ಮಂಜು ಹೊರ ಬಂದ್ರೂ ನಿಲ್ಲುತ್ತಿಲ್ಲ ಬೈಗುಳಗಳು : ಎಂಥಾ ಮಾತು ಅಂದ್ರು ಆಸಿಯಾ.. ಕಿಚ್ಚನ ಕ್ಲಾಸ್ ಗ್ಯಾರಂಟಿ?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅಸಭ್ಯ ಭಾಷೆ ಬಳಕೆ ನಿಲ್ಲುತ್ತಿಲ್ಲ. ಮಾಡ್ರನ್ ಮಹಾಕವಿ ಮಂಜ ಇದೇ ಕಾರಣಕ್ಕೆ ಹೊರ ಬಂದರೂ ಕೆಟ್ಟ ಪದ ಬಳಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಇತ್ತೀಚಿಗೆ ಸೌಂದರ್ಯ ಶೆಟ್ಟಿ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದೀಗ ಆಸಿಯಾ ಬೀಪ್ ಹಾಕಿಸಿಕೊಂಡಿದ್ದಾರೆ.. ಅಸಲಿಗೆ ಆಸಿಯಾ ಬಳಸಿದ ಆ ಪದ ಯಾವುದು..? ಇಲ್ಲಿದೆ ಸಂಪೂರ್ಣ ವರದಿ..
Bigg Boss Kannada 13 : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅತಿರೇಕದ ವರ್ತನೆ ಮತ್ತು ಅಸಭ್ಯ ಭಾಷೆಯ ಬಳಕೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಶ್ಲೀಲ ಪದಗಳನ್ನು ಪ್ರಯೋಗಿಸಿದ್ದಕ್ಕಾಗಿ ಮಂಜು ಅವರು ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಆದರೂ ಕೂಡ ಮನೆಯ ಇತರೆ ಸ್ಪರ್ಧಿಗಳ ನಾಲಿಗೆಗೆ ಬ್ರೇಕ್ ಬಿದ್ದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ಆಸಿಯಾ ಮತ್ತು ಸೌಂದರ್ಯ ಶೆಟ್ಟಿ ಅವರು ಬೈದಿರುವ ಪದಗಳಿಗೆ ಬೀಪ್ ಸೌಂಡ್ ಹಾಕಲಾಗಿದ್ದು, ಈ ವಾರ ಕಿಚ್ಚ ಸುದೀಪ್ ಅವರಿಂದ ಇವರಿಗೆ ತೀವ್ರ ತರಾಟೆ ಸಿಗಲಿದೆಯೇ ಎಂಬ ಚರ್ಚೆ ಜೋರಾಗಿದೆ.
ಮಂಜು ಹೋದ ಬಳಿಕವೂ ತಪ್ಪದ ಬೀಪ್ ಸೌಂಡ್‌ಗಳು
ಹಿಂದಿನ ಸೀಸನ್‌ಗಳಲ್ಲಿಯೂ ವಕೀಲ ಜಗದೀಶ್ ಅವರು ಅಸಭ್ಯ ಪದಗಳನ್ನು ಬಳಸಿ ಮತ್ತು ಮಹಿಳಾ ಸ್ಪರ್ಧಿಗಳನ್ನು ನಿಂದಿಸಿ ಹೊರಬಂದಿದ್ದರು. ಇದೀಗ ಪ್ರಸ್ತುತ ಸೀಸನ್‌ನಲ್ಲಿ 'ಮಾಡ್ರನ್ ಮಹಾಕವಿ' ಎಂದೇ ಬಿಂಬಿತರಾಗಿದ್ದ ಮಂಜು ಕೂಡ ಪದೇ ಪದೇ ಬೀಪ್ ಹಾಕಿಸಿಕೊಂಡು ಅಂತಿಮವಾಗಿ ಶೋನಿಂದ ಕಿಕ್ ಔಟ್ ಆಗಿದ್ದಾರೆ. ಆದರೆ, ಇಷ್ಟೆಲ್ಲಾ ಕಠಿಣ ಕ್ರಮಗಳಾದ ಬಿಗ್ ಬಾಸ್ ಮನೆಯಲ್ಲಿ ಬೀಪ್ ಸೌಂಡ್‌ಗಳ ಹಾವಳಿ ಮಾತ್ರ ಕಡಿಮೆಯಾಗಿಲ್ಲ.
ಕ್ಯಾಪ್ಟನ್ ಕಮ್ ವಿವಿಐಪಿ ಗಗನ್ ಅವರು ನಾಮಿನೇಟ್ ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸೌಂದರ್ಯ ಶೆಟ್ಟಿ ಅವರು ಕೆಟ್ಟ ಪದಗಳನ್ನು ಬಳಸಿದ್ದು, ಅದಕ್ಕೆ ಮ್ಯೂಟ್ ಮಾಡಲಾಗಿದೆ. ಇನ್ನು ಆಸಿಯಾ ಫಿರ್ದೋಸ್ ಕಡೆಯಿಂದಲೂ ಇಂತಹದ್ದೇ ಪ್ರಸಂಗ ಮರುಕಳಿಸಿದೆ. ಈ ಹಿಂದೆ ಕ್ಯಾಪ್ಟನ್ ರೇಸ್‌ನಲ್ಲಿದ್ದಾಗ ಆಸಿಯಾ ಇಂಗ್ಲಿಷ್‌ನಲ್ಲಿ ಅಸಭ್ಯ ಪದ ಬಳಸಿದ್ದರು ಎನ್ನಲಾಗಿತ್ತು. ಇದೀಗ 'ರಕ್ಷಕರು ವರ್ಸಸ್ ಲೂಟಿಕೋರರು' ಟಾಸ್ಕ್ ಬಳಿಕ ಆಸಿಯಾ ಹಾಗೂ ಗಗನ್ ಚಿನ್ನಪ್ಪ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆಸಿಯಾ ಇಂಗ್ಲಿಷ್‌ನಲ್ಲಿ ಬಳಸಿದ ಬೈಗುಳವನ್ನು ಲೈವ್‌ನಲ್ಲಿ ಮ್ಯೂಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಾರದ ವೀಕೆಂಡ್ ವಾರದಲ್ಲಿ ಸುದೀಪ್ ಕ್ಲಾಸ್ ಇರುತ್ತಾ?
ಮಂಜು ಅವರಂತೆ ಆಸಿಯಾ ಮತ್ತು ಸೌಂದರ್ಯ ಸಹ ಅಶ್ಲೀಲ ಪದಗಳನ್ನು ಬಳಸಿ ಸಿಕ್ಕಿಬಿದ್ದಿರುವುದು ವೀಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿಸ್ತಿಗೆ ಹೆಸರಾದ ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಈ ರೀತಿಯ ಭಾಷಾ ಪ್ರಯೋಗ ಮುಂದುವರಿದಿರುವುದರಿಂದ, ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಈ ಸ್ಪರ್ಧಿಗಳಿಗೆ ಯಾವ ರೀತಿ ತರಲೆ ತೆಗೆದುಕೊಳ್ತಾರೆ ಮತ್ತು ಹೇಗೆ ಕ್ಲಾಸ್ ತೆಗೀತಾರೆ ಎಂಬುದನ್ನು ಕಾದು ನೋಡಬೇಕಿದೆ.
\ನಾಮಿನೇಷನ್ ಮತ್ತು ವೈಲ್ಡ್ ಕಾರ್ಡ್ ಗಾಸಿಪ್
ಮನೆಯಲ್ಲಿ ಬೈಗುಳಗಳ ಭರಾಟೆ ಒಂದೆಡೆಯಾದರೆ, ಈ ಬಾರಿಯ ಎಲಿಮಿನೇಷನ್ ಕುರಿತ ಕುತೂಹಲವೂ ಹೆಚ್ಚಿದೆ. ಈ ವಾರ ತಾಂಡವ್ ರಾಮ್, ಸೌಂದರ್ಯ ಶೆಟ್ಟಿ, ಸೋನಿಕಾ, ಲಕ್ಷ್ಮೀ ಗೌಡ, ಕುಮಾರಿ ಹಾಗೂ ಆಸಿಯಾ ಫಿರ್ದೋಸ್ ಡೇಂಜರ್ ಜೋನ್‌ನಲ್ಲಿದ್ದು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಮನೆಯಿಂದ ಹೊರಹೋಗುವ ದುರ್ದೈವಿ ಯಾರು ಎಂಬುದು ಶನಿವಾರ ಅಥವಾ ಭಾನುವಾರದ ಸಂಚಿಕೆಯಲ್ಲಿ ತಿಳಿಯಲಿದೆ.
ಇದಲ್ಲದೆ, ಈ ವಾರ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈಗಾಗಲೇ ಎಲಿಮಿನೇಟ್ ಆಗಿ ಹೊರಬಂದಿರುವವರ ಪೈಕಿ ಒಬ್ಬರು ವಾಪಸ್ಸಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಂಜು ಅವರೇ ಮತ್ತೆ ಮರಳಲಿದ್ದಾರೆ ಎಂದೂ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ಹೊಸ ತಿರುವುಗಳು ಸಿಗುವುದಂತೂ ಖಚಿತ.