• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /PNB FD: ಪಿಎನ್‌ಬಿಯಲ್ಲಿ 665 ದಿನಗಳ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಮಾಹಿತಿ

PNB FD: ಪಿಎನ್‌ಬಿಯಲ್ಲಿ 665 ದಿನಗಳ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಮಾಹಿತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 665 ದಿನಗಳ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.6.30, ಹಿರಿಯ ನಾಗರಿಕರಿಗೆ ಶೇ.6.80 ಹಾಗೂ 80 ವರ್ಷ ಮೇಲ್ಪಟ್ಟ ಸೂಪರ್ ಹಿರಿಯ ನಾಗರಿಕರಿಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ. ₹3 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಈ ದರಗಳು ಅನ್ವಯಿಸಲಿದ್ದು, ಬ್ಯಾಂಕ್ ಕೊನೆಯದಾಗಿ 2026ರ ಜೂನ್ 1ರಂದು ಬಡ್ಡಿದರ ಪರಿಷ್ಕರಿಸಿದೆ.

Written ByPuttaraj K Alur
Published: Nov 13, 2026, 21:56 IST|Updated: Nov 13, 2026, 22:10 IST
joinshare
PNB FD: ಪಿಎನ್‌ಬಿಯಲ್ಲಿ 665 ದಿನಗಳ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತದೆ? ಇಲ್ಲಿದೆ ಮಾಹಿತಿ
Image Credit: PNB FD

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

PNB 665 Days FD: ಸ್ಥಿರ ಠೇವಣಿ (FD) ಮೂಲಕ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಲು ಬಯಸುವ ಗ್ರಾಹಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಿವಿಧ ಅವಧಿಗಳ ಠೇವಣಿ ಯೋಜನೆಗಳನ್ನ ಒದಗಿಸುತ್ತಿದೆ. ಸಾಮಾನ್ಯ ಗ್ರಾಹಕರ ಜೊತೆಗೆ ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರಿಗೂ ವಿಶೇಷ ಬಡ್ಡಿದರದ ಪ್ರಯೋಜನ ನೀಡುತ್ತಿದೆ. ಅದರಲ್ಲೂ 665 ದಿನಗಳ ಅವಧಿಯ ಎಫ್‌ಡಿ ಯೋಜನೆ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.6.30 ಬಡ್ಡಿ ದೊರೆಯುತ್ತಿದ್ದರೆ, ಹಿರಿಯ ನಾಗರಿಕರಿಗೆ ಶೇ.6.80 ಹಾಗೂ ಸೂಪರ್ ಹಿರಿಯ ನಾಗರಿಕರಿಗೆ ಶೇ.7.10 ಬಡ್ಡಿ ಲಭ್ಯವಿದೆ.

7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಸೌಲಭ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ಅವಧಿಗಳಲ್ಲಿ ಸ್ಥಿರ ಠೇವಣಿ ಖಾತೆ ತೆರೆಯುವ ಅವಕಾಶ ಕಲ್ಪಿಸಿದೆ. ಕನಿಷ್ಠ 7 ದಿನಗಳ ಅವಧಿಯಿಂದ ಗರಿಷ್ಠ 10 ವರ್ಷಗಳವರೆಗೆ ಗ್ರಾಹಕರು ತಮ್ಮ ಹಣವನ್ನ ಎಫ್‌ಡಿ ರೂಪದಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ನೀಡುತ್ತಿರುವ ಬಡ್ಡಿದರಗಳು ಠೇವಣಿಯ ಅವಧಿ ಮತ್ತು ಗ್ರಾಹಕರ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತವೆ. ಒಟ್ಟಾರೆ ಪಿಎನ್‌ಬಿಯ ವಿವಿಧ ಎಫ್‌ಡಿ ಯೋಜನೆಗಳಲ್ಲಿ ಶೇ.3ರಿಂದ ಶೇ.7.40ರವರೆಗೆ ಬಡ್ಡಿದರ ಲಭ್ಯವಿದೆ. ಈ ಪೈಕಿ 665 ದಿನಗಳ ವಿಶೇಷ ಅವಧಿಯ ಠೇವಣಿಗೂ ಆಕರ್ಷಕ ಬಡ್ಡಿಯನ್ನ ನಿಗದಿಪಡಿಸಲಾಗಿದೆ.

665 ದಿನಗಳ ಎಫ್‌ಡಿಗೆ ಸಾಮಾನ್ಯ ಗ್ರಾಹಕರಿಗೆ ಶೇ.6.30 ಬಡ್ಡಿ

ಪಿಎನ್‌ಬಿಯ 665 ದಿನಗಳ ಸ್ಥಿರ ಠೇವಣಿ ಯೋಜನೆಯಲ್ಲಿ 59 ವರ್ಷ ವಯಸ್ಸಿನವರೆಗಿನ ಸಾಮಾನ್ಯ ಗ್ರಾಹಕರಿಗೆ ಶೇ.6.30 ಬಡ್ಡಿದರ ನೀಡಲಾಗುತ್ತಿದೆ. ಅಂದರೆ ಈ ಅವಧಿಗೆ ಎಫ್‌ಡಿ ಖಾತೆ ತೆರೆಯುವ ಸಾಮಾನ್ಯ ಗ್ರಾಹಕರು ತಮ್ಮ ಠೇವಣಿ ಮೊತ್ತದ ಮೇಲೆ ನಿಗದಿತ ಬಡ್ಡಿ ಪಡೆಯಬಹುದು. ಇದೇ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಹಕರಿಗೆ ಶೇ.6.80 ಬಡ್ಡಿದರ ಅನ್ವಯವಾಗುತ್ತದೆ. ಇದರಿಂದ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚುವರಿ ಬಡ್ಡಿ ಆದಾಯ ಪಡೆಯುವ ಅವಕಾಶವಿದೆ.

ಸೂಪರ್ ಹಿರಿಯ ನಾಗರಿಕರಿಗೆ ಶೇ.7.10 ಬಡ್ಡಿ

ಪಿಎನ್‌ಬಿಯ 665 ದಿನಗಳ ಎಫ್‌ಡಿ ಯೋಜನೆಯಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಈ ವರ್ಗದ ಗ್ರಾಹಕರಿಗೆ ಬ್ಯಾಂಕ್ ಶೇ.7.10 ಬಡ್ಡಿದರ ನೀಡುತ್ತಿದೆ. ಹೀಗಾಗಿ ಸಾಮಾನ್ಯ ಗ್ರಾಹಕರು ಪಡೆಯುವ ಶೇ.6.30 ಬಡ್ಡಿಗೆ ಹೋಲಿಸಿದರೆ ಸೂಪರ್ ಹಿರಿಯ ನಾಗರಿಕರಿಗೆ ಶೇ.0.80ರಷ್ಟು ಹೆಚ್ಚುವರಿ ಬಡ್ಡಿ ಲಭ್ಯವಾಗುತ್ತದೆ. ಈ ಬಡ್ಡಿದರಗಳು ₹3 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಅನ್ವಯಿಸುತ್ತವೆ ಎಂಬುದನ್ನ ಗ್ರಾಹಕರು ಗಮನಿಸಬೇಕು. ಠೇವಣಿಯ ಮೊತ್ತ ಮತ್ತು ಅವಧಿಗೆ ಅನುಗುಣವಾಗಿ ಸಿಗುವ ಒಟ್ಟು ಬಡ್ಡಿ ಆದಾಯ ನಿರ್ಧಾರವಾಗುತ್ತದೆ.

ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ಪ್ರಯೋಜನ

ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಎಫ್‌ಡಿ ಖಾತೆಗಳ ಮೇಲೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿಯನ್ನ ಪಿಎನ್‌ಬಿ ನೀಡುತ್ತಿದೆ. ಅದೇ ರೀತಿ ಸೂಪರ್ ಹಿರಿಯ ನಾಗರಿಕರಿಗೆ ಸಾಮಾನ್ಯ ಹಿರಿಯ ನಾಗರಿಕರಿಗಿಂತ ಶೇ.0.30ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. ಈ ವಿಶೇಷ ಬಡ್ಡಿದರದ ವ್ಯವಸ್ಥೆಯಿಂದ ವಯಸ್ಸಿನ ಆಧಾರದ ಮೇಲೆ ಗ್ರಾಹಕರಿಗೆ ವಿಭಿನ್ನ ಬಡ್ಡಿ ಪ್ರಯೋಜನ ದೊರೆಯುತ್ತದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟವರು ಹಾಗೂ 80 ವರ್ಷ ಮೇಲ್ಪಟ್ಟವರು ಬ್ಯಾಂಕ್‌ನ ಎಫ್‌ಡಿ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ.

ಕೊನೆಯ ಬಾರಿ ಬಡ್ಡಿದರ ಪರಿಷ್ಕರಣೆ ಯಾವಾಗ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಎಫ್‌ಡಿ ಯೋಜನೆಗಳ ಬಡ್ಡಿದರವನ್ನ ಕೊನೆಯದಾಗಿ 2026ರ ಜೂನ್ 1ರಂದು ಪರಿಷ್ಕರಿಸಿದೆ. ಅದರಂತೆ ವಿವಿಧ ಅವಧಿಗಳ ಠೇವಣಿಗಳಿಗೆ ಅನ್ವಯವಾಗುವ ಬಡ್ಡಿದರಗಳನ್ನ ನಿಗದಿಪಡಿಸಲಾಗಿದೆ. ಒಟ್ನಲ್ಲಿ ಪಿಎನ್‌ಬಿಯ 665 ದಿನಗಳ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.6.30, ಹಿರಿಯ ನಾಗರಿಕರಿಗೆ ಶೇ.6.80 ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಶೇ.7.10 ಬಡ್ಡಿ ಲಭ್ಯವಿದೆ. ₹3 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಈ ದರಗಳು ಅನ್ವಯಿಸುತ್ತವೆ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:
Banking
Kannada News