• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /SBI FD ಬಡ್ಡಿದರ: 4 ವರ್ಷ ಹಣ ಠೇವಣಿಯಿಟ್ಟರೆ ಎಷ್ಟು ಲಾಭ? ಇಲ್ಲಿದೆ ಲೆಕ್ಕಾಚಾರ

SBI FD ಬಡ್ಡಿದರ: 4 ವರ್ಷ ಹಣ ಠೇವಣಿಯಿಟ್ಟರೆ ಎಷ್ಟು ಲಾಭ? ಇಲ್ಲಿದೆ ಲೆಕ್ಕಾಚಾರ

ಎಸ್‌ಬಿಐನ ನಾಲ್ಕು ವರ್ಷಗಳ ಸ್ಥಿರ ಠೇವಣಿ (FD) ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.6.30, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ.6.80 ಹಾಗೂ 80 ವರ್ಷ ಮೇಲ್ಪಟ್ಟ ಸೂಪರ್ ಹಿರಿಯ ನಾಗರಿಕರಿಗೆ ಶೇ.6.90 ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಗರಿಷ್ಠ ₹29,99,999 ಹೂಡಿಕೆ ಮಾಡಬಹುದು. ಎಫ್‌ಡಿ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯವಾಗಲಿದ್ದು, ಹೂಡಿಕೆಗೂ ಮುನ್ನ ಬ್ಯಾಂಕ್‌ನಲ್ಲಿ ಪ್ರಸ್ತುತ ದರ ಮತ್ತು ನಿಯಮಗಳನ್ನ ಪರಿಶೀಲಿಸುವುದು ಅಗತ್ಯ.

Written ByPuttaraj K Alur
Published: Nov 10, 2026, 09:14 IST|Updated: Nov 10, 2026, 09:21 IST
joinshare
SBI FD ಬಡ್ಡಿದರ: 4 ವರ್ಷ ಹಣ ಠೇವಣಿಯಿಟ್ಟರೆ ಎಷ್ಟು ಲಾಭ? ಇಲ್ಲಿದೆ ಲೆಕ್ಕಾಚಾರ
Image Credit: SBI FD

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

SBI FD Interest Rates: ಸುರಕ್ಷಿತ ಹೂಡಿಕೆಯ ಮೂಲಕ ತಮ್ಮ ಉಳಿತಾಯದ ಹಣಕ್ಕೆ ನಿಗದಿತ ಆದಾಯ ಪಡೆಯಲು ಬಯಸುವವರಿಗೆ ಬ್ಯಾಂಕ್ ಸ್ಥಿರ ಠೇವಣಿ (FD) ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಅದರಲ್ಲೂ ಷೇರು ಮಾರುಕಟ್ಟೆಯ ಏರಿಳಿತಗಳ ಅಪಾಯವನ್ನ ಎದುರಿಸಲು ಇಷ್ಟಪಡದವರು ಎಫ್‌ಡಿ ಯೋಜನೆಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಾರೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಅವಧಿಗಳ ಸ್ಥಿರ ಠೇವಣಿಗಳಿಗೆ ಬಡ್ಡಿ ನೀಡುತ್ತಿದೆ. ನಾಲ್ಕು ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡುವ ಗ್ರಾಹಕರಿಗೆ ಸಾಮಾನ್ಯ ಬಡ್ಡಿದರದ ಜೊತೆಗೆ ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯವೂ ಇದೆ.

ಎಸ್‌ಬಿಐನ ನಾಲ್ಕು ವರ್ಷಗಳ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ವಿಭಿನ್ನ ಬಡ್ಡಿದರಗಳನ್ನು ನಿಗದಿಪಡಿಸಲಾಗಿದೆ. ಗ್ರಾಹಕರ ವಯಸ್ಸು ಹಾಗೂ ಠೇವಣಿಯ ಅವಧಿಯನ್ನ ಆಧರಿಸಿ ಬಡ್ಡಿ ಲೆಕ್ಕಾಚಾರ ಮಾಡಲಾಗುತ್ತದೆ. ಹೀಗಾಗಿ ಒಂದೇ ಅವಧಿಗೆ ಹಣ ಠೇವಣಿ ಮಾಡಿದರೂ ವಯಸ್ಸಿನ ಆಧಾರದ ಮೇಲೆ ಸಿಗುವ ಬಡ್ಡಿಯಲ್ಲಿ ವ್ಯತ್ಯಾಸವಿರುತ್ತದೆ.

4 ವರ್ಷಗಳ FD ಮೇಲೆ ಸಾಮಾನ್ಯ ಗ್ರಾಹಕರಿಗೆ ಎಷ್ಟು ಬಡ್ಡಿ?

ಎಸ್‌ಬಿಐ ತನ್ನ ಗ್ರಾಹಕರಿಗೆ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಎಫ್‌ಡಿ ತೆರೆಯುವ ಅವಕಾಶ ನೀಡುತ್ತದೆ. ಈ ಪೈಕಿ ನಾಲ್ಕು ವರ್ಷಗಳ ಅವಧಿಗೆ ಠೇವಣಿ ಮಾಡುವ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.30ರಷ್ಟು ಬಡ್ಡಿ ನೀಡಲಾಗುತ್ತಿದೆ. ಉದಾಹರಣೆಗೆ ನಾಲ್ಕು ವರ್ಷಗಳ ಅವಧಿಗೆ ಹಣವನ್ನ ಎಫ್‌ಡಿಯಲ್ಲಿ ಇರಿಸುವ ಗ್ರಾಹಕರು ಬ್ಯಾಂಕ್ ನಿಗದಿಪಡಿಸಿರುವ ಶೇ.6.30ರ ವಾರ್ಷಿಕ ಬಡ್ಡಿದರದ ಆಧಾರದ ಮೇಲೆ ಆದಾಯ ಪಡೆಯುತ್ತಾರೆ. ಹೂಡಿಕೆಯ ಅವಧಿ ಮುಗಿದ ನಂತರ ಅನ್ವಯವಾಗುವ ನಿಯಮಗಳ ಪ್ರಕಾರ ಬಡ್ಡಿ ಮತ್ತು ಅಸಲು ಮೊತ್ತವನ್ನ ಪಡೆಯಬಹುದು.

ಹಿರಿಯ ನಾಗರಿಕರಿಗೆ ಶೇ.6.80 ಬಡ್ಡಿ ಲಾಭ

ಎಸ್‌ಬಿಐ ತನ್ನ ಹಿರಿಯ ಗ್ರಾಹಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ನಾಲ್ಕು ವರ್ಷಗಳ ಎಫ್‌ಡಿಯಲ್ಲಿ ಹಣ ಹೂಡಿಕೆ ಮಾಡಿದರೆ ವಾರ್ಷಿಕ ಶೇ.6.80ರಷ್ಟು ಬಡ್ಡಿ ಪಡೆಯಬಹುದು. ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಇದರಿಂದ ನಿವೃತ್ತ ಜೀವನದಲ್ಲಿ ಉಳಿತಾಯದ ಹಣದಿಂದ ಸ್ಥಿರ ಆದಾಯ ಪಡೆಯಲು ಬಯಸುವ ಹಿರಿಯರಿಗೆ ಹೆಚ್ಚಿನ ಬಡ್ಡಿ ಪ್ರಯೋಜನ ದೊರೆಯುತ್ತದೆ.

ಸೂಪರ್ ಹಿರಿಯ ನಾಗರಿಕರಿಗೆ ಶೇ.6.90 ಬಡ್ಡಿ

ಹಿರಿಯ ನಾಗರಿಕರಿಗಿಂತಲೂ ಹೆಚ್ಚಿನ ವಯಸ್ಸಿನ ಗ್ರಾಹಕರಿಗೆ ಎಸ್‌ಬಿಐ ಮತ್ತೊಂದು ಹೆಚ್ಚುವರಿ ಬಡ್ಡಿ ಸೌಲಭ್ಯ ಒದಗಿಸುತ್ತದೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರು ನಾಲ್ಕು ವರ್ಷಗಳ ಎಫ್‌ಡಿ ಮೇಲೆ ವಾರ್ಷಿಕ ಶೇ.6.90ರಷ್ಟು ಬಡ್ಡಿ ಪಡೆಯುತ್ತಾರೆ. ಸಾಮಾನ್ಯ ಹಿರಿಯ ನಾಗರಿಕರಿಗೆ ನೀಡುವ ಶೇ.6.80ರ ಬಡ್ಡಿದರಕ್ಕಿಂತ ಸೂಪರ್ ಹಿರಿಯ ನಾಗರಿಕರಿಗೆ ಶೇ.0.10ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಹೀಗಾಗಿ, ಒಂದೇ ಅವಧಿಯ ಠೇವಣಿಗೆ ಗ್ರಾಹಕರ ವಯಸ್ಸಿನ ಆಧಾರದ ಮೇಲೆ ಮೂರು ವಿಭಿನ್ನ ಬಡ್ಡಿದರಗಳನ್ನು ಬ್ಯಾಂಕ್ ನಿಗದಿಪಡಿಸಿದೆ.

ಬಡ್ಡಿದರಗಳ ವಿವರ ಇಲ್ಲಿದೆ

ಗ್ರಾಹಕರ ವರ್ಗ 4 ವರ್ಷಗಳ FD ಬಡ್ಡಿದರ
ಸಾಮಾನ್ಯ ಗ್ರಾಹಕರು  ಶೇ.6.30
ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟು) ಶೇ.6.80    
ಸೂಪರ್ ಹಿರಿಯ ನಾಗರಿಕರು (80 ವರ್ಷ ಮೇಲ್ಪಟ್ಟು)ಶೇ.6.90

ಗರಿಷ್ಠ ಎಷ್ಟು ಹಣ ಹೂಡಿಕೆ ಮಾಡಬಹುದು?

ಈ ನಾಲ್ಕು ವರ್ಷಗಳ ಎಸ್‌ಬಿಐ ಎಫ್‌ಡಿ ಯೋಜನೆಯಲ್ಲಿ ಗ್ರಾಹಕರು ಗರಿಷ್ಠ ₹29,99,999 ಹೂಡಿಕೆ ಮಾಡಬಹುದು. ಅಂದರೆ, ₹30 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನ ಈ ಯೋಜನೆಯಲ್ಲಿ ಠೇವಣಿ ಇಡಲು ಅವಕಾಶವಿದೆ.

ಡಿಸೆಂಬರ್ 2025ರಲ್ಲಿ ಕೊನೆಯ ಬಾರಿಗೆ ಬಡ್ಡಿದರ ಪರಿಷ್ಕರಣೆ

ಎಸ್‌ಬಿಐ ತನ್ನ ಎಫ್‌ಡಿ ಬಡ್ಡಿದರಗಳನ್ನ ಕೊನೆಯದಾಗಿ ಡಿಸೆಂಬರ್ 2025ರಲ್ಲಿ ಪರಿಷ್ಕರಿಸಿತ್ತು. ಅಂದಿನಿಂದ ಬಡ್ಡಿದರಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿಲ್ಲ. ಆದರೆ ಎಫ್‌ಡಿ ಮೂಲಕ ಗಳಿಸುವ ಬಡ್ಡಿ ಆದಾಯಕ್ಕೆ ಅನ್ವಯಿಸುವ ತೆರಿಗೆ ನಿಯಮಗಳನ್ನ ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು. ಹೂಡಿಕೆ ಮಾಡುವ ಮುನ್ನ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಬ್ಯಾಂಕ್ ಶಾಖೆಯನ್ನ ಸಂಪರ್ಕಿಸಿ ಪ್ರಸ್ತುತ ಬಡ್ಡಿದರ, ಠೇವಣಿ ಮಿತಿ ಮತ್ತು ಇತರ ನಿಯಮಗಳನ್ನ ಖಚಿತಪಡಿಸಿಕೊಳ್ಳುವುದು ಅಗತ್ಯ. ಒಟ್ಟಿನಲ್ಲಿ ನಾಲ್ಕು ವರ್ಷಗಳ ಎಫ್‌ಡಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.6.30, ಹಿರಿಯ ನಾಗರಿಕರಿಗೆ ಶೇ.6.80 ಹಾಗೂ ಸೂಪರ್ ಹಿರಿಯ ನಾಗರಿಕರಿಗೆ ಶೇ.6.90ರಷ್ಟು ವಾರ್ಷಿಕ ಬಡ್ಡಿ ಲಭ್ಯವಿದೆ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.) 

Add Zee News as a Preferred Source
TAGS:
Banking
Kannada News