SOCIAL MEDIA

Newsletter

PARTNER SITES
Select Language Select State

ರಹಸ್ಯ ಹುಡುಕಾಟವೇ ಕಲುಷ ಮೂವಿ ಕಥೆ, ಟೀಸರ್‌ ಔಟ್..‌ ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟ D ಮ್ಯೂಸಿಕ್‌

ವಿನೋದ್ ಹಿರೇಮಠ ಹಾಗೂ ವಾಸೀಂ ಅಕ್ರಮ್ ಸಂಗೀತ ನೀಡಿದ್ದಾರೆ. ಕಲುಷ ಎಂದರೆ ಕೋಪ, ಆಕ್ರೋಶ ಎಂಬ ಅರ್ಥ ಬರುತ್ತದೆ. ಇದೊಂದು ಮರ್ಡರ್ ಮಾಫಿಯಾ ಸುತ್ತ ಹೆಣೆದಿರುವ ಕಥೆ.

Written By Bhimappa
Published: Oct 09, 2026, 12:59 PM IST | Updated: Oct 09, 2026, 01:07 PM IST
Image Credit: Aishwarya
Join

Actress Aishwarya Nag Kalusha movie teaser launches: ಎಸ್‌ಪಿವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರತಾಪ್ ಆರ್. ನರಹರಿ ನಿರ್ಮಿಸಿರುವ, ಡಿ ಮ್ಯೂಸಿಕ್ಸ್ ಅರ್ಪಿಸುವ, ಯುವಾನ್ ಪ್ರತಾಪ್ ಮತ್ತು ಐಶ್ವರ್ಯ ಮುತ್ತುರಾಜ್ ನಾಯಕ- ನಾಯಕಿಯಾಗಿ ನಟಿಸಿರುವ ಕಲುಷ ಸಿನಿಮಾದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಜಾಲಿಡೇಸ್ ಖ್ಯಾತಿಯ ನಟಿ ಐಶ್ವರ್ಯ ನಾಗ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್ ಮುಖ್ಯಸ್ಥ ದೇವರಾಜ್ ಎನ್. ಉದ್ಯಮಿ ಸಚಿನ್ ಗೌಡ, ಆನಂದ್, ಮಹಾರಾಜ ಜಗ್ಗಿ, ವಿಜಯ್ ಜಾಧವ್,  ಪೂಜಾ, ಅಶೋಕ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಾನು ಮೂಲತಃ ಸಾಫ್ಟ್‌ವೇರ್ ಉದ್ಯೋಗಿ. ಜೊತೆಗೆ 2013 ರಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಇದೆ. ರಾಬರ್ಟ್, ಗಾಳ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ಈ ಸಿನಿಮಾಕ್ಕೆ ಕಥೆ ಹಾಗೂ ಚಿತ್ರಕಥೆ ನಾನೇ ಬರೆದಿದ್ದು, ನಿರ್ಮಾಣವನ್ನು ಮಾಡಿದ್ದೇನೆ. ನರಹರಿ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಅವರಿಗೆ ಥ್ಯಾಂಕ್ಸ್‌. ಮಂಜುಳಾ, ಹೇಮ ಎನ್.ಕೆ ಹಾಗೂ ಹರ್ಷಿತಾ ಈ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ. ಷಣ್ಮುಖ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಐಶ್ವರ್ಯ ಮುತ್ತುರಾಜ್, ಬಲ ರಾಜ್ವಾಡಿ, ಕೆ.ಎಸ್ ಶ್ರೀಧರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಲುಷ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಥಿಯೇಟರ್‌ಗಳಲ್ಲಿ ಕಲುಷ ಸಿನಿಮಾವನ್ನು ನೋಡಿದರೆ ಎಷ್ಟು ಅದ್ಭುತ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.    

ವಿನೋದ್ ಹಿರೇಮಠ ಹಾಗೂ ವಾಸೀಂ ಅಕ್ರಮ್ ಸಂಗೀತ ನೀಡಿದ್ದಾರೆ. ಕಲುಷ ಎಂದರೆ ಕೋಪ, ಆಕ್ರೋಶ ಎಂಬ ಅರ್ಥ ಬರುತ್ತದೆ. ಇದೊಂದು ಮರ್ಡರ್ ಮಾಫಿಯಾ ಸುತ್ತ ಹೆಣೆದಿರುವ ಕಥೆ. ನಮಗೆ ತಿಳಿದಿರುವ ಹಾಗೆ ಯಾರು ಇಲ್ಲದ ಅನೇಕರು ಇದಕ್ಕೆ ಇದ್ದ ಹಾಗೆ  ನಾಪತ್ತೆ ಆಗುತ್ತಾರೆ. ನಾಪತ್ತೆಯಾದವರು ಏನಾಗುತ್ತಾರೆ? ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಬೆಂಗಳೂರು, ದಾವಣಗೆರೆ, ಹರಪನಹಳ್ಳಿ ಮುಂತದ ಕಡೆ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಟೀಸರ್ ಹಾಗೂ ಹಾಡನ್ನು ಉದ್ಯಮಿ ದೇವರಾಜ್ ಎನ್ ಅವರ ಡಿ ಮ್ಯೂಸಿಕ್ ಸಂಸ್ಥೆ ಮೂಲಕ ಬಿಡುಗಡೆ ಮಾಡಿದ್ದೇವೆ. ಸಿನಿಮಾವನ್ನು ಸದ್ಯದಲ್ಲೇ ತೆರೆಗೆ ತರುತ್ತೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹಾಗೂ ನಾಯಕ ಯುವಾನ್ ಪ್ರತಾಪ್.

ನಾನು ಈಗಾಗಲೇ ಐದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ, ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದು. ಮರ್ಡರ್ ಮಾಫಿಯಾದ ಕಥಾಹಂದರ ಹೊಂದಿರುವ ಚಿತ್ರವಾದರೂ, ಪ್ರೇಮಕಥೆಯೂ ಇದೆ. ನಾನು ಮಧ್ಯಮವರ್ಗದ ಕುಟುಂಬದ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಐಶ್ವರ್ಯ ಮುತ್ತುರಾಜ್ ಹೇಳಿದ್ದಾರೆ.

ನಮ್ಮ ಡಿ ಮ್ಯೂಸಿಕ್ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಹೊಸ ಪ್ರತಿಭೆಗಳಿಗೆ ನಮ್ಮ ಸಂಸ್ಥೆ ಸದಾ ಬೆನ್ನಲುಬಾಗಿ ನಿಲ್ಲುತ್ತದೆ. ಇದು ನಮ್ಮ ಡಿ ಮ್ಯೂಸಿಕ್ ಸಂಸ್ಥೆಯ ಮೊದಲ ಚಿತ್ರ ಎಂದು ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್ ನ ಮುಖ್ಯಸ್ಥ ದೇವರಾಜ್ ಎನ್ ತಿಳಿಸಿದರು. ಯುವಾನ್ ಪ್ರತಾಪ್ ಮತ್ತು ಐಶ್ವರ್ಯ ಮುತ್ತುರಾಜ್ ನಾಯಕ- ನಾಯಕಿಯಾಗಿ ನಟಿಸಿರುವ ಕಲುಷ ಸಿನಿಮಾದ ಟೀಸರ್ ಅದ್ಭುತವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್‌ಗೆ ಎಲ್ಲ ಕಡೆಯಿಂದ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಸಸ್ಪೆನ್ಸ್‌, ಥ್ರಿಲ್ಲಿಂಗ್‌ ಇರುವುದರಿಂದ ಕಲುಷ ಸಿನಿಮಾ ಯಶಸ್ವಿ ಆಗಲಿದೆ. ಇಂತಹ ಮೂವಿಗಳನ್ನು ನೋಡಲು ಪ್ರೇಕ್ಷಕರು ಮತ್ತೆ ಮತ್ತೆ ಚಿತ್ರಮಂದಿರಗಳ ಕಡೆಗೆ ಮುಖ ಮಾಡುತ್ತಾರೆ. ಕಥೆ ಅದ್ಭುತವಾಗಿದೆ ಎಂದರೆ ಯಶಸ್ಸು ಪಕ್ಕಾ ಅಂತ ಅರ್ಥ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES