SOCIAL MEDIA

Newsletter

PARTNER SITES
Select Language Select State

ಈ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದವರು ನೋಡಲೇಬೇಕಾದ ಸುದ್ದಿ.. ಅಭ್ಯರ್ಥಿಗಳೇ ಏನಿದು ಗೊತ್ತಾ?

ಇಂಗ್ಲಿಷ್‌ ಭಾಷೆಯ ಪತ್ರಿಕೆಯನ್ನು ಹೊರತು ಪಡಿಸಿ ಉಳಿದ ಎಲ್ಲ ಪ್ರಶ್ನೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಎರಡು ಭಾಷೆಗಳಲ್ಲಿ ಇರುತ್ತವೆ. ಅಭ್ಯರ್ಥಿಗಳು ಪ್ರತಿ ವಿಷಯದಲ್ಲೂ ಪ್ರತ್ಯೇಕವಾಗಿ ಸಾಮಾನ್ಯಕರಿಸಿದ ಅಂಕಗಳೊಂದಿಗೆ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.

Reported By Bhimappa Written By Bhimappa
Published: Sep 14, 2026, 02:35 PM IST | Updated: Sep 17, 2026, 03:26 PM IST
Image Credit: File Photo
Join

Indian Air Force Agniveervayu Intake 2027/ ಫೆಬ್ರುವರಿ; ಏರ್‌ಮೆನ್‌ ವೈದ್ಯಕೀಯ ಸಹಾಯಕ (ಪಿಯುಸಿ ಅಂದರೆ 10+2) ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ಮಾಹಿತಿಯೊಂದನ್ನು ಪ್ರಕಟ ಮಾಡಲಾಗಿದೆ. ಅಗ್ನಿಫಥ್‌ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳಿಗಾಗಿ ಪರೀಕ್ಷಾ ನಗರ ಸೂಚನೆ ಸ್ಲಿಪ್‌ (exam city intimation slip) ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗ ಪ್ರಕಟ ಮಾಡಲಾಗಿದೆ. ಆನ್‌ಲೈನ್‌ ಲಿಖಿತ ಪರೀಕ್ಷೆಗೆ ಹಾಜರಾಗಲು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ತಮ್ಮ ಲಾಗಿನ ಐಡಿ ಮೂಲಕ ಪರೀಕ್ಷೆ ಬಗೆಗಿನ ವಿವರಗಳನ್ನು ತಕ್ಷಣವೇ ಪಡೆಯಬಹುದು. ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷಾ ಕೇಂದ್ರ ಸೇರಿದಂತೆ ಇತರೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.  

ಪರೀಕ್ಷಾ ನಗರ ಸೂಚನೆ ಸ್ಲಿಪ್‌ ಅಭ್ಯರ್ಥಿಗಳಿಗೆ ಅವಶ್ಯಕವಾದಂತಹ ಪರೀಕ್ಷಾ ಕೇಂದ್ರ ಇರುವ ನಗರದ ಕುರಿತು ಮೊದಲೇ ಮಾಹಿತಿ ನೀಡುತ್ತದೆ. ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮುಖ್ಯ ಉದ್ದೇಶ ಎಂದರೆ, ಅಭ್ಯರ್ಥಿಗಳು ಪರೀಕ್ಷಾ ದಿನದಂದು ಯಾವುದೇ ಗೊಂದಲವಿಲ್ಲದೇ ತಲುಪಲು ಅಗತ್ಯ ಇರುವ ಪ್ರಯಾಣದ ವ್ಯವಸ್ಥೆ ಮತ್ತು ವಸತಿ ಸೌಕರ್ಯ ಮೊದಲೇ ಬುಕ್ಕಿಂಗ್‌ ಮಾಡಲು ಸಹಾಯಕವಾಗುತ್ತದೆ. ಅಭ್ಯರ್ಥಿಗಳು ಅತಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಈ ಪರೀಕ್ಷಾ ನಗರ ಸೂಚನೆ ಸ್ಲಿಪ್‌ ಅಥವಾ ಸಿಟಿ ಸ್ಲಿಪ್‌ ಪರೀಕ್ಷಾ ಪ್ರವೇಶ ಪತ್ರ (Admit card) ಅಲ್ಲವೇ ಅಲ್ಲ. ಈ ಅಡ್ಮಿಡ್‌ ಕಾರ್ಡ್‌ ಅಥವಾ ಪ್ರವೇಶ ಪತ್ರವನ್ನು ಭಾರತೀಯ ವಾಯುಪಡೆಯೂ ಪ್ರತ್ಯೇಕವಾಗಿ ಬಿಡುಗಡೆ ಮಾಡುತ್ತದೆ.

ಡೌನ್‌ಲೋಡ್‌ ಮಾಡುವ ವಿಧಾನ; ಅಗ್ನಿವೀರ್‌ ವಾಯು ಆನ್‌ಲೈನ್‌ ಪರೀಕ್ಷೆಯನ್ನು ದೇಶದ್ಯಂತ 2026ರ ಸೆಪ್ಟೆಂಬರ್‌ 22 ಮತ್ತು 23 ರಂದು ನಡೆಸಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆಯ ನಿಖರವಾದ ದಿನಾಂಕವನ್ನು ಭಾರತೀಯ ವಾಯುಪಡೆ ಅಧಿಕೃತವಾಗಿ ಪ್ರತ್ಯೇಕಿಸಿ ಘೋಷಿಸಿಲ್ಲವಾದರೂ, ಪೋರ್ಟಲ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಅಡ್ಮಿಟ್‌ ಕಾರ್ಡ್‌ ಪರೀಕ್ಷೆಯ ದಿನಾಂಕ್ಕಿಂತ ಎರಡಮೂರು ದಿನಗಳ ಮೊದಲೇ ಅಭ್ಯರ್ಥಿಗಳು ಲಾಗಿನ್‌ ಮೂಲಕ ಪಡೆದುಕೊಳ್ಳಬಹುದು.  

ಡೌನ್‌ಲೋಡ್‌ ಮಾಡಿಕೊಳ್ಳಲು ಅಭ್ಯರ್ಥಿಗಳು ಅಧಿಕೃತವಾದ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹೋಮ್‌ ಪೇಜ್‌ನಲ್ಲಿ ಕಾಣಿಸುವ ಅಭ್ಯರ್ಥಿ ಲಾಗಿನ್‌ ವಿಭಾಗದಲ್ಲಿ ಅಗ್ನಿವೀರ್ಯ ವಾಯು ಪ್ರವೇಶ 2027 ಫೆಬ್ರುವರಿ ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ನಗರದ ಹೆಸರು ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು. ನಿಮ್ಮ ಬಳಕೆದಾರ ಐಡಿ, ಪಾಸ್‌ವರ್ಡ್‌ ಮತ್ತು ಪರದೆಯ ಮೇಲಿರುವ ಕ್ಯಾಪ್ಚಾ ಅನ್ನು ಸರಿಯಾಗಿ ನಮೂದಿಸಬೇಕು. ಲಾಗಿನ್‌ ಆದ ಬಳಿಕ ನಿಮ್ಮ ಪರೀಕ್ಷಾ ನಗರದ ಸ್ಲಿಪ್‌ ಹೊಸ ವಿಂಡೋದಲ್ಲಿ ತೆರೆದುಕೊಳ್ಳುತ್ತದೆ. ಭವಿಷ್ಯದ ಅಗತ್ಯಗಳಿಗಾಗಿ ಅದನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ಆನ್‌ಲೈನ್‌ ಸಿಬಿಟಿ ಪರೀಕ್ಷೆಯ ಹಂತ ಹಂತದ ಪರೀಕ್ಷಾ ಮಾದರಿ; ಅಗ್ನಿವೀರ್‌ ವಾಯು ಇಂಟೆಕ್‌ 2027 ಫೆಬ್ರುವರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹಂತ 1ರಂತೆ ಆನ್‌ಲೈನ್‌ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ (ಸಿಬಿಟಿ) ಅತ್ಯಂತ ಪ್ರಮುಖವಾದ ಹಂತವಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಗಳಾದ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಗೆ ಅರ್ಹತೆ ಪಡೆಯುತ್ತಾರೆ.

ಆನ್‌ಲೈನ್‌ ಲಿಖಿತ ಪರೀಕ್ಷೆಯೂ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್‌ ಭಾಷೆಯ ಪತ್ರಿಕೆಯನ್ನು ಹೊರತು ಪಡಿಸಿ ಉಳಿದ ಎಲ್ಲ ಪ್ರಶ್ನೆಗಳು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಎರಡು ಭಾಷೆಗಳಲ್ಲಿ ಇರುತ್ತವೆ. ಅಭ್ಯರ್ಥಿಗಳು ಪ್ರತಿ ವಿಷಯದಲ್ಲೂ ಪ್ರತ್ಯೇಕವಾಗಿ ಸಾಮಾನ್ಯಕರಿಸಿದ ಅಂಕಗಳೊಂದಿಗೆ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ. ಪರೀಕಷೆ ಅವಧಿ ಮತ್ತು ವಿಷಯಗಳು ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿಕೊಂಡ ವಿಭಾಗವನ್ನು ಆಧರಿಸುತ್ತದೆ.

ವಿಜ್ಞಾನ ಪರೀಕ್ಷೆಯ ಒಟ್ಟು ಅವಧಿ ಒಂದು ಗಂಟೆ ಅಂದರೆ 60 ನಿಮಿಷಗಳು ಆಗಿರುತ್ತವೆ. ಇದರಲ್ಲಿ ಸಿಬಿಎಸ್‌ಇ ಪಿಯುಸಿ ಪಠ್ಯಕ್ರಮಕ್ಕೆ ಅನುಗುಣವಾಗಿ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮಗಳನ್ನು ಓದ ಬೇಕಾಗುತ್ತದೆ.  

ವಿಜ್ಞಾನೇತರ ವಿಷಯಗಳ ಬಗ್ಗೆ ಒಟ್ಟು ಅವಧಿ 45 ನಿಮಿಗಳು ಆಗಿರುತ್ತವೆ. ಇದರಲ್ಲಿಯೂ ಸಿಬಿಎಸ್‌ಇ ಪಿಯುಸಿ ಪಠ್ಯಕ್ರಮದ ಇಂಗ್ಲಿಷ್‌ ಮತ್ತು ತಾರ್ಕಿಕತೆ ಮತ್ತು ಸಾಮಾನ್ಯ ಅರಿವು ವಿಷಯಗಳು ಸೇರಿರುತ್ತವೆ. ವಿಜ್ಞಾನ ಮತ್ತು ವಿಜ್ಞಾನೇತರ ವಿಷಯಗಳು ಈ ಎರಡಕ್ಕೂ ಒಟ್ಟು ಪರೀಕ್ಷಾ ಅವಧಿ 85 ನಿಮಿಷಗಳು ಆಗಿರುತ್ತವೆ. ಈ ಪರೀಕ್ಷೆಯೂ ಭೌತಶಾಸ್ತ್ರ, ಗಣಿತ, ಇಂಗ್ಲಿಷ್‌ ಮತ್ತು ತಾರ್ಕಿಕ ಮತ್ತು ಸಾಮಾನ್ಯ ಅರಿವು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಅಭ್ಯಾಸವನ್ನು ಚುರುಕುಗೊಳಿಸಿ ಪರೀಕ್ಷಾ ದಿನಾಂಕಕ್ಕೆ ಮೂರು ನಾಲ್ಕು ದಿನಗಳ ಮೊದಲು ಸಕ್ರಿಯಗೊಳ್ಳುವ ಪ್ರವೇಶ ಪತ್ರದ ಲಿಂಕ್‌ ಮೂಲಕ ತಮ್ಮ ಅಡ್ಮಿಟ್‌ ಕಾರ್ಡ್‌ ಪಡೆದುಕೊಂಡು ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.    

ಭಾರತೀಯ ವಾಯುಪಡೆಯು ಅಗ್ನಿವೀರ್‌ ವಾಯು ನೇಮಕಾತಿ 2027 ಫೆಬ್ರುವರಿ ಮತ್ತು ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕಗಾಗಿ ನಗರ ಮಾಹಿತಿ ಚೀಟಿಯನ್ನು ಬಿಡುಗಡೆ ಮಾಡಿದೆ. ಐಎಎಫ್‌ ಅಗ್ನಿವೀರ್‌ ವಾಯು ನೇಮಕಾತಿ 2027 ಫೆಬ್ರುವರಿ ಮತ್ತು ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ ಪರೀಕ್ಷೆಯ ಸಿಟಿ ಸ್ಲಿಪ್‌ ಡೌನ್‌ಲೋಡ್‌ ಲಿಂಕ್‌ ಸಕ್ರಿಯವಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್‌ ಐಡಿ ಬಳಸಿಕೊಂಡು ಸ್ಲಿಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಕಟಣೆ ಮಾಡಿದ ಕೂಡಲೇ ಡೌನ್‌ಲೋಡ್‌ ಮಾಡಿಕೊಂಡರೆ ನಿಮಗೆ ಅನುಕೂಲವಾಗುತ್ತದೆ.   

ಅಗ್ನಿವೀರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಅಭ್ಯರ್ಥಿಗಳಿಗೆ ಕನಿಷ್ಠ 17 ವರ್ಷದಿಂದ 21 ವರ್ಷದ ಒಳಗಿನ ವಯಸ್ಸಿನವರು ಆಗಿರಬೇಕು. ಶೇಕಡಾ 45 ರಷ್ಟು ಅಂಕಗಳೊಂದಿಗೆ 10ನೇ ತರಗತಿಯನ್ನು ಉತ್ತೀರ್ಣಗೊಂಡಿರಬೇಕು. ಪದವಿಯನ್ನು ಪಡೆದವರಿಗೆ ವಯಸ್ಸು ಜಾಸ್ತಿ ಆಗುವುದರಿಂದ ಈ ಅಗ್ನಿವೀರ್‌ ಹುದ್ದೆಗಳಿಗೆ ಅರ್ಹರು ಅಗಿರುವುದಿಲ್ಲ. ಅಗ್ನಿವೀರ್‌ ಹುದ್ದೆಗಳಲ್ಲಿ ಟೆಕ್ನಿಕಲ್‌ ವಿಭಾಗದಲ್ಲಿ ಕೆಲಸ ಪಡೆಯಬೇಕು ಎಂದರೆ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ ವಿಷಯಗಳೊಂದಿಗೆ 12 ನೇ ತರಗತಿ ಉತ್ತೀರ್ಣಗೊಂಡಿರಬೇಕು. ಅಗ್ನಿವೀರ್‌ ಹುದ್ದೆಗಳಲ್ಲಿ ಸ್ಟೋರ್‌ ಕೀಪರ್‌, ಕ್ಲರ್ಕ್‌ ಆಗಬೇಕು ಎಂದರೆ 12 ನೇ ತರಗತಿಯಲ್ಲಿ ಶೇಕಡಾ 60 ಅಂಕಗಳೊಂದಿಗೆ ಪಾಸ್‌ ಆಗಿರಬೇಕು. ಅಂದರೆ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆಗಿರಬೇಕು. ಮೊದಲ ಹಂತದಲ್ಲಿ ಸಾಮಾನ್ಯ ಪ್ರವೇಶ ಆನ್‌ಲೈನ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಉತ್ತೀರ್ಣಗೊಂಡರೆ ಮಾತ್ರ ಮುಂದಿನ ಹಂತಕ್ಕೆ ತಲುಪಬಲ್ಲರು.   

 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES