• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಮದುವೆ ಸೀಸನ್‌ಗೂ ಮುನ್ನ ಬಂಗಾರ ಪ್ರಿಯರಿಗೆ ಬಿಗ್‌ ರಿಲೀಫ್! ಮೂರೇ ದಿನಕ್ಕೆ ಪಾತಾಳಕ್ಕಿಳಿದ ದರ

ಮದುವೆ ಸೀಸನ್‌ಗೂ ಮುನ್ನ ಬಂಗಾರ ಪ್ರಿಯರಿಗೆ ಬಿಗ್‌ ರಿಲೀಫ್! ಮೂರೇ ದಿನಕ್ಕೆ ಪಾತಾಳಕ್ಕಿಳಿದ ದರ

ಮದುವೆ ಸೀಸನ್‌ನಲ್ಲಿ ಚಿನ್ನಾಭರಣ ಖರೀದಿಸಲು ಪ್ಲ್ಯಾನ್ ಮಾಡ್ತಿರೋ ಜನಸಾಮಾನ್ಯರಿಗೆ ಕೊನೆಗೂ ಒಂದು ಭರ್ಜರಿ ರಿಲೀಫ್ ಸಿಕ್ಕಿದೆ.. ಸತತ ಮೂರನೇ ದಿನವೂ ಹಳದಿ ಲೋಹ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಗಿದೆ.. ಕಳೆದ ಮೂರು ದಿನಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬರೋಬ್ಬರಿ 3 ಸಾವಿರ ರೂಪಾಯಿಯಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ದರ ಕೂಡ ಕೆಜಿಗೆ ಸುಮಾರು 20 ಸಾವಿರ ರೂಪಾಯಿವರೆಗೆ ಕುಸಿತ ಕಂಡಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Nov 13, 2026, 19:37 IST|Updated: Nov 13, 2026, 19:38 IST
joinshare
ಮದುವೆ ಸೀಸನ್‌ಗೂ ಮುನ್ನ ಬಂಗಾರ ಪ್ರಿಯರಿಗೆ ಬಿಗ್‌ ರಿಲೀಫ್! ಮೂರೇ ದಿನಕ್ಕೆ ಪಾತಾಳಕ್ಕಿಳಿದ ದರ
Image Credit: Gold price

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ನವೆಂಬರ್ 13ರ ಇಂದಿನ ಮಾರುಕಟ್ಟೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ರೇಟ್ ದಿಢೀರ್ ಕುಸಿಯಲು ಕಾರಣವೇನು?.. ಅಮೆರಿಕಾದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಡಿಸೆಂಬರ್‌ನಲ್ಲಿ ಬಡ್ಡಿದರ ಏರಿಕೆಯಾಗುವ ಭೀತಿಯಿಂದ ಜಾಗತಿಕ ಹೂಡಿಕೆದಾರರು ಚಿನ್ನ ಮಾರಾಟಕ್ಕೆ ಮುಗಿಬಿದ್ದಿದ್ದೇಕೆ?.. ಬೆಂಗಳೂರಿನಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ನಿಖರ ರೇಟ್ ಎಷ್ಟು?.. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಯುತ್ತಾ ಅಥವಾ ಮತ್ತೆ ಗಗನಕ್ಕೇರುತ್ತಾ?.. ಈ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ..

ಚಿನ್ನಾಭರಣ ಖರೀದಿಗೆ ಕಾಯುತ್ತಿದ್ದ ಗ್ರಾಹಕರಿಗೆ ನವೆಂಬರ್ 13ರ ಶುಕ್ರವಾರ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಅಂಕಿ-ಅಂಶಗಳ ಪ್ರಕಾರ, ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದ್ದು, ಬರೋಬ್ಬರಿ 3 ಸಾವಿರ ರೂಪಾಯಿವರೆಗೆ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯೂ ತೀವ್ರ ಕುಸಿತ ಕಂಡಿದ್ದು, ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತಣ್ಣಗಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಗಮನಿಸುವುದಾದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ 10 ಗ್ರಾಂ ಬೆಲೆ ₹1,39,800 ಇದೆ. ಇನ್ನು ಸಾಮಾನ್ಯವಾಗಿ ಮಹಿಳೆಯರು ಆಭರಣ ತಯಾರಿಸಲು ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,28,150 ರಷ್ಟಿದೆ. 18 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,04,850 ಕ್ಕೆ ಇಳಿದಿದೆ. ಇತ್ತ ಬೆಳ್ಳಿ ಬೆಲೆಯೂ ಕೆಜಿಗೆ ₹2 ಲಕ್ಷದ ಆಸುಪಾಸಿನಲ್ಲಿದೆ. ಆದಾಗ್ಯೂ, ಮೇಕಿಂಗ್ ಚಾರ್ಜ್ ಮತ್ತು ಜಿಎಸ್‌ಟಿ ಆಧಾರದ ಮೇಲೆ ಬೇರೆ ಬೇರೆ ಜ್ಯುವೆಲರಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಲಿವೆ.

ಚಿನ್ನದ ಬೆಲೆ ದಿಢೀರ್ ಕುಸಿಯಲು ಪ್ರಮುಖ ಕಾರಣ ಅಮೆರಿಕದ ಆರ್ಥಿಕ ನೀತಿಗಳು. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ. 0.25 ರಷ್ಟು ಹೆಚ್ಚಿಸುವ ಶೇ. 85 ರಷ್ಟು ಸಾಧ್ಯತೆಯಿದೆ. ಸಾಮಾನ್ಯವಾಗಿ ಬಡ್ಡಿದರ ಏರಿಕೆಯಾಗುವ ಸೂಚನೆ ಸಿಕ್ಕರೆ ಹೂಡಿಕೆದಾರರು ಬಡ್ಡಿ ನೀಡದ ಚಿನ್ನದಿಂದ ಹಣವನ್ನು ಹಿಂಪಡೆದು ಬಾಂಡ್‌ಗಳು ಮತ್ತು ಡಾಲರ್ ಮೇಲೆ ಹೂಡಿಕೆ ಮಾಡುತ್ತಾರೆ. ಡಾಲರ್ ಸೂಚ್ಯಂಕ 103ಕ್ಕೆ ಏರಿದ್ದರಿಂದ ಜಾಗತಿಕವಾಗಿ ಚಿನ್ನದ ಮಾರಾಟ ಹೆಚ್ಚಾಗಿ ಬೆಲೆಗಳು ಕುಸಿದಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಲೆ ಕುಸಿದಿದ್ದರೂ, ಶುಕ್ರವಾರ ಮುಂಜಾನೆ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಅಲ್ಪ ಚೇತರಿಕೆ ಕಂಡಿವೆ. ಎಂಸಿಎಕ್ಸ್‌ನಲ್ಲಿ ಚಿನ್ನ ಶೇ. 0.87 ರಷ್ಟು ಚೇತರಿಸಿಕೊಂಡು ₹1.37 ಲಕ್ಷದಲ್ಲಿ ವಹಿವಾಟು ನಡೆಸುತ್ತಿದೆ. ಅತ್ತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಔನ್ಸ್‌ಗೆ 3,923 ಡಾಲರ್‌ಗೆ ಏರಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ ಉದ್ವಿಗ್ನತೆಯಿಂದ ಕಚ್ಚಾತೈಲ ಬೆಲೆ ಏರುತ್ತಿರುವುದರಿಂದ ಜಾಗತಿಕ ಹಣದುಬ್ಬರ ಹೆಚ್ಚಾಗಲಿದ್ದು, ಇದು ಮತ್ತೆ ಚಿನ್ನದ ಬೇಡಿಕೆಯನ್ನು ಹೆಚ್ಚಿಸುವ ಅಪಾಯವೂ ಇದೆ.

ಗ್ರಾಹಕರು ಮತ್ತು ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಕಿವಿಮಾತು ಹೇಳಿದ್ದಾರೆ. ಬೆಲೆ ಇಳಿಕೆಯಾಗಿದೆ ಎಂದು ಕಣ್ಣುಮುಚ್ಚಿ ಖರೀದಿಸುವ ಬದಲು, ಹಾಲ್‌ಮಾರ್ಕ್ ಮತ್ತು ಶುದ್ಧತೆಯನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. 24 ಕ್ಯಾರೆಟ್ ಬಾರ್‌ಗಳು, 22 ಕ್ಯಾರೆಟ್ ಆಭರಣಗಳು ಮತ್ತು 18 ಕ್ಯಾರೆಟ್ ನಡುವಿನ ದರ ವ್ಯತ್ಯಾಸವನ್ನು ಗಮನಿಸಬೇಕು. ಜಾಗತಿಕ ಅನಿಶ್ಚಿತತೆಯಿಂದಾಗಿ ಮಾರುಕಟ್ಟೆ ಅತ್ಯಂತ ಅಸ್ಥಿರವಾಗಿದ್ದು, ಒಟ್ಟಿಗೆ ಭಾರಿ ಬಂಡವಾಳ ಹೂಡುವ ಬದಲು ಹಂತ-ಹಂತವಾಗಿ ಖರೀದಿಸುವುದು ಜಾಣತನ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ, ಲಕ್ಷದ ಗಡಿ ದಾಟಿ ಜನಸಾಮಾನ್ಯರ ಕೈಗೆಟುಕದಂತೆ ಮುಗಿಲೆತ್ತರಕ್ಕೆ ಜಿಗಿದಿದ್ದ ಬಂಗಾರದ ಬೆಲೆಯಲ್ಲಿ ಸತತ 3 ದಿನಗಳಿಂದ ಕಾಣಿಸಿಕೊಂಡಿರುವ ಈ ₹3,000 ಇಳಿಕೆ ಆಭರಣ ಪ್ರಿಯರಿಗೆ ದೊಡ್ಡ ಸಮಾಧಾನ ತಂದಿದೆ.. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಂಕಿ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರದ ಆಟ ಮುಂದಿನ ದಿನಗಳಲ್ಲಿ ಚಿನ್ನವನ್ನು ಎತ್ತ ಕೊಂಡೊಯ್ಯಲಿದೆ ಎಂಬುದು ಇನ್ನೂ ಕುತೂಹಲಕಾರಿಯಾಗಿದೆ.. ಡಿಸೆಂಬರ್‌ನಲ್ಲಿ ಅಮೆರಿಕ ಬಡ್ಡಿದರ ಹೆಚ್ಚಿಸಿದರೆ ಚಿನ್ನದ ಬೆಲೆ ಮತ್ತಷ್ಟು ಕುಸಿಯಲಿದೆಯಾ?.. ಅಥವಾ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಹಳದಿ ಲೋಹ ಮತ್ತೆ ದಾಖಲೆ ಬರೆಯಲಿದೆಯಾ?.. ಹೂಡಿಕೆದಾರರು ಮತ್ತು ಗ್ರಾಹಕರು ಮಾರುಕಟ್ಟೆಯ ಈ ಟ್ರೆಂಡ್ ಮೇಲೆ ಕಣ್ಣಿಡಲೇಬೇಕಿದೆ.

Add Zee News as a Preferred Source
TAGS:
Banking