• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ಇನ್ಮುಂದೆ ಶಾಲೆಗಳಲ್ಲಿ ಆರಂಭವಾಗಲಿದೆ ಹಣಕಾಸು ಸಾಕ್ಷರತಾ ಅಧ್ಯಯನ

ಇನ್ಮುಂದೆ ಶಾಲೆಗಳಲ್ಲಿ ಆರಂಭವಾಗಲಿದೆ ಹಣಕಾಸು ಸಾಕ್ಷರತಾ ಅಧ್ಯಯನ

ಷೇರುಗಳು, ವಹಿವಾಟು ಮತ್ತು ಹೂಡಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಬೇಕು. ಬೆಂಗಳೂರು ಷೇರು ವಿನಿಮಯ ಕೇಂದ್ರ ಸಮಾನ ಹಣಕಾಸು ಮಾರುಕಟ್ಟೆ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ ಆಗಿ ತಿಳಿಸಬೇಕು

Written ByBhimappa
Published: Sep 18, 2026, 10:10 AM IST|Updated: Sep 18, 2026, 03:31 PM IST
joinshare
ಇನ್ಮುಂದೆ ಶಾಲೆಗಳಲ್ಲಿ ಆರಂಭವಾಗಲಿದೆ ಹಣಕಾಸು ಸಾಕ್ಷರತಾ ಅಧ್ಯಯನ
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕರ್ನಾಟಕ ಪಬ್ಲಿಕ್‌ ಶಾಲೆಗಳ KPS ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮಕ್ಕಳಿಗೆ ಹಣಕಾಸಿನ ವ್ಯವಹಾರ ಕುರಿತು ಸಂಪೂರ್ಣವಾದ ಜ್ಞಾನ ಒದಗಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಕರ್ನಾಟಕ ಪಬ್ಲಿಕ್‌ ಶಾಲೆಗಳ ಒಟ್ಟು 956 ಶಾಲೆಗಳಿಗೆ 2026- 27ನೇ ಶೈಕ್ಷಣಿಕ ವರ್ಷದಿಂದಲೇ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಶಿಕ್ಷಣ ನೀಡಲು ಆದೇಶ ಹೊರಡಿಸಲಾಗಿದೆ. ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಾಲಾ ಹಂತದಲ್ಲೇ ಹಣಕಾಸಿನ ವ್ಯವಹಾರ, ಉಳಿತಾಯ ಮತ್ತು ಡಿಜಿಟಲ್‌ ವಹಿವಾಟಿನ ಕುರಿತು ಹೇಳಿಕೊಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮುಂದಿನ ಅವರ ಬದುಕಲ್ಲಿ ಅತ್ಯುತ್ತಮ ಆರ್ಥಿಕ ನಿರ್ವಹಣೆ ಮಾಡಲಿದ್ದಾರೆ.

ಈ ನೂತನ ಯೋಜನೆಯ ಚಾಲನೆಯ ಮುಖ್ಯ ಉದ್ದೇಶ ಎಂದರೆ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಉತ್ತಮವಾದ ಆರ್ಥಿಕ ಭದ್ರತೆ, ವ್ಯವಹಾರಿಕವಾದ ಜ್ಞಾನ, ಬಜಟ್‌ ನಿರ್ವಹಣೆಯ ಸ್ಕಿಲ್‌ ಬೆಳೆಸುವುದು ಆಗಿದೆ. ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಅಧಿಕ ಕೆಪಿಎಸ್‌ ಶಾಲೆಗಳು ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಎಡಿಬಿ ನೆರವಿನಿಂದ ಅಭಿವೃದ್ಧಿ ಮಾಡಿದ ಶಾಲೆಗಳಲ್ಲಿ ಈ ಮಹತ್ವದ ಯೋಜನೆ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ 2026-27ನೇ ಸಾಲಿನ ಇನ್ನೇವೇಷನ್‌ ಪ್ರಾಜೆಕ್ಟ್‌ ರೆಕ್ಯುರಿಂಗ್‌ ಯೋಜನೆಯಡಿ ರಾಜ್ಯದ ಒಂದಷ್ಟು ಶಾಲೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ಸರ್ಕಾರ ಎಷ್ಟು ಅನುದಾನವನ್ನು ನೀಡುತ್ತಿದೆ?

ಈ ಯೋಜನೆ ಸಂಬಂಧ ಜಾರಿಗೊಳ್ಳುವ ಪ್ರತಿ ಶಾಲೆಗೆ ತಲಾ 5,000 ರೂಪಾಯಿಗಳಂತೆ ಒಟ್ಟು 47.80 ಲಕ್ಷ ರೂಪಾಯಿಗಳ ಅನುದಾನವನ್ನು ಮೀಸಲು ಇಡಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು ಎಂದು ರಾಜ್ಯ ಯೋಜನಾ ನಿರ್ದೇಶಕರು ಸೂಚನೆ ನೀಡಿದ್ದಾರೆ. ಒಬ್ಬ ವಿದ್ಯಾರ್ಥಿ ಚಟುವಟಿಕೆಯನ್ನು ಮಾಡಲೇಬೇಕು. ಅಂದರೆ ಪ್ರತಿ ಶಾಲೆಯಲ್ಲೂ ತಿಂಗಳಿಗೆ ಒಬ್ಬ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯನ್ನು ಕಡ್ಡಾಯವಾಗಿ ನಡೆಸಬೇಕು. ಹಣಕಾಸು ವ್ಯವಹಾರದ ಕುರಿತು ಸಂವಾದ ಮೂಲಕ ಮಕ್ಕಳಿಗೆ ಅರಿವು ಮೂಡಿಸಬೇಕು. ಅಂದರೆ ಬ್ಯಾಂಕ್‌ ಹಣಕಾಸು ಸಂಸ್ಥೆ, ಚಾರ್ಟೆಡ್‌ ಅಕೌಂಟೆಂಟ್‌, ಹಣಕಾಸು ಸಲಹೆಗಾರರು, ಉದ್ಯಮಶೀಲತಾ ಅಭಿವೃದ್ಧಿ ಕೆಂದ್ರಗಳ ತಜ್ಞರ ಜೊತೆ ಸಮನ್ವಯ ಸಾಧಿಸಬೇಕು. ಹಣ ಹೇಗೆ ಉಳಿಸಬೇಕು, ಡಿಜಿಟಲ್‌ ಪಾವತಿ, ಜವಾಬ್ದಾರಿಯುತ ಸಾಲ ಪಡೆಯುವಿಕೆ, ವಿಕೆ ಹೂಡಿಕೆ, ಟ್ಯಾಕ್ಸ್‌ ಉಳಿತಾಯದ ಮೂಲಭೂತ ಅಂಶಗಳು, ಹಣಕಾಸು ವಂಚನೆ ತಡೆ ಕುರಿತು ಸಂವಾದದ ಮೂಲಕ ಅರಿವು ಮೂಡಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.  

ವಿದ್ಯಾರ್ಥಿಗಳಿಗೆ ಬಂಡವಾಳ ಮಾರುಕಟ್ಟೆ ಬಗ್ಗೆ ಅರಿವು ಮೂಡಿಸಬೇಕು. ಷೇರುಗಳು, ವಹಿವಾಟು ಮತ್ತು ಹೂಡಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಬೇಕು. ಬೆಂಗಳೂರು ಷೇರು ವಿನಿಮಯ ಕೇಂದ್ರ ಸಮಾನ ಹಣಕಾಸು ಮಾರುಕಟ್ಟೆ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ ಆಗಿ ತಿಳಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ. ಮಕ್ಕಳಿಗೆ ಯಾವ್ಯಾವ ವಿಷಯ ಬೋಧನೆ ಮಾಡಬೇಕು ಎಂದರೆ ಬಜೆಟ್‌ ತಯಾರಿಕೆ, ಖರ್ಚು, ಉಳಿತಾಯದ ಮಹತ್ವ, ಬ್ಯಾಂಕಿಂಗ್‌ ವ್ಯವಸ್ಥೆ, ವಂಚನೆ ತಡೆಗಟ್ಟುವಿಕೆ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಬೇಕು.    

ವಿದ್ಯಾರ್ಥಿಗಳಿಗೆ ಹಣಕಾಸಿನ ಮಹತ್ವ ಗೊತ್ತಾಗಲಿದೆ

ಮಕ್ಕಳಿಗೆ ಹಣಕಾಸಿನ ಕುರಿತು ಜ್ಞಾನ ಹೆಚ್ಚಿಸಲು ಅವರಿಗೆ ಸ್ಪರ್ಧೆಗಳನ್ನು ಕೆಲವೊಂದು ಸ್ಪರ್ಧೆಗಳನ್ನು ನೀಡಬೇಕು. ಅಂದರೆ ಬಜೆಟ್‌ ತಯಾರಿ, ಬಡ್ಡಿ ಲೆಕ್ಕಾಚಾರ, ಹಣ ಉಳಿತಾಯಗಳ ಪೋಸ್ಟರ್‌ ರಚನೆ ಮತ್ತು ಪ್ರಶ್ನೆಗಳ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು. ಇದು ಅಲ್ಲದೇ ವಿದ್ಯಾರ್ಥಿಗಳಿಗೆ ಇಂದಿನ ಆನ್‌ಲೈನ್‌ ಪೇಮೆಂಟ್‌ಗಳ ಮಾಹಿತಿಯನ್ನು ನೀಡಬೇಕಾಗಿದೆ. ಎಟಿಎಂ ಬಳಕೆ ಮಾಡುವುದು ಹೇಗೆ, ಯುಪಿಐ ಬಳಕೆ ಹೇಗೆ ಮಾಡುವುದು ಎಂದು ತಿಳಿಸಬೇಕು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಕ್ಕಳಿಗೆ ಟೀಚರ್ಸ್‌ ಹಣಕಾಸಿನ ಬಗ್ಗೆ ಪರೀಕ್ಷೆ ನಡೆಸಬೇಕು. ವಿದ್ಯಾರ್ಥಿಗಳ ಫಲಿತಾಂಶವನ್ನು ಬ್ಲಾಕ್‌ ಮಟ್ಟದ ಅಧಿಕಾರಿಗಳಿಗೆ ಸಿಲ್ಲಿಸಬೇಕು. ಮಕ್ಕಳಿಗೆ ಬಂದಿರುವ ಫಲಿತಾಂಶವನ್ನು ಮೇಲಿನ ಅಧಿಕಾರಿಗಳಿಗೆ ಶಿಕ್ಷಕರು ಸಲ್ಲಿಸಬೇಕಾಗಿದೆ.  

ಇನ್ನು ಇದರ ಮುಖ್ಯ ಉದ್ದೇಶ ಎಂದರೆ, ಬ್ಯಾಂಕಿಂಗ್‌, ಡಿಜಿಟಲ್‌ ಮಾರ್ಕೆಟ್‌ ಮತ್ತು ಷೇರುಗಳ ಕುರಿತು ವಿದ್ಯಾರ್ಥಿಗಳು ಸಂಪೂರ್ಣವಾಗಿ ತಿಳಿಸುವುದು. ಅವರ ಮುಂದಿನ ಜೀವನಕ್ಕೆ ಅನುಕೂಲ ಆಗುವಂತಹ ವ್ಯವಹಾರಿಕ ಜ್ಞಾನ ಮೂಡಿಸುವುದು ಆಗಿದೆ. ಹಣಕಾಸು ಹೇಗೆ ನಿರ್ಣವಹಣೆ ಮಾಡಬೇಕು ಮತ್ತು ಉಳಿತಾಯ ಹೇಗೆ ಮಾಡಬೇಕು. ಭವಿಷ್ಯದ ಹಣಕಾಸು ವ್ಯವಹಾರಗಳಿಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಆಗಿದೆ. 

ವಿದ್ಯಾರ್ಥಿಗಳ ಶಾಲಾ ಹಂತದಲ್ಲಿ ಹಣಕಾಸಿನ ವ್ಯವಹಾರ ಕುರಿತು ಕಲಿತರೆ ಇವತ್ತಿನ ದಿನ ಏನಾಗುತ್ತಿದೆ ಎಂಬುದು ಅವರ ಅರಿವುಗೂ ಬರಲಿದೆ. ಅಲ್ಲದೇ ಮನೆಯಲ್ಲಿ ಆರ್ಥಿಕ ವ್ಯವಹಾರ ಕುರಿತು ಅವರು ಜ್ಞಾನ ಪಡೆಯಲಿದ್ದಾರೆ. ಹಣ ಉಳಿತಾಯ ಮಾಡುವುದ ಕಲಿಯುವುದರಿಂದ ಅವರ ಶೈಕ್ಷಣಿಕ ಬದುಕಲ್ಲಿ ಕೆಲವೊಂದು ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಹಾದಿಯಾಗಲಿದೆ. ವಿದ್ಯಾರ್ಥಿಗಳು ಬ್ಯಾಂಕಿಂಗ್‌, ಷೇರು ಮಾರುಕಟ್ಟೆ, ತೆರಿಗೆ, ಸಾಲ, ಆನ್‌ಲೈನ್‌ ವಂಚನೆ ತಡೆಯುವ ಕುರಿತು ಪ್ರಾಕ್ಟಿಕಲ್‌ ಆಗಿ ಕಲಿಯಲಿದ್ದಾರೆ.  

ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಉಳಿತಾಯ, ಹಣಕಾಸಿನ ವ್ಯವಹಾರ, ಬಜೆಟ್‌ ನಿರ್ವಹಣೆ, ಡಿಜಿಟಲ್‌ ವಹಿವಾಟಿನ ಸ್ಕಿಲ್‌ಗಳನ್ನು ಮೂಡಿಸಲು ಶಿಕ್ಷಣ ಇಲಾಖೆ ಈ ಯೋಜನೆಯನ್ನು ಜಾರಿ ಮಾಡುತ್ತಿದೆ. 2026-27ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ 956 ಸರ್ಕಾರಿ ಮತ್ತು ಕೆಪಿಎಸ್‌ ಶಾಲೆಗಳಲ್ಲಿ 8ನೇ ತರಗತಿಯಿಂದ 12ನೇ ತರಗತಿವರೆಗೆ ಸಾಕ್ಷರತಾ ಶಿಕ್ಷಣ ನೀಡಲು ಆದೇಶ ನೀಡಲಾಗಿದೆ. ಅನ್ನೋವೇಷನ್‌ ಪ್ರಾಜೆಕ್ಟ್‌ ರೆಕ್ಯುರಿಂಗ್‌ ಯೋಜನೆ ಅಡಿ 47 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಬ್ಯಾಂಕಿಂಗ್‌, ಷೇರು ಮಾರುಕಟ್ಟೆ, ತೆರಿಗೆ, ಸಾಲ, ಆನ್‌ಲೈನ್‌ ವಂಚನೆ ತಡೆಯುವ ಕುರಿತು ಪ್ರಾಕ್ಟಿಕಲ್‌ ಆಗಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಈ ಎಲ್ಲದರ ನಡುವೆ ಶಾಲೆ ಮುಗಿಯುವ ಹಂತದಲ್ಲಿ ಅಂದರೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ಟೀಚರ್‌ಗಳು ನಡೆಸಬೇಕು. 

ಸರ್ಕಾರವೂ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಇದಕ್ಕಾಗಿ ಹಣಕಾಸಿನ ನೆರವನ್ನು ಸರ್ಕಾರ ನೀಡುತ್ತಿದೆ. ಈಗೆಲ್ಲ ಎಐ ಜನರೇಷನ್‌ ಇರುವುದರಿಂದ ಎಲ್ಲರಿಗೂ ಇಂತಹ ಶಿಕ್ಷಣ ಮುಖ್ಯ ಎನ್ನಬಹುದು. ಮೊಬೈಲ್‌, ಕಂಪ್ಯೂಟರ್‌ ಮೂಲಕವೇ ಎಲ್ಲ ಕೆಲಸಗಳು ಮುಗಿಯುತ್ತಿದ್ದರಿಂದ ಇಂತನ ವಿದ್ಯಾಭ್ಯಾಸ ಮಕ್ಕಳಲ್ಲಿ ಹೊಸ ಚೇತನ ತರಲಿದೆ. ಇನ್ನು ಮಕ್ಕಳಿಗೆ ಹಣಕಾಸಿನ ವ್ಯವಹಾರ ಜ್ಞಾನ ಜೊತೆಗೆ ಪರೀಕ್ಷೆ ನಡೆಸುವ ಒಂದು ಕೆಲಸ ಕೂಡ ಉತ್ತಮವಾದದ್ದು. ಏಕೆಂದರೆ ಮಕ್ಕಳು ಏನೇನು ಕಲಿತಿದ್ದಾರೆ ಎನ್ನುವುದು ಅಂತಿಮವಾಗಿ ತಿಳಿದು ಬರಲಿದೆ.  
 

Add Zee News as a Preferred Source
TAGS:
Education