SOCIAL MEDIA

Newsletter

PARTNER SITES
Select Language Select State

ದೀಪಾವಳಿಗೂ ಮೊದಲೇ ಡಿಎ/ಡಿಆರ್ ಹೆಚ್ಚಳ! ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಗುವ ಹಣವೆಷ್ಟು?

8ನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ ಎಂದು ಕಾಯುತ್ತಿರುವ ಸರ್ಕಾರಿ ನೌಕರರು, ಪಿಂಚಣಿದಾರರು ದೀಪಾವಳಿಗೂ ಮೊದಲೇ ಈ ವರ್ಷದ ಎರಡನೇ ಡಿಎ, ಡಿಆರ್‌ ಬಿಡುಗಡೆಗಾಗಿಯೂ ಕಾತುರರಾಗಿದ್ದಾರೆ.

Written By Yashaswini V
Published: Oct 23, 2026, 10:53 AM IST | Updated: Oct 23, 2026, 10:55 AM IST
Join

ಬಹುನಿರೀಕ್ಷಿತ ಎಂಟನೇ ವೇತನ ಆಯೋಗ ಯಾವಾಗ ಜಾರಿ ಆಗಲಿದೆ ಎಂದು ಕುತೂಹಲದಿಂದ ಕಾಯುತ್ತಿರುವ ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ವರ್ಷದ ಜುಲೈ 2026ರಿಂದ ನೀಡಬೇಕಿರುವ ವರ್ಷದ ಎರಡನೇ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ಪರಿಷ್ಕರಣೆಗಾಗಿ ಕಾತುರರಾಗಿದ್ದಾರೆ. ನವೆಂಬರ್ 8ರಂದು ದೀಪಾವಳಿ ಹಬ್ಬ ಇರುವುದರಿಂದ ಹಬ್ಬಕ್ಕೂ ಮೊದಲೇ ಡಿಎ ಹಾಗೂ ಡಿಆರ್‌ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ವೇಳೆ ಪ್ರಸ್ತುತ 60% ಇರುವ ತುಟ್ಟಿಭತ್ಯೆಯನ್ನು 63% ಕ್ಕೆ ಏರಿಸಬಹುದು  ಎಂದು ನಿರೀಕ್ಷಿಸಲಾಗಿದೆ.

ತುಟ್ಟಿಭತ್ಯೆ ಅನ್ನು ಹೇಗೆ ಲೆಕ್ಕಾಹಾಕಲಾಗುತ್ತದೆ?
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಮೂಲ ವೇತನದ ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.

ಡಿಎ ಪರಿಷ್ಕರಣೆ:
ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ ಚಲನೆಗಳನ್ನು ಆಧರಿಸಿ ಬಳಸಿಕೊಂಡು ಕೇಂದ್ರ ಸರ್ಕಾರವು ಸಾಮಾನ್ಯವಾಗಿ ವಾರ್ಷಿಕವಾಗಿ ಎರಡು ಬಾರಿ ಡಿಎ ಪರಿಷ್ಕರಿಸುತ್ತದೆ, ಇದು ಮೊದಲಿಗೆ ಜನವರಿ 1 ಮತ್ತು ವರ್ಷದ ದ್ವಿತೀಯಾ ಡಿಎ ಜುಲೈ 1 ರಿಂದ ಜಾರಿಗೆ ಬರುತ್ತದೆ.

3% ತುಟ್ಟಿಭತ್ಯೆ ಹೆಚ್ಚಳ!
ಜುಲೈ 2026ರಿಂದ ನೀಡಬೇಕಿರುವ ತುಟ್ಟಿಭತ್ಯೆಯನ್ನು ಶೇ. 3ರಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ. ಇದರಿಂದ ಈ ಹಿಂದೆ ಇದ್ದ ಶೇ. 60 ರಷ್ಟು ಡಿಎ ಶೇ. 63ಕ್ಕೆ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ತುಟ್ಟಿಭತ್ಯೆ ಎಷ್ಟು ಹೆಚ್ಚಾಗಬಹುದು?
ನಿರೀಕ್ಷೆಯಂತೆ ಜುಲೈ 2026ರಿಂದ ಜಾರಿ ಆಗಬೇಕಿರುವ ತುಟ್ಟಿಭತ್ಯೆ ಶೇ. 3ರಷ್ಟು ಏರಿಕೆ ಆದರೆ,  ತಿಂಗಳಿಗೆ ₹18,000 ಮೂಲ ವೇತನ ಗಳಿಸುವ ನೌಕರರಿಗೆ ₹10,800 ರಿಂದ ₹11,340 ವರೆಗೆ ತುಟ್ಟಿಭತ್ಯೆ ಹೆಚ್ಚಾಗಬಹುದು. ಎಂದರೆ ಸರ್ಕಾರಿ ನೌಕರರು ಹೆಚ್ಚುವರಿಯಾಗಿ ಮಾಸಿಕ ₹540 ಅಥವಾ 12 ತಿಂಗಳುಗಳಲ್ಲಿ ₹6,480 ವರೆಗೆ ಡಿಎ ಹಣವನ್ನು ಪಡೆಯುತ್ತಾರೆ.

ಮೂಲ ವೇತನ ₹25,500 ಇದ್ದವರಿಗೆ ಸಿಗುವ ತುಟ್ಟಿಭತ್ಯೆ:
ಮಾಸಿಕ ₹25,500 ಮೂಲ ವೇತನ ಗಳಿಸುವ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ₹765 ಹೆಚ್ಚಾಗಿ, ವಾರ್ಷಿಕ ₹9,180 ಡಿಎ ಪಡೆಯುತ್ತಾರೆ.

ಮೂಲ ವೇತನ ₹35,400 ಗಳಿಸುವ ಉದ್ಯೋಗಿಗಳಿಗೆ ಸಿಗುವ ಡಿಎ:
ಮೂಲ ವೇತನ ₹35,400 ಹೆಚ್ಚಳ ಗಳಿಸುವ ನೌಕರರು ಮಾಸಿಕ ₹1,062 ಅಥವಾ ವರ್ಷಕ್ಕೆ ₹12,744 ವರೆಗೆ ತುಟ್ಟಿಭತ್ಯೆಯನ್ನು ಪಡೆಯುವ ನಿರೀಕ್ಷೆ ಇದೆ.

ಮೂಲ ವೇತನ ₹44,900 ಗಳಿಸುವ ನೌಕರರಿಗೆ ಡಿಎ?
ಮೂಲ ವೇತನ ₹44,900 ಗಳಿಸುವ ಉದ್ಯೋಗಿಗಳಿಗೆ ಹೆಚ್ಚುವರಿ ಡಿಎ ತಿಂಗಳಿಗೆ ₹1,347 ಮತ್ತು ವಾರ್ಷಿಕ ₹16,164 ಆಗಿರುತ್ತದೆ.

ಮೂಲ ವೇತನ ₹56,100 ಪಡೆಯುವ ಸರ್ಕಾರಿ ನೌಕರರು:
ಮಾಸಿಕ ₹56,100 ಮೂಲ ವೇತನ ಪಡೆಯುವ ನೌಕರರು ಪ್ರತಿ ತಿಂಗಳು ₹1,683 ಹೆಚ್ಚು ಪಡೆಯುತ್ತಾರೆ, ಇದು ಒಂದು ವರ್ಷದಲ್ಲಿ ₹20,196 ಆಗುತ್ತದೆ.

ಡಿಎ ಅರಿಯರ್ಸ್:
ಜುಲೈ 1 ರಿಂದ ಜಾರಿಗೆ ಬರುವ‌ ಡಿಎ ಪರಿಷ್ಕರಣೆಯು ವಾಡಿಕೆಯಂತೆ ಸರ್ಕಾರಿ ನೌಕರರಿಗೆ ಅರಿಯರ್ಸ್‌ ಮೊತ್ತವನ್ನು ಕೂಡ ನೀಡಲಿದೆ. ಇದು ₹18,000 ಮೂಲ ವೇತನ ಪಡೆಯುವ ಉದ್ಯೋಗಿಗೆ, ಹೆಚ್ಚಳವು ಜುಲೈನಿಂದ ಸೆಪ್ಟೆಂಬರ್ ವರೆಗೆ ಮಾತ್ರ ₹1,620 ಆಗಿರುತ್ತದೆ.

ಪಿಂಚಣಿದಾರರಿಗೆ ಡಿಆರ್:‌
ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ನೀಡುವಂತೆ, ಪಿಂಚಣಿದಾರರಿಗೆ ತುಟ್ಟಿ ಪರಿಹಾರ ಎಂದರೆ ಡಿಆರ್‌ ಅನ್ನು ನೀಡಲಾಗುತ್ತದೆ.  

ವಾಸ್ತವವಾಗಿ, ಈಗಾಗಲೇ ರೈಲ್ವೆ ನೌಕರರಿಗೆ ದಸರಾ ಬೋನಸ್‌ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ಇನ್ನುಳಿದ ಇಲಾಖೆಗಳ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ಬೋನಸ್‌ ಘೋಷಿಸಿಲ್ಲ. ಮತ್ತೊಂದೆಡೆ, ಡಿಎ ಹಾಗೂ ಡಿಆರ್‌ ಪರಿಷ್ಕರಣೆ ಬಗ್ಗೆಯೂ ಕೇಂದ್ರ ಸರ್ಕಾರವು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಅಕ್ಟೋಬರ್ 16 ರಂದು ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟವು ಹಬ್ಬದ ಬೋನಸ್‌ಗಳ ಜೊತೆಗೆ ಜುಲೈ 1 ರಿಂದ ಬರಬೇಕಾದ ಡಿಎ ಮತ್ತು ಡಿಆರ್ ಕಂತುಗಳನ್ನು ತಕ್ಷಣ ಘೋಷಿಸುವಂತೆಯೂ ಬೇಡಿಕೆ ಇಟ್ಟಿದ್ದವು ಎಂಬುದು ಗಮನಾರ್ಹವಾಗಿದೆ. ಇದೀಗ ದೀಪಾವಳಿಗೂ ಮೊದಲೇ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹಾಗೂ ಪಿಂಚಣಿದಾರರಿಗೆ ಡಿಆರ್‌ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES