• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ಬೆಂಗಳೂರಿನ NLSIUನಲ್ಲಿ ಭರ್ಜರಿ ಫೆಲೋಶಿಪ್ ಅವಕಾಶ; ₹2 ಲಕ್ಷದವರೆಗೆ ವೇತನ, ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ NLSIUನಲ್ಲಿ ಭರ್ಜರಿ ಫೆಲೋಶಿಪ್ ಅವಕಾಶ; ₹2 ಲಕ್ಷದವರೆಗೆ ವೇತನ, ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ NLSIU 2027ರ ಜನವರಿ ಅವಧಿಗೆ 20 Research Fellowship ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. Graduate Research, Postdoctoral ಮತ್ತು University Research Fellowshipಗಳಲ್ಲಿ ಅವಕಾಶವಿದ್ದು, ಅರ್ಹತೆ ಆಧರಿಸಿ ತಿಂಗಳಿಗೆ ₹50,000ರಿಂದ ₹2 ಲಕ್ಷದವರೆಗೆ ಸಂಭಾವನೆ ಸಿಗಲಿದೆ. ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಆಸಕ್ತರಿಗೆ ಇದು ಅವಕಾಶವಾಗಿದ್ದು, ಅಕ್ಟೋಬರ್ 30, 2026 ಸಂಜೆ 5 ಗಂಟೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Written ByPuttaraj K Alur
Published: Sep 29, 2026, 06:01 PM IST|Updated: Sep 29, 2026, 06:10 PM IST
joinshare
ಬೆಂಗಳೂರಿನ NLSIUನಲ್ಲಿ ಭರ್ಜರಿ ಫೆಲೋಶಿಪ್ ಅವಕಾಶ; ₹2 ಲಕ್ಷದವರೆಗೆ ವೇತನ, ಇಂದೇ ಅರ್ಜಿ ಸಲ್ಲಿಸಿ!
Image Credit: NLSIU Research Fellowships

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

NLSIU Research Fellowships 2027: ಕಾನೂನು, ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಲು ಬಯಸುವವರಿಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಮಹತ್ವದ ಅವಕಾಶವೊಂದನ್ನ ನೀಡಿದೆ. 2027ರ ಜನವರಿ ಅವಧಿಗೆ ವಿವಿಧ ಸಂಶೋಧನಾ ಫೆಲೋಶಿಪ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 20 ಸ್ಥಾನಗಳು ಲಭ್ಯವಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಗರಿಷ್ಠ ₹2 ಲಕ್ಷದವರೆಗೆ ಸಂಭಾವನೆ ಸಿಗಲಿದೆ.

NLSIU ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಈ ಬಾರಿ ಮೂರು ಪ್ರಮುಖ ಫೆಲೋಶಿಪ್ ಕಾರ್ಯಕ್ರಮಗಳ ಅಡಿಯಲ್ಲಿ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಅವುಗಳೆಂದರೆ Graduate Research Fellowship, NLSIU Postdoctoral Fellowship ಮತ್ತು University Research Fellowship. ಕಾನೂನು, ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಹಾಗೂ ಸಂಬಂಧಿತ ವಿಷಯಗಳಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಹೊಂದಿರುವ ವಿವಿಧ ಹಂತದ ಸಂಶೋಧಕರಿಗೆ ಈ ಅವಕಾಶಗಳನ್ನ ನೀಡಲಾಗುತ್ತಿದೆ.

20 ಫೆಲೋಶಿಪ್ ಸ್ಥಾನಗಳು

ಈ ನೇಮಕಾತಿಯಲ್ಲಿ ಒಟ್ಟು 20 ಸ್ಥಾನಗಳಿವೆ. Graduate Research Fellowshipಗೆ 10 ಸ್ಥಾನಗಳು, NLSIU Postdoctoral Fellowshipಗೆ 5 ಸ್ಥಾನಗಳು ಹಾಗೂ University Research Fellowshipಗೆ 5 ಸ್ಥಾನಗಳು ಮೀಸಲಿಡಲಾಗಿದೆ. ಫೆಲೋಶಿಪ್‌ಗಳು ಗುತ್ತಿಗೆ ಆಧಾರದ ಮೇಲೆ ಇರಲಿದ್ದು, ಆಯ್ಕೆಯಾಗುವವರು ಬೆಂಗಳೂರಿನ NLSIU ಕ್ಯಾಂಪಸ್‌ನಲ್ಲಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

NLSIU ಪ್ರಕಾರ, ಈ ಫೆಲೋಶಿಪ್ ಕಾರ್ಯಕ್ರಮದ ಉದ್ದೇಶ ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗೆ ಉತ್ತೇಜನ ನೀಡುವುದು. ಹೊಸ ಸೈದ್ಧಾಂತಿಕ ದೃಷ್ಟಿಕೋನಗಳನ್ನ ಅಭಿವೃದ್ಧಿಪಡಿಸುವುದು, ಪ್ರಾಯೋಗಿಕ ಸಂಶೋಧನೆ ನಡೆಸುವುದು ಮತ್ತು ಸಂಶೋಧನೆ ಹಾಗೂ ನೀತಿ ರೂಪಿಸುವಿಕೆಯ ನಡುವಿನ ಸಂಪರ್ಕವನ್ನ ಬಲಪಡಿಸುವ ಕೆಲಸಗಳಿಗೆ ಒತ್ತು ನೀಡಲಾಗುತ್ತದೆ. ಅಂತರಶಿಸ್ತೀಯ ಸಂಶೋಧನೆಗೂ ಅವಕಾಶವಿದೆ.

Graduate Research Fellowship

ಇತ್ತೀಚೆಗೆ ಪದವಿ ಪಡೆದವರು ಹಾಗೂ ಯುವ ಸಂಶೋಧಕರಿಗೆ Graduate Research Fellowship ಪ್ರಮುಖ ಅವಕಾಶವಾಗಿದೆ. ಈ ಫೆಲೋಶಿಪ್‌ಗೆ ಕಾನೂನಿನಲ್ಲಿ ಪದವಿ ಅಥವಾ ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಹಾಗೂ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಕೆಲಸದ ಅನುಭವ ಹೊಂದಿರಬೇಕೆಂಬ ನಿಯಮವಿಲ್ಲ. ಮೂರು ವರ್ಷಗಳವರೆಗೆ post-qualification experience ಹೊಂದಿರುವ ಯುವ ಸಂಶೋಧಕರನ್ನ ಗುರಿಯಾಗಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಂಶೋಧನಾ ಕೌಶಲ್ಯ ಬೆಳೆಸಿಕೊಳ್ಳಲು ಅವಕಾಶ ದೊರೆಯಲಿದೆ. ಆಯ್ಕೆಯಾಗುವವರಿಗೆ ಸಂಶೋಧನಾ ಕೇಂದ್ರಗಳು ಮತ್ತು ಯೋಜನೆಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲಿದೆ. Graduate Research Fellowshipಗೆ ಆರಂಭಿಕ ಮಾಸಿಕ ಸಂಭಾವನೆ ₹50,000 ಆಗಿದೆ. ಫೆಲೋಶಿಪ್ ಅವಧಿ ಕನಿಷ್ಠ ಆರು ತಿಂಗಳು ಹಾಗೂ ಗರಿಷ್ಠ ಎರಡು ವರ್ಷಗಳವರೆಗೆ ಇರಬಹುದು.

Postdoctoral Fellowship

PhD ಪೂರ್ಣಗೊಳಿಸಿರುವ ಸಂಶೋಧಕರಿಗೂ NLSIU ಉತ್ತಮ ಅವಕಾಶ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಕಾನೂನು, ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಅಥವಾ ಸಂಬಂಧಿತ ವಿಷಯಗಳಲ್ಲಿ PhD ಪಡೆದಿರುವವರು Postdoctoral Fellowshipಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯ ದಿನಾಂಕದ ವೇಳೆಗೆ PhD ಥೀಸಿಸ್ ಸಲ್ಲಿಸಿರುವ ಅಭ್ಯರ್ಥಿಗಳಿಗೂ ಕೆಲವು ಷರತ್ತುಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಫೆಲೋಶಿಪ್ ಅಡಿಯಲ್ಲಿ ಒಟ್ಟು 5 ಸ್ಥಾನಗಳು ಲಭ್ಯವಿದ್ದು, ಆರಂಭಿಕ ಮಾಸಿಕ ಸಂಭಾವನೆ ₹1.20 ಲಕ್ಷ ಎಂದು NLSIU ತಿಳಿಸಿದೆ. ಫೆಲೋಶಿಪ್ ಅವಧಿ ಸಾಮಾನ್ಯವಾಗಿ ಒಂದರಿಂದ ಎರಡು ವರ್ಷಗಳವರೆಗೆ ಇರಲಿದೆ. ಈಗಾಗಲೇ ಮತ್ತೊಂದು ವಿಶ್ವವಿದ್ಯಾಲಯ ಅಥವಾ ಸಂಶೋಧನಾ ಸಂಸ್ಥೆಯಲ್ಲಿ Postdoctoral Fellowship ಮಾಡಿರುವ ಅಭ್ಯರ್ಥಿಗಳಿಗೆ ಈ ವಿಭಾಗದಲ್ಲಿ ಅರ್ಹತೆ ಇರುವುದಿಲ್ಲ.

University Research Fellowship

ಹಿರಿಯ ಸಂಶೋಧಕರು ಹಾಗೂ ಅನುಭವ ಹೊಂದಿರುವ ಶೈಕ್ಷಣಿಕ ಕ್ಷೇತ್ರದ ಅಭ್ಯರ್ಥಿಗಳಿಗಾಗಿ University Research Fellowship ನೀಡಲಾಗುತ್ತಿದೆ. ಈ ವಿಭಾಗಕ್ಕೆ ಮಾನ್ಯತೆ ಪಡೆದ PhD ಹೊಂದಿರುವುದರ ಜೊತೆಗೆ ಕನಿಷ್ಠ 10 ವರ್ಷಗಳ ಬೋಧನಾ ಅಥವಾ ಸಂಬಂಧಿತ ವೃತ್ತಿಪರ ಅನುಭವ ಹೊಂದಿರಬೇಕು. ಉತ್ತಮ ಸಂಶೋಧನಾ ಪ್ರಕಟಣೆಗಳ ದಾಖಲೆಯೂ ಅಗತ್ಯವಾಗಿದೆ. ಈ ವಿಭಾಗದಲ್ಲಿ 5 ಸ್ಥಾನಗಳಿದ್ದು, ಆರಂಭಿಕ ಮಾಸಿಕ ಸಂಭಾವನೆ ₹2 ಲಕ್ಷ. ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಒಟ್ಟಾರೆ ಸೂಕ್ತತೆಯ ಆಧಾರದ ಮೇಲೆ ಅಂತಿಮ ಸಂಭಾವನೆ ನಿರ್ಧರಿಸಲಾಗುತ್ತದೆ ಎಂದು NLSIU ತಿಳಿಸಿದೆ.

ಯಾವ ವಿಷಯಗಳಲ್ಲಿ ಸಂಶೋಧನೆ ಮಾಡಬಹುದು?

ಕಾನೂನು ಮಾತ್ರವಲ್ಲದೆ ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಹಾಗೂ ಸಂಬಂಧಿತ ಅಂತರಶಿಸ್ತೀಯ ಕ್ಷೇತ್ರಗಳಲ್ಲೂ ಸಂಶೋಧನೆ ಮಾಡಲು ಅವಕಾಶವಿದೆ. NLSIUನ ಉದ್ದೇಶ ಸಂಶೋಧನೆಯನ್ನ ಕೇವಲ ಶೈಕ್ಷಣಿಕ ವಲಯಕ್ಕೆ ಸೀಮಿತಗೊಳಿಸದೆ, ನೀತಿ ರೂಪಿಸುವಿಕೆ ಮತ್ತು ಸಂಸ್ಥೆಗಳ ಸುಧಾರಣೆಯೊಂದಿಗೆ ಸಂಪರ್ಕಿಸುವುದಾಗಿದೆ. ಆಯ್ಕೆಯಾಗುವ ಫೆಲೋಗಳು ಸಂಶೋಧನಾ ಕಾರ್ಯಗಳು, ಸಾಹಿತ್ಯ ಪರಿಶೀಲನೆ, ಸಂಶೋಧನಾ ಪ್ರಸ್ತಾವನೆಗಳ ತಯಾರಿ, ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

2027ರ ಜನವರಿ intakeಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 30, 2026 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನ ಸಂಬಂಧಿತ ಫೆಲೋಶಿಪ್‌ಗೆ ನೀಡಲಾಗಿರುವ Google Form ಮೂಲಕ ಸಲ್ಲಿಸಬೇಕು ಎಂದು NLSIU ತಿಳಿಸಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಫೆಲೋಶಿಪ್‌ನ ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಮತ್ತು ಇತರ ಷರತ್ತುಗಳನ್ನ ಅಧಿಕೃತ NLSIU ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ. ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ ಸಂಶೋಧನಾ ವೃತ್ತಿ ರೂಪಿಸಿಕೊಳ್ಳಲು ಬಯಸುವವರಿಗೆ ಈ ಫೆಲೋಶಿಪ್ ಕಾರ್ಯಕ್ರಮವು ಮಹತ್ವದ ಶೈಕ್ಷಣಿಕ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಸೂಕ್ತ.

Add Zee News as a Preferred Source
TAGS:
Job
Kannada News