• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /Canara Bank FD: 444 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ವಿಶೇಷ ಲಾಭ!

Canara Bank FD: 444 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ವಿಶೇಷ ಲಾಭ!

Canara Bank 444 Days FD: ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ ನಿಶ್ಚಿತ ಆದಾಯ ಪಡೆಯಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್‌ (FD) ಒಂದು ಜನಪ್ರಿಯ ಆಯ್ಕೆಯಾಗಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಗಳು ಗಮನ ಸೆಳೆಯುತ್ತವೆ. ಇದೀಗ ಕೆನರಾ ಬ್ಯಾಂಕ್‌ನ 444 ದಿನಗಳ ವಿಶೇಷ FD ಯೋಜನೆ ಹೂಡಿಕೆದಾರರ ಗಮನ ಸೆಳೆದಿದೆ. ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಹಾಗೂ 80 ವರ್ಷ ಮೇಲ್ಪಟ್ಟ ಅತಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಡ್ಡಿದರದ ಸೌಲಭ್ಯವಿದೆ.

Written ByPuttaraj K Alur
Published: Sep 24, 2026, 03:19 PM IST|Updated: Sep 24, 2026, 03:32 PM IST
joinshare
Canara Bank FD: 444 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ವಿಶೇಷ ಲಾಭ!
Image Credit: Canara Bank FD

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Canara Bank 444 Days FD: ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ ನಿಶ್ಚಿತ ಆದಾಯ ಪಡೆಯಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್‌ (FD) ಒಂದು ಜನಪ್ರಿಯ ಆಯ್ಕೆಯಾಗಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿದರ ನೀಡುವ ಯೋಜನೆಗಳು ಗಮನ ಸೆಳೆಯುತ್ತವೆ. ಇದೀಗ ಕೆನರಾ ಬ್ಯಾಂಕ್‌ನ 444 ದಿನಗಳ ವಿಶೇಷ FD ಯೋಜನೆ ಹೂಡಿಕೆದಾರರ ಗಮನ ಸೆಳೆದಿದೆ. ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಹಾಗೂ 80 ವರ್ಷ ಮೇಲ್ಪಟ್ಟ ಅತಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಡ್ಡಿದರದ ಸೌಲಭ್ಯವಿದೆ.

444 ದಿನಗಳ FD ಯೋಜನೆ ಎಂದರೇನು?

ಕೆನರಾ ಬ್ಯಾಂಕ್‌ನ 444 ದಿನಗಳ FD ಒಂದು ನಿಶ್ಚಿತ ಅವಧಿಯ ಠೇವಣಿ ಯೋಜನೆಯಾಗಿದೆ. ಗ್ರಾಹಕರು ನಿಗದಿತ ಮೊತ್ತವನ್ನ 444 ದಿನಗಳವರೆಗೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಅನ್ವಯಿಸುವ ಬಡ್ಡಿದರದ ಆಧಾರದ ಮೇಲೆ ಆದಾಯ ಪಡೆಯಬಹುದು. ಬ್ಯಾಂಕ್‌ನ ಅಧಿಕೃತ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಕನಿಷ್ಠ ₹25,000 ಠೇವಣಿ ಇಡಬಹುದು. ₹3 ಕೋಟಿಗಿಂತ ಕಡಿಮೆ ಮೊತ್ತದ ದೇಶೀಯ ಠೇವಣಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಠೇವಣಿಗಳಿಗೆ ಪ್ರತ್ಯೇಕ ನಿಯಮಗಳಿವೆ. ಈ ಯೋಜನೆಯಲ್ಲಿ ಬಡ್ಡಿಯನ್ನ ಮಾಸಿಕವಾಗಿ, ತ್ರೈಮಾಸಿಕವಾಗಿ ಅಥವಾ ಠೇವಣಿ ಅವಧಿ ಮುಗಿದ ನಂತರ ಪಡೆಯುವ ಆಯ್ಕೆಯಿದೆ. ಮಾಸಿಕ ಮತ್ತು ತ್ರೈಮಾಸಿಕ ಬಡ್ಡಿ ಪಡೆಯುವ ಸಂದರ್ಭದಲ್ಲಿ ಸರಳ ಬಡ್ಡಿದರ ಅನ್ವಯಿಸುತ್ತದೆ.  

ಸಾಮಾನ್ಯ ಗ್ರಾಹಕರಿಗೆ ಎಷ್ಟು ಬಡ್ಡಿ?

ಕೆನರಾ ಬ್ಯಾಂಕ್‌ನ ಅಧಿಕೃತ ಠೇವಣಿ ಬಡ್ಡಿದರ ಪಟ್ಟಿಯ ಪ್ರಕಾರ, 444 ದಿನಗಳ ಠೇವಣಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.45ರ ಬಡ್ಡಿದರ ಅನ್ವಯಿಸುತ್ತದೆ. ಠೇವಣಿಯ ಮೊತ್ತ ಮತ್ತು ಅನ್ವಯಿಸುವ ನಿಯಮಗಳ ಆಧಾರದ ಮೇಲೆ ಅಂತಿಮ ಆದಾಯ ಬದಲಾಗಬಹುದು. ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಬ್ಯಾಂಕ್‌ನ ಅಧಿಕೃತ ಯೋಜನೆಯ ಪ್ರಕಾರ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರ್ಹ ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿ ಸೌಲಭ್ಯವಿದೆ.

80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅತಿ ಹಿರಿಯ ನಾಗರಿಕರಿಗೆ ಶೇ.0.60ರಷ್ಟು ಹೆಚ್ಚುವರಿ ಬಡ್ಡಿ ಸೌಲಭ್ಯ ನೀಡಲಾಗುತ್ತದೆ. ಆದ್ದರಿಂದ 444 ದಿನಗಳ ಠೇವಣಿಯಲ್ಲಿ ಹಿರಿಯ ನಾಗರಿಕರಿಗೆ ಶೇ.6.95ರಷ್ಟು ಹಾಗೂ ಅತಿ ಹಿರಿಯ ನಾಗರಿಕರಿಗೆ ಶೇ.7.05ರಷ್ಟು ವಾರ್ಷಿಕ ಬಡ್ಡಿದರ ಲಭ್ಯವಿದೆ. ಈ ದರಗಳು ಬ್ಯಾಂಕ್‌ನ ಅಧಿಕೃತ ಬಡ್ಡಿದರ ಪಟ್ಟಿಯಲ್ಲಿರುವ ದರಗಳಾಗಿದ್ದು, ಠೇವಣಿ ತೆರೆಯುವ ದಿನದ ಅನ್ವಯಿಸುವ ದರವನ್ನ ಪರಿಶೀಲಿಸುವುದು ಅಗತ್ಯ.  

₹1 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗಬಹುದು?

444 ದಿನಗಳ ಅವಧಿಗೆ ₹1 ಲಕ್ಷ ಠೇವಣಿ ಇಟ್ಟರೆ, ಬಡ್ಡಿದರದ ಆಧಾರದ ಮೇಲೆ ಸಿಗಬಹುದಾದ ಅಂದಾಜು ಆದಾಯ ಹೀಗಿದೆ:

ಗ್ರಾಹಕರ ವರ್ಗವಾರ್ಷಿಕ ಬಡ್ಡಿದರ444 ದಿನಗಳ ಅಂದಾಜು ಬಡ್ಡಿ
ಸಾಮಾನ್ಯ ಗ್ರಾಹಕರು6.45%   ₹7,830
ಹಿರಿಯ ನಾಗರಿಕರು 6.95% ₹8,436 
ಅತಿ ಹಿರಿಯ ನಾಗರಿಕರು7.05% ₹8,557 

ಈ ಲೆಕ್ಕಾಚಾರವು ಸರಳ ಬಡ್ಡಿಯ ಆಧಾರದ ಮೇಲೆ ಮಾಡಿದ ಅಂದಾಜಾಗಿದೆ. ಬ್ಯಾಂಕ್‌ನ ನಿಜವಾದ ಬಡ್ಡಿ ಲೆಕ್ಕಾಚಾರ, ಬಡ್ಡಿ ಪಾವತಿ ಆಯ್ಕೆ, ಚಕ್ರಬಡ್ಡಿ ಅನ್ವಯಿಸುವಿಕೆ ಮತ್ತು ತೆರಿಗೆ ಕಡಿತದಿಂದ ಅಂತಿಮ ಮೊತ್ತ ಬದಲಾಗಬಹುದು.

₹5 ಲಕ್ಷ ಮತ್ತು ₹10 ಲಕ್ಷ ಹೂಡಿಕೆಗೆ ಲೆಕ್ಕಾಚಾರ

ಹಿರಿಯ ನಾಗರಿಕರು ದೊಡ್ಡ ಮೊತ್ತವನ್ನ ಠೇವಣಿ ಇಡಲು ಬಯಸಿದರೆ, ಹೂಡಿಕೆ ಮೊತ್ತ ಹೆಚ್ಚಿದಂತೆ ಸಿಗುವ ಬಡ್ಡಿಯೂ ಹೆಚ್ಚಾಗುತ್ತದೆ. ಉದಾಹರಣೆಗೆ 444 ದಿನಗಳ ಅವಧಿಗೆ ಕೆಳಗಿನ ಮೊತ್ತಗಳನ್ನ ಹೂಡಿಕೆ ಮಾಡಿದರೆ ಸಿಗಬಹುದಾದ ಅಂದಾಜು ಬಡ್ಡಿ ಹೀಗಿರುತ್ತದೆ.

ಠೇವಣಿ ಮೊತ್ತಸಾಮಾನ್ಯ ಗ್ರಾಹಕರು (6.45%) ಹಿರಿಯ ನಾಗರಿಕರು (6.95%)
₹1 ಲಕ್ಷ ₹7,830 ₹8,436
₹5 ಲಕ್ಷ₹39,329 ₹42,181 
₹10 ಲಕ್ಷ ₹78,658 ₹84,362   

ಈ ಅಂಕಿಅಂಶಗಳು ಸರಳ ಬಡ್ಡಿ ಲೆಕ್ಕಾಚಾರದ ಅಂದಾಜುಗಳಾಗಿವೆ. ಇವುಗಳನ್ನ ಖಚಿತ ಮೆಚ್ಯೂರಿಟಿ ಮೊತ್ತ ಅಥವಾ ಬ್ಯಾಂಕ್ ನೀಡುವ ಅಧಿಕೃತ ರಿಟರ್ನ್ ಎಂದು ಪರಿಗಣಿಸಬಾರದು. ನಿಖರ ಮೊತ್ತ ತಿಳಿಯಲು ಬ್ಯಾಂಕ್‌ನ FD ಕ್ಯಾಲ್ಕುಲೇಟರ್ ಅಥವಾ ಶಾಖೆಯನ್ನ ಸಂಪರ್ಕಿಸಬಹುದು.

FD ತೆರೆಯುವ ಮುನ್ನ ಈ ವಿಷಯಗಳನ್ನ ತಿಳಿಯಿರಿ

ಕೆನರಾ ಬ್ಯಾಂಕ್‌ನ 444 ದಿನಗಳ FD ಯೋಜನೆಯಲ್ಲಿ ಠೇವಣಿದಾರರಿಗೆ ನಾಮಿನಿ ಸೌಲಭ್ಯ ಲಭ್ಯವಿದೆ. ಠೇವಣಿಯ ಮೇಲೆ ತಕ್ಷಣ ಸಾಲ ಪಡೆಯುವ ಸೌಲಭ್ಯವೂ ಇದೆ. ಬ್ಯಾಂಕ್‌ನ ನಿಯಮಗಳ ಪ್ರಕಾರ ಠೇವಣಿ ಮೊತ್ತದ ಶೇ.90ರವರೆಗೆ ಸಾಲ ಸೌಲಭ್ಯ ದೊರೆಯಬಹುದು. ಆದರೆ ಅವಧಿ ಮುಗಿಯುವ ಮೊದಲೇ ಹಣ ಹಿಂಪಡೆಯುವ ಸಂದರ್ಭದಲ್ಲಿ ದಂಡ ಅನ್ವಯಿಸಬಹುದು. ಬ್ಯಾಂಕ್‌ನ callable FDಯಲ್ಲಿ ಅವಧಿಪೂರ್ವ ಮುಕ್ತಾಯ ಅಥವಾ ಭಾಗಶಃ ಹಣ ಹಿಂಪಡೆಯಲು ಅವಕಾಶವಿದೆ.

ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ non-callable ಠೇವಣಿಗಳಲ್ಲಿ ಅವಧಿಪೂರ್ವ ಹಣ ಹಿಂಪಡೆಯಲು ಅವಕಾಶ ಇರುವುದಿಲ್ಲ. FD ಮೇಲಿನ ಬಡ್ಡಿ ಆದಾಯಕ್ಕೆ ಅನ್ವಯಿಸುವ ಆದಾಯ ತೆರಿಗೆ ನಿಯಮಗಳು ಮತ್ತು TDS ಕಡಿತದ ಬಗ್ಗೆಯೂ ಗಮನಹರಿಸಬೇಕು. ಬಡ್ಡಿ ಆದಾಯವು ತೆರಿಗೆಗೆ ಒಳಪಡುವುದರಿಂದ ಕೈಗೆ ಸಿಗುವ ನಿಜವಾದ ಆದಾಯವು ವೈಯಕ್ತಿಕ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ಬದಲಾಗುತ್ತದೆ.  

ಹಿರಿಯ ನಾಗರಿಕರಿಗೆ ಸ್ಥಿರ ಆದಾಯದ ಆಯ್ಕೆ

ನಿವೃತ್ತಿಯ ನಂತರ ಉಳಿತಾಯದ ಹಣವನ್ನ ನಿಗದಿತ ಅವಧಿಗೆ ಹೂಡಿಕೆ ಮಾಡಿ ಬಡ್ಡಿ ಆದಾಯ ಪಡೆಯಲು ಬಯಸುವ ಹಿರಿಯ ನಾಗರಿಕರು ಈ ಯೋಜನೆಯನ್ನ ಪರಿಗಣಿಸಬಹುದು. ಆದರೆ ಹಣ ಹೂಡಿಕೆ ಮಾಡುವ ಮೊದಲು ತಮ್ಮ ತುರ್ತು ಖರ್ಚುಗಳಿಗೆ ಅಗತ್ಯವಿರುವ ಮೊತ್ತವನ್ನ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಮುಖ್ಯ.

ಒಟ್ನಲ್ಲಿ ಕೆನರಾ ಬ್ಯಾಂಕ್‌ನ 444 ದಿನಗಳ FD ಯೋಜನೆಯು ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ ವಿಭಿನ್ನ ಬಡ್ಡಿದರಗಳನ್ನ ಒದಗಿಸುತ್ತದೆ. ಹೂಡಿಕೆ ಮಾಡುವ ಮೊದಲು ಠೇವಣಿ ತೆರೆಯುವ ದಿನದ ಬಡ್ಡಿದರ, ಅವಧಿಪೂರ್ವ ಹಿಂಪಡೆಯುವ ನಿಯಮಗಳು ಮತ್ತು ತೆರಿಗೆ ಪರಿಣಾಮಗಳನ್ನ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು.

Add Zee News as a Preferred Source
TAGS:
Business
Kannada News