SOCIAL MEDIA

Newsletter

PARTNER SITES
Select Language Select State

ಕೆನರಾ ಬ್ಯಾಂಕ್‌ನಲ್ಲಿ 3,500 ಅಪ್ರೆಂಟಿಸ್ ಹುದ್ದೆ! ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್ 2026-27ನೇ ಸಾಲಿಗೆ ದೇಶದಾದ್ಯಂತ 3,500 Graduate Apprentice ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 581 ಹುದ್ದೆಗಳಿವೆ. ಅರ್ಹ ಪದವೀಧರರು ಅಕ್ಟೋಬರ್ 1ರಿಂದ 17, 2026ರವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಒಂದು ವರ್ಷದ ತರಬೇತಿ ಅವಧಿಯಲ್ಲಿ ತಿಂಗಳಿಗೆ ₹16,650 ಸ್ಟೈಪೆಂಡ್ ಸಿಗಲಿದೆ. ಅರ್ಜಿ ಸಲ್ಲಿಸುವ ಮೊದಲು NATS ಪೋರ್ಟಲ್‌ನಲ್ಲಿ ನೋಂದಣಿ ಅಗತ್ಯ.

Written By Puttaraj K Alur
Published: Sep 30, 2026, 11:53 AM IST | Updated: Sep 30, 2026, 12:07 PM IST
Image Credit: Canara Bank Recruitment 2026
Join

Canara Bank Recruitment 2026: ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಕ್ಯಾನರಾ ಬ್ಯಾಂಕ್ (Canara Bank) 2026-27ನೇ ಸಾಲಿನ Graduate Apprentice ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಮೂಲಕ ದೇಶದಾದ್ಯಂತ ಒಟ್ಟು 3,500 Graduate Apprentice ತರಬೇತಿ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಅರ್ಹ ಪದವೀಧರರು ಅಕ್ಟೋಬರ್ 1, 2026ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನವಾಗಿದೆ.

ಕರ್ನಾಟಕದಲ್ಲಿ 581 ಹುದ್ದೆಗಳು

ರಾಜ್ಯವಾರು ಹುದ್ದೆಗಳನ್ನ ಗಮನಿಸಿದರೆ ಕರ್ನಾಟಕಕ್ಕೆ 581 ಹುದ್ದೆಗಳು ಲಭ್ಯವಿವೆ. ತಮಿಳುನಾಡಿನಲ್ಲಿ 391, ಉತ್ತರ ಪ್ರದೇಶದಲ್ಲಿ 409, ಆಂಧ್ರಪ್ರದೇಶದಲ್ಲಿ 247 ಹಾಗೂ ತೆಲಂಗಾಣದಲ್ಲಿ 134 ಹುದ್ದೆಗಳಿವೆ. ಕೇರಳದಲ್ಲಿ 240, ಮಹಾರಾಷ್ಟ್ರದಲ್ಲಿ 205, ಪಶ್ಚಿಮ ಬಂಗಾಳದಲ್ಲಿ 150, ಬಿಹಾರದಲ್ಲಿ 122, ಹರಿಯಾಣದಲ್ಲಿ 114, ಮಧ್ಯಪ್ರದೇಶದಲ್ಲಿ 110 ಮತ್ತು ಒಡಿಶಾದಲ್ಲಿ 104 ಹುದ್ದೆಗಳಿವೆ.

ಯಾರು ಅರ್ಜಿ ಸಲ್ಲಿಸಬಹುದು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 2023ರ ಜನವರಿ 1ರಿಂದ 2026ರ ಸೆಪ್ಟೆಂಬರ್ 1ರೊಳಗೆ ಪದವಿ ಪೂರ್ಣಗೊಳಿಸಿರಬೇಕು. 2026ರ ಸೆಪ್ಟೆಂಬರ್ 1ರ ವೇಳೆಗೆ ಅಭ್ಯರ್ಥಿಗಳ ವಯಸ್ಸು 20ರಿಂದ 28 ವರ್ಷದೊಳಗಿರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.  

ತಿಂಗಳಿಗೆ ₹16,650 ಸ್ಟೈಪೆಂಡ್

ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ₹16,650 ಸ್ಟೈಪೆಂಡ್ ದೊರೆಯಲಿದೆ. ಆದರೆ ಇದು ಸಾಮಾನ್ಯ ಶಾಶ್ವತ ಬ್ಯಾಂಕ್ ಉದ್ಯೋಗವಲ್ಲ ಎಂಬುದನ್ನ ಅಭ್ಯರ್ಥಿಗಳು ಗಮನಿಸಬೇಕು. ಇದು Apprentices Act, 1961 ಅಡಿಯಲ್ಲಿ ನಡೆಯುವ ತರಬೇತಿ ಕಾರ್ಯಕ್ರಮವಾಗಿದೆ. 

ಆಯ್ಕೆ ಹೇಗೆ?

ಈ ನೇಮಕಾತಿಯಲ್ಲಿ ಸಾಮಾನ್ಯ ಬ್ಯಾಂಕ್ ನೇಮಕಾತಿಯ ರೀತಿಯ ಲಿಖಿತ ಪರೀಕ್ಷೆ ಇಲ್ಲ. ಅಭ್ಯರ್ಥಿಗಳ 12ನೇ ತರಗತಿ ಅಥವಾ ಡಿಪ್ಲೊಮಾ ಅಂಕಗಳ ಆಧಾರದ ಮೇಲೆ ರಾಜ್ಯವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ಬಳಿಕ ದಾಖಲೆ ಪರಿಶೀಲನೆ ನಡೆಯಲಿದೆ. ಅಗತ್ಯವಿದ್ದಲ್ಲಿ ಸ್ಥಳೀಯ ಭಾಷಾ ಜ್ಞಾನವನ್ನ ಸಹ ಪರಿಶೀಲಿಸಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು National Apprenticeship Training Scheme (NATS) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ತಮ್ಮ ಪ್ರೊಫೈಲ್‌ ಅನ್ನ ಸಂಪೂರ್ಣವಾಗಿ ಪೂರ್ಣಗೊಳಿಸಿದ ಬಳಿಕ ಕ್ಯಾನರಾ ಬ್ಯಾಂಕ್‌ನ ಅಧಿಕೃತ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಬೇಕು. NATS ನೋಂದಣಿ ಇಲ್ಲದೆ ಬ್ಯಾಂಕ್‌ನ ಅಪ್ರೆಂಟಿಸ್‌ಶಿಪ್ ಅರ್ಜಿಯನ್ನ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ನೇಮಕಾತಿ ನಿಯಮಗಳಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಮೊದಲು NATS ಪೋರ್ಟಲ್‌ನಲ್ಲಿ ನೋಂದಣಿ ಮಾಡಿ, ನಂತರ ಕ್ಯಾನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ತೆರಳಿ Graduate Apprentice ನೇಮಕಾತಿ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳು ಹಾಗೂ ಅಗತ್ಯ ಪ್ರಮಾಣಪತ್ರಗಳನ್ನ ಸರಿಯಾಗಿ ನಮೂದಿಸಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. 

ಪ್ರಮುಖ ದಿನಾಂಕಗಳು

* ಅರ್ಜಿ ಆರಂಭ: ಅಕ್ಟೋಬರ್ 1, 2026
* ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 17, 2026
* ಒಟ್ಟು ತರಬೇತಿ ಹುದ್ದೆಗಳು: 3,500
* ತರಬೇತಿ ಅವಧಿ: 12 ತಿಂಗಳು
* ಮಾಸಿಕ ಸ್ಟೈಪೆಂಡ್: ₹16,650
* ವಯೋಮಿತಿ: 20–28 ವರ್ಷ
* ಕರ್ನಾಟಕದ ಹುದ್ದೆಗಳು: 581

ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಬಯಸುವ ಅರ್ಹ ಪದವೀಧರರಿಗೆ ಈ ಅಪ್ರೆಂಟಿಸ್‌ಶಿಪ್ ಅವಕಾಶ ಉತ್ತಮ ವೇದಿಕೆಯಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕ್ಯಾನರಾ ಬ್ಯಾಂಕ್ ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯನ್ನ ಸಂಪೂರ್ಣವಾಗಿ ಓದಿ, ತಮ್ಮ ವಿದ್ಯಾರ್ಹತೆ, ವಯಸ್ಸು, ಸ್ಥಳೀಯ ಭಾಷೆ ಮತ್ತು ಇತರ ಅರ್ಹತಾ ಷರತ್ತುಗಳನ್ನ ಪರಿಶೀಲಿಸಬೇಕು.  

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES