• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಗ್ರಾಮಕ್ಕೆ 150 ಎಕರೆ ಭೂಮಿ ದಾನ : ಹಳ್ಳಿಗೆ ದೇವರಾದ ಖ್ಯಾತ ಆ್ಯಂಕರ್ ತಂದೆ

ಗ್ರಾಮಕ್ಕೆ 150 ಎಕರೆ ಭೂಮಿ ದಾನ : ಹಳ್ಳಿಗೆ ದೇವರಾದ ಖ್ಯಾತ ಆ್ಯಂಕರ್ ತಂದೆ

ದಕ್ಷಿಣ ಭಾರತದ ಖ್ಯಾತ ಆ್ಯಂಕರ್ ಒಬ್ಬರ ವೃತ್ತಿಜೀವನದ ಹಿಂದೆ ಒಂದು ಅಪರೂಪದ ಹಾಗೂ ಸ್ಪೂರ್ತಿದಾಯಕ ಕ್ರಾಂತಿಕಾರಿ ಕುಟುಂಬದ ಕಥೆಯಿದೆ. ತಮ್ಮ 150 ಎಕರೆ ಜಮೀನನ್ನು ಊರಿನ ಕಲ್ಯಾಣಕ್ಕಾಗಿ ದಾನ ಮಾಡಿ, ಮಗಳಿಗೆ ವಿಶಿಷ್ಟ ಹೆಸರು ಬಿಟ್ಟುಹೋದ ಅವರ ತಂದೆ ಉದಾತ್ತ ತ್ಯಾಗದ ಕುರಿತಾದ ವಿಶೇಷ ವರದಿ ಇಲ್ಲಿದೆ.

Reported ByKrishna NKEdited ByKrishna NK
Published: Sep 29, 2026, 07:39 PM IST|Updated: Sep 29, 2026, 07:41 PM IST
joinshare
ಗ್ರಾಮಕ್ಕೆ 150 ಎಕರೆ ಭೂಮಿ ದಾನ : ಹಳ್ಳಿಗೆ ದೇವರಾದ ಖ್ಯಾತ ಆ್ಯಂಕರ್ ತಂದೆ
Image Credit: Anchor Udayabhanu father

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Anchor Udayabhanu father : ಕಳೆದ ಎರಡು ದಶಕಗಳಿಂದ ದಕ್ಷಿಣ ಭಾರತದ, ಮುಖ್ಯವಾಗಿ ತೆಲುಗು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ನಟನೆ ಮತ್ತು ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದಿರುವ ಜನಪ್ರಿಯ ಆ್ಯಂಕರ್ ಉದಯಭಾನು. ನಟಿ ಹಾಗೂ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇವರು, ಇತ್ತೀಚೆಗೆ ನಿರ್ಮಾಪಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ, ಉದಯಭಾನು ಅವರ ವೃತ್ತಿಜೀವನ ಮತ್ತು ಗ್ಲಾಮರಸ್ ಜಗತ್ತಿನ ಹಿಂದಿರುವ ಅವರ ಕ್ರಾಂತಿಕಾರಿ ಕುಟುಂಬದ ಹಿನ್ನೆಲೆ ಹಾಗೂ ತಂದೆಯ ತ್ಯಾಗದ ವಿಚಾರ ಬಹುತೇಕರಿಗೆ ತಿಳಿದಿಲ್ಲ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಉದಯಭಾನು, ತಮ್ಮ ತಂದೆ ಎಸ್.ಕೆ. ಪಟೇಲ್ ಅವರ ಉದಾತ್ತ ಗುಣ ಮತ್ತು ಸಮಾಜಸೇವೆಯನ್ನು ನೆನೆದು ಅತ್ಯಂತ ಭಾವುಕರಾಗಿದ್ದಾರೆ. ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ್ದ ಎಸ್.ಕೆ. ಪಟೇಲ್ ಅವರು, ಕೋಟ್ಯಂತರ ರೂಪಾಯಿ ಬೆಲೆಬಾಳುವ ತಮ್ಮ 150 ಎಕರೆ ಸ್ವಂತ ಜಮೀನನ್ನು ಯಾವುದೇ ಸ್ವಾರ್ಥವಿಲ್ಲದೆ ಕೊಹೆಡ ಸುತ್ತಮುತ್ತಲಿನ ಗ್ರಾಮಸ್ಥರ ಕಲ್ಯಾಣ ಮತ್ತು ಊರಿನ ಅಭಿವೃದ್ಧಿಗಾಗಿ ದಾನ ಮಾಡಿದ್ದರು. ಬಡ ಜನರ ಕಷ್ಟಕ್ಕೆ ಮಿಡಿಯುತ್ತಿದ್ದ ಅವರು, ಸಾಮಾಜಿಕ ಅಸಮಾನತೆ ಹಾಗೂ ಜಮೀನ್ದಾರರ ದಬ್ಬಾಳಿಕೆಯ ವಿರುದ್ಧ ಹೋರಾಡಿದ ತತ್ವಾದರ್ಶ ವ್ಯಕ್ತಿಯಾಗಿದ್ದರು.

ಅವರ ಕ್ರಾಂತಿಕಾರಿ ಆಲೋಚನೆಗಳು ಅವರ ಸಾಹಿತ್ಯದಲ್ಲೂ ಎದ್ದು ಕಾಣುತ್ತಿದ್ದವು. ಲೇಖಕ ಮತ್ತು ಕವಿಯಾಗಿದ್ದ ಎಸ್.ಕೆ. ಪಟೇಲ್ ಅವರು 'ಉದಯಭಾನು' ಎಂಬ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಆ ಕಾವ್ಯನಾಮದ ಮೇಲಿನ ಅಪಾರ ಪ್ರೀತಿಯಿಂದಲೇ ತಮ್ಮ ಮಗಳಿಗೆ 'ಉದಯಭಾನು' ಎಂದು ಹೆಸರಿಟ್ಟಿದ್ದರು.

ಉದಯಭಾನು ಅವರಿಗೆ ಕೇವಲ ಐದು ವರ್ಷವಿರುವಾಗಲೇ ತಂದೆ ನಿಧನರಾದರು. ಆದರೂ, ಗ್ರಾಮಸ್ಥರು ನೆನಪಿಸಿಕೊಳ್ಳುತ್ತಿದ್ದ ತಂದೆಯ ಒಳ್ಳೆಯತನ ಮತ್ತು ತ್ಯಾಗದ ಕಥೆಗಳನ್ನು ಕೇಳಿಯೇ ಅವರು ಬೆಳೆದರು. ತಂದೆಯ ಅಗಲಿಕೆಯ ನಂತರ, ಕ್ರಾಂತಿಕಾರಿ ಹಾಡುಗಳನ್ನು ಬರೆಯುತ್ತಿದ್ದ ತಾಯಿಯೇ ಅತ್ಯಂತ ಕಷ್ಟಪಟ್ಟು ಉದಯಭಾನು ಅವರನ್ನು ಬೆಳೆಸಿದರು.

ಇಂದಿನ ಕಾಲದಲ್ಲಿ ಸಣ್ಣಪುಟ್ಟ ಆಸ್ತಿ-ಪಾಸ್ತಿ ವಿಚಾರಕ್ಕೂ ಕುಟುಂಬಗಳಲ್ಲಿ ಜಗಳಗಳು ನಡೆಯುತ್ತವೆ. ಆದರೆ, ತಮ್ಮ ತಂದೆ ದಾನ ಮಾಡಿದ 150 ಎಕರೆ ಆಸ್ತಿಯಿಂದ ತಮ್ಮ ಕುಟುಂಬವು ಒಂದು ರೂಪಾಯಿ ಅಥವಾ ಸೆಂಟ್ ಜಾಗವನ್ನು ಸಹ ಆಶಿಸಲಿಲ್ಲ ಎಂದು ಉದಯಭಾನು ಹೆಮ್ಮೆಯಿಂದ ಹೇಳಿದ್ದಾರೆ. "ತಂದೆ ನಮಗೆ ಬಿಟ್ಟುಹೋದ ಆಸ್ತಿಗಿಂತ ಅವರು ಗಳಿಸಿದ ಒಳ್ಳೆಯ ಹೆಸರು ಮತ್ತು ಜನರ ಪ್ರೀತಿಯೇ ನಮಗೆ ನಿಜವಾದ ಶ್ರೀಮಂತಿಕೆ" ಎಂದು ಅವರು ಪ್ರತಿಪಾದಿಸಿದ್ದಾರೆ. ಊರಿನ ಜನರು ಇಂದಿಗೂ ಅವರ ನೆನಪಿಗಾಗಿ ಪ್ರತಿಮೆಯನ್ನು ಸ್ಥಾಪಿಸಿ ಗೌರವಿಸುತ್ತಿದ್ದು, ಎಸ್.ಕೆ. ಪಟೇಲ್ ಅವರ ಈ ಮಹಾನ್ ತ್ಯಾಗವು ಇಂದಿನ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.

Add Zee News as a Preferred Source
TAGS:
Cinema