• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಮತ್ತೆ ನೆಲಕಚ್ಚಿದ ಷೇರು ಮಾರುಕಟ್ಟೆ: 90 ನಿಮಿಷದಲ್ಲಿ ₹5.9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಮತ್ತೆ ನೆಲಕಚ್ಚಿದ ಷೇರು ಮಾರುಕಟ್ಟೆ: 90 ನಿಮಿಷದಲ್ಲಿ ₹5.9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಜಾಗತಿಕ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಮೆರಿಕದ ಬಾಂಡ್ ಇಳುವರಿಯ ಹೆಚ್ಚಳದ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರವೂ ಭಾರೀ ಕುಸಿತ ಕಂಡುಬಂದಿದೆ. ಸೆನ್ಸೆಕ್ಸ್ 707.72 ಅಂಕ ಕುಸಿದರೆ, ನಿಫ್ಟಿ 22,600ರ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು ₹5.9 ಲಕ್ಷ ಕೋಟಿ ಕುಸಿದಿದೆ.

Written ByPuttaraj K Alur
Published: Sep 29, 2026, 11:10 AM IST|Updated: Sep 29, 2026, 11:22 AM IST
joinshare
ಮತ್ತೆ ನೆಲಕಚ್ಚಿದ ಷೇರು ಮಾರುಕಟ್ಟೆ: 90 ನಿಮಿಷದಲ್ಲಿ ₹5.9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!
Image Credit: Stock Market Crash

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Stock Market Crash: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರವೂ ಭಾರೀ ಮಾರಾಟದ ಒತ್ತಡ ಕಂಡುಬಂದಿದ್ದು, ಹೂಡಿಕೆದಾರರ ಸಂಪತ್ತಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಇಳಿಕೆಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 707.72 ಅಂಕ ಅಥವಾ ಶೇ.0.97ರಷ್ಟು ಕುಸಿದು ದಿನದ ಕನಿಷ್ಠ 72,064 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ 50 ಸೂಚ್ಯಂಕವೂ ಶೇ.0.92ರಷ್ಟು ಇಳಿಕೆಯಾಗಿ 22,569.65ರ ಮಟ್ಟಕ್ಕೆ ಕುಸಿದಿದೆ.

ನಿಫ್ಟಿ 22,600ರ ಪ್ರಮುಖ ಮಟ್ಟಕ್ಕಿಂತ ಕೆಳಗೆ ಇಳಿದಿರುವುದು ಮಾರುಕಟ್ಟೆಯಲ್ಲಿನ ಮಾರಾಟದ ಒತ್ತಡವನ್ನ ಸೂಚಿಸಿದೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ, ಕಚ್ಚಾ ತೈಲದ ಏರುತ್ತಿರುವ ಬೆಲೆ ಮತ್ತು ಅಮೆರಿಕದ ಬಾಂಡ್ ಇಳುವರಿಯ ಹೆಚ್ಚಳವು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿವೆ.

90 ನಿಮಿಷದಲ್ಲಿ ಕರಗಿದ ₹5.9 ಲಕ್ಷ ಕೋಟಿ ಸಂಪತ್ತು!

ಷೇರುಗಳ ಬೆಲೆ ಕುಸಿತದಿಂದ ಹೂಡಿಕೆದಾರರ ಒಟ್ಟು ಸಂಪತ್ತಿನಲ್ಲಿ ಸುಮಾರು ₹5.9 ಲಕ್ಷ ಕೋಟಿ ಇಳಿಕೆಯಾಗಿದೆ. ಸೋಮವಾರ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣ ₹4,75,43,563.07 ಕೋಟಿಯಷ್ಟಿತ್ತು. ಮಂಗಳವಾರ ಇದು ₹4,69,53,969.87 ಕೋಟಿಗೆ ಇಳಿಕೆಯಾಗಿದೆ. ಅಂದರೆ ಒಂದೇ ವಹಿವಾಟಿನ ಅವಧಿಯಲ್ಲಿ ಮಾರುಕಟ್ಟೆಯ ಒಟ್ಟು ಮೌಲ್ಯದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿನ ಈ ಬದಲಾವಣೆಯು ಹೂಡಿಕೆದಾರರ ಪೋರ್ಟ್‌ಫೋಲಿಯೊಗಳ ಮೇಲೂ ಪರಿಣಾಮ ಬೀರಿದೆ.

ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಬಹುತೇಕ ಷೇರುಗಳು ಕುಸಿತ

ಬಿಎಸ್‌ಇ ಸೆನ್ಸೆಕ್ಸ್‌ನ 30 ಪ್ರಮುಖ ಕಂಪನಿಗಳ ಪೈಕಿ ಸನ್ ಫಾರ್ಮಾ ಮತ್ತು ಇಂಡಿಗೋ ಹೊರತುಪಡಿಸಿ ಉಳಿದ ಬಹುತೇಕ ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸಿದವು. ಇನ್ನೊಂದೆಡೆ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕದ 50 ಷೇರುಗಳಲ್ಲಿ 45 ಷೇರುಗಳು ಕುಸಿತ ಕಂಡರೆ, ಕೇವಲ ಐದು ಷೇರುಗಳು ಏರಿಕೆ ದಾಖಲಿಸಿದವು. ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಕೆಲವು ಕಂಪನಿಗಳಿಗೆ ಮಾತ್ರ ಸೀಮಿತವಾಗದೆ ಪ್ರಮುಖ ಸೂಚ್ಯಂಕಗಳಾದ್ಯಂತ ಹರಡಿರುವುದು ಇದರಿಂದ ಸ್ಪಷ್ಟವಾಗಿದೆ.

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳಲ್ಲೂ ಕುಸಿತ

ದೊಡ್ಡ ಕಂಪನಿಗಳ ಷೇರುಗಳಷ್ಟೇ ಅಲ್ಲದೆ, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ವಿಭಾಗಗಳಲ್ಲಿಯೂ ಕುಸಿತ ದಾಖಲಾಗಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ತಲಾ ಶೇ.1ಕ್ಕಿಂತ ಹೆಚ್ಚು ಕುಸಿದಿವೆ. ನಿಫ್ಟಿ 100 ಸೂಚ್ಯಂಕ ಶೇ.0.89ರಷ್ಟು ಇಳಿಕೆಯಾಗಿದ್ದರೆ, ನಿಫ್ಟಿ 200 ಶೇ.0.92 ಮತ್ತು ನಿಫ್ಟಿ 500 ಶೇ.0.94ರಷ್ಟು ಕುಸಿದಿವೆ. ನಿಫ್ಟಿ ಮಿಡ್‌ಕ್ಯಾಪ್ 150 ಸೂಚ್ಯಂಕವೂ ಸುಮಾರು ಶೇ.1ರಷ್ಟು ಇಳಿಕೆಯಾಗಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕಿಂತ ಕೆಳಗೆ ಜಾರಿದೆ.

ಬ್ಯಾಂಕಿಂಗ್, ಆಟೋ ಮತ್ತು ತೈಲ ವಲಯಗಳ ಮೇಲೆ ಒತ್ತಡ

ವಲಯವಾರು ಸೂಚ್ಯಂಕಗಳನ್ನ ಗಮನಿಸಿದರೆ, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಹೆಲ್ತ್‌ಕೇರ್ ಹೊರತುಪಡಿಸಿ ಉಳಿದ ಬಹುತೇಕ ವಲಯಗಳು ನಷ್ಟದಲ್ಲಿ ವಹಿವಾಟು ನಡೆಸಿವೆ. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಹೆಚ್ಚಿನ ಕುಸಿತ ದಾಖಲಿಸಿದ್ದು, ಆಟೋಮೊಬೈಲ್ ಹಾಗೂ ತೈಲ ಮತ್ತು ಅನಿಲ ವಲಯಗಳಲ್ಲಿಯೂ ಮಾರಾಟದ ಒತ್ತಡ ಕಂಡುಬಂದಿದೆ. ಈ ವಲಯಗಳ ಸೂಚ್ಯಂಕಗಳು ಶೇ.1ಕ್ಕಿಂತ ಹೆಚ್ಚು ಇಳಿಕೆಯಾಗಿವೆ. ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನ ಸೂಚಿಸುವ India VIX ಸೂಚ್ಯಂಕ ಶೇ.6.37ರಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ವಹಿವಾಟು ದಿನಗಳಲ್ಲಿ ಈ ಸೂಚ್ಯಂಕ ಶೇ.42ಕ್ಕಿಂತ ಹೆಚ್ಚು ಹೆಚ್ಚಳ ಕಂಡಿದೆ.

ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕ-ಇರಾನ್ ಸಂಘರ್ಷದ ಆತಂಕ

ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ಅಂಶಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯೂ ಒಂದಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 106 ಡಾಲರ್‌ಗಿಂತ ಹೆಚ್ಚಿದ್ದು, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ 94 ಡಾಲರ್‌ಗಳ ಸಮೀಪದಲ್ಲಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳ ಕುರಿತು ಅನಿಶ್ಚಿತತೆ ಮುಂದುವರಿದಿರುವುದು ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಸೌದಿ ಅರೇಬಿಯಾದ ಪ್ರಮುಖ ಈಸ್ಟ್-ವೆಸ್ಟ್ ಪೈಪ್‌ಲೈನ್ ಮೂಲಕ ತೈಲ ಪೂರೈಕೆ ಭಾಗಶಃ ಪುನರಾರಂಭವಾಗಿದ್ದರೂ, ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯ ಬಗ್ಗೆ ಮಾರುಕಟ್ಟೆಯಲ್ಲಿ ಆತಂಕ ಮುಂದುವರಿದಿದೆ. ಕಚ್ಚಾ ತೈಲ ಬೆಲೆ ಏರಿಕೆ ಜಾಗತಿಕ ಆರ್ಥಿಕತೆ ಮತ್ತು ಹಣದುಬ್ಬರದ ಕುರಿತ ಚಿಂತೆಗಳನ್ನ ಹೆಚ್ಚಿಸಿದ್ದು, ಹೂಡಿಕೆದಾರರ ಭಾವನೆಗಳ ಮೇಲೂ ಪರಿಣಾಮ ಬೀರಿದೆ.

ಅಮೆರಿಕದ ಬಾಂಡ್ ಇಳುವರಿಯಲ್ಲೂ ಹೆಚ್ಚಳ

ಅಮೆರಿಕದ ಬಾಂಡ್ ಇಳುವರಿ ಏರಿಕೆಯಾಗುತ್ತಿರುವುದು ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆ ಮತ್ತೊಂದು ಒತ್ತಡದ ಅಂಶವಾಗಿದೆ. ಬಡ್ಡಿದರ ಏರಿಕೆಯ ಸಾಧ್ಯತೆಗಳ ಕುರಿತ ಆತಂಕದ ನಡುವೆ 10 ವರ್ಷಗಳ ಅಮೆರಿಕದ ಟ್ರೆಷರಿ ಬಾಂಡ್ ಇಳುವರಿ ಶೇ.5.2ಕ್ಕಿಂತ ಮೇಲಕ್ಕೆ ತಲುಪಿದೆ. ಇದು 2007ರ ನಂತರದ ಉನ್ನತ ಮಟ್ಟಗಳಿಗೆ ಸಮೀಪವಾಗಿದೆ. ಇದೇ ವೇಳೆ 30 ವರ್ಷಗಳ ಟ್ರೆಷರಿ ಬಾಂಡ್ ಇಳುವರಿ ಶೇ.5.56ಕ್ಕಿಂತ ಹೆಚ್ಚಾಗಿದ್ದು, 2004ರ ನಂತರದ ಮಟ್ಟಗಳಿಗೆ ಸಮೀಪದಲ್ಲಿ ವಹಿವಾಟು ನಡೆಸಿದೆ.

ಮಾರುಕಟ್ಟೆಯಲ್ಲಿ ಕುಸಿದ ಷೇರುಗಳ ಸಂಖ್ಯೆ ಹೆಚ್ಚಳ

ಎನ್‌ಎಸ್‌ಇಯಲ್ಲಿ ವಹಿವಾಟು ನಡೆಸಿದ ಒಟ್ಟು 3,305 ಷೇರುಗಳಲ್ಲಿ 763 ಷೇರುಗಳು ಏರಿಕೆ ದಾಖಲಿಸಿದರೆ, 2,448 ಷೇರುಗಳು ಕುಸಿದಿವೆ. 94 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ 4,041 ಷೇರುಗಳಲ್ಲಿ 1,160 ಏರಿಕೆ ಕಂಡರೆ, 2,667 ಷೇರುಗಳು ಕುಸಿದಿವೆ ಮತ್ತು 214 ಷೇರುಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇಯಲ್ಲಿ 191 ಷೇರುಗಳು 52 ವಾರಗಳ ಕನಿಷ್ಠ ಮಟ್ಟ ತಲುಪಿದರೆ, 46 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ದಾಖಲಿಸಿವೆ. 78 ಷೇರುಗಳು ಅಪ್ಪರ್ ಸರ್ಕ್ಯೂಟ್ ಮತ್ತು 87 ಷೇರುಗಳು ಲೋವರ್ ಸರ್ಕ್ಯೂಟ್ ತಲುಪಿವೆ. ಬಿಎಸ್‌ಇಯಲ್ಲಿ 182 ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, 90 ಷೇರುಗಳು ಗರಿಷ್ಠ ಮಟ್ಟ ದಾಖಲಿಸಿವೆ. ಒಟ್ನಲ್ಲಿ ಜಾಗತಿಕ ತೈಲ ಬೆಲೆ ಏರಿಕೆ, ಅಮೆರಿಕದ ಬಾಂಡ್ ಇಳುವರಿ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವ್ಯಾಪಕ ಕುಸಿತ ದಾಖಲಾಗಿದೆ.

Add Zee News as a Preferred Source
TAGS:
Business
Kannada News