SOCIAL MEDIA

Newsletter

PARTNER SITES
Select Language Select State

SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌.. 518 ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಈ ನೇಮಕಾತಿ ಅಭಿಯಾನದ ಮೂಲಕ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಪ್ರಮುಖ ಇಲಾಖೆಗಳಲ್ಲಿನ 518 ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿಯೂ ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ.

Reported By Bhimappa Written By Bhimappa
Published: Sep 13, 2026, 12:38 PM IST | Updated: Sep 17, 2026, 03:58 PM IST
Image Credit: File Photo
Join

ಭಾರತದ ಜಮ್ಮು ಮತ್ತು ಕಾಶ್ಮೀರದ ಸೇವೆಗಳ ಆಯ್ಕೆ ಮಂಡಳಿ (JKSSB) 2026 ನೇಮಕಾತಿಗಳನ್ನು ಮಾಡಲಾಗುತ್ತಿದೆ. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರಿ ಉದ್ಯೋಗವನ್ನು ಎದುರು ನೋಡುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ JKSSB ಗುಡ್‌ನ್ಯೂಸ್‌ ನೀಡಿದೆ. ಯುಟಿ ವಿಭಾಗೀಯ ಮತ್ತು ಜಿಲ್ಲಾ ಕೇಡರ್‌ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತಹ ಒಟ್ಟು 518 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು 2026ರ ಜಾಹೀತಾತು ಸಂಖ್ಯೆ 08ರ ಅಡಿಯಲ್ಲಿ ಆಗಸ್ಟ್‌ 4 ರಂದೇ ಹೊರಡಿಸಲಾಗಿದೆ. ಈಗಾಗಲೇ ಅರ್ಜಿ ಕೂಡ ಪ್ರಾರಂಭವಾಗಿದ್ದು ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು. ಕೊನೆ ದಿನಾಂಕದ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು ಅರ್ಜಿ ಹಾಕುವ ಕುರಿತು ಆಲೋಚನೆ ಮಾಡಬಹುದು.  

ಜಮ್ಮು ಮತ್ತು ಕಾಶ್ಮೀರದ ಸೇವೆಗಳ ಆಯ್ಕೆ ಮಂಡಳಿ 518 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಿದೆ. 2026ರ ಸೆಪ್ಟೆಂಬರ್‌ 10 ರಿಂದಲೇ ಅಪ್ಲಿಕೇಶನ್‌ಗಳನ್ನು ಹಾಕಲಾಗುತ್ತಿದೆ. ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಕ್ಟೋಬರ್‌ 9ರ ಒಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ (jkssb.nic.in) ಮೂಲಕವೇ ಅರ್ಜಿ ಸಲ್ಲಿಸಬೇಕು. ಇತರೆ ಮೂಲಗಳಿಂದ ಬರುವಂತಹ ಅರ್ಜಿಗಳನ್ನು ಸ್ವೀಕಾರ ಮಾಡುವುದಿಲ್ಲ.

ಈ ನೇಮಕಾತಿ ಅಭಿಯಾನದ ಮೂಲಕ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಪ್ರಮುಖ ಇಲಾಖೆಗಳಲ್ಲಿನ 518 ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿಯೂ ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ; ಈ ಇಲಾಖೆಯಲ್ಲಿ ಗರಿಷ್ಠ ಅಂದರೆ 421 ಹುದ್ದೆಗಳು ಖಾಲಿ ಇವೆ. 
ಉನ್ನತ ಶಿಕ್ಷಣ ಇಲಾಖೆ; 48 ಉದ್ಯೋಗಗಳು ಖಾಲಿ ಇವೆ. 
ಕೃಷಿ ಉತ್ಪಾದನಾ ಇಲಾಖೆ; ಒಟ್ಟು 46 ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. 
ಕಾರ್ಮಿಕ ಮತ್ತು ಉದ್ಯೋಗ ಇಲಾಖೆ; ಈ ಇಲಾಖೆಯಲ್ಲಿ ಮೂರು ಹುದ್ದೆಗಳು ಇವೆ.

ಅರ್ಹತಾ ಮಾನದಂಡಗಳು ಏನು? 
ಅಭ್ಯರ್ಥಿಗಳು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ತಮ್ಮ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ನಿವಾಸದ ಷರತ್ತುಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ; ನೇಮಕಾತಿ ಮಾಡಿಕೊಳ್ಳಲಾಗುವ ಪ್ರತಿಯೊಂದು ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳು ಭಿನ್ನವಾಗಿವೆ

ಸೀನಿಯರ್‌ ಕ್ಯಾನಿಂಗ್‌ ಅಟೆಂಡೆಂಟ್‌: ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ, ಕನಿಷ್ಠ 10ನೇ ತರಗತಿ (SSLC) ಪಾಸ್‌ ಆಗಿರಬೇಕು.

ತೋಡಗಾರಿಕೆ ತಂತ್ರಜ್ಞ ಗ್ರೇಡ್-‌ 4: ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ PUC (12ನೇ ತರಗತಿ) ಜೊತೆಗೆ ಒಂದು ವರ್ಷ ಮೂಲ ತೋಟಗಾರಿಕೆ ತರಬೇತಿಯನ್ನು ಪಡೆದಿರಬೇಕು.

ಜೂನಿಯರ್‌ ಲ್ಯಾಬೋರೇಟರಿ ಅಸಿಸ್ಟೆಂಟ್‌: ಈ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಲ್ಲದೇ ರಾಸಾಯನಶಾಸ್ತ್ರದಲ್ಲಿ ವೃತ್ತಿಪರ ಪ್ರಯೋಗಾಲಯ ಕೋರ್ಸ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ಬಗ್ಗೆ ಮಾಹಿತಿ ಇಲ್ಲಿದೆ (2026ರ ಜನವರಿ 1ರ ಅನ್ವಯ)

ಸಾಮಾನ್ಯ ವರ್ಗದ ಗರಿಷ್ಠ ವಯೋಮಿತಿ 40 ವರ್ಷಗಳು 
ಎಸ್‌ಸಿ, ಎಸ್‌ಟಿ, ಆರ್‌ಬಿಎ, ಎಎಲ್‌ಸಿ/ಐಬಿ, ಇಡಬ್ಲುಎಸ್‌, ಒಬಿಸಿ ಗರಿಷ್ಟ ವಯೋಮಿತಿ 43 ವರ್ಷಗಳು
ದೈಹಿಕ ವಿಕಲಚೇತನ ಅಭ್ಯರ್ಥಿಗಳು ಗರಿಷ್ಟ 42 ವರ್ಷಗಳು

ಅರ್ಜಿ ಶುಲ್ಕ; ಅರ್ಜಿದಾರರು ತಮ್ಮ ವರ್ಗಕ್ಕೆ ಅನುಗುಣವಾಗಿ ಆನ್‌ಲೈನ್‌ ಮೂಲಕವೇ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗದವರು 600 ರೂಪಾಯಿಗಳನ್ನು ಪಾವತಿ ಮಾಡಬೇಕು. ಎಸ್‌ಸಿ, ಎಸ್‌ಟಿ, ಆರ್‌ಬಿಎ, ಎಎಲ್‌ಸಿ/ಐಬಿ, ಇಡಬ್ಲುಎಸ್‌, ದೈಹಿಕ ವಿಕಲಚೇತನ ಅಭ್ಯರ್ಥಿಗಳು 500 ರೂಪಾಯಿಗಳನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ಶುಲ್ಕ ಪಾವತಿ ಮಾಡಲು ಅವಕಾಶ ಇಲ್ಲ ಎಂದು ಅಭ್ಯರ್ಥಿಗಳಳಿಗೆ ತಿಳಿಸಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡುವ ವಿಧಾನ;

ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಜಮ್ಮು ಮತ್ತು ಕಾಶ್ಮೀರದ ಸೇವೆಗಳ ಆಯ್ಕೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ jkssb.nic.in ಗೆ ಭೇಟಿ ನೀಡಬೇಕು. ಇಲ್ಲಿಂದಲೇ ಪ್ರತಿಯೊಬ್ಬರು ಅರ್ಜಿ ಸಲ್ಲಿಕೆ ಮಾಡಬೇಕು. ಹಾಗಾದರೆ ಮಾತ್ರ ಇಲಾಖಯೂ ಅರ್ಜಿಗಳನ್ನು ಸ್ವೀಕಾರ ಮಾಡುತ್ತದೆ. ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಅಧಿಸೂಚನೆ ಲಿಂಕ್‌ ಆಯ್ಕೆ ಮಾಡಿ. ಮುಖ ಪುಟದಲ್ಲಿ ಇರುವಂತಹ ಜಾಹೀರಾತು ಸಂಖ್ಯೆ 08 ರ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು.

ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ನಿಮ್ಮ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ಕೇಳಲಾದ ಎಲ್ಲ ವೈಯಕ್ತಿಕ, ಶೈಕ್ಷಣಿಕ ಮತ್ತು ಸಂಒರ್ಕದ ಸಂಪೂರ್ಣ ವಿವರಗಳನ್ನು ಸರಿಯಾಗಿ, ತಪ್ಪಿಲ್ಲದೇ ಭರ್ತಿ ಮಾಡಿ. ಇಷ್ಟೇ ಅಲ್ಲ, ಅಲ್ಲಿ ಕೇಳಿರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ನಿಮ್ಮ ಫೋಟೋ, ಸಹಿ, ಶೈಕ್ಷಣಿಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಅಗತ್ಯ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಅಪ್‌ಲೋಡ್‌ ಮಾಡಬೇಕು. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ಪರೀಕ್ಷೆಗೆ ತಯಾರಿ, ಎಷ್ಟು ಅಂಕಗಳನ್ನು ಪಡೆಯಬೇಕು?

ಅರ್ಜಿಯನ್ನು ಭರ್ತಿ ಮಾಡಿದ ಮೇಲೆ ಅಭ್ಯರ್ಥಿಗಳು ಮೊದಲ ಮಾಡಬೇಕಾದ ಸಂಗತಿ ಎಂದರೆ ಅರ್ಜಿಯನ್ನು ಮೇಲಿನಿಂದ ಕೆಳಗಿನವರೆಗೆ ಸಂಪೂರ್ಣವಾಗಿ ನೋಡಿ. ಯಾವುದೇ ತಪ್ಪು ಕಂಡುಬಂದಲ್ಲಿ ಸರಿಪಡಿಸಿ. ಏಕೆಂದರೆ ಒಮ್ಮೆ ಅರ್ಜಿ ಅಪ್‌ಲೋಡ್‌ ಆದ ಮೇಲೆ ಮತ್ತೆ ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಅರ್ಜಿ ಸರಿಯಾಗಿ ಭರ್ತಿ ಮಾಡಿದ್ದೇನೆ ಎಂದುಕೊಂಡ ಬಳಿಕಬೇ ಸಬ್‌ಮೀಟ್‌ ಬಟನ್‌ ಪ್ರೆಸ್‌ ಮಾಡಬೇಕು. ಅರ್ಜಿಯಲ್ಲಿ ತಪ್ಪುಗಳು ಇದ್ದಲ್ಲಿ ಸರ್ಕಾರಿ ಉದ್ಯೋಗ ಸಿಗುವುದಿಲ್ಲ.

ಉದ್ಯೋಗ ಸಿಗುವುದೇ ಈಗಿನ ಕಾಲದಲ್ಲಿ ದೊಡ್ಡ ಕಷ್ಟ. ಅಂತ್ರದಲ್ಲಿ ಸರ್ಕಾರ ಉದ್ಯೋಗಕ್ಕೆ ಅರ್ಜಿಗಳನ್ನು ಆಹ್ವಾನ ಮಾಡಿದಾಗ ಅಭ್ಯರ್ಥಿಗಳು ಅಪ್ಲೇ ಮಾಡಿಲ್ಲ ಎಂದರೆ ಅದು ನಿಮಗೆ ದೊಡ್ಡ ನಷ್ಟ ತರುತ್ತದೆ. ಓದುವ ಸಮಯದಲ್ಲಿಯೇ ಚೆನ್ನಾಗಿರುವ ಉದ್ಯೋಗಗಳಿಗೆ ಪ್ರಯತ್ನ ಮಾಡಬೇಕು. ಒಂದು ವೇಳೆ ಉದ್ಯೋಗ ಒಲಿದರೆ ಅದು ನಿಮ್ಮ ಅದೃಷ್ಟ. ಒಲಿಯದಿದ್ದರೇ ಪ್ರಯತ್ನದಿಂದ ನಿಮಗೆ ಒಂದು ಸುಂದರವಾದ ಅನುಭವ ಆಗುತ್ತದೆ. ಮುಂದಿನ ಬಾರಿ ಅರ್ಜಿ ಸಲ್ಲಿಕೆ ಮಾಡುವಾಗ ಇನ್ನಷ್ಟು ಸುಲಭವಾಗುತ್ತದೆ. ಅಲ್ಲದೇ ಒಂದು ಬಾರಿ ಅನುಭವ ಆಗುವುದರಿಂದ ಕೆಲಸನೂ ಪಡೆದುಕೊಳ್ಳುವುದು ನಿಮಗೆ ಗೊತ್ತಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಉದ್ಯೋಗ ಆಕಾಂಕ್ಷಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತುಂಬಾ ಮಾರ್ಕ್ಸ್‌ ಪಡೆದರೆ ಸರ್ಕಾರಿ ಹುದ್ದೆಗಳಿಗೆ ಪರಿಗಣನೆ ಮಾಡಲಾಗುತ್ತದೆ. ಶಾಲೆ, ಕಾಲೇಜುಗಳಲ್ಲಿ ಅಂಕಗಳನ್ನು ಪಡೆದಂತೆ 60, 70 ಪಾಸಿಂಗ್‌ ಅಂಕಗಳನ್ನು ಪಡೆದರೆ ಹುದ್ದೆಗಳು ಸಿಗುವುದಿಲ್ಲ. 88 ರಿಂದ ಮೇಲೆಯೇ ಅಂಕಗಳನ್ನು ತೆಗೆಯಲು ಅಭ್ಯರ್ಥಿಗಳು ಟಾರ್ಗೆಟ್‌ ಮಾಡಬೇಕು. 85 ಅಂಕಗಳು ತೆಗೆದರೆ ಕೆಲವೊಮ್ಮೆ ಎರಡ್ಮೂರು ಅಂಕಗಳಲ್ಲಿ ಸರ್ಕಾರಿ ಕೆಲಸ ಕೈ ಜಾರಿ ಹೋಗುವ ಸಾಧ್ಯತೆ ಇರುತ್ತದೆ.  
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES