SOCIAL MEDIA

Newsletter

PARTNER SITES
Select Language Select State

SBI 180 ದಿನಗಳ FD ಮೇಲೆ ಎಷ್ಟು ಬಡ್ಡಿ? ಹಿರಿಯ ನಾಗರಿಕರಿಗೆ ಸಿಗುವ ಲಾಭ ಎಷ್ಟು?

SBIಯಲ್ಲಿ 180ರಿಂದ 210 ದಿನಗಳ ಅವಧಿಯ FDಗೆ ಸಾಮಾನ್ಯ ಗ್ರಾಹಕರಿಗೆ 5.65% ಹಾಗೂ ಹಿರಿಯ ನಾಗರಿಕರಿಗೆ 6.15% ಬಡ್ಡಿದರ ಸಿಗುತ್ತದೆ. 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚುವರಿ 10 ಬೇಸಿಸ್ ಪಾಯಿಂಟ್‌ಗಳ ಲಾಭವಿದೆ.

Written By Puttaraj K Alur
Published: Sep 28, 2026, 01:58 PM IST | Updated: Sep 28, 2026, 02:05 PM IST
Image Credit: SBI Fixed Deposit
Join

SBI FD Interest Rates: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಉಳಿತಾಯದ ಹಣವನ್ನ ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುವವರಿಗೆ ಸ್ಥಿರ ಠೇವಣಿ (FD) ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ನಿಗದಿತ ಅವಧಿಗೆ ಹಣವನ್ನ ಠೇವಣಿ ಇಟ್ಟು, ಪೂರ್ವನಿರ್ಧರಿತ ಬಡ್ಡಿದರದಂತೆ ಆದಾಯ ಪಡೆಯಲು FD ಅವಕಾಶ ನೀಡುತ್ತದೆ.

SBI ವಿವಿಧ ಅವಧಿಗಳ FDಗಳಿಗೆ ಬೇರೆ ಬೇರೆ ಬಡ್ಡಿದರಗಳನ್ನ ನಿಗದಿಪಡಿಸಿದೆ. ಅದರಲ್ಲೂ 180ರಿಂದ 210 ದಿನಗಳ ಅವಧಿಯ FD ಬಗ್ಗೆ ಗ್ರಾಹಕರಲ್ಲಿ ಆಸಕ್ತಿ ಹೆಚ್ಚಿದೆ. ಈ ಅವಧಿಯ FDಗೆ ಸಾಮಾನ್ಯ ಗ್ರಾಹಕರು ಹಾಗೂ ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿದರದಲ್ಲಿ ವ್ಯತ್ಯಾಸವಿದೆ.

180 ದಿನಗಳ FDಗೆ ಎಷ್ಟು ಬಡ್ಡಿ?

SBIಯ ಅಧಿಕೃತ ಮಾಹಿತಿಯ ಪ್ರಕಾರ, 180 ದಿನಗಳಿಂದ 210 ದಿನಗಳವರೆಗಿನ FDಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ 5.65% ಬಡ್ಡಿದರ ಅನ್ವಯಿಸುತ್ತದೆ. ಇದೇ ಅವಧಿಗೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ 6.15% ಬಡ್ಡಿ ನೀಡಲಾಗುತ್ತದೆ. ಅಂದರೆ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಶೇ.0.50 ಅಂಕಗಳಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ದೀರ್ಘಾವಧಿಯ ಉಳಿತಾಯದ ಬದಲು ಕೆಲ ತಿಂಗಳ ಅವಧಿಗೆ ಹಣವನ್ನು FDಯಲ್ಲಿ ಇರಿಸಲು ಬಯಸುವವರಿಗೆ ಈ ಆಯ್ಕೆ ಪರಿಗಣಿಸಬಹುದಾದ ಒಂದು ಮಾರ್ಗವಾಗಿದೆ.

60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಬಡ್ಡಿ

SBI ತನ್ನ FD ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚುವರಿ ಬಡ್ಡಿದರ ನೀಡುತ್ತದೆ. 180ರಿಂದ 210 ದಿನಗಳ FDಗೆ ಸಾಮಾನ್ಯ ಗ್ರಾಹಕರಿಗೆ 5.65% ಇದ್ದರೆ, ಹಿರಿಯ ನಾಗರಿಕರಿಗೆ 6.15% ಬಡ್ಡಿ ಸಿಗುತ್ತದೆ. ಹೀಗಾಗಿ ಒಂದೇ ಮೊತ್ತವನ್ನ ಒಂದೇ ಅವಧಿಗೆ FDಯಲ್ಲಿ ಇಟ್ಟಾಗ ಹಿರಿಯ ನಾಗರಿಕರು ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ಆದಾಯ ಪಡೆಯುವ ಅವಕಾಶ ಹೊಂದಿರುತ್ತಾರೆ.

80 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿ ಲಾಭ

SBIಯಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಹಕರನ್ನ ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಗ್ರಾಹಕರಿಗೆ ಹಿರಿಯ ನಾಗರಿಕರ ಬಡ್ಡಿದರದ ಮೇಲೆ ಹೆಚ್ಚುವರಿ 10 ಬೇಸಿಸ್ ಪಾಯಿಂಟ್‌ಗಳ ಲಾಭ ಅನ್ವಯಿಸುತ್ತದೆ ಎಂದು SBI ತಿಳಿಸಿದೆ. ಅಂದರೆ 180–210 ದಿನಗಳ ಅವಧಿಯ FDಗೆ ಹಿರಿಯ ನಾಗರಿಕರಿಗೆ ಅನ್ವಯಿಸುವ 6.15% ದರದ ಮೇಲೆ ಹೆಚ್ಚುವರಿ 0.10% ಲಾಭ ದೊರೆಯುವ ವ್ಯವಸ್ಥೆ ಇದೆ.

444 ದಿನಗಳ ಅಮೃತ್ ವರ್ಷಿತಿ FD

SBIಯ ವಿಶೇಷ ಅವಧಿಯ FD ಯೋಜನೆ Amrit Vrishti ಕೂಡ ಗ್ರಾಹಕರ ಗಮನ ಸೆಳೆದಿದೆ. SBI ಅಧಿಕೃತ ಮಾಹಿತಿಯ ಪ್ರಕಾರ, 444 ದಿನಗಳ ಈ ವಿಶೇಷ FDಯ ಬಡ್ಡಿದರವನ್ನ 2025ರ ಜೂನ್ 15ರಿಂದ 6.60%ಕ್ಕೆ ಪರಿಷ್ಕರಿಸಲಾಗಿತ್ತು. ಹಿರಿಯ ನಾಗರಿಕರು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಅನ್ವಯಿಸುವ ಹೆಚ್ಚುವರಿ ಬಡ್ಡಿ ಪ್ರಯೋಜನಗಳು ಇದಕ್ಕೂ ಅನ್ವಯಿಸುತ್ತವೆ. ಹೀಗಾಗಿ 444 ದಿನಗಳ FDಯಲ್ಲಿ ಹಣ ಇಡಲು ಬಯಸುವವರು ಸಾಮಾನ್ಯ FDಗಿಂತ ಈ ವಿಶೇಷ ಯೋಜನೆಯ ಬಡ್ಡಿದರ ಮತ್ತು ಅದರ ನಿಯಮಗಳನ್ನ ಪ್ರತ್ಯೇಕವಾಗಿ ಪರಿಶೀಲಿಸಬಹುದು.

FD ಮಾಡುವ ಮುನ್ನ ಈ ವಿಷಯ ಗಮನಿಸಿ

FDಯಲ್ಲಿ ಹೂಡಿಕೆ ಮಾಡುವ ಮೊದಲು ಬಡ್ಡಿದರದ ಜೊತೆಗೆ ಅವಧಿ, ತೆರಿಗೆ ಅನ್ವಯಿಕೆ, ಮುಂಗಡ ಹಣ ಹಿಂಪಡೆಯುವ ನಿಯಮಗಳು ಹಾಗೂ ಬ್ಯಾಂಕ್‌ನ ಪ್ರಸ್ತುತ ಷರತ್ತುಗಳನ್ನ ಪರಿಶೀಲಿಸುವುದು ಮುಖ್ಯ. ಬಡ್ಡಿದರಗಳು ಕಾಲಕಾಲಕ್ಕೆ ಬದಲಾಗಬಹುದಾದ್ದರಿಂದ FD ತೆರೆಯುವ ದಿನದಂದು SBIಯ ಅಧಿಕೃತ ದರವನ್ನ ಖಚಿತಪಡಿಸಿಕೊಳ್ಳುವುದು ಸೂಕ್ತ. ಒಟ್ನಲ್ಲಿ SBIಯ 180–210 ದಿನಗಳ FDಗೆ ಸಾಮಾನ್ಯ ಗ್ರಾಹಕರಿಗೆ 5.65% ಮತ್ತು ಹಿರಿಯ ನಾಗರಿಕರಿಗೆ 6.15% ಬಡ್ಡಿ ಸಿಗುತ್ತದೆ. 80 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿ 10 ಬೇಸಿಸ್ ಪಾಯಿಂಟ್‌ಗಳ ಪ್ರಯೋಜನವೂ ಇದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES