ಕೇಂದ್ರ ಲೋಕಸೇವಾ ಆಯೋಗವು (UPSC) ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವಂತಹ ಒಟ್ಟು 212 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸದ್ಯ ಈ ಸಂಬಂಧ ಅಧಿಕೃತ ನೇಮಕಾರಿ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಈ ಉದ್ಯೋಗಗಳಿಗೆ ಆಸಕ್ತಿ ಇರುವವರು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಉದ್ಯೋಗಗಳ ಮಾಹಿತಿ, ಎಷ್ಟು ಇವೆ, ಕೊನೆಯ ದಿನಾಂಕ ಯಾವಾಗ, ಯಾರು ಅರ್ಜಿ ಸಲ್ಲಿಕೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
ಈಗಾಗಲೇ ಈ ಅರ್ಜಿ ಸಲ್ಲಿಕೆ ಮಾಡುವುದು ಆರಂಭವಾಗಿದ್ದರಿಂದ ಉದ್ಯೋಗ ಆಕಾಂಕ್ಷಿಗಳು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು. 2026ರ ಸೆಪ್ಟೆಂಬರ್ 12 ರಿಂದಲೇ ಅರ್ಜಿಗಳು ಆರಂಭವಾಗಿವೆ. ಅಧಿಕೃತ ವೆಬ್‌ಸೈಟ್ ಮೂಲ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಸರ್ಕಾರಿ ಉದ್ಯೋಗ ಬೇಕು ಎನ್ನುವವರು ಈ ಕೂಡಲೇ ಇವುಗಳಿಗೆ ಪ್ರಯತ್ನ ಮಾಡಬಹುದು. ಒಮ್ಮೆ ಕೇಂದ್ರ ಸರ್ಕಾರದ ಉದ್ಯೋಗ ಸಿಕ್ಕರೇ ನಿಮ್ಮ ಮುಂದಿನ ವೃತ್ತಿ ಜೀವನವೂ ಅಮೋಘವಾಗಿ ಇರುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಉದ್ಯೋಗಗಳಿಗಿಂತ ಕೇಂದ್ರ ಸರ್ಕಾರ ಉದ್ಯೋಗಗಳಿಗೆ ಯುವಕರು, ಯುವತಿಯರು ಪ್ರಯತ್ನ ಮಾಡುವುದು ಉತ್ತಮ.
ಈ ನೇಮಕಾತಿಯಲ್ಲಿ ಸಹಾಯಕ ಪ್ರಾಧ್ಯಾಪಕರು, ಸಹಾಯಕ ಸಂಪಾದಕರು, ಸಹಾಯಕ ಸಾರ್ವಜನಿಕ ಅಭಿಯೋಜಕರು ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾನೂನು ಅಧಿಕಾರಿಗಳು ಸೇರಿದಂತೆ 7 ವಿಭಿನ್ನ ವಿಭಾಗಗಳ ಹುದ್ದೆಗಳನ್ನು ಒಳಗೊಂಡಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪೋಸ್ಟ್‌ವಾರು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಪ್ರಮುಖ ನಿಯಮಾವಳಿಗಳನ್ನು ಆಯೋಗವು ಸ್ಪಷ್ಟವಾಗಿ ನಿರೂಪಿಸಿದೆ.
ಈ ನೇಮಕಾತಿಯಲ್ಲಿ ಏಕ- ಪೋಸ್ಟ್ ಹುದ್ದೆಗಳಿಂದ ಹಿಡಿದು ನೂರಕ್ಕೂ ಹೆಚ್ಚು ಖಾಲಿ ಹುದ್ದೆಗಳಿರುವ ವಿಭಾಗಗಳವರೆಗೆ ವಿವಿಧ ಅವಕಾಶಗಳಿವೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವು ಅಭ್ಯರ್ಥಿಗಳು ಆಯ್ಕೆ ಮಾಡುವ ಹುದ್ದೆಯ ಆಧಾರದ ಮೇಲೆ ವ್ಯತ್ಯಾಸಗೊಳ್ಳುತ್ತದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಹುದ್ದೆಯನ್ನು ಹೊರತುಪಡಿಸಿ, ಇತರ ಎಲ್ಲಾ 6 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು 2026ರ ಅಕ್ಟೋಬರ್ 02 ರಂದು ಸಂಜೆ 6 ಗಂಟೆ ಒಳಗೆ ಸಲ್ಲಿಸಬೇಕು. ಇನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು 2026ರ ಅಕ್ಟೋಬರ್ 09ರವರೆಗೆ ಕಾಲಾವಕಾಶ ಇರುತ್ತದೆ.
ಯುಪಿಎಸ್‌ಸಿ ಬಿಡುಗಡೆ ಮಾಡಿರುವ ಮಾಹಿತಿಯಂತೆ 212 ಖಾಲಿ ಹುದ್ದೆಗಳ ಹಂಚಿಕೆಯು ವಿವಿಧ ಇಲಾಖೆಗಳು ಮತ್ತು ಮೀಸಲಾತಿ ವರ್ಗಗಳಿಗೆ ಅನುಗುಣವಾಗಿ ಹಂಚಿಕೆಯಾಗಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್, ದೆಹಲಿ ಎನ್‌ಸಿಟಿ ಸರ್ಕಾರ ಮತ್ತು ಭಾರತೀಯ ಗಣಿ ಬ್ಯೂರೋ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 4 ಖಾಲಿ ಹುದ್ದೆಗಳು ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬ್ಯಾಕ್‌ಲಾಗ್ ಹುದ್ದೆಗಳು 60 ಸೇರಿವೆ
ಭಾರತೀಯ ಗಣಿ ಬ್ಯೂರೋ, ಗಣಿ ಸಚಿವಾಲಯದಲ್ಲಿ 2 ಉದ್ಯೋಗಗಳು ಇವೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ 1 ಹುದ್ದೆ ಖಾಲಿ ಇದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಜೂನಿಯರ್ ಸ್ಕೇಲ್ 1 ಉದ್ಯೋಗ ಇದೆ. ಸಹಾಯಕ ಸಾರ್ವಜನಿಕ ಅಭಿಯೋಜಕರು 140 ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ನೇಮಕಾತಿಯು ಮೂಲತಃ ಸಂದರ್ಶನ ಆಧಾರಿತ ಪ್ರಕ್ರಿಯೆ ಆಗಿದೆ. ಆದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೆ ಅಥವಾ ಅಗ್ಯತವೆನಿಸಿದರೆ, ಆಯೋಗವು ಶಾರ್ಟ್‌ಲಿಸ್ಟಿಂಗ್ ಅಥವಾ ನೇಮಕಾತಿ ಪರೀಕ್ಷೆಯನ್ನು ನಡೆಸಿ, ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಸಂದರ್ಶನದ ನಿಖರವಾದ ದಿನಾಂಕ ಮತ್ತು ಸಮಯವನ್ನು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಅವರ ಅಧಿಕೃತ ಇಮೇಲ್ ವಿಳಾಸಕ್ಕೆ ರವಾನೆ ಮಾಡಲಾಗುತ್ತದೆ.
ಉದ್ಯೋಗ ಆಕಾಂಕ್ಷಿಗಳು ಹುದ್ದೆಗಾಗಿ ಎಷ್ಟೇ ಓದಿ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಹುದ್ದೆ ಸಿಗುವುದಿಲ್ಲ. ಇದರಿಂದ ಉದ್ಯೋಗ ಆಕಾಂಕ್ಷಿಗಳು ಯಾವುದೇ ಅವಮಾನಕ್ಕೆ ಅಥವಾ ಬೇಸರವಾಗಬಾರದು. ಮುಂದಿನ ಜೀವನ ಹೇಗೆ ಇರುತ್ತದೆ ಹಾಗೇ ನಡೆಸಿಕೊಂಢು ಹೋಗುವುದು ಉತ್ತಮ. ಸರ್ಕಾರಿ ಉದ್ಯೋಗ ಸಿಗಲಿಲ್ಲ ಅಂತ ತಲೆ ಕೆಡಿಸಿಕೊಂಡು ಕುಟುಂಬಸ್ಥರೊಂದಿಗೆ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಅಲ್ಲ. ಕುಟುಂಬದ ಹಿರಿಯರು ಏನೇ ಹೇಳಿದರು ಅದು ನಿಮ್ಮ ಒಳ್ಳೆಯನಕ್ಕೆ ಆಗಿರುತ್ತದೆ. ಯೋಚನೆ ಮಾಡಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ. ಯಾವುದೇ ದುಡುಕಿನ ನಿರ್ಧಾರ ಬೇಡವೇ ಬೇಡ. ನಿಮಗಂತ ಕೆಲಸಗಳು ಇರುತ್ತವೆ. ಅವುಗಳನ್ನು ಹುಡುಕಿಕೊಂಡು ಹೋಗಬೇಕು ಅಷ್ಟೇ. ಕೆಲಸದಲ್ಲಿ ಯಶಸ್ಸು ಗಳಿಸಿದರೆ ಸಾಕು ಮುಂದಿನ ಜೀವನ ಚೆನ್ನಾಗಿರುತ್ತದೆ.
ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಇದೊಂದು ಶುಭ ಸುದ್ದಿ ಎಂದು ಹೇಳಬಹುದು. ಉದ್ಯೋಗಕ್ಕಾಗಿ ಅಲೆಯುವುದು ಬೇಕಾಗಿಲ್ಲ. ಸರ್ಕಾರವೇ ಅರ್ಜಿಗೆ ಕರೆದಿರುವಾಗ ಅಭ್ಯರ್ಥಿಗಳು ಆ ಹುದ್ದೆಗೆ ತಕ್ಕಂತೆ ವಿದ್ಯಾಭ್ಯಾಸ ಮಾಡಿದರೆ, ನಿತ್ಯ ಬೆಳಗಿನ ಜಾವ ಓದಿದರೆ ಪರೀಕ್ಷೆಯಲ್ಲಿ ಸುಲಭವಾಗಿ ಸಕ್ಸಸ್ ಆಗಬಹುದು. ಜೀವನದಲ್ಲಿ ಒಂದು ಬಾರಿ ಸರ್ಕಾರಿ ಉದ್ಯೋಗ ಪಡೆದರೆ ಬದುಕಿನ ಪೂರ್ತಿ ಅದು ನಿಮಗೆ ಸುಂದರ ಜೀವನ ಕಟ್ಟಿ ಕೊಡುತ್ತದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ ಮೇಲೆ ಎಲ್ಲ ಮಾಹಿತಿಗಳು ಸರಿಯಾಗಿ ಇವೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ.
ಪೋಷಕರು ಮಕ್ಕಳಿಗೆ ಶಿಕ್ಷಣ ತಕ್ಕ ಉದ್ಯೋಗ ಸಿಕ್ಕರೇ ಸಾಕು ಎಂದು ಕಾಯುತ್ತಿರುತ್ತಾರೆ. ಮನೆಯಲ್ಲಿ ಸಾಕಷ್ಟು ಹಣ ಕೊಟ್ಟು ಮಗುವಿಗೆ ಉನ್ನತ ವ್ಯಾಸಂಗ ಮಾಡಿಸಿರುತ್ತಾರೆ. ಹೀಗಾಗಿ ವರ್ಷಗಳು ಕಳೆದಂತೆ ಮಗ ಅಥವಾ ಮಕ್ಕಳು ಚೆನ್ನಾಗಿ ಇರಲಿ ಎಂದು ಬಯಸುವುದು ಸಾಮಾನ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ತಕ್ಕ ಹುದ್ದೆಗಳನ್ನು ಹುಡುಕುವುದು ಒಂದು ಉತ್ತಮ ಕೆಲಸವಾಗಿರುತ್ತದೆ. ಮುಂದಿನ ಮನೆಯ ಆರ್ಥಿಕ ಯೋಜನೆಗಳಿಗೆ ನಿಮ್ಮ ಉದ್ಯೋಗ ಮುಖ್ಯವಾದ ದಾರಿಯಾಗುತ್ತದೆ. ಮನೆಯ ಖರ್ಚು ವೆಚ್ಚಗಳ ಕುರಿತು ಉದ್ಯೋಗ ಪಡೆದು ಯೋಚನೆ ಮಾಡಿದಾಗ ನಿಮಗೆ ಸ್ಪಷ್ಟವಾದ ಉತ್ತರ ದೊರಕುತ್ತದೆ.
ಈಗಿನ ಕಾಲದಲ್ಲಿ ಅದರಲ್ಲಿ ವಿದ್ಯಾವಂತರೇ ಹೆಚ್ಚು ಇರುವ ಈಗ ಶಿಕ್ಷಣಕ್ಕೆ ತಕ್ಕ ಉದ್ಯೋಗವನ್ನು ಪಡೆಯುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಟಾರ್ಗೆಟ್ ಆಗಿರಬೇಕು. ನಿಮ್ಮ ನಿಮ್ಮ ವಿದ್ಯಾಭ್ಯಾಸಕ್ಕೆ ಹೊಂದಿಕೆ ಆಗುವಂತಹ ಸರಿಯಾದ ಕೆಲಸವನ್ನು ಹುಡುಕುವುದು ಮತ್ತು ಪಡೆಯುವುದು ಮುಂದಿನ ಬದುಕಿಗೆ ಅಂದರೆ ವಿದ್ಯಾಭ್ಯಾಸದ ನಂತರದ ವೃತ್ತಿ ಜೀವನಕ್ಕೆ ಒಳ್ಳೆಯದು ಆಗಿರುತ್ತದೆ. ಪೋಷಕರ ಆಸೆಯೂ ನೆರವೇರುತ್ತದೆ. ನಿಮ್ಮ ಜೀವನಕ್ಕೂ ಆರ್ಥಿಕ ಸಹಾಯದ ಜೊತೆ ಗೌರವವು ಸಿಗುತ್ತದೆ.