ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಈಗ ಎಷ್ಟು ವರ್ಷ ಗೊತ್ತಾ? ‘ಅರಸಿ’ಯಿಂದ ‘ಬುಲ್‌ಬುಲ್’ವರೆಗೆ ರೋಚಕ ಜರ್ನಿ
Actress Rachita Ram Age:ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಈಗ ಎಷ್ಟು ವರ್ಷ ಎಂದು ತಿಳಿಯಲು ಈ ಸ್ಟೋರಿ ಓದಿ
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆಯ ‘ಅರಸಿ’ ಧಾರಾವಾಹಿಯಿಂದ ಆರಂಭವಾದ ಪಯಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಬುಲ್‌ಬುಲ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ಅಲ್ಲಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ರಚಿತಾ ರಾಮ್ ಇದೀಗ 34ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ನಟಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಡಿಂಪಲ್ ಕ್ವೀನ್ ರಚಿತಾ ರಾಮ್.. ಕನ್ನಡ ಸಿನಿಪ್ರಿಯರ ಮನಗೆದ್ದಿರುವ ಜನಪ್ರಿಯ ನಟಿ. ತಮ್ಮ ಸೌಂದರ್ಯ, ಅಭಿನಯ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಸಂಪಾದಿಸಿಕೊಂಡಿರುವ ರಚಿತಾ ರಾಮ್, ಇಂದು 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
1992ರ ಅಕ್ಟೋಬರ್ 3ರಂದು ಜನಿಸಿದ ರಚಿತಾ ರಾಮ್, ಬಾಲ್ಯದಿಂದಲೇ ಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನವೇ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಚಿತಾ ರಾಮ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ್ದು ‘ಅರಸಿ’ ಧಾರಾವಾಹಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ರಚಿತಾ, ತಮ್ಮ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ‘ಅರಸಿ’ಯ ಜನಪ್ರಿಯತೆಯೇ ಅವರನ್ನು ಬೆಳ್ಳಿತೆರೆಗೆ ಕರೆದೊಯ್ಯುವ ಪ್ರಮುಖ ಹೆಜ್ಜೆಯಾಯಿತು.
ಇನ್ನು ರಚಿತಾ ರಾಮ್ ಅವರ ಸ್ಯಾಂಡಲ್‌ವುಡ್ ಜರ್ನಿ ಆರಂಭವಾಗಿದ್ದು ‘ಬುಲ್‌ಬುಲ್’ ಸಿನಿಮಾದ ಮೂಲಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ, ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಗಮನ ಸೆಳೆದರು.‘ಬುಲ್‌ಬುಲ್’ ಬಳಿಕ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದರು. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಹೀಗಾಗಿ ಇಂದು ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿಯರ ಸಾಲಿನಲ್ಲಿ ರಚಿತಾ ರಾಮ್ ಕೂಡ ಪ್ರಮುಖ ಸ್ಥಾನ ಪಡೆದಿದ್ದಾರೆ.
ಇಂದು ರಚಿತಾ ರಾಮ್ ಅವರ 34ನೇ ಹುಟ್ಟುಹಬ್ಬ. ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಶುಭಾಶಯ ಕೋರುತ್ತಿದ್ದಾರೆ. ನೆಚ್ಚಿನ ನಟಿಯ ಬರ್ತ್‌ಡೇಯನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ಕೂಡ ಸಜ್ಜಾಗಿದ್ದಾರೆ.
ಕಿರುತೆರೆಯ ‘ಅರಸಿ’ಯಿಂದ ಆರಂಭವಾದ ಪಯಣ.. ‘ಬುಲ್‌ಬುಲ್’ ಮೂಲಕ ಬೆಳ್ಳಿತೆರೆಗೆ ಎಂಟ್ರಿ.. ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ನಟಿಯ ಸಿನಿಮಾ ಜರ್ನಿ ಇನ್ನಷ್ಟು ಯಶಸ್ವಿಯಾಗಿ ಸಾಗಲಿ ಎಂಬುದು ಅಭಿಮಾನಿಗಳ ಆಶಯ.
ಡಿಂಪಲ್ ಕ್ವೀನ್‌ಗೆ ಬರ್ತ್‌ಡೇ ಸಂಭ್ರಮ.. ಅಭಿಮಾನಿಗಳಿಂದ ಭರ್ಜರಿ ಸೆಲೆಬ್ರೇಷನ್..
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಚಿತಾ ರಾಮ್, ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ನಟಿ ವಿಶೇಷವಾಗಿ ಸಮಯ ಕಳೆದಿದ್ದಾರೆ.ಹಿಂದಿನ ದಿನವೇ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೇಷನ್ ಮಾಡಿಕೊಂಡ ರಚಿತಾ ರಾಮ್, ಪ್ರತಿಯೊಬ್ಬ ಅಭಿಮಾನಿಗೂ ಫೋಟೋಗೆ ಪೋಸ್ ನೀಡಿ ಖುಷಿಪಡಿಸಿದ್ದಾರೆ.ಬೆಂಗಳೂರಿನ ಆರ್.ಆರ್.ನಗರದ ಮುಖ್ಯದ್ವಾರದ ಬಳಿ ರಚಿತಾ ರಾಮ್ ಅವರ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಕಟೌಟ್‌ಗೆ ಅಭಿಮಾನಿಗಳು ಸಾಲು ಸಾಲು ಹಾರಗಳನ್ನು ಹಾಕಿ ಅಭಿಮಾನ ಮೆರೆದಿದ್ದಾರೆ. ಇಷ್ಟೇ ಅಲ್ಲ.. ರಚಿತಾ ರಾಮ್ ಅವರ ಕಟೌಟ್‌ಗೆ ಅಭಿಮಾನಿಗಳು ಕುಂಬಳಕಾಯಿ ಒಡೆದು ದೃಷ್ಟಿ ತೆಗೆದಿದ್ದಾರೆ. ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ.
ರಾತ್ರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಡಿಂಪಲ್ ಕ್ವೀನ್..
ಆರ್.ಆರ್.ನಗರದ ನಿವಾಸದಲ್ಲಿ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು. ರಾತ್ರಿ ಕೇಕ್ ಕತ್ತರಿಸಿ ನಟಿ ತಮ್ಮ ಬರ್ತ್‌ಡೇಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಸುಮಾರು 14 ವರ್ಷಗಳಿಂದ ಚಿತ್ರರಂಗದಲ್ಲಿರುವ ರಚಿತಾ ರಾಮ್, ಹಲವು ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಅಭಿಮಾನಿಗಳಿಗೆ ರಚಿತಾ ರಾಮ್ ಕಿವಿಮಾತು..
ತಮ್ಮ ಹುಟ್ಟುಹಬ್ಬಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ರಚಿತಾ ರಾಮ್ ವಿಶೇಷ ಸಂದೇಶ ನೀಡಿದ್ದಾರೆ.ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ.. ಜೀವನ ಒಂದೇ ಬಾರಿ ಸಿಗುತ್ತದೆ, ಚೆನ್ನಾಗಿ ಎಂಜಾಯ್ ಮಾಡಿ. ಒಳ್ಳೆಯತನದಿಂದ ದುಡ್ಡು ಮಾಡಿ, ಕೈಲಾದಷ್ಟು ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಸದ್ರುಯ ಕಿರುತೆರೆಯ ‘ಅರಸಿ’ಯಿಂದ ಆರಂಭವಾದ ಪಯಣ.. ‘ಬುಲ್‌ಬುಲ್’ ಮೂಲಕ ಬೆಳ್ಳಿತೆರೆಗೆ ಎಂಟ್ರಿ.. ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ನಟಿಯ ಸಿನಿಮಾ ಜರ್ನಿ ಇನ್ನಷ್ಟು ಯಶಸ್ವಿಯಾಗಿ ಸಾಗಲಿ ಎಂಬುದು ಅಭಿಮಾನಿಗಳ ಆಶಯ.