• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ನಟ ಧನ್ವೀರ್‌ ವಿರುದ್ಧ ಮತ್ತೊಂದು ದೂರು ದಾಖಲು

ನಟ ಧನ್ವೀರ್‌ ವಿರುದ್ಧ ಮತ್ತೊಂದು ದೂರು ದಾಖಲು

Actor Dhanveer: ನಟ ಧನ್ವೀರ್‌ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.. ಬೆದರಿಕೆ ಹಾಕಿರುವ ಆರೋಪದ ಮೇಲೆ ಬೋಜರಾಜ್‌ ಎಂಬುವವರು ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

Written ByRamya. R. Gowda
Published: Oct 24, 2026, 03:57 PM IST|Updated: Oct 24, 2026, 04:13 PM IST
joinshare
ನಟ ಧನ್ವೀರ್‌ ವಿರುದ್ಧ ಮತ್ತೊಂದು ದೂರು ದಾಖಲು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಈ ಒಂದು ವಸ್ತು ಹಾಕಿ ಒಣಗಿದ ತುಳಸಿ ಗಿಡದಲ್ಲಿ ಹೊಸ ಎಲೆಗಳು ಚಿಗರಿ, ದಟ್ಟವಾಗಿ ಬೆಳೆಯುತ್ತೆ!

ಈ ಒಂದು ವಸ್ತು ಹಾಕಿ ಒಣಗಿದ ತುಳಸಿ ಗಿಡದಲ್ಲಿ ಹೊಸ ಎಲೆಗಳು ಚಿಗರಿ, ದಟ್ಟವಾಗಿ ಬೆಳೆಯುತ್ತೆ!

2

ಮತ್ತೆ ಕಿವೀಸ್‌ ವಿರುದ್ಧ ಗೆದ್ದ ಟೀಮ್ ಇಂಡಿಯಾ

3

ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

4

ಸ್ಟಿಂಗ್ ಆಪರೇಷನ್ : ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಸಿಸಿಬಿ ದಾಳಿ, ಪೆನ್‌ ಡ್ರೈವ್‌

5

ನಟ ದರ್ಶನ್ ಪತ್ನಿಗೆ ಕಿರುಕುಳ ಕೊಡಲೆಂದೇ ಹುಟ್ಟಿಕೊಂಡಿದೆಯಂತೆ ಒಂದು ತಂಡ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Actor Dhanveer: ನಟ ಧನ್ವೀರ್‌ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಬೋಜರಾಜ್‌ ಎಂಬುವವರು ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

ನಟ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಬೆದರಿಕೆ ಹಾಕಿರುವ ಆರೋಪದ ಮೇಲೆ ಬೋಜರಾಜ್ ಎಂಬುವವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಧನ್ವೀರ್ ಅವರ ಮೊಬೈಲ್ ನಂಬರ್‌ನಿಂದ ಬೆದರಿಕೆ ಸಂದೇಶ ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈಗಾಗಲೇ ಧನ್ವೀರ್ ತಂದೆ ಬೋಜರಾಜ್ ವಿರುದ್ಧ ದೂರು ನೀಡಿದ್ದು, ಇದೀಗ ಪರಸ್ಪರ ದೂರುಗಳ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.


ನಟ ಧನ್ವೀರ್ ಹಾಗೂ ಬೋಜರಾಜ್ ನಡುವಿನ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಧನ್ವೀರ್ ವಿರುದ್ಧ ಬೋಜರಾಜ್ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಧನ್ವೀರ್ ಅವರ ನಂಬರ್‌ನಿಂದ ಬೆದರಿಕೆ ಸಂದೇಶ ಬಂದಿರುವುದಾಗಿ ಬೋಜರಾಜ್ ಆರೋಪಿಸಿದ್ದಾರೆ.ನಾಗರಾಜ್ ಎಂಬುವವರು ಕರೆ ಮಾಡಿ, ರಾಜಾಜಿನಗರದಲ್ಲಿರುವ ಧನ್ವೀರ್ ಮನೆಗೆ ಬರುವಂತೆ ತಿಳಿಸಿದ್ದರು. ಅದರಂತೆ ಅಲ್ಲಿಗೆ ತೆರಳಿ ನಾಗರಾಜ್ ಅವರನ್ನು ಕರೆದುಕೊಂಡು ಬಂದಿದ್ದಾಗಿ ಬೋಜರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಧನ್ವೀರ್ ಅವರ ಮೊಬೈಲ್ ನಂಬರ್‌ನಿಂದ ತಮಗೆ ಬೆದರಿಕೆ ಸಂದೇಶ ಬಂದಿದೆ ಎಂಬುದು ಆರೋಪಿಸಲಾಗಿದೆ

‘ನೀನು ಇರುವ ಲೊಕೇಶನ್ ಕಳುಹಿಸು’ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.ಇನ್ನು, ಇದಕ್ಕೂ ಮುನ್ನ ಬೋಜರಾಜ್ ವಿರುದ್ಧ ಧನ್ವೀರ್ ಅವರ ತಂದೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಟಿ ವಿಜಯಲಕ್ಷ್ಮೀ ಅವರೊಂದಿಗೆ ಮನೆಗೆ ಬಂದು ಗಲಾಟೆ ಮಾಡಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು ಎನ್ನಲಾಗಿದೆ. ಇದೀಗ ಬೋಜರಾಜ್ ಅವರು ಧನ್ವೀರ್ ವಿರುದ್ಧ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.


ಒಟ್ಟಿನಲ್ಲಿ, ಧನ್ವೀರ್ ಹಾಗೂ ಬೋಜರಾಜ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯಿಂದ ದೂರುಗಳು ದಾಖಲಾಗಿವೆ. ಆರೋಪಗಳ ಕುರಿತು ಪೊಲೀಸರ ಮುಂದಿನ ಕ್ರಮ ಏನು ಎಂಬುದನ್ನು ಕಾದು ನೋಡಬೇಕಿದೆ.
 

Add Zee News as a Preferred Source
TAGS:
Sandalwood