ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಅಪರಿಚಿತರಿಂದಲೇ ಸಹಾಯ, ಕೆಲವರಿಗೆ ಅನಿರೀಕ್ಷಿತ ಬೇಸರ!
Today Horoscope 25 November 2026 : ಮೇಷದಿಂದ ಮೀನದವರೆಗೆ ಯಾವ ರಾಶಿಯವರಿಗೆ ಇಂದು ಶುಭ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ಇಂದಿನ ದಿನ ಭವಿಷ್ಯ.
Daily Astrology Predictions : ಇಂದಿನ ದಿನ ಗ್ರಹ ನಕ್ಷತ್ರಗಳ ಪ್ರಭಾವದಿಂದ ಹನ್ನೆರಡು ರಾಶಿಗಳ ಜೀವನದಲ್ಲಿ ವಿಭಿನ್ನ ಅನುಭವಗಳು ಎದುರಾಗುವ ಸಾಧ್ಯತೆಯಿದೆ. ಕೆಲವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ಒದಗಿದರೆ, ಇನ್ನು ಕೆಲವರು ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ, ಪ್ರಯಾಣದ ಒತ್ತಡ, ಅನಿರೀಕ್ಷಿತ ಖರ್ಚು ಹಾಗೂ ಅಪರಿಚಿತರಿಂದ ಸಹಾಯ ಸಿಗುವಂತಹ ಬೆಳವಣಿಗೆಗಳು ಕಂಡುಬರಬಹುದು. ಹಾಗಾದರೆ ಮೇಷದಿಂದ ಮೀನದವರೆಗೆ ಯಾವ ರಾಶಿಯವರಿಗೆ ಇಂದು ಶುಭ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ಇಂದಿನ ದಿನ ಭವಿಷ್ಯ.
ಮೇಷ ರಾಶಿ
ಇಂದು ಕೆಲವು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಬಹುದಿನಗಳ ಆಸೆಯೊಂದು ಈಡೇರುವ ಸಂದರ್ಭ ಎದುರಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಯಿಂದ ಕೆಲವು ಕೆಲಸಗಳು ವಿಳಂಬವಾಗಬಹುದು. ಅಗತ್ಯವಿದ್ದರೆ ಆಪ್ತರ ಸಹಾಯ ಪಡೆಯಬೇಕಾಗುತ್ತದೆ. ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.
ವೃಷಭ ರಾಶಿ
ಆದಾಯದ ಮೂಲದಲ್ಲಿ ಅನಿರೀಕ್ಷಿತ ಬದಲಾವಣೆ ಉಂಟಾಗಬಹುದು. ಇತರರ ಅನಗತ್ಯ ಸಲಹೆಗಳಿಗೆ ಮರುಳಾಗಿ ನಿಮ್ಮ ವೃತ್ತಿಜೀವನಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ಮಹಿಳೆಯರಿಂದ ಸಹಾಯ ದೊರೆಯುವ ಸಾಧ್ಯತೆಯಿದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸ್ವಲ್ಪ ಸಮಯ ಏಕಾಂತದಲ್ಲಿ ಕಳೆಯಲು ಬಯಸುವಿರಿ. ಹೊಸ ವ್ಯಕ್ತಿಗಳ ಪರಿಚಯವಾಗಬಹುದು.
ಮಿಥುನ ರಾಶಿ
ಇಂದು ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುವ ಸಾಧ್ಯತೆಯಿದೆ. ಸಂಗಾತಿಯ ಬೆಂಬಲದಿಂದ ಮನಸ್ಸಿನಲ್ಲಿ ಉತ್ಸಾಹ ಹೆಚ್ಚಾಗಲಿದೆ. ಎದುರಾಗುವ ಅವಕಾಶಗಳಲ್ಲಿ ನಿಮಗೆ ಹೆಚ್ಚು ಪ್ರಯೋಜನ ನೀಡುವ ಆಯ್ಕೆಯನ್ನು ಮಾಡಿಕೊಳ್ಳಿ. ಸಾಮಾಜಿಕವಾಗಿ ಗೌರವ ಮತ್ತು ಮನ್ನಣೆ ದೊರೆಯಬಹುದು. ಬಹುದಿನಗಳಿಂದ ಬಯಸುತ್ತಿದ್ದ ಮೌಲ್ಯಯುತ ವಸ್ತುವನ್ನು ಪಡೆದುಕೊಳ್ಳುವ ಅವಕಾಶವೂ ಸಿಗಬಹುದು.
ಕರ್ಕಾಟಕ ರಾಶಿ
ಸಮಾರಂಭ ಮತ್ತು ಶುಭಕಾರ್ಯಗಳಲ್ಲಿ ಭಾಗವಹಿಸುವ ಸಂದರ್ಭ ಬರಬಹುದು. ಬದಲಾಗಿರುವ ದಿನಚರಿಯಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗದಂತೆ ಎಚ್ಚರಿಕೆ ವಹಿಸಿ. ವಿದೇಶದಲ್ಲಿರುವ ಸ್ನೇಹಿತರೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಮುಕ್ತವಾಗಿ ಮಾತನಾಡುವುದು ಉತ್ತಮ. ಗುರುಗಳ ಆಶೀರ್ವಾದದಿಂದ ಪ್ರಗತಿ ಕಾಣಬಹುದು. ಸಣ್ಣ ಸಾಲಗಳನ್ನು ಬಾಕಿ ಉಳಿಸಿಕೊಳ್ಳದೆ ಮರುಪಾವತಿಸುವಿರಿ.
ಸಿಂಹ ರಾಶಿ
ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಸಿಗಬಹುದು. ಬಹುದಿನಗಳ ಕನಸು ನನಸಾಗುವ ಸಾಧ್ಯತೆಯಿದೆ. ಇತರರ ವ್ಯಕ್ತಿತ್ವವನ್ನು ಮೇಲ್ನೋಟಕ್ಕೆ ಅಳೆಯಬೇಡಿ. ಮಕ್ಕಳ ಅಗತ್ಯಗಳಿಗಾಗಿ ಖರ್ಚು ಮಾಡಬೇಕಾಗಬಹುದು. ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಕುಟುಂಬದ ವಿಚಾರಗಳು ಮನಸ್ಸಿನಲ್ಲಿ ಹೆಚ್ಚಾಗಿ ಕಾಡುವುದರಿಂದ ಉದ್ಯೋಗದ ಕಡೆ ಗಮನ ಕಡಿಮೆಯಾಗಬಹುದು.
ಕನ್ಯಾ ರಾಶಿ
ಇಂದು ಕೆಲವು ವಿಚಾರಗಳಲ್ಲಿ ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಕೈ ಸೇರದ ಕಾರಣ ವ್ಯಾಪಾರದಲ್ಲಿ ಅಡೆತಡೆ ಉಂಟಾಗಬಹುದು. ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರ ಅಗತ್ಯವಾಗಲಿದೆ. ಹೂಡಿಕೆ ಅಥವಾ ವ್ಯಾಪಾರ ವಿಸ್ತರಣೆಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಭಾವನಾತ್ಮಕ ವಿಚಾರಗಳಲ್ಲಿ ತಾಳ್ಮೆಯಿಂದ ವರ್ತಿಸಿ.
ತುಲಾ ರಾಶಿ
ಅತಿಯಾದ ಆತ್ಮವಿಶ್ವಾಸದಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಸಾಮಾನ್ಯ ವಿಚಾರಗಳನ್ನು ದೊಡ್ಡದಾಗಿ ಮಾಡಿಕೊಳ್ಳದೆ ಎಚ್ಚರಿಕೆಯಿಂದ ವರ್ತಿಸಿ. ಮಕ್ಕಳ ಕಾರಣದಿಂದ ಕೆಲವು ಕೆಲಸಗಳು ಮುಂದೂಡಿಕೆಯಾಗಬಹುದು. ಸಂಗಾತಿಯಿಂದ ಅಪರೂಪದ ಉಡುಗೊರೆ ದೊರೆಯುವ ಸಾಧ್ಯತೆಯಿದೆ. ಹಿಂದೆ ಬಿಟ್ಟಿದ್ದ ಕೆಲವು ಅಭ್ಯಾಸಗಳು ಮತ್ತೆ ಆರಂಭವಾಗಬಹುದು.
ವೃಶ್ಚಿಕ ರಾಶಿ
ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ಇತರರಿಗೆ ಪರಿಚಯವಾಗುವ ದಿನವಿದು. ಕೆಲವರ ಮಾತುಗಳಿಂದ ಮಾನಸಿಕ ಗೊಂದಲ ಉಂಟಾಗಬಹುದು. ಅಪರಿಚಿತರಿಂದ ಅನಿರೀಕ್ಷಿತ ಸಹಾಯ ದೊರೆಯುವ ಸಾಧ್ಯತೆಯಿದೆ. ಯಾವುದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದರೂ ಸಣ್ಣ ಅಡೆತಡೆಗಳು ಎದುರಾಗಬಹುದು. ಮನಸ್ಸಿನ ಕಿರಿಕಿರಿ ಕಡಿಮೆ ಮಾಡಿಕೊಳ್ಳಲು ಮನರಂಜನೆಯಲ್ಲಿ ಸಮಯ ಕಳೆಯುವಿರಿ.
ಧನು ರಾಶಿ
ಯಾವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂಬ ಗೊಂದಲ ಕಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಿದ್ದರೂ ಕುಟುಂಬದ ಒತ್ತಾಯಕ್ಕೆ ಭಾಗವಹಿಸಬೇಕಾಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆಯಿದೆ. ಭಾವನೆಗಳನ್ನು ವ್ಯಕ್ತಪಡಿಸುವಾಗ ಎಚ್ಚರಿಕೆ ಇರಲಿ. ರೈತರಿಗೆ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಗಲಿದೆ.
ಮಕರ ರಾಶಿ
ಹಳೆಯ ವಸ್ತುಗಳನ್ನು ಮಾರಾಟ ಮಾಡುವುದರಿಂದ ಉತ್ತಮ ಬೆಲೆ ದೊರೆಯಬಹುದು. ಕಚೇರಿಯಲ್ಲಿ ಅಧಿಕಾರಿಗಳಿಂದ ಕೆಲಸದ ಒತ್ತಡ ಹೆಚ್ಚಾಗಬಹುದು. ನಿಮ್ಮ ಕಾರ್ಯಯೋಜನೆಯಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಸಂಬಂಧಗಳಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಿ. ನಿಮ್ಮ ಮಾತುಗಳನ್ನು ಇತರರು ಆಲಿಸಬೇಕು ಎಂಬ ನಿರೀಕ್ಷೆಯ ಬದಲು ಅವರ ಮಾತುಗಳಿಗೂ ಬೆಲೆ ಕೊಡಿ.
ಕುಂಭ ರಾಶಿ
ರಾಜಕೀಯ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಕೆಲವರು ಪ್ರೇರೇಪಿಸಬಹುದು. ಸ್ವಂತ ಬೆಳವಣಿಗೆಗಾಗಿ ಹೊಸ ಮಾರ್ಗಗಳನ್ನು ಹುಡುಕುವಿರಿ. ವಾಹನ ದುರಸ್ತಿಗೆ ಅನಿರೀಕ್ಷಿತವಾಗಿ ಹಣ ಖರ್ಚಾಗಬಹುದು. ಅತಿಯಾದ ಆಸೆ ಮತ್ತು ಮೋಹದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೂ ಚೇತರಿಕೆ ಕಂಡುಬರಬಹುದು.
ಮೀನ ರಾಶಿ
ನಿಮ್ಮ ನಿರೀಕ್ಷೆಗೆ ತಕ್ಕ ಫಲಿತಾಂಶ ಸಿಗದ ಕಾರಣ ಬೇಸರ ಉಂಟಾಗಬಹುದು. ಹಳೆಯ ಪ್ರೀತಿಯ ನೆನಪುಗಳು ಮನಸ್ಸನ್ನು ಕಾಡಬಹುದು. ಎಲ್ಲರೊಂದಿಗೆ ವಿನಯದಿಂದ ವರ್ತಿಸುವುದು ಉತ್ತಮ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪ ಉಂಟಾದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಹೆಚ್ಚು ನಿದ್ರೆ ಮಾಡುವ ಮನಸ್ಸಾಗಬಹುದು. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.