ ವೈಯಕ್ತಿಕ ವಸ್ತುಗಳು ಮತ್ತು ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ರಾಧಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲಕಾಲ ತಾನು ವಾಸವಿದ್ದ ಮನೆಗೆ ಪ್ರವೇಶಿಸಲು ಅವಕಾಶ  ನೀಡಿಲ್ಲ, ಅಲ್ಲದೇ ತನ್ನ ಕೊಠಡಿಯಲ್ಲಿರುವ ವಸ್ತುಗಳು ಮತ್ತು ದಾಖಲೆಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ತನಿಖೆ ನಟೆಸುತ್ತಿದ್ದಾರೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES