Cigarette price hike: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗ್ತಿದೆ..ಇದರ ನಡುವೆ ಸಿಗರೇಟ್ ಸೇದುವವರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೇಶದ ಪ್ರಮುಖ ಎಫ್‌ಎಂಸಿಜಿ ಕಂಪನಿ ಐಟಿಸಿ, ತನ್ನ ಜನಪ್ರಿಯ ಗೋಲ್ಡ್ ಫ್ಲೇಕ್ ಸಿಗರೇಟ್ ಬೆಲೆಯನ್ನು ಹೆಚ್ಚಿಸಿದೆ. ಈ ಹಿಂದೆ 125 ರೂಪಾಯಿಗೆ ಸಿಗುತ್ತಿದ್ದ ಗೋಲ್ಡ್ ಫ್ಲೇಕ್ ಪ್ಯಾಕ್‌ಗೆ ಈಗ 135 ರೂಪಾಯಿ ಕೊಡಬೇಕು. ಅಂದ್ರೆ ಪ್ರತಿ ಪ್ಯಾಕ್‌ಗೆ 10 ರೂಪಾಯಿ ಹೆಚ್ಚಳವಾಗಿದೆ. ತೆರಿಗೆ ಮತ್ತು ಅಬಕಾರಿ ಸುಂಕ ಹೆಚ್ಚಳದ ಬೆನ್ನಲ್ಲೇ ಐಟಿಸಿ ಈ ನಿರ್ಧಾರ ಕೈಗೊಂಡಿದೆ.
ದಿನಕ್ಕೆ ಒಂದು ಪ್ಯಾಕ್ ಸೇದುವವರಿಗೆ ತಿಂಗಳಿಗೆ 300 ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ದಿನಕ್ಕೆ ಎರಡು ಪ್ಯಾಕ್ ಸೇದುವವರಿಗಂತೂ ತಿಂಗಳಿಗೆ 600 ರೂಪಾಯಿ ಹೆಚ್ಚುವರಿ ಖರ್ಚಾಗಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಈ ನಿರ್ಧಾರ ಮತ್ತೊಂದು ಹೊಡೆತ ನೀಡಿದೆ. ಮುಂದಿನ ದಿನಗಳಲ್ಲಿ ಇತರ ಸಿಗರೇಟ್ ಬ್ರಾಂಡ್‌ಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.
ಗೋಲ್ಡ್ ಫ್ಲೇಕ್ ಸಿಗರೇಟ್ ಬೆಲೆ ಏರಿಕೆ.. ಗ್ರಾಹಕರಿಗೆ ₹10 ಶಾಕ್!
ಸಿಗರೇಟ್ ಸೇದುವ ಗ್ರಾಹಕರಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಜನಪ್ರಿಯ ಗೋಲ್ಡ್ ಫ್ಲೇಕ್ ಸಿಗರೇಟ್ ಪ್ಯಾಕ್ ಬೆಲೆಯನ್ನು ಐಟಿಸಿ ಹೆಚ್ಚಳ ಮಾಡಿದೆ.ಗೋಲ್ಡ್ ಫ್ಲೇಕ್ ಆರ್‌ಎಸ್‌ಎಫ್‌ಟಿ 69 ಎಂಎಂ ಪ್ಯಾಕ್ ಬೆಲೆಯಲ್ಲಿ ಬರೋಬ್ಬರಿ 10 ರೂಪಾಯಿ ಏರಿಕೆಯಾಗಿದೆ.. ಈ ಹಿಂದೆ 125 ರೂಪಾಯಿ ಇದ್ದ ಪ್ಯಾಕ್ ಬೆಲೆ ಇದೀಗ 135 ರೂಪಾಯಿಗೆ ತಲುಪಿದೆ.. ಅಂದ್ರೆ ಒಂದೇ ಬಾರಿಗೆ ಶೇಕಡಾ 8ರಷ್ಟು ಬೆಲೆ ಹೆಚ್ಚಳ ಮಾಡಿದಂತಾಗಿದೆ..
ಈಗಾಗಲೇ ಹೊಸ ದರದ ಸಿಗರೇಟ್ ಪ್ಯಾಕ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.. 2026ರ ಫೆಬ್ರವರಿ 1ರಿಂದ ಜಾರಿಗೆ ಬಂದ ಹೊಸ ತೆರಿಗೆ ನೀತಿಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 40ರಷ್ಟು ಜಿಎಸ್‌ಟಿ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿದೆ.. ಇದರಿಂದ ಹೆಚ್ಚಾದ ತೆರಿಗೆ ಹೊರೆಯನ್ನು ಸರಿದೂಗಿಸಲು ಐಟಿಸಿ ಸಿಗರೇಟ್ ಬೆಲೆ ಪರಿಷ್ಕರಣೆ ಮಾಡಿದೆ..
ಗೋಲ್ಡ್ ಫ್ಲೇಕ್ ಸಿಗರೇಟ್ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
- ಐಟಿಸಿಯಿಂದ ಜನಪ್ರಿಯ ಸಿಗರೇಟ್ ಬ್ರಾಂಡ್ ದರ ಹೆಚ್ಚಳ
- ಗೋಲ್ಡ್ ಫ್ಲೇಕ್ ಆರ್‌ಎಸ್‌ಎಫ್‌ಟಿ 69 ಎಂಎಂ ಪ್ಯಾಕ್ ಬೆಲೆ ಏರಿಕೆ
- ಈ ಹಿಂದೆ ₹125 ಇದ್ದ ಪ್ಯಾಕ್‌ಗೆ ಈಗ ₹135 ದರ
- ಪ್ರತಿ ಪ್ಯಾಕ್‌ಗೆ ಬರೋಬ್ಬರಿ ₹10 ಹೆಚ್ಚಳ
- ಅಂದಾಜು ಶೇ.8ರಷ್ಟು ಬೆಲೆ ಏರಿಕೆ
- ಹೊಸ ದರದ ಪ್ಯಾಕ್‌ಗಳು ಮಾರುಕಟ್ಟೆಗೆ ಎಂಟ್ರಿ
- 2026ರ ಫೆಬ್ರವರಿ 1ರಿಂದ ಜಾರಿಗೆ ಬಂದ ಹೊಸ ತೆರಿಗೆ ನೀತಿಯ ಪರಿಣಾಮ
- ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಶೇ.40 ಜಿಎಸ್‌ಟಿ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕ
- ತೆರಿಗೆ ಹೊರೆ ಸರಿದೂಗಿಸಲು ಐಟಿಸಿಯಿಂದ ಬೆಲೆ ಪರಿಷ್ಕರಣೆ
ಒಟ್ಟಿನಲ್ಲಿ, ಹೊಸ ತೆರಿಗೆ ನೀತಿಯ ಪರಿಣಾಮ ಸಿಗರೇಟ್ ಪ್ರಿಯರ ಜೇಬಿಗೆ ಕತ್ತರಿ ಬಿದ್ದಿದ್ದು, ಗೋಲ್ಡ್ ಫ್ಲೇಕ್ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ..