• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ದಿಢೀರ್‌ ಕ್ಯಾಮರಾ ಮುಂದೆ ಬಂದ 'ಚಂದ್ರ ಚಕೋರಿ' ನಟಿ ಪ್ರಿಯಾ..! ನಟನೆಗೆ ಗುಡ್​ಬೈ ಹೇಳಿದ್ದೇಕೆ ಗೊತ್ತೆ?

ದಿಢೀರ್‌ ಕ್ಯಾಮರಾ ಮುಂದೆ ಬಂದ 'ಚಂದ್ರ ಚಕೋರಿ' ನಟಿ ಪ್ರಿಯಾ..! ನಟನೆಗೆ ಗುಡ್​ಬೈ ಹೇಳಿದ್ದೇಕೆ ಗೊತ್ತೆ?

ಸ್ಯಾಂಡಲ್ವುಡ್‌ನಲ್ಲಿ ಹೊಸ ಇತಿಹಾಸ ಬರೆದು, ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿದ್ದ 'ಚಂದ್ರ ಚಕೋರಿ' ಸಿನಿಮಾದ ನಾಯಕಿ ಪ್ರಿಯಾ ಛಾಬ್ರಿಯಾ ಇದೀಗ ಏಕಾಏಕಿ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಂಡು ಇಷ್ಟುದಿನ ನಾಪತ್ತೆಯಾಗಿದ್ದ ಬಗ್ಗೆ ಸಂಚಲನ ಹೇಳಿಕೆ ನೀಡಿದ್ದಾರೆ.. ಅಸಲಿಗೆ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ.. ಈಗ ಮರಳಿದ್ದೇಕೆ..? ಸಂಪೂರ್ಣ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 30, 2026, 03:23 PM IST|Updated: Sep 30, 2026, 03:24 PM IST
joinshare
ದಿಢೀರ್‌ ಕ್ಯಾಮರಾ ಮುಂದೆ ಬಂದ 'ಚಂದ್ರ ಚಕೋರಿ' ನಟಿ ಪ್ರಿಯಾ..! ನಟನೆಗೆ ಗುಡ್​ಬೈ ಹೇಳಿದ್ದೇಕೆ ಗೊತ್ತೆ?
Image Credit: chandra chakori movie

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Chandra Chakori heroine Priya Chabria : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 'ಚಂದ್ರ ಚಕೋರಿ' ಸಿನಿಮಾಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಶ್ರೀಮುರಳಿ ಮತ್ತು ಪ್ರಿಯಾ ಜೋಡಿಯಾಗಿ ಅಭಿನಯಿಸಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತ್ತು. ಚಿತ್ರದಲ್ಲಿ ಶ್ರೀಮುರಳಿ ಪುಟ್ಟರಾಜು ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಪ್ರಿಯಾ ತಮ್ಮ ಮುಗ್ಧ ಅಭಿನಯದ ಮೂಲಕ ‘ಸುಧಾ’ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಪ್ರಿಯಾ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಭವಿಷ್ಯವಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಈ ಯಶಸ್ಸಿನ ಬೆನ್ನಲ್ಲೇ ಅವರು ದಿಢೀರನೆ ಚಿತ್ರರಂಗದಿಂದ ಮಾಯವಾಗಿದ್ದರು.

ಸುದೀರ್ಘ ವರ್ಷಗಳ ಕಾಲ ಪ್ರಿಯಾ ತೆರೆಯ ಮೇಲೆ ಎಲ್ಲೂ ಕಾಣಿಸಿಕೊಳ್ಳದಿದ್ದಾಗ, ಅವರು ಎಲ್ಲಿದ್ದಾರೆ ಮತ್ತು ಯಾಕೆ ಸಿನಿಮಾಗಳಿಂದ ದೂರವಾದರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಸದಾ ಕಾಡುತ್ತಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ತೆರೆ ಎಳೆದಿದ್ದು, ತಮ್ಮ ಕಮ್‌ಬ್ಯಾಕ್ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

'ಚಂದ್ರ ಚಕೋರಿ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರಿಯಾ ಅವರ ತಂದೆಯ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಸಿನಿಮಾ ವೃತ್ತಿಜೀವನಕ್ಕಿಂತ ಕುಟುಂಬವೇ ಮುಖ್ಯ ಎಂದು ಭಾವಿಸಿದ ಅವರು, ತಕ್ಷಣವೇ ಸೌದಿ ಅರೇಬಿಯಾದಲ್ಲಿದ್ದ ತಮ್ಮ ಕುಟುಂಬದ ಬಳಿಗೆ ತೆರಳಿದರು. ಆ ಸಮಯದಲ್ಲಿ ಕನ್ನಡ ಚಿತ್ರರಂಗದಿಂದ ಅವರಿಗೆ ಹಲವಾರು ದೊಡ್ಡ ಆಫರ್‌ಗಳು ಹುಡುಕಿಕೊಂಡು ಬಂದಿದ್ದರೂ ಸಹ, ತಂದೆಯ ಆರೈಕೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಎಲ್ಲ ಅವಕಾಶಗಳನ್ನೂ ನಮ್ರವಾಗಿ ನಿರಾಕರಿಸಿದರು.

ಸುಮಾರು ಎರಡು ವರ್ಷಗಳ ಕಾಲ ಸೌದಿಯಲ್ಲೇ ಇದ್ದು ತಂದೆಯ ಉಪಚರಿಸಿದ ನಂತರ ಅವರು ಭಾರತಕ್ಕೆ ಹಿಂತಿರುಗಿದರು. ಆದರೆ ಅಷ್ಟರಲ್ಲಾಗಲೇ ಕಾಲ ಬದಲಾಗಿತ್ತು ಹಾಗೂ ಅವರಿಗೆ ಬರುತ್ತಿದ್ದ ಸಿನಿಮಾ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಹೀಗಾಗಿ ಅವರು ಜಾಹೀರಾತುಗಳು ಹಾಗೂ ನೃತ್ಯ ಕಾರ್ಯಕ್ರಮಗಳಿಗೆ ಸೀಮಿತವಾಗಬೇಕಾಯಿತು. ತದನಂತರ ವಿವಾಹ ಬಂಧನಕ್ಕೆ ಒಳಗಾದ ಪ್ರಿಯಾ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು.

ಆದರೆ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಚಂದ್ರ ಚಕೋರಿ' ಸಿನಿಮಾದ ಹಾಡುಗಳು ಮತ್ತು ಪ್ರಿಯಾ ಅಭಿನಯದ ದೃಶ್ಯಗಳು ಮತ್ತೆ ವೈರಲ್ ಆಗಲು ಪ್ರಾರಂಭಿಸಿದವು. ಕಳೆದ ಒಂದು ವರ್ಷದಿಂದ ನೆಟ್ಟಿಗರು ಹಾಗೂ ಅಭಿಮಾನಿಗಳು ಈ ಚಿತ್ರದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುತ್ತಿದ್ದರು. ಅಭಿಮಾನಿಗಳಿಂದ ಹರಿದುಬಂದ ಪ್ರೀತಿಯ ಸಂದೇಶಗಳು ಮತ್ತು ಅವರನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ನೋಡಬೇಕೆಂಬ ಹಂಬಲ ನಟಿಯ ಗಮನ ಸೆಳೆಯಿತು. ಅಭಿಮಾನಿಗಳ ಈ ಪ್ರೀತಿಗೆ ಸ್ಪಂದಿಸಿದ ಪ್ರಿಯಾ, ಚಂದ್ರ ಚಕೋರಿ ಸಿನಿಮಾದ ಹಾಡುಗಳಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ಮೂಲಕ ಮತ್ತೆ ಸಕ್ರಿಯರಾದರು.

ಇದೀಗ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಮರಳಿರುವ ಪ್ರಿಯಾ, ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೆ ಜಾಹೀರಾತು, ನಾಟಕ ಹಾಗೂ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿಯೂ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈಗಾಗಲೇ ತಮ್ಮ ಕೈಯಲ್ಲಿ ಕೆಲವು ಹೊಸ ಯೋಜನೆಗಳಿದ್ದು, ಸೂಕ್ತ ಸಮಯ ಬಂದಾಗ ಅವುಗಳ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ವರ್ಷಗಳ ವಿರಾಮದ ನಂತರ ತಮ್ಮ ನೆಚ್ಚಿನ ಸುಧಾ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿರುವುದು 90ರ ಸಿನಿಪ್ರೇಕ್ಷಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಹೊಸ ಭರವಸೆ ಮತ್ತು ಸಂತಸವನ್ನು ಮೂಡಿಸಿದೆ. ಆದಷ್ಟು ಬೇಗ ಅವರನ್ನು ಬೆಳ್ಳಿ ಪರದೆಯ ಮೇಲೆ ನೋಡು ಅದೃಷ್ಟ ಅವರ ಫ್ಯಾನ್ಸ್‌ ಲಭಿಸಲಿ...

Add Zee News as a Preferred Source
TAGS:
Cinema