SOCIAL MEDIA

Newsletter

PARTNER SITES
Select Language Select State

ಕಿರುತೆರೆಯ ಕಹಿ ಅನುಭವಗಳ ನಡುವೆ ಬೆಳ್ಳಿತೆರೆಯಲ್ಲಿ ಅಪರೂಪದ ಗೌರವ! "ರಾಮಾಯಣ"ದ ಅನುಭವ ಬಿಚ್ಚಿಟ್ಟ ಕೌಸಲ್ಯೆ

ಖ್ಯಾತ ನಟಿ ಇಂದಿರಾ ಕೃಷ್ಣನ್ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ನಟಿಸಿದ ಅನುಭವವನ್ನು ಮಾಧ್ಯಮವೊಂದರ ಜೊತೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತಾಯಿ ಮಾತಾ ಕೌಸಲ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಸೂಪರ್‌ಸ್ಟಾರ್ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅವರ ಸರಳತೆ, ವಿನಯತೆ ಮತ್ತು ಸೆಟ್‌ನಲ್ಲಿನ ತಮ್ಮ ಮರೆಯಲಾಗದ ಒಡನಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 12, 2026, 15:09 IST | Updated: Nov 12, 2026, 15:19 IST
Image Credit: Indira Krishnan
Join

Indira Krishnan on Ranbir : ಖ್ಯಾತ ನಟಿ ಇಂದಿರಾ ಕೃಷ್ಣನ್ ಅವರು 'ರಾಮಾಯಣ' ಚಿತ್ರದಲ್ಲಿ ನಟಿಸಿದ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಅವರ ತಾಯಿ ಮಾತಾ ಕೌಸಲ್ಯೆ ಪಾತ್ರದಲ್ಲಿ ನಟಿಸಿರುವ ಅವರು, ಸೂಪರ್‌ಸ್ಟಾರ್ ರಣಬೀರ್ ಕಪೂರ್ ಅವರ ನಡವಳಿಕೆ ಮತ್ತು ಸರಳತೆಯನ್ನು ಕೊಂಡಾಡಿದ್ದಾರೆ.. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಅಭಿನಯಿಸಿದ ಅನುಭವ ಮತ್ತು ಕಿರುತೆರೆ ಲೋಕದ ಕೆಲವೊಂದು ಕಹಿ ಅನುಭವಗಳ ಬಗ್ಗೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲ ಬಾರಿಗೆ 'ರಾಮಾಯಣ' ಚಿತ್ರದ ಸೆಟ್‌ಗೆ ಹೋದಾಗ ನನ್ನ ಮನಸ್ಸಿನಲ್ಲಿ ಸಣ್ಣದೊಂದು ಆತಂಕವಿತ್ತು. ನಾನು ಕೇವಲ ಧಾರಾವಾಹಿ ನಟಿ ಎಂಬ ಕಾರಣಕ್ಕೆ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ನನ್ನನ್ನು ಹೇಗೆ ಸ್ವೀಕರಿಸಬಹುದು ಎಂಬ ಯೋಚನೆ ಕಾಡುತ್ತಿತ್ತು. ಆದರೆ, ಸೆಟ್‌ಗೆ ಕಾಲಿಡುತ್ತಿದ್ದಂತೆ ರಣಬೀರ್ ಕಪೂರ್ ದೂರದಿಂದಲೇ ನಡೆದುಬಂದು "ಹಾಯ್, ಇಂದಿರಾ!" ಎಂದು ಆತ್ಮೀಯವಾಗಿ ಸ್ವಾಗತಿಸಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು ಅಂತ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.. ಅಂದಹಾಗೆ.. 'ಅನಿಮಲ್' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರಿಂದ ಪರಿಚಯವಿತ್ತು.. ಕೌಸಲ್ಯೆ ಪಾತ್ರಕ್ಕೆ ರಣಬೀರ್ ಅವರೇ ಇಂದಿರಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು ಎಂಬುದು ವಿಶೇಷ ಸಂಗತಿ.

ಸೆಟ್‌ನಲ್ಲಿ ರಣಬೀರ್ ಎಂದಿಗೂ ತಾವೊಬ್ಬ ದೊಡ್ಡ ಸೂಪರ್‌ಸ್ಟಾರ್ ಎಂಬ ಅಹಂ ಇಲ್ಲದೆ ಸಾಮಾನ್ಯರಂತೆ ವರ್ತಿಸುತ್ತಿದ್ದರು ಎಂದು ಇಂದಿರಾ ಪ್ರಶಂಸಿಸಿದ್ದಾರೆ. ಸ್ಪಾಟ್ ಬಾಯ್‌ನಿಂದ ಹಿಡಿದು ಮೇಕಪ್ ಮ್ಯಾನ್ ತನಕ ಪ್ರತಿಯೊಬ್ಬರ ಜೊತೆ ಅತ್ಯಂತ ವಿನಯದಿಂದ ವರ್ತಿಸುತ್ತಿದ್ದರು. ಇತರರಿಗೆ ಗೌರವ ನೀಡಿದರೆ ಮಾತ್ರ ನಮಗೆ ತಿರುಗಿ ಗೌರವ ಸಿಗುತ್ತದೆ ಎಂಬ ಸರಳ ಸತ್ಯವನ್ನು ನಾನು ರಣಬೀರ್ ಅವರಿಂದ ಕಲಿತೆ ಎಂದು ಇಂದಿರಾ ಹೇಳಿಕೊಂಡಿದ್ದಾರೆ.

ಇದರ ನಡುವೆ, ಕಿರುತೆರೆಯಲ್ಲಿ ಕೆಲವೊಮ್ಮೆ ಕೆಲವರು ತೋರಿಸುವ ಗರ್ವ ಮತ್ತು ಸಹನಟರನ್ನು ನಡೆಸಿಕೊಳ್ಳುವ ರೀತಿಯನ್ನು ನೆನಪಿಸಿಕೊಂಡ ಇಂದಿರಾ, ರಣಬೀರ್ ಅವರ ವಿನಯತೆ, ಉತ್ತಮ ನಡವಳಿಕೆ ಎಲ್ಲರಿಗೂ ಮಾದರಿ ಅಂತ ಹೊಗಳಿದರು.. 12 ಗಂಟೆಗಳಿಗೂ ಹೆಚ್ಚು ಕಾಲದ ಸುದೀರ್ಘ ಚಿತ್ರೀಕರಣದ ಬಳಿಕವೂ ಸೆಟ್‌ನಲ್ಲಿ ಎಲ್ಲರೊಂದಿಗೆ ಬೆರೆತು ಫೋಟೋಗಳಿಗೆ ಪೋಸ್ ನೀಡುತ್ತಿದ್ದ ಅವರ ಗುಣ ಎಲ್ಲರ ಮೆಚ್ಚುವಂತಹದ್ದು ಎಂದು ಇಂದಿಯಾ ಅವರು ರಣಬೀರ್‌ ಕಪೂರ್ಣ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದರು.

ಇದೇ ವೇಳೆ ಸೀತೆ ಸಾಯಿ ಪಲ್ಲವಿ ಅವರ ಕುರಿತು ಮಾತನಾಡಿದ ಇಂದಿರಾ ಅವರು, ನನಗೆ ತಮಿಳು ಭಾಷೆ ಬರಲ್ಲ ಆದರೂ ಅವರು, ನನ್ನೊಂದಿಗೆ ತಮಿಳಿನಲ್ಲಿ ಮಾತನಾಡುತ್ತಾ ತುಂಬಾ ಆತ್ಮೀಯವಾಗಿ ಬೆರೆತರು. ಸೆಟ್‌ಗೆ ಬಂದ ಕೂಡಲೇ ತಾವಿದ್ದೀರಾ ಎಂದು ವಿಚಾರಿಸಿ, ಬಂದು ಮಾತನಾಡಿಸುತ್ತಿದ್ದರು ಎಂದು ನಟಿ ಸಾಯಿ ಪಲ್ಲವಿ ಅವರ ಸರಳತೆಯನ್ನು ಪ್ರಶಂಸಿದರು.

ಇನ್ನು ರಾಮಾಯಣ ಸಿನಿಮಾದ ಬಗ್ಗೆ ಹೇಳುವುದಾದರೆ, ನಿತೇಶ್‌ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯ ಬಿಡುಗಡೆಯಾದ ದಿನದಿಂದಲೂ ಪ್ರೇಕ್ಷಕರ ಮನ ಗೆದ್ದಿದೆ. ಅಲ್ಲದೆ, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಸುಮಾರು 934 ಕೋಟಿ ಗೂ ಹೆಚ್ಚು ಹಣ ಕಲೆಕ್ಷನ್‌ ಮಾಡಿದೆ. ರಾಮನ ಪಾತ್ರದಲ್ಲಿ ರಣಬೀರ್‌ ಕಪೂರ್‌,  ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ಲಕ್ಷ್ಮಣ ಪಾತ್ರದಲ್ಲಿ ರವಿ ದುಬೆ, ರಾವಣ ಪಾತ್ರದಲ್ಲಿ ಯಶ್‌ ಹಾಗೂ ಆಂಜನೇಯ ಪಾತ್ರದಲ್ಲಿ ಸನ್ನಿ ಡಿಯೋಲಾ ಕಾಣಿಸಿಕೊಂಡಿದ್ದಾರೆ.. ಸುಮಾರು 4000 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣವಾಗಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES