SOCIAL MEDIA

Newsletter

PARTNER SITES
Select Language Select State

ಉದ್ಯೋಗ ಹುಡುಕುವವರಿಗೆ ಭರ್ಜರಿ ಸಿಹಿ ಸುದ್ದಿ.. ಕರ್ನಾಟಕದಲ್ಲಿ ಬರೋಬ್ಬರಿ 4600ಕ್ಕೂ ಅಧಿಕ ಹುದ್ದೆಗಳು

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ರೆಡಿಯಾಗಿದೆ. ಇದರ ಜೊತೆಗೆ ಈಗಾಗಲೇ ಪದವಿ, ಡಿಪ್ಲೋಮಾ, ಪಿಯುಸಿ, ವಿದ್ಯಾರ್ಹತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡರೇ

Reported By Bhimappa Written By Bhimappa
Published: Sep 14, 2026, 12:14 PM IST | Updated: Sep 17, 2026, 03:31 PM IST
Image Credit: File Photo
Join

ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇದಕ್ಕಾಗಿ ಉದ್ಯೋಗ ಆಕಾಂಕ್ಷಿಗಳು ಸಾಕಷ್ಟು ಪ್ರಯತ್ನ ಪಟ್ಟರೂ ಕೆಲವೊಮ್ಮೆ ಸರ್ಕಾರಿ ಹುದ್ದೆ ಕೈ ಜಾರಿ ಹೋಗುತ್ತದೆ. ಇದರಿಂದ ಉದ್ಯೋಗ ಆಕಾಂಕ್ಷಿಗಳು ಯಾವುದೇ ತಲೆ ಕೆಡಿಸಿಕೊಳ್ಳದೇ ನೆಮ್ಮದಿಯಿಂದ ಯೋಚನೆ ಮಾಡಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಯಾವುದೇ ದುಡುಕಿನ ನಿರ್ಧಾರಕ್ಕೆ ಕೈ ಹಾಕದೇ ಸರ್ಕಾರಿ ಕೆಲಸ ಇಲ್ಲದಿದ್ದರೇ ಏನು ಸಮಾಜದಲ್ಲಿ ನಿಮಗಂತನೇ ಬೇಕಾದಷ್ಟು ಕೆಲಸಗಳು ಕಾಯುತ್ತಿರುತ್ತವೆ. ಒಂದು ಕೆಲಸದಲ್ಲಿ ಯಶಸ್ಸು ಗಳಿಸಿದರೆ ಸಾಕು ನಿಮ್ಮ ವೃತ್ತಿ ಜೀವನ ಅದ್ಭುತವಾಗಿರುತ್ತದೆ. ಇದು ಏನೇ ಇರಲಿ ಇದೀಗ ಕೆಇಎ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗುಡ್‌ನ್ಯೂಸ್‌ ಹೊರ ಬಿದ್ದಿದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಸಿಹಿ ಸುದ್ದಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಶುಭ ಸುದ್ದಿಯಾಗಿದೆ. ಉದ್ಯೋಗಕ್ಕಾಗಿ ಅಲೆಯುವುದು ಬೇಕಾಗಿಲ್ಲ. ಸರ್ಕಾರವೇ ಅರ್ಜಿಗೆ ಕರೆದಿರುವಾಗ ಅಭ್ಯರ್ಥಿಗಳು ಆ ಹುದ್ದೆಗೆ ತಕ್ಕಂತೆ ವಿದ್ಯಾಭ್ಯಾಸ ಮಾಡಿಕೊಂಡು ಪೂರ್ವ ತಯಾರಿ ಮಾಡಿ ಪರೀಕ್ಷಯಲ್ಲಿ ಯಶಸ್ಸು ಗಳಿಸುವ ಕಡೆಗೆ ಗಮನ ಹರಿಸಬೇಕು. ಏಕೆಂದರೆ ಒಮ್ಮೆ ಸರ್ಕಾರಿ ಕೆಲಸ ಒಲಿದರೆ ಸಾಕು ನಿಮ್ಮ ಮುಂದಿನ 40, 50 ವರ್ಷಗಳು ಅಲ್ಲಿಯೇ ಮುಗಿದು ಹೋಗುತ್ತವೆ. ಹಾಗಾಗಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲು ನಿಮ್ಮ ತಯಾರಿ ಉನ್ನತ ಮಟ್ಟದಲ್ಲಿದ್ದರೇ ಹುದ್ದೆ ಸುಲಭವಾಗಿ ಪಡೆಯಬಹುದು.

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತಹ ಉದ್ಯೋಗಗಳನ್ನು ಭರ್ತಿ ಮಾಡಲು ಕೆಇಎ ಭರ್ಜರಿ ಸಿದ್ಧತೆ ನಡೆಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ರೆಡಿಯಾಗಿದೆ. ಇದರ ಜೊತೆಗೆ ಈಗಾಗಲೇ ಪದವಿ, ಡಿಪ್ಲೋಮಾ, ಪಿಯುಸಿ, ವಿದ್ಯಾರ್ಹತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಇದಕ್ಕೆ ಪೂರ್ವ ತಯಾರಿ ಮಾಡಿಕೊಂಡರೇ ನಿಮಗೊಂದು ಸರ್ಕಾರದ ಹುದ್ದೆ ಸಿಗುವ ಅವಕಾಶ ಇದ್ದೇ ಇದೆ. ವಿಶೇಷ ಎಂದರೆ ದೊಡ್ಡ ಮಟ್ಟದಲ್ಲೇ ಕೆಇಎ ಉದ್ಯೋಗಗಳನ್ನು ಆಹ್ವಾನ ಮಾಡುತ್ತಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತಹ ಒಟ್ಟು 4699 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಡಿಗ್ರಿ ಪೂರ್ಣಗೊಳಿಸಿದವರಿಗೆ ಅಂದರೆ ಪದವಿ ಮಟ್ಟದ 2,421 ಉದ್ಯೋಗಗಳನ್ನು ತುಂಬಲಾಗುತ್ತದೆ. ಇದು ಬಿಟ್ಟರೇ ಪಿಯುಸಿ ಮಟ್ಟದಲ್ಲಿ 2062 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇನ್ನು ಡಿಪ್ಲೋಮಾ ಮಟ್ಟದಲ್ಲಿ ಒಟ್ಟು 216 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಅಧಿಕೃತವಾಗ ಅಧಿಸೂಚನೆ ಹೊರ ಬರಲಿದೆ. ಇದೇ ವರ್ಷದ ಕೊನೆಯ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.  

ಪದವಿ ಹುದ್ದೆಗಳು; 4699 ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK)ಕ್ಕೆ ಪ್ರತ್ಯೇಕ ಹುದ್ದೆಗಳು ಇವೆ. ಇನ್ನು ಹುದ್ದೆಗಳ ವರ್ಗಿಕರಣಗಳನ್ನು ನೋಡುವುದಾದರೆ ಲೆಕ್ಕ ಸಹಾಯಕರು ಅಂದರೆ ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ಒಟ್ಟು 502 ಉದ್ಯೋಗಗಳು ಇವೆ. ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಅಥವಾ ನಿಲಯ ಮೇಲ್ವಿಚಾರಕರ ಹುದ್ದೆಗಳು 700ಕ್ಕೂ ಅಧಿಕ ಇವೆ. ಗ್ರೇಡ್‌-1 ರಲ್ಲಿ ಬರುವಂತಹ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಾಯಕ 183 ಉದ್ಯೋಗಗಳು ಇವೆ.

ವಿವಿಧ ಇಲಾಖೆಗಳಲ್ಲಿ ಪ್ರಥಮ ದರ್ಜೆ ಸಹಾಯಕರು 500ಕ್ಕೂ ಅಧಿಕ ಹುದ್ದೆಗಳು ಇವೆ. ವಾಣಿಜ್ಯ ತೆರಿಗೆ ಪರಿವೀಕ್ಷಕರು ಐವತ್ತು ಉದ್ಯೋಗಗಳು, ಸಚಿವಾಲಯ ಸಹಾಯಕರು 42 ಉದ್ಯೋಗಗಳು ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧಕರು 500ಕ್ಕೂ ಹೆಚ್ಚು ಉದ್ಯೋಗಗಳು ಇವೆ.

ಪಿಯುಸಿ ಪಡೆದಂತಹ ಅಭ್ಯರ್ಥಿಗಳಿಗೆ ಉದ್ಯೋಗಗಳು; ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರು 590 ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ. ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-‌2 ಹುದ್ದೆಗಳು ಒಟ್ಟು 322 ಇವೆ. ಇದು ಅಲ್ಲದೇ ಕಿರಿಯ ಲೆಕ್ಕ ಸಹಾಯಕರು 223 ಉದ್ಯೋಗಗಳು ಖಾಲಿ ಇವೆ. 

ಡಿಪ್ಲೊಮಾ ಪಡೆದವರಿಗೆ; ವಿವಿಧ ಇಲಾಖೆಗಳಲ್ಲಿ ಎಸ್‌ಡಿಎ ಉದ್ಯೋಗಗಳು ಇವೆ. ಇವುಗಳನ್ನು ಡಿಪ್ಲೊಮಾ ತಾಂತ್ರಿಕ ಹುದ್ದೆಗಳು ಆಗಿದ್ದು 216 ಹುದ್ದೆಗಳು ಇವೆ. ಸಹಾಯಕರ ನಗರ ಆಯೋಜಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ 119 ಕೆಲಸಗಳು ಇವೆ. ಜೂನಿಯರ್‌ ಇಂಜಿನಿಯರ್‌ ಸಿವಿಲ್‌ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿ 85 ಹುದ್ದೆಗಳು ಇವೆ. ಇವುಗಳನ್ನೆಲ್ಲ ಸರ್ಕಾರವೂ ಅಧಿಕೃತವಾಗಿ ನೋಟಿಫಿಕೇಶನ್‌ ಹೊರಡಿಸಿದಾಗ ಭರ್ತಿ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸರ್ಕಾರ ಈ ಕೆಲಸಗಳಿಗೆ ಅರ್ಜಿ ಕರೆಯುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಯಾವುಕ್ಕೂ ಒಮ್ಮೆ ಪೂರ್ವ ತಯಾರಿಯಲ್ಲಿ ಇರುವುದು ಉತ್ತಮ. ಸರ್ಕಾರ ಯಾವುದೇ ಸಂದರ್ಭದಲ್ಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಲಿ, ಅದಕ್ಕೆ ನಾವು ಸಿದ್ಧವಾಗಿದ್ದರೇ ಪರೀಕ್ಷೆ ಸಮಯದಲ್ಲಿ ನಾವು ಓದಿರುವುದದನ್ನು ಒಮ್ಮೆ ರಿವಿಸನ್‌ ಮಾಡಿಕೊಂಡರೇ ಸಾಕು ಸರ್ಕಾರಿ ಕೆಲಸವನ್ನು ಸುಲಭವಾಗಿ ಪಡೆಯಬಹುದು.  

ಪರೀಕ್ಷೆಯನ್ನು ಬರೆಯುವಾಗ ಜಾಣತನ ತೋರಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವುದು ಖಚಿತವಾಗಿರುತ್ತದೆ. ಡಿಗ್ರಿ ಮತ್ತು ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 2021 ಅಂತೆ ಪತ್ರಿಕೆ- 1 ಸಾಮಾನ್ಯ ಜ್ಞಾನ ಇರುತ್ತದೆ. ಅದರಂತೆ ಪತ್ರಿಕೆ 2 ಸಂವಹನ ವಿಷಯಾಧಾರಿಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆಯುವಾಗ ಸರ್ಕಾರವೂ ನೀಡಿದಂತ ನಿಯಮಗಳನ್ನು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೇ ಪರೀಕ್ಷೆ ದಿನವೇ ನಿಮ್ಮನ್ನು ಮೇಲ್ವಿಚಾರಕರು ಹೊರಗಡೆ ಕಳಿಸಬಹುದು.

ಪರೀಕ್ಷೆ ಸಮಯದಲ್ಲಿ ಸರ್ಕಾರವೂ ಕಟ್ಟುನಿಟ್ಟಿ ನಿಯಮಗಳನ್ನು ಹೊರಡಿಸಿರುತ್ತದೆ. ಅಂದರೆ ಪರೀಕ್ಷೆ ಹಾಲ್‌ನಲ್ಲಿ ಮೊಬೈಲ್‌, ಎಲೆಕ್ಟ್ರಿಕ್‌ ಪೆನ್‌, ಎಲೆಕ್ಟ್ರಿಕ್‌ ಸಾಧನಗಳನ್ನು, ಇಯರ್ ಫೋನ್ಸ್‌, ಫುಲ್‌ ತೋಳು ಇರುವಂತ‌ ಶರ್ಟ್‌, ಕೈಗಳಿಗೆ ಬ್ಯಾಂಡ್‌ ಹಾಕಿಕೊಂಡು ಹೋಗುವುದು ಇತ್ಯಾದಿಗಳನ್ನು ಸರ್ಕಾರ ನಿಷೇಧ ಮಾಡಿರುತ್ತದೆ. ಆದರೂ ನಿಯಮವನ್ನು ನೀವು ಪಾಲನೆ ಮಾಡಿಲ್ಲ ಎಂದರೆ ಅಲ್ಲಿನ ಸಿಬ್ಬಂದಿ ಕ್ರಮ ತೆಗದುಕೊಳ್ಳುತ್ತಾರೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES