SOCIAL MEDIA

Newsletter

PARTNER SITES
Select Language Select State

ಬರೀ ಅಕ್ಷರ, ಸಂಖ್ಯೆ ಶಾಲೆಯಲ್ಲಿ ಕಲಿಸುವುದು ಅಲ್ಲ.. ನಿಮ್ಮ ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಾಗಿದ್ದು ಏನು..?

ಮಕ್ಕಳಿಗೆ ಹೆಚ್ಚಾಗಿ ತಂತ್ರಜ್ಞಾನದ ಬಗ್ಗೆ ತಿಳಿಸುವುದಕ್ಕಿಂತ ಥೇರಿಯಂತಹದ್ದನ್ನೇ ಹೆಚ್ಚಾಗಿ ಹೇಳಿಕೊಡಲಾಗುತ್ತಿದೆ. ಮಕ್ಕಳ ಪ್ರಾಯೋಗಿಕ ಕಲಿಕೆ ಭಾರತದಲ್ಲಿ ತೀರ ಕಡಿಮೆ ಇದೆ. ಪೋಷಕರು ತಮ್ಮ ಮಗು ಶಾಲೆಯಲ್ಲಿ ತನ್ನ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲದೇ, ಸಂಖ್ಯೆಗಳನ್ನು ಸರಿಯಾಗಿ ಎಣಿಸಬಲ್ಲದೇ ಎಂಬುವುದರನ್ನೇ ಸಮಯ ಕಳೆಯುತ್ತಿದ್ದಾರೆ.

Reported By Bhimappa Written By Bhimappa
Published: Sep 14, 2026, 06:31 PM IST | Updated: Sep 17, 2026, 03:20 PM IST
Image Credit: File Photo
Join

21ನೇ ಶತಮಾನವು ಕೇವಲ ತಾಂತ್ರಿಕ ಪ್ರಗತಿಯ ಯುಗ ಮಾತ್ರವಲ್ಲ, ಬದಲಾವಣೆಗಳು ಮತ್ತು ಅಭೂತಪೂರ್ವ ಸವಾಲುಗಳ ಯುಗವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಾಗುತ್ತಿದೆ. ಇದರೊಂದಿಗೆ ಪ್ರಪಂಚದ ಆರ್ಥಿಕ ಮತ್ತು ರಾಜಕೀಯ ವಾತಾವರಣವು ಬದಲಾಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇಂತಹ ವೇಗದ, ಕ್ರಾಂತಿಕಾರಿ ಬದಲಾವಣೆ ಕಾಲದಲ್ಲಿ, ಇಂದಿನ ಜಗತ್ತಿನಲ್ಲಿ ಮುಂದೆ ಇರುವ ಸಂಕೀರ್ಣ ಸವಾಲುಗಳಿಗೆ ಮಗುವನ್ನು ಹೇಗೆ ಸಿದ್ಧಪಡಿಸುವುದು ಎಂಬ ಪ್ರಶ್ನೆ ಪೋಷಕರು ಮತ್ತು ಶಿಕ್ಷಣ ತಜ್ಞರಲ್ಲಿ ಗಂಭೀರವಾಗಿ ಉದ್ಭವಿಸಿದೆ.

ಈ ವೇಗದ ತಂತ್ರಜ್ಞಾನದ ಕಾಲವನ್ನು ಯಶಸ್ವಿಯಾಗಿ ನಿಭಾಯಿಸಲು ಅಗತ್ಯವಿರುವ 21ನೇ ಶತಮಾನದ ಕೌಶಲ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕಿದೆ. ಆರಂಭದಿಂದಲೇ ಮಕ್ಕಳು ಚಾಲೆಂಜ್‌ ಅನ್ನು ಸ್ವೀಕಾರ ಮಾಡುವಂತೆ ಮಾಡಬೇಕಿದೆ. ಪ್ರಸ್ತುತ ಜಾಗತೀಕರಣದ ನವೀನ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ, ಅಂತರ್-ಸಾಂಸ್ಕೃತಿಕವಾಗಿ ಸಾಮರ್ಥ್ಯವುಳ್ಳ ವಯಸ್ಕರಾಗಲು ಮಕ್ಕಳಿಗೆ ಬಾಲ್ಯದಿಂದಲೇ ಪೂರಕವಾದದನ್ನು ಕಲಿಸಬೇಕು. ಇಡೀ ಪ್ರಪಂಚವು ಇಂದು ಹಳೆಯ ಕೈಗಾರಿಕಾ ಯುಗದಿಂದ ಮುಂದಕ್ಕೆ ಸಾಗಿದ್ದು ಮಾಹಿತಿ ಮತ್ತು ಜ್ಞಾನದ ಯುಗದ ಕಡೆಗೆ ವೇಗವಾಗಿ ಸಾಗುತ್ತಿದೆ.

ಈ ಬದಲಾವಣೆಗೆ ಅನುಗುಣವಾಗಿ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಮತ್ತು ಶಾಲೆಗಳು ಮಕ್ಕಳನ್ನು ಸಿದ್ಧಗೊಳಿಸಬೇಕಿದೆ. ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಬದಲಾಗಿ ಸೃಜನಶೀಲ ಚಿಂತನೆ, ಹೊಂದಿಕೊಳ್ಳುವ ಸಮಸ್ಯೆ ಪರಿಹಾರ ಸಾಮರ್ಥ್ಯ, ಸಹಯೋಗ ಮತ್ತು ನವೀನ ಕೌಶಲ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಶಿಕ್ಷಣ ಪ್ರಕ್ರಿಯೆ ಸಂಪೂರ್ಣವಾಗಿ ರೂಪಾಂತರಗೊಳ್ಳಬೇಕಿದೆ.

ಬಾಲ್ಯದಲ್ಲೇ ಶಿಕ್ಷಣದ ಮಹತ್ವ ಮತ್ತು ಅವರ ಮೆದುಳಿನ ವಿಕಸನ ಮಾಡಬೇಕು

ಬಾಲ್ಯವು ಮಗುವಿನ ಸಮಗ್ರ ಜೀವನಕ್ಕೆ ಬಲವಾದ ಅಡಿಪಾಯ ಹಾಕುವ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅವಧಿ ಆಗಿದೆ. ಈ ಹಂತವು ದೈಹಿಕ, ಅರಿವಿನ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯಲ್ಲಿ ಅತ್ಯಂತ ತ್ವರಿತ ರೂಪಾಂತರಗಳಿಂದ ಗುರುತಿಸಲ್ಪಡುತ್ತದೆ. ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿರುವಂತೆ, ಮಗುವಿಗೆ 5 ವರ್ಷ ವಯಸ್ಸಾಗುವ ಮೊದಲು ಮೆದುಳು ಸೆಕೆಂಡಿಗೆ ಸುಮಾರು 700 ನರ ಸಂಪರ್ಕಗಳನ್ನು ರೂಪಿಸುತ್ತದೆ. ಈ ಆರಂಭಿಕ ವಯಸ್ಸಿನಲ್ಲಿ ಸಿಗುವ ಉತ್ತಮ ಗುಣಮಟ್ಟದ ಬಾಲ್ಯದ ಶಿಕ್ಷಣವು (Early Childhood Education - ECE) ಮಕ್ಕಳ ಅರಿವಿನ ವಿಕಾಸಕ್ಕೆ ಸಹಾಯಕವಾಗಿರುತ್ತದೆ. ಇದು ನಂತರದ ಪ್ರಾಥಮಿಕ, ಮಧ್ಯಮ ಮತ್ತು ಉನ್ನತ ಶಿಕ್ಷಣದ ಹಂತಗಳಲ್ಲಿ ಮಕ್ಕಳ ಕಲಿಯುವ ಸಾಮರ್ಥ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಮೆದುಳಿನ ಬೆಳವಣಿಗೆಯು ಶೇಕಡಾ 90 ರಷ್ಟು ಭಾಗವು 5 ವರ್ಷದ ಒಳಗೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಬಾಲ್ಯದ ಶಿಕ್ಷಣದಿಂದಲೇ ಮಗುವಿಗೆ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವು ಅಭಿವೃದ್ಧಿಯಾಗಬೇಕು. ಅಂದರೆ ಯೋಚಿಸುವ, ಗ್ರಹಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವೂ ಬಾಲ್ಯದ ಶಿಕ್ಷಣದಿಂದಲೇ ವೃದ್ಧಿಯಾಗುತ್ತದೆ. ಸಾಮಾಜಿಕ ಕೌಶಲ್ಯಗಳು ಐದು ವರ್ಷಗಳ ಬಳಿಕವೇ ಮಗುವಿನಲ್ಲಿ ವೃದ್ಧಿಯಾಗುತ್ತದೆ. ಅಂದರೆ ಇತರರೊಂದಿಗೆ ಬೆರೆಯುವುದು, ಶೇರ್‌ ಮಾಡುವುದು ಮತ್ತು ಒಟ್ಟಾಗಿ ಕೆಲಸ ಮಾಡುವ ಗುಣಗಳನ್ನು ಇದು ಕಲಿಸುತ್ತದೆ. ಹೊಸ ಪದಗಳನ್ನು ಕಲಿಯುವುದು, ಸ್ಪಷ್ಟವಾಗಿ ಮಾತನಾಡಲು ಮತ್ತ ಓದುವ ಹವ್ಯಾಸದ ಆರಂಭಿಕ ಹೆಜ್ಜೆಗೆ ಇದು ದಾರಿ ಮಾಡುತ್ತದೆ. ಔಪಚಾರಿಕ ವಿದ್ಯಾಭ್ಯಾಸವನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಯಲು ಮಗುವನ್ನು ಮಾನಸಿಕವಾಗಿ ಪೋಷಕರು, ಶಿಕ್ಷಕರು, ಶಾಲಾ ಸಂಸ್ಥೆಗಳು ಸಿದ್ಧಗೊಳಿಸಬೇಕು.  

ವ್ಯಾಪಕವಾದ ಸಂಶೋಧನೆಗಳ ಪ್ರಕಾರ, ಉತ್ತಮ ಗುಣಮಟ್ಟದ ಬಾಲ್ಯದ ಶಿಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ನಂತರದ ಶಾಲಾ ದಿನಗಳಲ್ಲಿ ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಹೆಚ್ಚು ಯಶಸ್ವಿ ಆಗುತ್ತಾರೆ. ಇಂತಹ ಗುಣಮಟ್ಟದ ಶಿಕ್ಷಣ ಪಡೆಯದ ಮಕ್ಕಳಿಗಿಂತ ಇವರು ಬಾಲ್ಯದಲ್ಲಿಯೇ ಉತ್ತಮ ಮೌಖಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಯನ್ನು ಪ್ರದರ್ಶಿಸುತ್ತಾರೆ. ಸೂಕ್ತವಾಗಿ ವಿನ್ಯಾಸಗೊಳಿಸಲಾದ ECE ಕಾರ್ಯಕ್ರಮಗಳು ಈ ರಚನಾತ್ಮಕ ವರ್ಷಗಳಲ್ಲಿ ಮತ್ತು ಭವಿಷ್ಯದಲ್ಲಿ ಚಿಕ್ಕ ಮಕ್ಕಳ ಯೋಗಕ್ಷೇಮವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇವು ಮಗು ಮನೆಯಲ್ಲಿ ಪಡೆಯುವ ಆರೈಕೆಗೆ ಪೂರಕ ಶಕ್ತಿಯಾಗಿ ಕೆಲಸ ಮಾಡುತ್ತವೆ.

ಈ ಎಲ್ಲಾ ಕೌಶಲ್ಯಗಳನ್ನು ಬಾಲ್ಯದಲ್ಲೇ ಮೈಗೂಡಿಸಿಕೊಳ್ಳುವುದು ಮಗುವಿನ ಭವಿಷ್ಯದ ಯಶಸ್ಸಿಗೆ ಅತ್ಯಗತ್ಯ. ಮಗುವಿಗೆ ಗುಣಮಟ್ಟದ ಬಾಲ್ಯದ ಶಿಕ್ಷಣ ಒದಗಿಸಲು ಮತ್ತು ಅವರನ್ನು ಶಾಲೆಗೆ ಸಿದ್ಧಗೊಳಿಸಲು ಪ್ರಿಸ್ಕೂಲ್‌ಗಳು ಪ್ರಮುಖ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ಇಂದು ಭಾರತದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಿದೆ. ಆದರೆ, ದುರದೃಷ್ಟವಶಾತ್ ಅವರಿಗೆ ಇಂದಿಗೂ ಸೂಕ್ತ ಮತ್ತು ಬಲವಾದ ಆಯ್ಕೆಗಳ ಕೊರತೆಯಿದೆ. ಭಾರತದಲ್ಲಿ, ಆರಂಭಿಕ ಬಾಲ್ಯದ ಶಿಕ್ಷಣವು ಇನ್ನೂ ಹೆಚ್ಚಾಗಿ ಅಸಂಘಟಿತ ವಾಣಿಜ್ಯ ಶಿಕ್ಷಣ ವಲಯದಿಂದಲೇ ಆಳಲ್ಪಡುತ್ತಿದೆ ಎನ್ನುವುದು ಬೇಸರ ಸಂಗತಿ ಆಗಿದೆ.

ಮಕ್ಕಳ ಶಿಕ್ಷಣ ಭಾರತದಲ್ಲಿ ಈಗಲೂ ಹೇಗಿದೆ ಎಂದರೆ ಕೇವಲ ಮೌಖಿಕ ಕಲಿಕೆ, ವರ್ಣಮಾಲೆ ಕಂಠಪಾಠ ಮಾಡಿಸುವುದು, ಕೆಲವು ನಿಗದಿತ ನರ್ಸರಿ ಪ್ರಾಸಗಳನ್ನು ಹೇಳಿಕೊಡುವುದು ಮತ್ತು ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿವೆ. ಮಕ್ಕಳಿಗೆ ಹೆಚ್ಚಾಗಿ ತಂತ್ರಜ್ಞಾನದ ಬಗ್ಗೆ ತಿಳಿಸುವುದಕ್ಕಿಂತ ಥೇರಿಯಂತಹದ್ದನ್ನೇ ಹೆಚ್ಚಾಗಿ ಹೇಳಿಕೊಡಲಾಗುತ್ತಿದೆ. ಮಕ್ಕಳ ಪ್ರಾಯೋಗಿಕ ಕಲಿಕೆ ಭಾರತದಲ್ಲಿ ತೀರ ಕಡಿಮೆ ಇದೆ. ಪೋಷಕರು ತಮ್ಮ ಮಗು ಶಾಲೆಯಲ್ಲಿ ತನ್ನ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲದೇ, ಸಂಖ್ಯೆಗಳನ್ನು ಸರಿಯಾಗಿ ಎಣಿಸಬಲ್ಲದೇ ಎಂಬುವುದರನ್ನೇ ಸಮಯ ಕಳೆಯುತ್ತಿದ್ದಾರೆ. ಇಲ್ಲಿ ಪ್ರಮುಖ ನ್ಯೂನತೆ ಇರುವುದು ಮಗುವಿಗೆ ಏನು ಕಲಿಸಲಾಗುತ್ತದೆ ಎಂಬಲ್ಲಿ ಮಾತ್ರವಲ್ಲ, ಬದಲಾಗಿ ಮಗುವಿಗೆ ಹೇಗೆ ಕಲಿಸಲಾಗುತ್ತದೆ ಎಂಬ ಬೋಧನಾ ವಿಧಾನದಲ್ಲಿದೆ. 

ಆರಂಭಿಕ ಬಾಲ್ಯದ ಶಿಕ್ಷಣವು ಮಗುವಿಗೆ ಕೇವಲ ಶೈಕ್ಷಣಿಕ ಅಂಕಗಳನ್ನು ಗಳಿಸಲು ನೆರವಾಗುತ್ತದೆ ಅಷ್ಟೇ. ಬದುಕಿಗೆ ಅಗತ್ಯವಿರುವ ಜೀವನ ಕೌಶಲ್ಯಗಳನ್ನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಇಸಿಇ ಮಗುವಿನ ಭವಿಷ್ಯದ ನಡವಳಿಕೆ, ಕ್ರಿಯೆಗಳು ಮತ್ತು ವೃತ್ತಿಜೀವನದ ಬಗೆಗಿನ ಧೋರಣೆಯನ್ನು ನಿರ್ಧರಿಸುತ್ತದೆ. ಬಾಲ್ಯದಲ್ಲಿ ಮನಸ್ಸು ಹೊಸ ಪರಿಕಲ್ಪನೆಗಳನ್ನು ಗ್ರಹಿಸಲು ಮತ್ತು ಹೊಸ ಕಲ್ಪನೆಗಳನ್ನು ಸ್ವತಂತ್ರವಾಗಿ ನಿರ್ಮಿಸಲು ಮುಕ್ತವಾಗಿರುವುದರಿಂದ, ಚಿಂತನೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಆರಂಭಿಕ ವರ್ಷಗಳಲ್ಲೇ ಬೆಳೆಸುವುದು ಅತ್ಯಂತ ನಿರ್ಣಾಯಕವಾಗಿದೆ.

ಇಸಿಇ ಪ್ರತಿಯೊಂದು ಮಗುವಿಗೂ ಸಾರ್ವತ್ರಿಕವಾಗಿ ಸಿಗುವಂತೆ ಮಾಡುವುದರ ಜೊತೆಗೆ 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಶಾಲಾಪೂರ್ವ ಮಕ್ಕಳ ಯಶಸ್ಸನ್ನು ಕೇವಲ ಓದುವ, ಬರೆಯುವ ಸಾಮರ್ಥ್ಯ ಅಥವಾ ಸಂಖ್ಯೆಗಳನ್ನು ಗುರುತಿಸಿ ಎಣಿಸುವ ಸಾಮರ್ಥ್ಯದ ಆಧಾರದ ಮೇಲೆ ಮಾತ್ರ ಅಳೆಯುವುದು ಯೋಗ್ಯವಲ್ಲ. ಇದನ್ನು ಮಕ್ಕಳ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕಿದೆ. ಸೃಜನಶೀಲತೆ ಮತ್ತು ಮುಕ್ತ ಚಿಂತನೆಗೆ ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯಷ್ಟೇ ನಾಳಿನ ಜಗತ್ತನ್ನು ಮುನ್ನಡೆಸಬಲ್ಲ ಸಮರ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES