SOCIAL MEDIA

Newsletter

PARTNER SITES
Select Language Select State

ಇನ್ಮುಂದೆ ಕರೆಂಟ್‌ ಬಿಲ್‌ ಟೆನ್ಶನ್‌ ಬೇಡ.. ಉಚಿತ ವಿದ್ಯುತ್‌ ಜೊತೆಗೆ ₹78,000 ವರೆಗೆ ಸಬ್ಸಿಡಿ ಸಿಗುತ್ತೆ!

‘ನಮ್ಮ ಸೋಲಾರ್’ ಮೂಲಕ ಸಿಸ್ಟಮ್ ಅಳವಡಿಸಿಕೊಳ್ಳಲು ಗ್ರಾಹಕರು ತಮ್ಮ ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಮನೆಯ ಛಾವಣಿಯ ಫೋಟೋವನ್ನ ವಾಟ್ಸಾಪ್ ಮೂಲಕ ಹಂಚಿಕೊಳ್ಳಬಹುದು. ನಂತರ ಸಂಸ್ಥೆಯ ತಜ್ಞರು ಉಚಿತ ಸೈಟ್ ವಿಸಿಟ್ ನಡೆಸಿ ಸ್ಥಳ ಪರಿಶೀಲನೆ ಮಾಡಿ ಕೊಟೇಶನ್ ನೀಡುತ್ತಾರೆ.

Reported By Puttaraj K Alur Written By Puttaraj K Alur
Published: Sep 17, 2026, 04:14 PM IST | Updated: Sep 17, 2026, 04:36 PM IST
Image Credit: PM Surya Ghar Yojana
Join

PM Surya Ghar Yojana: ಪ್ರತಿ ತಿಂಗಳು ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಪಾವತಿಸುವ ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಬಿಲ್ ಕಡಿಮೆ ಮಾಡಿಕೊಳ್ಳುವ ಅವಕಾಶವಿದೆ. ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ (PM Surya Ghar Muft Bijli Yojana) ಅಡಿಯಲ್ಲಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವವರಿಗೆ ಕೇಂದ್ರ ಹಣಕಾಸು ನೆರವು (CFA) ನೀಡಲಾಗುತ್ತದೆ. ಈ ಯೋಜನೆಯಡಿ 6 kW ಸಾಮರ್ಥ್ಯದ ವ್ಯವಸ್ಥೆಗೆ ಗರಿಷ್ಠ ₹78,000 ವರೆಗೆ ಸಬ್ಸಿಡಿ ಲಭ್ಯವಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ‘ನಮ್ಮ ಸೋಲಾರ್’ (Namma Solaar) ಸಂಸ್ಥೆಯ ಮೂಲಕ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳು, ಸಬ್ಸಿಡಿ ಹಾಗೂ ವಿವಿಧ ಸಿಸ್ಟಮ್‌ಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಸಬ್ಸಿಡಿ ಎಷ್ಟು ಸಿಗುತ್ತದೆ?

ಪಿಎಂ ಸೂರ್ಯ ಘರ್ ಯೋಜನೆಯು ರಾಜ್ಯ ಸರ್ಕಾರದ ಯೋಜನೆಯಲ್ಲ. ಇದು ನೇರವಾಗಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಯೋಜನೆಯಾಗಿದೆ. ಈ ಯೋಜನೆಯು ಮಾರ್ಚ್ 31, 2027ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ. ಅಳವಡಿಸುವ ಸೌರ ವಿದ್ಯುತ್ ಸಾಮರ್ಥ್ಯದ ಆಧಾರದ ಮೇಲೆ ಸಬ್ಸಿಡಿ ಮೊತ್ತ ನಿರ್ಧಾರವಾಗುತ್ತದೆ. 1 kW ಸಾಮರ್ಥ್ಯದ ಸೋಲಾರ್ ವ್ಯವಸ್ಥೆಗೆ ₹30,000, 2 kW ವ್ಯವಸ್ಥೆಗೆ ₹60,000 ಹಾಗೂ 3 kW ದಿಂದ 10 kW ವರೆಗೆ ಸಾಮರ್ಥ್ಯದ ವ್ಯವಸ್ಥೆಗಳಿಗೆ ಗರಿಷ್ಠ ₹78,000 ಸಬ್ಸಿಡಿ ದೊರೆಯುತ್ತದೆ. ಈ ಮೊತ್ತವು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ವಸತಿ ಮನೆಗಳಿಗೆ ಮಾತ್ರ ಈ ಸಬ್ಸಿಡಿ ಅನ್ವಯಿಸಲಿದ್ದು, ಕಮರ್ಷಿಯಲ್ ಅಥವಾ ಕೈಗಾರಿಕಾ ಬಳಕೆಗೆ ಇದು ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ.

ಆನ್-ಗ್ರಿಡ್ ಅಥವಾ ಹೈಬ್ರಿಡ್ ಸಿಸ್ಟಮ್?

ಸೋಲಾರ್ ವ್ಯವಸ್ಥೆ ಅಳವಡಿಸುವಾಗ ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆನ್-ಗ್ರಿಡ್ ಅಥವಾ ಹೈಬ್ರಿಡ್ ಸಿಸ್ಟಮ್ ಆಯ್ಕೆ ಮಾಡಿಕೊಳ್ಳಬಹುದು. ಆನ್-ಗ್ರಿಡ್ ಸಿಸ್ಟಮ್‌ನಲ್ಲಿ ಬ್ಯಾಟರಿ ಇರುವುದಿಲ್ಲ. ಬೆಸ್ಕಾಂ ವಿದ್ಯುತ್ ಪೂರೈಕೆ ಇರುವಾಗ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ. ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನ ನೆಟ್-ಮೀಟರಿಂಗ್ ಮೂಲಕ ಸರ್ಕಾರಕ್ಕೆ ರವಾನಿಸಬಹುದು. ಕಡಿಮೆ ವಿದ್ಯುತ್ ಕಡಿತ ಇರುವ ನಗರ ಪ್ರದೇಶಗಳಿಗೆ ಈ ವ್ಯವಸ್ಥೆ ಸೂಕ್ತವಾಗಿದೆ.

ಹೈಬ್ರಿಡ್ ಸಿಸ್ಟಮ್‌ನಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಇರುತ್ತದೆ. ವಿದ್ಯುತ್ ಕಡಿತಗೊಂಡಾಗಲೂ ಮನೆಯ ಉಪಕರಣಗಳಿಗೆ ವಿದ್ಯುತ್ ಪೂರೈಸಲು ಇದು ಸಹಾಯ ಮಾಡುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನ ಸರ್ಕಾರಕ್ಕೂ ರವಾನಿಸಬಹುದಾಗಿದೆ. ಪದೇಪದೇ ವಿದ್ಯುತ್ ಕಡಿತವಾಗುವ ಪ್ರದೇಶಗಳು ಹಾಗೂ ಲಿಫ್ಟ್, ಎಸಿ ಮುಂತಾದ ಹೆವಿ ಲೋಡ್ ಹೊಂದಿರುವ ಮನೆಗಳಿಗೆ ಹೈಬ್ರಿಡ್ ವ್ಯವಸ್ಥೆ ಉಪಯುಕ್ತವಾಗಿದೆ.

ಲಿಥಿಯಂ-ಐಯಾನ್ ಬ್ಯಾಟರಿಗಳ ಸೌಲಭ್ಯ

‘ನಮ್ಮ ಸೋಲಾರ್’ ಸಂಸ್ಥೆಯು ಲಿಥಿಯಂ LFP ಬ್ಯಾಟರಿಗಳನ್ನ ಒದಗಿಸುತ್ತದೆ ಎಂದು ತಿಳಿಸಲಾಗಿದೆ. ಹಳೆಯ ಲೆಡ್-ಆಸಿಡ್ ಬ್ಯಾಟರಿಗಳಿಗೆ ಹೋಲಿಸಿದರೆ ಇವುಗಳಿಗೆ ನಿರ್ವಹಣೆ ಅಗತ್ಯ ಕಡಿಮೆ ಅಥವಾ ಶೂನ್ಯವಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ. ಬ್ಯಾಟರಿ ಮತ್ತು ಇನ್ವರ್ಟರ್‌ಗಳ ಮೇಲೆ 10 ವರ್ಷಗಳ ವಾರಂಟಿ ಹಾಗೂ ಸೋಲಾರ್ ಪ್ಯಾನಲ್‌ಗಳಾದ Topcon Panels ಮೇಲೆ 25ರಿಂದ 30 ವರ್ಷಗಳ ಪರ್ಫಾರ್ಮೆನ್ಸ್ ವಾರಂಟಿ ಲಭ್ಯವಿದೆ ಎಂದು ಹೇಳಲಾಗಿದೆ. ಕಡಿಮೆ ಜಾಗದಲ್ಲಿ ಹೆಚ್ಚು ವಿದ್ಯುತ್ ಶೇಖರಣೆ ಮಾಡುವ ಸಾಮರ್ಥ್ಯವೂ ಈ ಬ್ಯಾಟರಿಗಳಲ್ಲಿದೆ.

ಹೂಡಿಕೆ ಮತ್ತು ಉಳಿತಾಯದ ಅಂದಾಜು

ಅಂದರೆ ಕೇವಲ 3.5 ರಿಂದ 4 ವರ್ಷಗಳಲ್ಲಿ ನಿಮ್ಮ ಹೂಡಿಕೆ ವಾಪಸ್ ಬರುತ್ತದೆ (Return on Investment). ನಂತರದ 20+ ವರ್ಷಗಳ ಕಾಲ ವಿದ್ಯುತ್ ಸಂಪೂರ್ಣ ಉಚಿತವಾಗಿ ಬಳಸಬಹುದು.

ತಿಂಗಳಿಗೆ ₹2,500ರಿಂದ ₹3,000ವರೆಗೆ ವಿದ್ಯುತ್ ಬಿಲ್ ಬರುತ್ತಿರುವ ಮನೆಗಳಿಗೆ 3 kW ಸೋಲಾರ್ ಸಿಸ್ಟಮ್ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಇಂತಹ ವ್ಯವಸ್ಥೆಯ ಒಟ್ಟು ವೆಚ್ಚ ಸುಮಾರು ₹1.90 ಲಕ್ಷದಿಂದ ₹2 ಲಕ್ಷದವರೆಗೆ ಇರಬಹುದು. ಇದರಲ್ಲಿ ₹78,000 ಸಬ್ಸಿಡಿ ವಾಪಸಾದ ಬಳಿಕ ನಿವ್ವಳ ಹೂಡಿಕೆ ಸುಮಾರು ₹1.20 ಲಕ್ಷದ ಆಸುಪಾಸಿನಲ್ಲಿ ಉಳಿಯುತ್ತದೆ. ವರ್ಷಕ್ಕೆ ಸುಮಾರು ₹36,000 ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದ್ದು, 3.5ರಿಂದ 4 ವರ್ಷಗಳಲ್ಲಿ ಹೂಡಿಕೆ ಮೊತ್ತವನ್ನ ವಾಪಸ್ ಪಡೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ನಂತರದ 20ಕ್ಕೂ ಹೆಚ್ಚು ವರ್ಷಗಳ ಕಾಲ ವಿದ್ಯುತ್ ವೆಚ್ಚದಲ್ಲಿ ಹೆಚ್ಚಿನ ಉಳಿತಾಯ ಪಡೆಯಬಹುದು ಎಂದು ವಿವರಿಸಲಾಗಿದೆ.

ಯಾರಿಗೆ ಉಪಯುಕ್ತ?

ಸ್ವಂತ ಮನೆ ಹೊಂದಿರುವವರು, ವಿಶೇಷವಾಗಿ ಎಲೆಕ್ಟ್ರಿಕ್ ಕಾರು ಹೊಂದಿರುವವರು ಹಗಲಿನಲ್ಲಿ ವಾಹನ ಚಾರ್ಜ್ ಮಾಡಲು ಈ ವ್ಯವಸ್ಥೆಯನ್ನ ಬಳಸಿಕೊಳ್ಳಬಹುದು. ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವ ಪಿಜಿ ಮಾಲೀಕರಿಗೂ ಇದು ಉಪಯುಕ್ತವಾಗಬಹುದು. ಗಾರ್ಮೆಂಟ್ಸ್, ಕೋಲ್ಡ್ ಸ್ಟೋರೇಜ್, ಆಸ್ಪತ್ರೆಗಳು ಸೇರಿದಂತೆ ಕಮರ್ಷಿಯಲ್ ಮತ್ತು ಕೈಗಾರಿಕಾ ಬಳಕೆದಾರರು 100 kWರಿಂದ 125 kWವರೆಗೆ ಹೈಬ್ರಿಡ್ ಸಿಸ್ಟಮ್ ಅಳವಡಿಸಿಕೊಂಡು ಡೀಸೆಲ್ ಜನರೇಟರ್ ವೆಚ್ಚವನ್ನ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಅಳವಡಿಕೆ ಪ್ರಕ್ರಿಯೆ ಹೇಗೆ?

‘ನಮ್ಮ ಸೋಲಾರ್’ ಮೂಲಕ ಸಿಸ್ಟಮ್ ಅಳವಡಿಸಿಕೊಳ್ಳಲು ಗ್ರಾಹಕರು ತಮ್ಮ ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಮನೆಯ ಛಾವಣಿಯ ಫೋಟೋವನ್ನ ವಾಟ್ಸಾಪ್ ಮೂಲಕ ಹಂಚಿಕೊಳ್ಳಬಹುದು. ನಂತರ ಸಂಸ್ಥೆಯ ತಜ್ಞರು ಉಚಿತ ಸೈಟ್ ವಿಸಿಟ್ ನಡೆಸಿ ಸ್ಥಳ ಪರಿಶೀಲನೆ ಮಾಡಿ ಕೊಟೇಶನ್ ನೀಡುತ್ತಾರೆ. ಬೆಸ್ಕಾಂ ಅನುಮೋದನೆಯಿಂದ ಹಿಡಿದು ಸಬ್ಸಿಡಿ ಅರ್ಜಿ ಸಲ್ಲಿಕೆಯವರೆಗಿನ ಪೇಪರ್ ವರ್ಕ್ ಅನ್ನ ಸಂಸ್ಥೆಯೇ ನಿರ್ವಹಿಸುತ್ತದೆ ಎಂದು ತಿಳಿಸಲಾಗಿದೆ. ಸೋಲಾರ್ ಅಳವಡಿಕೆ ಪ್ರಕ್ರಿಯೆ ಕೇವಲ ಎರಡು ದಿನಗಳಲ್ಲಿ ಪೂರ್ಣಗೊಳ್ಳಬಹುದು. ವ್ಯವಸ್ಥೆ ಅಳವಡಿಕೆಯಾದ ಬಳಿಕ 10ರಿಂದ 15 ದಿನಗಳ ಒಳಗೆ ₹78,000 ಸಬ್ಸಿಡಿ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ವಿವರಿಸಲಾಗಿದೆ.

ಮನೆಯ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡು ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಪಿಎಂ ಸೂರ್ಯ ಘರ್ ಯೋಜನೆ ಒಂದು ಅವಕಾಶವಾಗಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಸಿಸ್ಟಮ್ ಆಯ್ಕೆ ಮಾಡಿಕೊಳ್ಳಬಹುದು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES