ನಿಮ್ಮ ಮಗು ಪೈಲಟ್ ಆಗಬೇಕಾ? ತರಬೇತಿಗೆ ಎಷ್ಟು ಖರ್ಚು, ಏನೆಲ್ಲಾ ಅರ್ಹತೆ ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ!
ಪೈಲಟ್: ಪೈಲಟ್ ಆಗುವುದು ಅನೇಕ ಜನರಿಗೆ ಜೀವಮಾನದ ಕನಸಾಗಿದೆ. ಒಂದು ಕಾಲದಲ್ಲಿ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಕನಸು, ಈಗ ಮಧ್ಯಮ ವರ್ಗದವರೂ ಸಹ ಅದನ್ನು ಸಾಧಿಸುತ್ತಿದ್ದಾರೆ. ಹಾಗಾದರೆ ಭಾರತದಲ್ಲಿ ಪೈಲಟ್ ಆಗಲು ಎಷ್ಟು ವೆಚ್ಚವಾಗುತ್ತದೆ?
ಪೈಲಟ್ ಆಗುವುದು ಅನೇಕ ಜನರಿಗೆ ಜೀವಮಾನದ ಕನಸಾಗಿದೆ. ಒಂದು ಕಾಲದಲ್ಲಿ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಕನಸು, ಈಗ ಮಧ್ಯಮ ವರ್ಗದವರೂ ಸಹ ಅದನ್ನು ಸಾಧಿಸುತ್ತಿದ್ದಾರೆ. ಹಾಗಾದರೆ ಭಾರತದಲ್ಲಿ ಪೈಲಟ್ ಆಗಲು ಎಷ್ಟು ವೆಚ್ಚವಾಗುತ್ತದೆ?
ಪೈಲಟ್ ತರಬೇತಿಗೆ ಅರ್ಹತೆ ಪಡೆಯಲು, ಒಬ್ಬರು ಮಧ್ಯಂತರ ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಗಳಿಸಿರಬೇಕು. ಒಬ್ಬರು ಈಗಾಗಲೇ ಇಂಟರ್ ಪೂರ್ಣಗೊಳಿಸಿದ್ದರೆ ಮತ್ತು ಪಿಸಿಎಂ ಹೊಂದಿಲ್ಲದಿದ್ದರೆ, ಚಿಂತಿಸಬೇಕಾಗಿಲ್ಲ. NIOS ಮೂಲಕ ಭೌತಶಾಸ್ತ್ರ ಮತ್ತು ಗಣಿತವನ್ನು ಬರೆಯುವ ಸಾಧ್ಯತೆಯಿದೆ. ಇದು ಡಿಜಿಸಿಎ ಒಪ್ಪಿಕೊಂಡಿರುವ ಮಾರ್ಗವಾಗಿದೆ.
ಆಕಾಶದಲ್ಲಿ ವಿಮಾನ ಹಾರಿಸುವುದು.. ಸಾವಿರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ಕರೆದೊಯ್ಯುವುದು.. ಇದು ಅನೇಕರ ಕನಸಿನ ವೃತ್ತಿ. ಪೈಲಟ್ ಆಗಬೇಕು ಅನ್ನೋ ಆಸೆ ಇದ್ದರೆ, ಅದಕ್ಕೆ ಬೇಕಾದ ಅರ್ಹತೆ ಏನು? ತರಬೇತಿಗೆ ಎಷ್ಟು ಹಣ ಖರ್ಚಾಗುತ್ತದೆ? ಯಾವ ಪರೀಕ್ಷೆಗಳನ್ನು ಪಾಸ್ ಮಾಡಬೇಕು? ಪೈಲಟ್ ಆಗಲು ಎಷ್ಟು ಸಮಯ ಬೇಕಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಪೈಲಟ್ ಆಗುವುದು ಹೇಗೆ?
ವಿಮಾನ, ಹೆಲಿಕಾಪ್ಟರ್ ಸೇರಿದಂತೆ ಹಾರುವ ವಾಹನಗಳನ್ನು ಸುರಕ್ಷಿತವಾಗಿ ನಿಯಂತ್ರಿಸುವ ವ್ಯಕ್ತಿಯೇ ಪೈಲಟ್. ಪ್ರಯಾಣಿಕರು ಮತ್ತು ಸರಕುಗಳನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವುದು ಪೈಲಟ್‌ನ ಪ್ರಮುಖ ಜವಾಬ್ದಾರಿ.ಹಾರಾಟದ ಮಾರ್ಗ, ಹವಾಮಾನ ಪರಿಸ್ಥಿತಿ ಹಾಗೂ ವಿಮಾನದ ತಾಂತ್ರಿಕ ವ್ಯವಸ್ಥೆಗಳನ್ನು ನಿರಂತರವಾಗಿ ಗಮನಿಸಬೇಕು. ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಪೈಲಟ್‌ಗೆ ಅತ್ಯಗತ್ಯ.
*ಪೈಲಟ್ ಆಗಲು ವಿದ್ಯಾರ್ಹತೆ ಏನು?
ಪೈಲಟ್ ಆಗುವ ಕನಸು ಕಾಣುತ್ತಿರುವವರು ಮೊದಲು ವಿದ್ಯಾರ್ಹತೆಯನ್ನು ಪೂರೈಸಬೇಕು.
12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಓದಿರಬೇಕು. ಸಾಮಾನ್ಯವಾಗಿ ಅಗತ್ಯವಿರುವ ಕನಿಷ್ಠ ಅಂಕಗಳ ಮಾನದಂಡವನ್ನು ಪೂರೈಸಬೇಕು. ಇಂಟರ್ ಬಳಿಕ PCM ಇರದಿದ್ದರೆ, NIOS ಮೂಲಕ ಭೌತಶಾಸ್ತ್ರ ಮತ್ತು ಗಣಿತವನ್ನು ಪೂರ್ಣಗೊಳಿಸುವ ಮಾರ್ಗವೂ ಇದೆ.ತರಬೇತಿ ಆರಂಭಿಸಲು ಕನಿಷ್ಠ 17 ವರ್ಷ ವಯಸ್ಸು ಅಗತ್ಯ.
*ಮೆಡಿಕಲ್ ಟೆಸ್ಟ್ ಬಹಳ ಮುಖ್ಯ
ಪೈಲಟ್ ತರಬೇತಿಗೆ ಸೇರುವ ಮೊದಲು ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ಅತ್ಯಂತ ಮುಖ್ಯ.
ಮೊದಲು DGCA Class-2 Medical ಪರೀಕ್ಷೆ, ನಂತರ Class-1 Medical ಪರೀಕ್ಷೆಯನ್ನು ಪೂರ್ಣಗೊಳಿಸಬೇಕು.
ಈ ಪರೀಕ್ಷೆಗಳಲ್ಲಿ ದೃಷ್ಟಿ, ಹೃದಯ, ಶ್ರವಣ ಸೇರಿದಂತೆ ದೈಹಿಕ ಆರೋಗ್ಯದ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ವೈದ್ಯಕೀಯವಾಗಿ ಅರ್ಹತೆ ಪಡೆದ ನಂತರವೇ ಮುಂದಿನ ಹಂತದ ತರಬೇತಿಗೆ ಸಾಗಬಹುದು.
*DGCA ಪರೀಕ್ಷೆಗಳಲ್ಲಿ ಪಾಸ್ ಆಗಬೇಕು
ಪೈಲಟ್ ಆಗಲು ಕೇವಲ ವಿಮಾನ ಹಾರಿಸುವ ತರಬೇತಿ ಪಡೆದರೆ ಸಾಕಾಗುವುದಿಲ್ಲ. DGCA ನಡೆಸುವ ಥಿಯರಿ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಬೇಕು.
ಏರ್ ರೆಗ್ಯುಲೇಷನ್ಸ್
ಏವಿಯೇಷನ್ ಮೆಟಿಯರಾಲಜಿ
ಏರ್ ನ್ಯಾವಿಗೇಷನ್
ಟೆಕ್ನಿಕಲ್ ಜನರಲ್
ಟೆಕ್ನಿಕಲ್ ಸ್ಪೆಸಿಫಿಕ್
ರೇಡಿಯೋ ಟೆಲಿಫೋನಿ
ಮುಖ್ಯ ವಿಷಯಗಳಾಗಿವೆ.
ಈ ಪರೀಕ್ಷೆಗಳಲ್ಲಿ ನಿಗದಿತ ಕನಿಷ್ಠ ಅಂಕಗಳನ್ನು ಪಡೆಯಬೇಕು. ಈ ಹಂತಕ್ಕೆ ಸಾಮಾನ್ಯವಾಗಿ 6ರಿಂದ 12 ತಿಂಗಳವರೆಗೆ ಸಮಯ ಬೇಕಾಗಬಹುದು.
* 200 ಗಂಟೆಗಳ ಫ್ಲೈಯಿಂಗ್ ತರಬೇತಿ
ಪೈಲಟ್ ಆಗುವ ಕನಸಿನ ಪ್ರಮುಖ ಹಂತವೇ ಫ್ಲೈಯಿಂಗ್ ಟ್ರೈನಿಂಗ್.ಕಮರ್ಷಿಯಲ್ ಪೈಲಟ್ ಲೈಸೆನ್ಸ್ — CPL ಪಡೆಯಲು ಅಗತ್ಯವಿರುವ ಹಾರಾಟದ ಅನುಭವವನ್ನು ಪೂರ್ಣಗೊಳಿಸಬೇಕು. ತರಬೇತಿಯಲ್ಲಿ ಡ್ಯುಯಲ್ ಫ್ಲೈಯಿಂಗ್, ಸೋಲೋ ಫ್ಲೈಯಿಂಗ್, ಕ್ರಾಸ್-ಕಂಟ್ರಿ, ನೈಟ್ ಫ್ಲೈಯಿಂಗ್ ಮತ್ತು ಇನ್‌ಸ್ಟ್ರುಮೆಂಟ್ ಫ್ಲೈಯಿಂಗ್ ಸೇರಿವೆ.ಆರಂಭದಲ್ಲಿ Cessna 152, Cessna 172 ಸೇರಿದಂತೆ ಸಣ್ಣ ತರಬೇತಿ ವಿಮಾನಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.ಅಗತ್ಯವಿರುವ ಫ್ಲೈಯಿಂಗ್ ಅನುಭವ ಮತ್ತು ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ DGCAಯಿಂದ CPL ಪಡೆಯಲು ಅರ್ಜಿ ಸಲ್ಲಿಸಬಹುದು.
ಏರ್‌ಬಸ್, ಬೋಯಿಂಗ್ ಹಾರಿಸಲು ಟೈಪ್ ರೇಟಿಂಗ್
CPL ಪಡೆದ ತಕ್ಷಣವೇ ನೇರವಾಗಿ ದೊಡ್ಡ ಪ್ಯಾಸೆಂಜರ್ ವಿಮಾನಗಳನ್ನು ಹಾರಿಸಲು ಸಾಧ್ಯವಿಲ್ಲ.
Airbus A320 ಅಥವಾ Boeing 737ನಂತಹ ನಿರ್ದಿಷ್ಟ ವಿಮಾನಗಳನ್ನು ಹಾರಿಸಲು Type Rating ಅಗತ್ಯ.
ಈ ತರಬೇತಿ ಸಾಮಾನ್ಯವಾಗಿ ಸಿಮ್ಯುಲೇಟರ್ ಆಧಾರಿತವಾಗಿದ್ದು, ಸುಮಾರು 2ರಿಂದ 3 ತಿಂಗಳು ನಡೆಯಬಹುದು.
ಇದರ ವೆಚ್ಚ ಸುಮಾರು ₹12 ಲಕ್ಷದಿಂದ ₹20 ಲಕ್ಷದವರೆಗೆ ಇರಬಹುದು.
VO 7 – ಪೈಲಟ್ ಆಗಲು ಒಟ್ಟು ಎಷ್ಟು ಖರ್ಚು?
ಹಾಗಾದರೆ ಪೈಲಟ್ ಆಗಲು ಒಟ್ಟು ಎಷ್ಟು ಹಣ ಬೇಕು?
ಗ್ರೌಂಡ್ ಸ್ಕೂಲ್ ಮತ್ತು DGCA ಪರೀಕ್ಷೆಗಳಿಗೆ ಸುಮಾರು ₹2.5ರಿಂದ ₹3 ಲಕ್ಷ.
ಫ್ಲೈಯಿಂಗ್ ತರಬೇತಿಗೆ ಸುಮಾರು ₹42ರಿಂದ ₹49 ಲಕ್ಷ.
ಟೈಪ್ ರೇಟಿಂಗ್‌ಗೆ ಸುಮಾರು ₹12ರಿಂದ ₹20 ಲಕ್ಷ.
ಹೀಗಾಗಿ CPL ಹಾಗೂ ಅಗತ್ಯ ತರಬೇತಿಗಳನ್ನು ಒಳಗೊಂಡಂತೆ ಒಟ್ಟಾರೆ ವೆಚ್ಚ ಸುಮಾರು ₹65ರಿಂದ ₹75 ಲಕ್ಷದವರೆಗೆ ಹೋಗಬಹುದು.
ಇನ್ನು ಕೆಲವು ಏರ್‌ಲೈನ್ ಕೆಡೆಟ್ ಕಾರ್ಯಕ್ರಮಗಳಲ್ಲಿ ಒಟ್ಟು ವೆಚ್ಚ ₹1 ಕೋಟಿಗೂ ಮೀರಬಹುದು. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ತರಬೇತಿಯ ಜೊತೆಗೆ ಉದ್ಯೋಗದ ಅವಕಾಶಗಳಿಗೂ ಹೆಚ್ಚಿನ ಗಮನವಿರುತ್ತದೆ.
*ಪ್ರಮುಖ ಫ್ಲೈಯಿಂಗ್ ಸ್ಕೂಲ್‌ಗಳು
ದೇಶದಲ್ಲಿ DGCA ಅನುಮೋದನೆ ಹೊಂದಿರುವ ಹಲವು ಫ್ಲೈಯಿಂಗ್ ಟ್ರೈನಿಂಗ್ ಸಂಸ್ಥೆಗಳಿವೆ.
IGRUA, ಅಮೇಥಿ; Carver Aviation Academy, ಬಾರಾಮತಿ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ತರಬೇತಿ ಪಡೆಯಬಹುದು.
ಕೆಲವು ಏರ್‌ಲೈನ್ ಕೆಡೆಟ್ ಕಾರ್ಯಕ್ರಮಗಳ ಮೂಲಕವೂ ತರಬೇತಿ ಪಡೆಯುವ ಅವಕಾಶವಿದೆ.
ಆದರೆ ಯಾವುದೇ ಸಂಸ್ಥೆಗೆ ಸೇರುವ ಮುನ್ನ ಅದರ DGCA ಅನುಮೋದನೆ ಮತ್ತು ಪ್ರಸ್ತುತ ಮಾನ್ಯತೆಯನ್ನು ಅಧಿಕೃತವಾಗಿ ಪರಿಶೀಲಿಸುವುದು ಅತ್ಯಂತ ಮುಖ್ಯ.
* ಪೈಲಟ್ ವೇತನ ಮತ್ತು ಉದ್ಯೋಗಾವಕಾಶ
ಪೈಲಟ್ ವೃತ್ತಿಯಲ್ಲಿ ಆರಂಭಿಕ ಹಂತದಲ್ಲೇ ಉತ್ತಮ ವೇತನದ ಅವಕಾಶವಿದೆ. ಅನುಭವ, ವಿಮಾನಯಾನ ಸಂಸ್ಥೆ, ಹುದ್ದೆ ಮತ್ತು ವಿಮಾನದ ಪ್ರಕಾರ ವೇತನದಲ್ಲಿ ಸಾಕಷ್ಟು ವ್ಯತ್ಯಾಸವಾಗಬಹುದು.
ಕಮರ್ಷಿಯಲ್ ಪೈಲಟ್ ಆಗಿ ಅನುಭವ ಹೆಚ್ಚಾದಂತೆ First Officerನಿಂದ Captain ಹುದ್ದೆಯವರೆಗೆ ಬೆಳೆಯುವ ಅವಕಾಶವಿದೆ.
ಅಂದರೆ, ಪೈಲಟ್ ಆಗುವುದು ಖಂಡಿತವಾಗಿಯೂ ದುಬಾರಿ ವೃತ್ತಿ. ಆದರೆ ಸೂಕ್ತ ವಿದ್ಯಾರ್ಹತೆ, ವೈದ್ಯಕೀಯ ಫಿಟ್ನೆಸ್, DGCA ಪರೀಕ್ಷೆ ಮತ್ತು ಫ್ಲೈಯಿಂಗ್ ತರಬೇತಿಯನ್ನು ಪೂರ್ಣಗೊಳಿಸಿದರೆ ಇದು ಉತ್ತಮ ವೃತ್ತಿ ಅವಕಾಶಗಳನ್ನು ನೀಡುವ ಕ್ಷೇತ್ರವಾಗಿದೆ.
ಹಾಗಾದರೆ ಪೈಲಟ್ ಆಗಬೇಕು ಅನ್ನೋ ಕನಸು ಇದ್ದರೆ, 12ನೇ ತರಗತಿಯಿಂದಲೇ ಸರಿಯಾದ ವಿಷಯಗಳ ಆಯ್ಕೆ ಮಾಡಿಕೊಳ್ಳಿ. ಮೆಡಿಕಲ್ ಫಿಟ್ನೆಸ್‌ನಿಂದ ಹಿಡಿದು DGCA ಪರೀಕ್ಷೆ, ಫ್ಲೈಯಿಂಗ್ ಅವರ್ಸ್ ಮತ್ತು ಟೈಪ್ ರೇಟಿಂಗ್‌ವರೆಗೆ ಪ್ರತಿಯೊಂದು ಹಂತವೂ ಮುಖ್ಯ. ಮುಖ್ಯವಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮೊದಲು ಆಯ್ಕೆ ಮಾಡುವ ಫ್ಲೈಯಿಂಗ್ ಸ್ಕೂಲ್‌ನ DGCA ಅನುಮೋದನೆ ಮತ್ತು ಶುಲ್ಕದ ಸಂಪೂರ್ಣ ವಿವರವನ್ನು ಪರಿಶೀಲಿಸಿ.