SOCIAL MEDIA

Newsletter

PARTNER SITES
Select Language Select State

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

8th Pay Commission salary hike: ವಿವಿಧ ನಗರಗಳಿಗೆ ಭೇಟಿ ನೀಡುತ್ತಿರುವ ಎಂಟನೇ ವೇತನ ಆಯೋಗದ ಸದಸ್ಯರು, ಅಕ್ಟೋಬರ್ 7 ಮತ್ತು 8ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

Written By Chetana Devarmani
Published: Oct 02, 2026, 08:36 AM IST | Updated: Oct 02, 2026, 08:38 AM IST
Join

ನವದೆಹಲಿ: ಸರ್ಕಾರಿ ನೌಕರರಿಗೆ ಭರ್ಜರಿ ಶುಭ ಸುದ್ದಿ ಇದಾಗಿದೆ. ಎಂಟನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದಲ್ಲಿ, ನೌಕರರ ಪ್ರತಿ ತಿಂಗಳ ವೇತನ ಗಣನೀಯವಾಗಿ ಏರಿಕೆಯಾಗಬಹುದು. ಎಂಟನೇ ವೇತನ ಆಯೋಗದ ಸದಸ್ಯರು ವಿವಿಧ ನಗರಗಳಿಗೆ ಭೇಟಿ ನೀಡಿ, ನೌಕರರ ಸಂಘಟನೆಗಳು ಮತ್ತು ಪಿಂಚಣಿದಾರರ ಒಕ್ಕೂಟಗಳ ಜೊತೆಗೆ ಸಭೆ ನಡೆಸುವ ಮೂಲಕ ಮಾತುಕತೆ ನಡೆಸುತ್ತಿದ್ದಾರೆ.

ಸದ್ಯ ₹47,600 ಮಾಸಿಕ ಮೂಲ ವೇತನ ಹೊಂದಿರುವ ಲೆವೆಲ್ 8 ರ ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಬಹುದೊಡ್ಡ ಏರಿಕೆಯನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. 8ನೇ ವೇತನ ಆಯೋಗ ಜಾರಿ ಬಳಿಕ ಈ ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಹೆಚ್ಚಿನ ಫಿಟ್ಮೆಂಟ್ ಫ್ಯಾಕ್ಟರ್ ನೇರವಾಗಿ ಒಟ್ಟು ವೇತನದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ ತುಟ್ಟಿಭತ್ಯೆ (DA), ಮನೆಬಾಡಿಗೆ ಭತ್ಯೆ (HRA) ಸೇರಿದಂತೆ ಇತರ ಭತ್ಯೆಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಎಂಟನೇ ವೇತನ ಆಯೋಗದ ಸದಸ್ಯರು ಮುಂದಿನ ವಾರ, ಅಂದರೆ ಅಕ್ಟೋಬರ್ 7 ಮತ್ತು 8 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದಾದ ನಂತರ ಅಕ್ಟೋಬರ್ 22 ಮತ್ತು 23ರಂದು ಮುಂಬೈಗೆ ತೆರಳಲಿದ್ದಾರೆ. ಈಗಾಗಲೇ ಎಂಟನೇ ವೇತನ ಆಯೋಗದ ಸದಸ್ಯರು ಚಂಡೀಗಢ, ಚೆನ್ನೈ, ಪುದುಚೇರಿ ಮತ್ತು ಜೈಪುರದಲ್ಲಿ ವಿವಿಧ ಯೂನಿಯನ್‌ಗಳು ಹಾಗೂ ಪಿಂಚಣಿದಾರರ ಜೊತೆ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ನೌಕರರ ಸಂಘಟನೆಗಳು ಎತ್ತಿರುವ ಪ್ರಮುಖ ವಿಷಯಗಳಾಗಿವೆ ಎಂದು ತಿಳಿದು ಬಂದಿದೆ.

ಪರಿಷ್ಕೃತ ಮೂಲ ವೇತನವನ್ನು ಬೇಸಿಕ್ ಸ್ಯಾಲರಿಯ ಮೇಲೆ ಲೆಕ್ಕಾಚಾರ ಮಾಡಲು ಫಿಟ್ಮೆಂಟ್ ಫ್ಯಾಕ್ಟರ್ ಬಳಸಲಾಗುತ್ತದೆ. ಏಳನೇ ವೇತನ ಆಯೋಗದಲ್ಲಿ 2.57 ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಬಳಸಲಾಗಿತ್ತು. ಅದರ ಜೊತೆ ಇತರ ಭತ್ಯೆಗಳು ಮತ್ತು DA ಅನ್ನು ಕೂಡ ಪರಿಗಣಿಸಿದ್ದರಿಂದ ಗ್ರಾಸ್ ಸ್ಯಾಲರಿಗಿಂತ ಬೇಸಿಕ್ ಸ್ಯಾಲರಿಯೇ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿತ್ತು.

ಪ್ರಸ್ತುತ ₹47,600 ಬೇಸಿಕ್ ಸ್ಯಾಲರಿ ಮತ್ತು ₹90,400 ಗ್ರಾಸ್ ಸ್ಯಾಲರಿ ಹೊಂದಿರುವ ಲೆವೆಲ್ 8ರ ನೌಕರರನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ವಿವಿಧ ಫಿಟ್ಮೆಂಟ್ ಫ್ಯಾಕ್ಟರ್‌ಗಳ ಆಧಾರದ ಮೇಲೆ ಹೊಸ ವೇತನದ ಅಂದಾಜು ಮಾಡಬಹುದು. ಫಿಟ್ಮೆಂಟ್ ಫ್ಯಾಕ್ಟರ್ 2 ಆಗಿದ್ದರೆ ಪರಿಷ್ಕೃತ ಬೇಸಿಕ್ ಸ್ಯಾಲರಿ ₹96,200 ಆಗಬಹುದು. ಗ್ರಾಸ್ ಸ್ಯಾಲರಿ ಸುಮಾರು ₹1,18,048 ಆಗಬಹುದು. ಈ ಲೆಕ್ಕದಲ್ಲಿ ಬೇಸಿಕ್ ವೇತನ ಶೇ.100ರಷ್ಟು ಮತ್ತು ಗ್ರಾಸ್ ಸ್ಯಾಲರಿ ಶೇ.31ರಷ್ಟು ಹೆಚ್ಚಳವಾಗುತ್ತದೆ.

ಫಿಟ್ಮೆಂಟ್ ಫ್ಯಾಕ್ಟರ್ 2.38 ಆಗಿದ್ದರೆ ಪರಿಷ್ಕೃತ ಬೇಸಿಕ್ ಸ್ಯಾಲರಿ ₹1,13,288 ಆಗಬಹುದು. ಗ್ರಾಸ್ ಸ್ಯಾಲರಿ ಸುಮಾರು ₹1,40,477 ಆಗಬಹುದು. ಈ ಸಂದರ್ಭದಲ್ಲಿ ಬೇಸಿಕ್ ವೇತನದಲ್ಲಿ ಶೇ.138ರಷ್ಟು ಹಾಗೂ ಗ್ರಾಸ್ ಸ್ಯಾಲರಿಯಲ್ಲಿ ಶೇ.55ರಷ್ಟು ಹೆಚ್ಚಳವಾಗಬಹುದು. ಫಿಟ್ಮೆಂಟ್ ಫ್ಯಾಕ್ಟರ್ 2.57 ಆಗಿದ್ದರೆ ಪರಿಷ್ಕೃತ ಬೇಸಿಕ್ ಸ್ಯಾಲರಿ ₹1,22,332 ಆಗಬಹುದು. ಗ್ರಾಸ್ ಸ್ಯಾಲರಿ ಸುಮಾರು ₹1,51,692 ಆಗಬಹುದು. ಅಂದರೆ ಬೇಸಿಕ್ ವೇತನದಲ್ಲಿ ಶೇ.157ರಷ್ಟು ಹಾಗೂ ಗ್ರಾಸ್ ಸ್ಯಾಲರಿಯಲ್ಲಿ ಶೇ.68ರಷ್ಟು ಹೆಚ್ಚಳವಾಗಬಹುದು.

ನೌಕರರ ನೆಟ್ ಟೇಕ್ ಹೋಮ್ ಹೆಚ್ಚಳವು ಎಂಟನೇ ವೇತನ ಆಯೋಗದ ಶಿಫಾರಸು ಮತ್ತು DA ಪ್ರಮಾಣವನ್ನು ಕೂಡ ಅವಲಂಬಿಸಿರುತ್ತದೆ. ಈ ಲೆಕ್ಕಾಚಾರವನ್ನು ಆಧರಿಸಿ ನೋಡಿದರೆ, ಈಗಿರುವ DA ಪ್ರಮಾಣವು ಶೇ.60ರಿಂದ ಶೇ.66ಕ್ಕೆ ಹೆಚ್ಚಳವಾಗಬಹುದು ಎಂಬ ಅಂದಾಜಿದೆ. ಹೀಗಾಗಿ ಪ್ರಸ್ತುತ ₹47,600 ಬೇಸಿಕ್ ಸ್ಯಾಲರಿ ಮತ್ತು ₹90,400 ಗ್ರಾಸ್ ಸ್ಯಾಲರಿ ಹೊಂದಿರುವ ಲೆವೆಲ್-8ರ ನೌಕರರಿಗೆ, ಎಂಟನೇ ವೇತನ ಆಯೋಗದ ಶಿಫಾರಸು ಜಾರಿಯಾದ ಬಳಿಕ ವೇತನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES