• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ತರಗತಿಯಲ್ಲಿ AI ಪಾಠ : ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಅನುಕೂಲವೋ.. ಅನಾನುಕೂಲವೋ..?

ತರಗತಿಯಲ್ಲಿ AI ಪಾಠ : ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಅನುಕೂಲವೋ.. ಅನಾನುಕೂಲವೋ..?

ಇತ್ತೀಚಿಗೆ ವಿಶ್ವವಿದ್ಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence - AI) ಬೋಧನಾ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ.. ಈ ಮೊದಲು ಜೂಮ್ (Zoom) ಮೂಲಕ ನಡೆಯುತ್ತಿದ್ದ ತರಗತಿಗಳು ಹಾಗೂ ಚಟುವಟಿಕೆಗಳನ್ನು ಈಗ AI ಚಾಟ್‌ಬಾಟ್‌ಗಳೇ ನಿರ್ವಹಿಸುತ್ತಿವೆ.. ಇದು ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ.. ಇದರ ಅನುಕೂಲ ಮತ್ತು ಅನಾನುಕೂಲಗಳು ಏನು..? ಬನ್ನಿ ತಿಳಿಯೋಣ..

Reported ByKrishna NKEdited ByKrishna NK
Published: Sep 14, 2026, 07:11 PM IST|Updated: Sep 17, 2026, 03:17 PM IST
joinshare
ತರಗತಿಯಲ್ಲಿ AI ಪಾಠ : ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಅನುಕೂಲವೋ.. ಅನಾನುಕೂಲವೋ..?
Image Credit: how AI effct on Education

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಯು ಹೆಚ್ಚಾಗುತ್ತಿದೆ. ಇದು ಶಿಕ್ಷಕರ ಉದ್ಯೋಗ ಭದ್ರತೆಗೂ ಧಕ್ಕೆಯಾಗುತ್ತಿದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಇದರಿಂದ ಪದವಿಯ ಮೌಲ್ಯ ಕಡಿಮೆಯಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮೂಡಿದೆ. ಹಾಗಾದರೆ ವಿಶ್ವವಿದ್ಯಾಲಯಗಳಲ್ಲಿ ಎಐ ಬಳಕೆ ಸೂಕ್ತವೇ? ಬನ್ನಿ ಈ ಕುರಿತು ಕೆಲ ಮಾಹಿತಿ ತಿಳಿಯೋಣ..

ಹೌದು.. ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence - AI) ಬೋಧನಾ ಉಪಕರಣಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಜೂಮ್ (Zoom) ಹಾಗೂ ಗೂಗಲ್ ಮೀಟ್ ಮೂಲಕ ನಡೆಯುತ್ತಿದ್ದ ಆನ್‌ಲೈನ್ ತರಗತಿಗಳ ಕಾಲವೀಗ ಮುಗಿದಿದ್ದು, ಈಗ ನೇರವಾಗಿ AI ಚಾಟ್‌ಬಾಟ್‌ಗಳು ಮತ್ತು ವರ್ಚುವಲ್ ಉಪನ್ಯಾಸಕರೇ ತರಗತಿಗಳನ್ನು ನಿರ್ವಹಿಸುವ ಹಂತಕ್ಕೆ ತಂತ್ರಜ್ಞಾನ ಬೆಳೆದಿದೆ. ಈ ತಾಂತ್ರಿಕ ಬದಲಾವಣೆಯು ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆಗಳನ್ನು ಮೂಡಿಸುವುದರ ಜೊತೆಗೆ, ವಿದ್ಯಾರ್ಥಿಗಳ ಸಜನಶೀಲತೆ, ಪದವಿಯ ಮೌಲ್ಯ ಹಾಗೂ ಶಿಕ್ಷಕರ ಉದ್ಯೋಗ ಭದ್ರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎಐ ತಂತ್ರಜ್ಞಾನದ ಪ್ರಯೋಗ
ಜಾಗತಿಕ ಮಟ್ಟದ ಪ್ರಮುಖ ವಿಶ್ವವಿದ್ಯಾಲಯಗಳು ಈಗಾಗಲೇ AI ತಂತ್ರಜ್ಞಾನವನ್ನು ಬೋಧನೆಯಲ್ಲಿ ಸಕ್ರಿಯವಾಗಿ ಅಳವಡಿಸಿಕೊಂಡಿವೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ 'ಕಾಗ್ನಿಟಿ' (Cogniti) ಎಂಬ ವಿಶೇಷ AI ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಸೈನ್‌ಮೆಂಟ್ ಅಥವಾ ಪ್ರಬಂಧಗಳನ್ನು ಅಂತಿಮವಾಗಿ ಸಲ್ಲಿಸುವ ಮುನ್ನ ತಮ್ಮ ಬರವಣಿಗೆಯನ್ನು ಪರಿಶೀಲಿಸಿ ತಕ್ಷಣದ ಸಲಹೆ ಪಡೆಯುತ್ತಿದ್ದಾರೆ. ವೊಲೊಂಗಾಂಗ್ ವಿಶ್ವವಿದ್ಯಾಲಯವು ಪ್ರಥಮ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲಗಳನ್ನು ಪರಿಹರಿಸಲು 'ಸ್ಟಡಿ ಬಡ್ಡೀಸ್' (Study Buddies) ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದೆ. ಮತ್ತೊಂದೆಡೆ, ಲಾ ಟ್ರೋಬ್ ವಿಶ್ವವಿದ್ಯಾಲಯವು 'ಫ್ಲೆಚ್' (Fletch) ಉಪಕರಣವನ್ನು ಮತ್ತು ನ್ಯೂಕ್ಲಾಸಲ್ ವಿಶ್ವವಿದ್ಯಾಲಯವು ಕಂಪ್ಯೂಟಿಂಗ್ ವಿಷಯಗಳಿಗಾಗಿ 'ಎಐ ಅವತಾರ್' (AI Avatar) ಮೂಲಕ ಉಪನ್ಯಾಸ ನೀಡುತ್ತಿವೆ. ಅಂದರೆ, ಶಿಕ್ಷಕರು ತಯಾರಿಸಿದ ಪಠ್ಯವನ್ನು ಕೃತಕ ಮಾನವ ರೂಪದ AI ಅವತಾರ್ ತರಗತಿಯಲ್ಲಿ ನೈಜ ಮಾನವನಂತೆ ಬೋಧಿಸುತ್ತದೆ.

ಶಿಕ್ಷಣದಲ್ಲಿ AI ಬಳಕೆಯ ಪ್ರಮುಖ ಅನುಕೂಲಗಳು
ಶೇಕಡಾ 50 ಕ್ಕಿಂತ ಹೆಚ್ಚು ಆಸ್ಟ್ರೇಲಿಯನ್ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ChatGPT ಯಂತಹ ಮುಕ್ತ ಎಐ ಬಳಸುತ್ತಿದ್ದು, ನೇರವಾಗಿ ಉತ್ತರಗಳನ್ನು ಕಾಪಿ ಮಾಡುವ ಅಪಾಯವಿತ್ತು. ಆದರೆ ವಿಶ್ವವಿದ್ಯಾಲಯಗಳೇ ಸ್ವಂತ ಎಐ ಉಪಕರಣಗಳನ್ನು ನೀಡಿದಾಗ ವಿದ್ಯಾರ್ಥಿಗಳು ಕೇವಲ ಕಲಿಯಲು ಮತ್ತು ಸಂಶೋಧನೆ ಮಾಡಲು ಮಾತ್ರ ಎಐ ಬಳಸುವಂತೆ ಸೂಕ್ತ ನಿಯಮಗಳನ್ನು ರೂಪಿಸಲು ಸಾಧ್ಯವಾಗಿದೆ. ಇದರೊಂದಿಗೆ, ಸಾಂಪ್ರದಾಯಿಕ ಶಿಕ್ಷಣದಲ್ಲಿ ಶಿಕ್ಷಕರಿಂದ ತಕ್ಷಣವೇ ಪ್ರತಿಕ್ರಿಯೆ ಸಿಗುವುದು ಕಷ್ಟವಾಗಿದ್ದರೆ, AI ಉಪಕರಣಗಳು 24 ಗಂಟೆಯೂ ಲಭ್ಯವಿದ್ದು ವಿದ್ಯಾರ್ಥಿಗಳು ಯಾವುದೇ ಮುಜುಗರವಿಲ್ಲದೆ ತಮ್ಮ ಅಪೂರ್ಣ ತಿಳುವಳಿಕೆಯನ್ನು ಸರಿಪಡಿಸಿಕೊಳ್ಳಲು ಎಷ್ಟು ಬಾರಿಯಾದರೂ ಪ್ರಶ್ನಿಸಬಹುದು. ಜೊತೆಗೆ, ವಿದೇಶಗಳಲ್ಲಿ ವ್ಯಾಸಂಗ ಮಾಡುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕಠಿಣ ಶೈಕ್ಷಣಿಕ ವಿಷಯಗಳನ್ನು ತಮ್ಮ ಮಾತೃಭಾಷೆಗೆ ತಕ್ಷಣ ಅನುವಾದಿಸಿಕೊಂಡು ಅರ್ಥೈಸಿಕೊಳ್ಳಲು ಈ ತಂತ್ರಜ್ಞಾನ ಅತ್ಯಂತ ಸಹಕಾರಿಯಾಗಿದೆ.

ಶಿಕ್ಷಣದಲ್ಲಿ AI ಬಳಕೆಯ ಆನಾನುಕೂಲಗಳು
ಎಐ ತಂತ್ರಜ್ಞಾನವು ಸದಾ ಶೇಕಡಾ 100 ರಷ್ಟು ನಿಖರ ಮಾಹಿತಿ ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಸಂಪೂರ್ಣ ತಪ್ಪು ಮಾಹಿತಿಯನ್ನು ಸೃಷ್ಟಿಸಿ ನೀಡುವುದು (Hallucination) ಅಥವಾ ಕಠಿಣ ವಿಶ್ಲೇಷಣಾತ್ಮಕ ಚಿಂತನೆಗಳನ್ನು ತೀರಾ ಸರಳೀಕರಿಸಿ ಒಂದು ನಿರ್ದಿಷ್ಟ ಸೀಮಿತ ದೃಷ್ಟಿಕೋನವನ್ನು ಮಾತ್ರ ಪ್ರಸ್ತುತಪಡಿಸುವ ಸಾಧ್ಯತೆ ಇರುತ್ತದೆ. ಪ್ರಸ್ತುತ ವಿಶ್ವವಿದ್ಯಾಲಯಗಳಲ್ಲಿ ಎಐ ಚಾಟ್‌ಬಾಟ್‌ಗಳನ್ನು ಎಷ್ಟರಮಟ್ಟಿಗೆ ಬಳಸಬೇಕು ಅಥವಾ ಮೌಲ್ಯಮಾಪನದಲ್ಲಿ ಎಐ ಬಳಕೆಗೆ ಎಷ್ಟು ಅವಕಾಶ ನೀಡಬೇಕು ಎಂಬುದಕ್ಕೆ ಸರಿಯಾದ ಕಾನೂನು ಚೌಕಟ್ಟು ಅಥವಾ ಸ್ಪಷ್ಟ ನಿಯಮಾವಳಿಗಳು ಜಾರಿಯಾಗಿಲ್ಲ. ಇಷ್ಟೇ ಅಲ್ಲದೆ, ಎಐ ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸಲು ಅಗಾಧ ಪ್ರಮಾಣದ ವಿದ್ಯುತ್ ಮತ್ತು ಸಂಪನ್ಮೂಲಗಳು ಅಗತ್ಯವಾಗಿರುವುದರಿಂದ, ಇದು ಪರಿಸರದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ.

ಮಾನವ ಶಿಕ್ಷಕರಿಗೆ ಎಐ ಪರ್ಯಾಯವಾಗಬಲ್ಲದೇ?
ಶಿಕ್ಷಣ ಎಂಬುದು ಕೇವಲ ಮಾಹಿತಿಯ ವರ್ಗಾವಣೆ (Transfer of Information) ಅಲ್ಲ, ಅದು ಮಾನವೀಯ ಸಂವೇದನೆ ಮತ್ತು ವ್ಯಕ್ತಿತ್ವ ವಿಕಸನದ ಸಕ್ರಿಯ ಪ್ರಕ್ರಿಯೆಯಾಗಿದೆ. ತರಗತಿಯಲ್ಲಿ ವಿದ್ಯಾರ್ಥಿ ಕೇಳುವ ಪ್ರಶ್ನೆಯ ಹಿಂದಿರುವ ಕುತೂಹಲ ಅಥವಾ ಗೊಂದಲವನ್ನು ಗುರುತಿಸಿ, ಆತನ ಗ್ರಹಿಕಾ ಮಟ್ಟಕ್ಕೆ ತಕ್ಕಂತೆ ಬೋಧನಾ ಶೈಲಿಯನ್ನು ಬದಲಾಯಿಸುವ ಸಾಮರ್ಥ್ಯ ಒಬ್ಬ ನೈಜ ಶಿಕ್ಷಕನಿಗೆ ಮಾತ್ರ ಇರುತ್ತದೆ. ವಿದ್ಯಾರ್ಥಿಯ ಕಠಿಣ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುವುದು, ಆತನ ತರ್ಕವನ್ನು ಸವಾಲು ಮಾಡಿ ಹೆಚ್ಚಿನ ಸಾಧನೆಗೆ ಪ್ರೇರೇಪಿಸುವುದು ಮತ್ತು ಆತ್ಮವಿಶ್ವಾಸ ತುಂಬುವುದು ಮಾನವ ಶಿಕ್ಷಕರಿಂದ ಮಾತ್ರ ಸಾಧ್ಯ. ಎಐ ವ್ಯವಸ್ಥೆಯು ಅತ್ಯುತ್ತಮ ಮಾಹಿತಿಯನ್ನು ನೀಡಬಹುದಾದರೂ, ವಿದ್ಯಾರ್ಥಿಯನ್ನು ಮಾನವೀಯವಾಗಿ ಗುರುತಿಸಲು ಅಥವಾ ಆತನ ಭಾವನಾತ್ಮಕ ಅಗತ್ಯಗಳನ್ನು ಗ್ರಹಿಸಲು ಅದಕ್ಕೆ ಎಂದಿಗೂ ಸಾಧ್ಯವಿಲ್ಲ.

ಒಟ್ಟಾರೆಯಾಗಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ಬೋಧನೆಗೆ ಸೂಕ್ತ ಬೆಂಬಲ ನೀಡುವ ಒಂದು ಪೂರಕ ಉಪಕರಣವಾಗಬಹುದೇ ಹೊರತು, ಮಾನವ ಶಿಕ್ಷಕರ ಸಂಪೂರ್ಣ ಪರ್ಯಾಯವಾಗಲು ಸಾಧ್ಯವೇ ಇಲ್ಲ. ಎಐ ಅನ್ನು "ಊಟದಲ್ಲಿನ ಉಪ್ಪಿನಕಾಯಿಯಂತೆ" ಹಿತಮಿತವಾಗಿ ಮತ್ತು ಕೇವಲ ಬೆಂಬಲಿತ ವ್ಯವಸ್ಥೆಯಾಗಿ ಬಳಸಿದರೆ ಮಾತ್ರ ಶೈಕ್ಷಣಿಕ ಮೌಲ್ಯ ಮತ್ತು ಪದವಿಯ ಗಾಂಭೀರ್ಯ ಉಳಿಯುತ್ತದೆ. ಮೂಲಭೂತ ಕಲಿಕೆ, ವಿಮರ್ಶಾತ್ಮಕ ಆಲೋಚನೆ ಮತ್ತು ಮಾನವೀಯ ಸಂವಹನಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ವಿಶ್ವವಿದ್ಯಾಲಯಗಳು ತಂತ್ರಜ್ಞಾನವನ್ನು ಜಾಣತನದಿಂದ ನಿರ್ವಹಿಸಬೇಕಿದೆ.

Add Zee News as a Preferred Source
TAGS:
Job