• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ನಿಜ ಜೀವನದಲ್ಲಿ ರೈತ ಹುಡುಗ ಸಿಕ್ರೆ ಮದುವೆ ಆಗ್ತೀರಾ ರಮಿಕಾ..? ನಟಿ ಉತ್ತರಕ್ಕೆ ಫ್ಯಾನ್ಸ್‌ ಫಿದಾ

ನಿಜ ಜೀವನದಲ್ಲಿ ರೈತ ಹುಡುಗ ಸಿಕ್ರೆ ಮದುವೆ ಆಗ್ತೀರಾ ರಮಿಕಾ..? ನಟಿ ಉತ್ತರಕ್ಕೆ ಫ್ಯಾನ್ಸ್‌ ಫಿದಾ

ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ 'ಪ್ರೇಮದ ಊರಲಿ' ಚಿತ್ರವು ಯಾವುದೇ ದೊಡ್ಡ ಅಬ್ಬರವಿಲ್ಲದೆ ಯಶಸ್ವಿ 50 ದಿನಗಳನ್ನು ಪೂರೈಸಿದೆ. ರಕ್ತಪಾತ ಮತ್ತು ಆಕ್ಷನ್ ಸೀನ್‍ಗಳ ಟ್ರೆಂಡ್ ನಡುವೆ, ರೈತರ ನೈಜ ಬದುಕಿನ ಸಮಸ್ಯೆ ಹಾಗೂ ಮದುವೆಯ ಸುಂದರ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಬಂದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ.. ಇದರ ನಡುವೆ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ರಮಿಕಾ ಶಿವು ಮಾತೊಂದು ಅವರ ಅಭಿಮಾನಿಗಳ ಮನ ಗೆದ್ದಿತು..

Written ByKrishna NK
Published: Nov 09, 2026, 19:18 IST|Updated: Nov 09, 2026, 19:19 IST
joinshare
ನಿಜ ಜೀವನದಲ್ಲಿ ರೈತ ಹುಡುಗ ಸಿಕ್ರೆ ಮದುವೆ ಆಗ್ತೀರಾ ರಮಿಕಾ..? ನಟಿ ಉತ್ತರಕ್ಕೆ ಫ್ಯಾನ್ಸ್‌ ಫಿದಾ
Image Credit: Ramika Shivu

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ, ಯಾವುದೇ ರೀತಿಯ ದೊಡ್ಡ ಮಟ್ಟದ ಅಬ್ಬರ ಅಥವಾ ವಿಜೃಂಭಣೆಯ ಪ್ರಚಾರವಿಲ್ಲದೆ ತೆರೆಕಂಡ 'ಪ್ರೇಮದ ಊರಲಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಸದ್ಯದ ಟ್ರೆಂಡ್‌ ಹತ್ತಿರ ಸುಳಿಯದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸುವ ಮೂಲಕ ಕನ್ನಡಿಗರ ಮನ ಗೆದ್ದಿದೆ. ರಕ್ತಪಾತ, ಲಾಂಗು, ಮಚ್ಚು, ನಿಮಿಷಕ್ಕೊಂದು ಕೊಲೆ ಮತ್ತು ಅಶ್ಲೀಲತೆಯೇ ಇಂದಿನ ಯುವ ಪೀಳಿಗೆಯ ಅಚ್ಚುಮೆಚ್ಚು ಎಂಬ ವಾದವನ್ನು ಈ ಸಿನಿಮಾ ಸುಳ್ಳಾಗಿಸಿದೆ. ಕಥೆಯ ಬಲವೊಂದೇ ಇದ್ದರೆ ಎಂಥದ್ದೇ ಸಣ್ಣ ಚಿತ್ರವೂ ಗೆಲ್ಲಬಹುದು ಎಂಬುದಕ್ಕೆ ಈ ಸಿನಿಮಾ ತಾಜಾ ಉದಾಹರಣೆಯಾಗಿದೆ.

ಸಿನಿಮಾದ ಈ ಅದ್ಭುತ ಯಶಸ್ಸಿನ ಹಿಂದೆ ಪ್ರಮುಖವಾಗಿ ರೈತರ ನೈಜ ಸಮಸ್ಯೆಗಳ ಕಥಾನಕವಿದೆ. ಸಮಾಜದಲ್ಲಿ ಎಷ್ಟೇ ಎಕರೆ ಜಮೀನುಗಳಿದ್ದರೂ, ದೊಡ್ಡ ಕೃಷಿಕರಾಗಿದ್ದರೂ ರೈತರಿಗೆ ಹೆಣ್ಣು ಕೊಡಲು ಯೋಚಿಸುವ ಕಾಲಘಟ್ಟದಲ್ಲಿದ್ದೇವೆ. ಈ ಗಂಭೀರ ಹಾಗೂ ನೈಜ ಸಮಸ್ಯೆಯ ಎಳೆಯನ್ನು ಇಟ್ಟುಕೊಂಡು, ರೈತನ ಮದುವೆ ಹಾಗೂ ಫಾರಿನ್ ಹುಡುಗಿಯ ಕಾನ್ಸೆಪ್ಟ್‌ ಜತೆಗೆ ಹೆಣೆದಿರುವ ಸುಂದರ ಕಥೆ ಪ್ರತಿಯೊಬ್ಬರ ಹೃದಯ ಸ್ಪರ್ಶಿಸಿದೆ. ಪ್ರೇಕ್ಷಕರಿಂದ ಈ ಮಟ್ಟಿಗೆ ಮೆಚ್ಚುಗೆ ಪಡೆದಿರುವ ಈ ಚಿತ್ರದ ಸಂಭ್ರಮವನ್ನು ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ ವಿಶೇಷವಾಗಿ ಆಚರಿಸಿದ್ದಾರೆ.

ಚಿತ್ರದ 50 ದಿನಗಳ ಸಂಭ್ರಮದ ಈ ವಿಶೇಷ ಕಾರ್ಯಕ್ರಮದಲ್ಲಿ ನಟ-ನಟಿಯರು ಹಾಗೂ ಪ್ರೇಕ್ಷಕರ ನಡುವೆ ಮೋಜು-ಮಸ್ತಿನ ಮಾತುಕತೆ ನಡೆಯಿತು. ಆ್ಯಂಕರ್ ಅನುಶ್ರೀ ಎಂದ ಮೇಲೆ ಅಲ್ಲಿ ಹಾಸ್ಯದ ಹೊನಲು ಇದ್ದೇ ಇರುತ್ತದಲ್ಲವೇ? ಈ ವೇಳೆ ಓರ್ವ ಯುವತಿ ನಟ ಶ್ರೀರಾಮ್ ಅವರಿಗೆ 'ಪ್ರೇಮದ ಊರಲಿ' ಸಿನಿಮಾವನ್ನು ಮೂರೇ ಶಬ್ದಗಳಲ್ಲಿ ವರ್ಣಿಸಿ ಎಂದು ಸವಾಲು ಹಾಕಿದರು. ಅದಕ್ಕೆ ಉತ್ತರಿಸಿದ ಶ್ರೀರಾಮ್ 'I Love You' ಎಂದಾಗ ಅಲ್ಲಿದ್ದ ಯುವತಿ ನಾಚಿ ನೀರಾದ ಪ್ರಸಂಗ ನೆರೆದಿದ್ದವರಲ್ಲಿ ನಗು ಮೂಡಿಸಿತು.

ಇದೇ ಕಾರ್ಯಕ್ರಮದಲ್ಲಿ ಚಿತ್ರದ ನಾಯಕಿ ರಮಿಕಾ ಶಿವು ಅವರಿಗೆ ಆ್ಯಂಕರ್ ಅನುಶ್ರೀ ಒಂದು ತಮಾಷೆಯ ಆದರೆ ಆಳವಾದ ಪ್ರಶ್ನೆ ಎಸೆದರು. "ನಿಮ್ಮ ನಿಜ ಜೀವನದ ಹುಡುಗ ರೈತ ಆಗಿದ್ರೆ ಓಕೆನಾ?" ಎಂದು ಕೇಳಿದಾಗ, ಕಿಂಚಿತ್ತೂ ಯೋಚಿಸದೆ ನಟಿ ರಮಿಕಾ ಶಿವು "ಖಂಡಿತ ಓಕೆ" ಎಂದು ಉತ್ತರಿಸಿದರು. ನಟಿಯ ಈ ಸರಳ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅನುಶ್ರೀ, "ಮಾತಂದ್ರೆ ಇದಪ್ಪಾ" ಎಂದು ಕೊಂಡಾಡಿದರು.

ಇನ್ನು ಈ ಚಿತ್ರದ ಯಶಸ್ಸಿನ ಮೂಲಕ ನಟಿ ರಮಿಕಾ ಶಿವು ಅವರ ಸಿನಿಪಯಣಕ್ಕೆ ಭದ್ರವಾದ ಬುನಾದಿ ಸಿಕ್ಕಂತಾಗಿದೆ. ಇದು ರಮಿಕಾ ನಟನೆಯ ಮೊದಲ ಚಲನಚಿತ್ರವಾಗಿದ್ದು, ಈಗಾಗಲೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ 'ಪಾರು' ಹಾಗೂ 'ನೀನಾದೆ ನಾ' ಮೂಲಕ ಮನೆಮಾತಾಗಿದ್ದರು. ಕಿರುತೆರೆಯಿಂದ ಹಿರಿತೆರೆಗೆ ಹೆಜ್ಜೆ ಇಟ್ಟ ಮೊದಲ ಪ್ರಯತ್ನದಲ್ಲೇ ಇಷ್ಟು ದೊಡ್ಡ ಯಶಸ್ಸು ಸಿಕ್ಕಿರುವುದು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರೇಕ್ಷಕರ ಅಪಾರ ಪ್ರೀತಿ ಹಾಗೂ ವಿಶ್ವಾಸದಿಂದ ಖುಷಿಯಾಗಿರುವ ರಮಿಕಾ ಶಿವು, ಮುಂದಿನ ದಿನಗಳಲ್ಲಿ ಕೇವಲ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಗುಣಮಟ್ಟದ ಕಥೆ ಹಾಗೂ ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ ಯಾವುದೇ ಹಂಗಿಲ್ಲದೆ ಬಂದ 'ಪ್ರೇಮದ ಊರಲಿ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

Add Zee News as a Preferred Source
TAGS:
Kannada News