ದಿನ ಭವಿಷ್ಯ 18-11-2026: ಬುಧವಾರದಂದು ಧ್ರುವ ಯೋಗ, ಈ ರಾಶಿಯವರಿಗೆ ಧನಲಾಭ
Today Horoscope 18th November 2026: 18 ನವೆಂಬರ್ 2026ರಂದು ಶತಭಿಷಾ ನಕ್ಷತ್ರದಲ್ಲಿ ಧ್ರುವ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Budhvara 18th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಬುಧವಾರದ ಈ ದಿನ ಶತಭಿಷಾ ನಕ್ಷತ್ರ, ಧ್ರುವ ಯೋಗ, ಬಾಲವ ಕರಣ ಇರಲಿದೆ.
ಮೇಷ ರಾಶಿ: ಇಂದು ನಿಮಗೆ ಧೃವ ಯೋಗ ಫಲಿಸಲಿದ್ದು, ಆರ್ಥಿಕವಾಗಿ ಪ್ರಗತಿ ಕಾಣುವೀರಿ. ಹಳೆಯ ಸಾಲಗಳ ಹೊರೆ ಕಡಿಮೆಯಾಗಬಹುದು. ಇದು ನಿಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ಭವಿಷ್ಯದ ಯೋಜನೆಗಳ ಮೇಲೆ ಉತ್ತಮವಾಗಿ ಗಮನಹರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಅನೀರಿಕ್ಷಿತ ಲಾಭ ದೊರಯಲಿದೆ. ಇದು ದಿನವನ್ನು ಇನ್ನಷ್ಟು ಉತ್ತೇಜನಕಾರಿಯಾಗಿಸಬಹುದು.
ವೃಷಭ ರಾಶಿ: ಈ ರಾಶಿಯವರಿಗೆ ಇಂದು ಧೃವ ಯೋಗದ ಪರಿಣಾಮ ಬೀರಲಿದ್ದು, ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ನಿಮ್ಮ ಆಳವಾದ ಆಲೋಚನೆ ಮತ್ತು ಭಾವನೆಗಳ ಬಗ್ಗೆ ಗಮನ ಕೊಡಿ. ಯಾಕೆಂದರೆ ಅವೇ ನಿಮಗೆ ಪ್ರಮುಖ ಮಾರ್ಗದರ್ಶಿಯಾಗುತ್ತದೆ. ಇಂದು ಸರ್ಕಾರಿ ಇಲಾಖೆಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಯೋಜನೆಯು ಮುಂದುವರಿಯುವ ಸಾಧ್ಯತೆಯಿದೆ.
ಮಿಥುನ ರಾಶಿ: ವ್ಯಾಪಾರದಲ್ಲಿ ಅನೀರಿಕ್ಷಿತ ಬದಲಾವಣೆ ಕಾಣುವ ಸಾಧ್ಯತೆ ಇದೆ. ಅಕ್ಕ ಪಕ್ಕದವರ ಬಗ್ಗೆ ಅನುಕಂಪ ಇರಲಿ. ಶ್ರೀ ಆಂಜನೇಯನ ದರ್ಶನದಿಂದ ಎಲ್ಲಾ ಕಾರ್ಯಗಳು ನೆರವೇರಲಿದೆ. ನಿಮ್ಮ ಸಂಗಾತಿಯ ಮಾತು ಆಲಿಸುವುದರಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಕರ್ಕಾಟಕ ರಾಶಿ: ಇಂದು, ನೀವು ಕಾಯುತ್ತಿದ್ದ ಕೆಲವು ಒಳ್ಳೆಯ ಸಿದ್ದಿಯನ್ನು ನೀವು ಪಡೆಯಬಹುದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಕೆಲಸದ ಗುಣಮಟ್ಟ ಕಡಿಮೆ ಆಗುತ್ತಿರುವುದಕ್ಕೆ ನಿಮ್ಮ ನಿರಾಸಕ್ತಿಯೇ ಮುಖ್ಯ ಕಾರಣ. ನೀವು ವೈಯಕ್ತಿಕ ಸಂಬಂಧಗಳಲ್ಲಿ ತಿಳುವಳಿಕೆ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಆರೋಗ್ಯ ಬಗ್ಗೆ ಗಮನವಿರಲಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಿಮ್ಮ ಪರಿಶ್ರಮದಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವೀರಿ. ದೂರದ ಸಂಬಂಧಿಯನ್ನು ಭೇಟಿಯಾಗುವ ಅಥವಾ ಅವರನ್ನು ಭೇಟಿ ಮಾಡಲು ಪ್ರವಾಸವನ್ನು ಯೋಜಿಸುವ ಸಾಧ್ಯತೆಯಿದೆ. ಸಾಮಾನ್ಯ ಪ್ರಜೆಯಾಗಿದ್ದಲ್ಲಿ ರಾಜಕೀಯ ತಿಕ್ಕಾಟಗಳಲ್ಲಿ ಭಾಗವಹಿಸದೇ ಇರುವುದು ಸೂಕ್ತ.
ಕನ್ಯಾ ರಾಶಿ: ಆಗಿ ಹೋದ ಘಟನೆ ಬಗ್ಗೆ ಚಿಂತಿಸಬೇಡಿ. ಸ್ವಂತ ಉದ್ಯಮಿಗಳಿಗೆ ಪ್ರಗತಿ ಸಿಗಲಿದೆ. ಆಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಇದು ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕು ಮತ್ತು ಆವೇಗವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ.
ತುಲಾ ರಾಶಿ: ಇಂದು ನಿಮ್ಮ ವೃತ್ತಿ ಜೀವನದಲ್ಲಿ ಎಚ್ಚರಿಕೆಯಿಂದ ಮುನ್ನಡೆಯಿರಿ. ಹೊಸ ಸಂಪರ್ಕಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ನಿಮ್ಮ ನಡವಳಿಕೆಯಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಿ. ಬ್ಯಾಂಕ್ ಸಾಲ ಅಥವಾ ಆರ್ಥಿಕ ಸಹಾಯಕ್ಕೆ ಸಂಬಂಧಿಸಿದ ಯಾವುದೇ ಕೆಲಸವು ಸರಾಗವಾಗಿ ಮುಂದುವರಿಯಬಹುದು. ಭಾವನೆಗಳು ನಿಮ್ಮ ಬುದ್ಧಿವಂತಿಕೆಯನ್ನು ಮರೆಮಾಚುತ್ತವೆ.
ವೃಶ್ಚಿಕ ರಾಶಿ: ಇಂದು ಈ ರಾಶಿಯವರಿಗೆ ಧೃವ ಯೋಗದ ಭಾಗ್ಯ ಇದ್ದು, ಉತ್ತಮ ದಿನವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ಕುಟುಂಬದ ಜೀವನವು ಸಂತೋಷ ತರಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಸ್ವಂತ ಉದ್ಯೋಗಿಗಳಿಗೆ ಲಾಭ ವೃದ್ದಿಸಲಿದೆ.
ಧನು ರಾಶಿ: ನಿಮಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧ್ಯ. ನೀವು ನಿಮ್ಮ ತಾಯಿಯೊಂದಿಗೆ ಒಂದು ಪ್ರಮುಖ ಕುಟುಂಬ ವಿಷಯವನ್ನು ಚರ್ಚಿಸುವ ಸಾಧ್ಯತೆಯಿದೆ. ಅವರ ಸಲಹೆ ಮತ್ತು ಅನುಭವವು ಉಪಯುಕ್ತವೆಂದು ಸಾಬೀತುಪಡಿಸಬಹುದು. ಇಂದು ನೀವು ಕುಟುಂಬದ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸಲಿದ್ದೀರಿ.
ಮಕರ ರಾಶಿ: ನಿಮ್ಮ ನೇರ, ದಿಟ್ಟ ಮಾತು ಇತರರಿಗೆ ನೋವನ್ನುಂಟು ಮಾಡುತ್ತದೆ. ಎಚ್ಚರಿಕೆ ಇಂದ ಮಾತನಾಡಿ. ಭವಿಷ್ಯದ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯಬಹುದು. ನೀವು ಶಾಪಿಂಗ್ ಮಾಡಲು ಅಥವಾ ನಿಮ್ಮ ಸಂಗಾತಿಯೊಂದಿಗೆ ಎಲ್ಲೋ ಹೊರಗೆ ಹೋಗಲು ಯೋಜಿಸಬಹುದು. ಆದಾಗ್ಯೂ, ಉತ್ಸಾಹದಿಂದ ನಿಮ್ಮ ಬಜೆಟ್ ಮೀರಿ ಖರ್ಚು ಮಾಡುವುದನ್ನು ತಪ್ಪಿಸಿ.
ಕುಂಭ ರಾಶಿ: ಇಂದು ನಿಮಗೆ ಆರ್ಥಿಕ ಬೆಂಬಲ ಸಿಗುವ ಸಮಯ. ಹೊಸ ಉದ್ಯಮಗಳು ಪ್ರಾರಂಭವಾಗುತ್ತವೆ. ಶಿವನ ಆರಾಧನೆಯಿಂದ ಶುಭವಾಗುವುದು. ಆರೋಗ್ಯದ ಬಗ್ಗೆ ಗಮನ ಹರಿಸಿ. ಸಹೋದ್ಯೋಗಿಗಳಿಂದಾಗಿ ಕಚೇರಿಯಲ್ಲಿ ಅಡೆತಡೆಗಳು ಇರಬಹುದು, ಇದು ನಿಮ್ಮ ಒತ್ತಡವನ್ನು ದ್ವಿಗುಣವಾಗಿಸುತ್ತದೆ.
ಮೀನ ರಾಶಿ: ಇಂದು ನಿಮಗೆ ಮಿತ್ರರಿಂದ ಸಹಾರ ಸಿಗಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆಗಳಿಂದ ಮುಕ್ತಿ ಪಡೆದು ಮತ್ತೆ ತಮ್ಮ ಅಧ್ಯಯನದತ್ತ ಗಮನ ಹರಿಸುತ್ತಾರೆ. ಇಂದು ನಿಮಗೆ ಹಣ ಬಂದರೂ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಸರ್ಕಾರಿ ಕೆಲಸದಲ್ಲಿ ಪ್ರಗತಿ ಸಾಧ್ಯ. ಸಾಲಭಾದೆ ಹೆಚ್ಚಾಗಬಹುದು ಜೋಕೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.