ಹೆರಿಗೆ ವೇಳೆ ನಟಿ ಸಮಂತಾ ಜೀವಕ್ಕೇ ಕಂಟಕ? ಮಗುವೋ ತಾಯಿಯೋ!! ಅಂದು ನಡೆದ್ದಿದ್ದು ಈ ದೇವರ ಪವಾಡವೇ?
ಸಮಂತಾ ಅವರ ಹೆರಿಗೆಯ ಸಮಯದಲ್ಲಿ ಕುಟುಂಬದವರು ಎದುರಿಸಿದ್ದ ಆತಂಕದ ಕ್ಷಣಗಳ ಬಗ್ಗೆ ಖ್ಯಾತ ಗಾಯಕಿ ಶೋಭಾ ರಾಜು ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.
Samantha Ruth Prabhu was in danger during delivery: ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದ ವಿಚಾರ ಇದೀಗ ಮತ್ತೆ ಸುದ್ದಿಯಲ್ಲಿದೆ. ನಟಿ ಸಮಂತಾ ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿದ್ದು, ನವೆಂಬರ್ 19ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ. ಮಗುವಿಗೆ ದೇವ್ ನಿಡಿಮೋರ್ ಎಂದು ಹೆಸರಿಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ನಡುವೆ ಸಮಂತಾ ಅವರ ಹೆರಿಗೆಯ ಸಮಯದಲ್ಲಿ ಕುಟುಂಬದವರು ಎದುರಿಸಿದ್ದ ಆತಂಕದ ಕ್ಷಣಗಳ ಬಗ್ಗೆ ಖ್ಯಾತ ಗಾಯಕಿ ಶೋಭಾ ರಾಜು ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.
ಸಮಂತಾ ಹೆರಿಗೆಯ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅವರಿಗೆ ನಾರ್ಮಲ್ ಡೆಲಿವರಿಯಾಗಿತ್ತಾ ಅಥವಾ ಸಿಸೇರಿಯನ್ ಮೂಲಕ ಮಗುವಿನ ಜನನವಾಯಿತಾ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಇದೀಗ ಈ ಬಗ್ಗೆ ರಾಜ್ ನಿಡಿಮೋರು ಅವರ ಚಿಕ್ಕಮ್ಮ, ಖ್ಯಾತ ಗಾಯಕಿ ಶೋಭಾ ರಾಜು ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಶೋಭಾ ರಾಜು ಹೇಳಿರುವ ಪ್ರಕಾರ, ಸಮಂತಾ ಅವರ ಹೆರಿಗೆಯ ಸಂದರ್ಭದಲ್ಲಿ ಮಗುವಿನ ಕುತ್ತಿಗೆಯ ಸುತ್ತ ಹೊಕ್ಕುಳಬಳ್ಳಿ ಸುತ್ತಿಕೊಂಡಿತ್ತು. ಈ ವಿಚಾರ ವೈದ್ಯರ ಗಮನಕ್ಕೆ ಬಂದಿದ್ದರಿಂದ ಮಗುವಿನ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿತ್ತು. ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ಸಾಧ್ಯತೆಯ ಬಗ್ಗೆಯೂ ಸಲಹೆ ನೀಡಿದ್ದರು ಎನ್ನಲಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ರಾಜ್ ನಿಡಿಮೋರು ಅವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಮಗುವಿನ ಆರೋಗ್ಯ ಮತ್ತು ಸಮಂತಾ ಅವರ ಸುರಕ್ಷತೆಯ ಬಗ್ಗೆ ಕುಟುಂಬದ ಸದಸ್ಯರು ಚಿಂತಿತರಾಗಿದ್ದರು ಎಂದು ಶೋಭಾ ರಾಜು ಸಂದರ್ಶನದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಹೆರಿಗೆಯ ಸಮಯದಲ್ಲಿ ಎದುರಾದ ಈ ಆತಂಕದ ಪರಿಸ್ಥಿತಿಯಲ್ಲಿ ಕುಟುಂಬದವರು ದೇವರ ಮೊರೆ ಹೋಗಿದ್ದರು. ಎಲ್ಲರೂ ಸೇರಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ್ದರು. ವೈದ್ಯರು ನೀಡಿದ್ದ ಸಲಹೆ ಮತ್ತು ಮಗುವಿನ ಆರೋಗ್ಯದ ಬಗ್ಗೆ ಇದ್ದ ಕಳವಳದ ನಡುವೆಯೇ ಕುಟುಂಬದವರು ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ಶೋಭಾ ರಾಜು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ, ಕೊನೆಗೆ ಸಮಂತಾ ಅವರಿಗೆ ನಾರ್ಮಲ್ ಡೆಲಿವರಿಯಾಗಿದ್ದು, ಮಗು ಆರೋಗ್ಯವಾಗಿ ಜನಿಸಿದೆ ಎಂಬ ಸಂತಸದ ಸುದ್ದಿ ಕುಟುಂಬದವರಿಗೆ ತಲುಪಿತಂತೆ. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬದವರ ಆತಂಕ ದೂರವಾಗಿ ಸಂಭ್ರಮ ಮನೆಮಾಡಿತ್ತು ಎಂದು ಅವರು ವಿವರಿಸಿದ್ದಾರೆ.
ಹೆರಿಗೆಯ ಸಂದರ್ಭದಲ್ಲಿ ಎದುರಾದ ಆತಂಕದ ನಡುವೆಯೂ ಸುಸೂತ್ರವಾಗಿ ಮಗು ಜನಿಸಿರುವುದನ್ನು ನೆನಪಿಸಿಕೊಂಡ ಶೋಭಾ ರಾಜು, ಇದೊಂದು ದೈವಿಕ ಪವಾಡ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಟುಂಬದವರು ಮಾಡಿದ ಪ್ರಾರ್ಥನೆ ಮತ್ತು ಮಗುವಿನ ಸುರಕ್ಷಿತ ಜನನದ ವಿಚಾರವನ್ನು ಅವರು ಭಾವುಕವಾಗಿ ಹಂಚಿಕೊಂಡಿದ್ದಾರೆ.