SOCIAL MEDIA

Newsletter

PARTNER SITES
Select Language Select State

ಶ್ರಿಯಾ ಶರಣ್ ಪತಿ ಎದುರೇ ನಟಿಯ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಅಭಿಮಾನಿ; ಮುಂದೇನಾಯ್ತು?

Shriya Sarans: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡೋದು ಹೊಸದೇನಲ್ಲ ಅದರಲ್ಲೂ ನಟಿಯರ ಲೈವ್ ಚಾಟ್ ವೇಳೆ ಕೆಲವರು ಮಿತಿ ಮೀರಿ ವರ್ತಿಸುತ್ತಾರೆ.

Written By Ramya. R. Gowda
Published: Nov 07, 2026, 12:31 IST | Updated: Nov 07, 2026, 12:52 IST
Join

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡೋದು ಹೊಸದೇನಲ್ಲ. ಅದರಲ್ಲೂ ನಟಿಯರ ಲೈವ್ ಚಾಟ್ ವೇಳೆ ಕೆಲವರು ಮಿತಿ ಮೀರಿ ವರ್ತಿಸುತ್ತಾರೆ. ಇದೀಗ ನಟಿ ಶ್ರಿಯಾ ಶರಣ್ ಅವರ ಹಳೆಯ ಲೈವ್ ವಿಡಿಯೋವೊಂದು ವೈರಲ್ ಆಗಿದೆ. ಅಭಿಮಾನಿಯೊಬ್ಬರು ಅಸಭ್ಯವಾಗಿ ಕಾಮೆಂಟ್ ಮಾಡಿದಾಗ, ಪತಿ ಆ್ಯಂಡ್ರಿ ಕೊಶ್ಚೀವ್ ಕೊಟ್ಟ ಉತ್ತರ ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಅವರು ಕೊಟ್ಟ ಉತ್ತರ ಏನು ಗೊತ್ತಾ?

ನಟಿ ಶ್ರಿಯಾ ಶರಣ್.. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿರುವ ನಟಿ. ಸದ್ಯ ಸಿನಿಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸುದ್ದಿಯಲ್ಲಿರುತ್ತಾರೆ.ಇದೀಗ ಶ್ರಿಯಾ ಅವರ ಹಳೆಯ ಲೈವ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದೆ ಶ್ರಿಯಾ ಲೈವ್ ಚಾಟ್ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಮಿತಿ ಮೀರಿ ಅಸಭ್ಯ ಕಾಮೆಂಟ್ ಮಾಡಿದ್ದ.

ಶ್ರಿಯಾ ಅವರ ದೇಹದ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಅಭಿಮಾನಿ, ಮುಜುಗರದ ಪರಿಸ್ಥಿತಿ ಸೃಷ್ಟಿಸಿದ್ದ. ಈ ವೇಳೆ ಶ್ರಿಯಾ ಪತಿ ಆ್ಯಂಡ್ರಿ ಕೊಶ್ಚೀವ್ ಕೂಡ ಅಲ್ಲಿಯೇ ಇದ್ದರು.ಸಾಮಾನ್ಯವಾಗಿ ಇಂತಹ ಕಾಮೆಂಟ್‌ಗಳನ್ನು ಕೇಳಿದರೆ ಯಾರಿಗಾದರೂ ಕೋಪ ಬರುವುದು ಸಹಜ. ಪತ್ನಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಗೆ ಆ್ಯಂಡ್ರಿ ತಿರುಗೇಟು ನೀಡಬಹುದು ಎಂದು ಎಲ್ಲರೂ ಭಾವಿಸಬಹುದು. ಆದರೆ, ಅವರು ನಡೆದುಕೊಂಡ ರೀತಿಯೇ ಈಗ ಚರ್ಚೆಯಾಗುತ್ತಿದೆ.

ಅಭಿಮಾನಿಯ ಅಸಭ್ಯ ಕಾಮೆಂಟ್‌ಗೆ ಕೋಪಗೊಳ್ಳುವ ಬದಲು ಆ್ಯಂಡ್ರಿ, 'ನೀವು ಹೇಳಿದ್ದು ನಿಜಕ್ಕೂ ಸತ್ಯ' ಎಂದು ಹಾಸ್ಯದ ಧಾಟಿಯಲ್ಲಿ ಉತ್ತರಿಸಿದ್ದಾರೆ. ಈ ಮೂಲಕ ಮುಜುಗರದ ಸನ್ನಿವೇಶವನ್ನೇ ನಗುವಿನ ಮೂಲಕ ತಿಳಿಗೊಳಿಸಿದ್ದಾರೆ.ಆ್ಯಂಡ್ರಿ ಅವರ ಈ ಪ್ರಬುದ್ಧ ನಡೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪತ್ನಿಯ ಪಕ್ಕದಲ್ಲೇ ಇದ್ದು ಪರಿಸ್ಥಿತಿಯನ್ನು ಕೂಲ್ ಆಗಿ ಹ್ಯಾಂಡಲ್ ಮಾಡಿದ ರೀತಿ ಅಭಿಮಾನಿಗಳ ಗಮನ ಸೆಳೆದಿದೆ.ಅಂದಹಾಗೆ, ಶ್ರಿಯಾ ಶರಣ್ ಮತ್ತು ರಷ್ಯಾದ ಉದ್ಯಮಿ ಆ್ಯಂಡ್ರಿ ಕೊಶ್ಚೀವ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಮುದ್ದಾದ ಮಗುವೂ ಇದೆ.

ಕನ್ನಡದ 'ಅರಸು' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ, ಬಳಿಕ 'ಚಂದ್ರ' ಮತ್ತು 'ಕಬ್ಜ' ಸಿನಿಮಾಗಳಲ್ಲೂ ನಟಿಸಿದ್ದಾರೆ.ಒಟ್ಟಿನಲ್ಲಿ, ಅಭಿಮಾನಿಯ ಅಸಭ್ಯ ಕಾಮೆಂಟ್‌ಗೆ ಕೋಪದ ಬದಲು ಹಾಸ್ಯದಿಂದಲೇ ಉತ್ತರಿಸಿದ ಶ್ರಿಯಾ ಪತಿ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES