ದಿನ ಭವಿಷ್ಯ 16-11-2026: ಕಾರ್ತಿಕ ಸೋಮವಾರದ ಈ ದಿನ ಗಂಡ ಯೋಗ.. ಯಾವ ರಾಶಿಯವರಿಗೆ ಏನು ಫಲ?
Today Horoscope 16th November 2026: 16 ನವೆಂಬರ್ 2026ರಂದು ಕಾರ್ತಿಕ ಸೋಮವಾರದ ಈ ದಿನ ಗಂಡ ಯೋಗ ಇರಲಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara 16th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಗಂಡ ಯೋಗ, ಗರಜ ಕರಣ ಇರಲಿದೆ. ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿ:
ಕಾರ್ತಿಕ ಸೋಮವಾರದಂದು ಗಂಡ ಯೋಗವು ಮೇಷ ರಾಶಿಯ ಜನರಿಗೆ ಹಲವು ರೀತಿಯಲ್ಲಿ ಲಾಭದಾಯಕವೆಂದು ಸಾಬೀತುಪಡಿಸಲಿದೆ. ಇಂದು ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣಬಹುದು.
ವೃಷಭ ರಾಶಿ:
ಗಂಡ ಯೋಗದ ಪ್ರಭಾವದಿಂದ ವೃಷಭ ರಾಶಿಯವರಿಗೂ ಇಂದು ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗುವ ನಿರೀಕ್ಷೆ ಇದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಬಲಗೊಳ್ಳುವ ಸೂಚನೆಗಳಿವೆ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವ ಸೂಚನೆಗಳಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಮಿಥುನ ರಾಶಿ:
ಮಿಥುನ ರಾಶಿಯವರು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವರು. ಉದ್ಯೋಗಿಗಳಿಗೆ ಬಡ್ತಿಯ ಸೂಚನೆಗಳಿವೆ. ವ್ಯವಹಾರ ವಿಸ್ತರಣೆಗೆ ಪ್ರಯತ್ನಿಸುತ್ತಿರುವವರಿಗೆ ಸುಯೋಗ. ವಿರೋಧಿಗಳ ವಿರುದ್ಧ ಗೆಲುವು ಸಾಧಿಸುವಿರಿ. ಉದ್ಯಮಿಗಳಿಗೂ ಅನುಕೂಲಕರ ಸಮಯ.
ಕರ್ಕಾಟಕ ರಾಶಿ:
ಕಾರ್ತಿಕ ಸೋಮವಾರದಂದು ಗಂಡ ಯೋಗವು ಕರ್ಕಾಟಕ ರಾಶಿಯ ಜನರಿಗೆ ಧನಾತ್ಮಕ ಫಲಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಸಮರ್ಪಣಾಭಾವದಿಂದ ಮಾಡಿದ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಹಕಾರ ಸಿಗಲಿದೆ.
ಸಿಂಹ ರಾಶಿ:
ಗಂಡ ಯೋಗವು ಸಿಂಹ ರಾಶಿಯವರಿಗೆ ಇಂದು ಶುಭದಾಯಕವಾಗಿರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ಸಮಯ. ಇಲ್ಲವೇ, ಕೆಲಸಗಳಲ್ಲಿ ತಪ್ಪುಗಳಾಗುವ ಸಾಧ್ಯತೆ ಇದೆ. ಸಂಜೆ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಬಹುದು.
ಕನ್ಯಾ ರಾಶಿ:
ಗಂಡ ಯೋಗವು ಕನ್ಯಾ ರಾಶಿಯ ಜನರಿಗೆ ಇಂದು ಮನೆ, ಭೂಮಿ ಅಥವಾ ವಾಹನವನ್ನು ಖರೀದಿಸುವ ಸುಯೋಗವನ್ನು ತರಲಿದೆ. ನಿಮ್ಮ ಯೋಜನೆಗಳಲ್ಲಿ ಉತ್ತಮವಾಗಿ ಯಶಸ್ಸು ಸಾಧಿಸುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ದೀರ್ಘಾವಧಿಯ ಸಮಸ್ಯೆಗಳು ಬಗೆಹರಿಯಲಿವೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವ ಸೂಚನೆಗಳಿವೆ. ನೀವು ಮಾಡುವ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಬಹುದು. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ಕಾರ್ತಿಕ ಸೋಮವಾರದಂದು ಗಂಡ ಯೋಗವು ವೃಶ್ಚಿಕ ರಾಶಿಯ ಜನರಿಗೆ ತುಂಬಾ ವಿಶೇಷವಾಗಿದೆ. ಇಂದು ಕುಟುಂಬದಲ್ಲಿ ಸಂತೋಷ ಇಮ್ಮಡಿಗೊಳಗಳಲಿದೆ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಉದ್ಯೋಗದಲ್ಲಿ ಬಡ್ತಿಯ ಬಗ್ಗೆ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ವ್ಯಕ್ತಿತ್ವದಲ್ಲೂ ಸುಧಾರಣೆಯನ್ನು ಕಾಣವು ಲಕ್ಷಣಗಳಿವೆ.
ಧನು ರಾಶಿ:
ಗಂಡ ಯೋಗವು ಧನು ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ಅವಧಿಯಲ್ಲಿ ಉದ್ಯಮಿಗಳು ಸ್ವಲ್ಪ ಜಾಗರೂಕರಾಗಿರಬೇಕು. ಅಪಾಯಗಳನ್ನು ತೆಗೆದುಕೊಳ್ಳುವ ಯಾವುದೇ ವ್ಯವಹಾರಕ್ಕೆ ಕೈ ಹಾಕದಿರುವುದು ಒಳ್ಳೆಯದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ.
ಮಕರ ರಾಶಿ:
ಗಂಡ ಯೋಗವು ಇಂದು ಮಕರ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಿಸಲಿದೆ. ಈ ದಿನ ಕೆಲಸದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ಆದಾಯದ ಮೂಲಗಳು ಅಧಿಕಗೊಳ್ಳಲಿವೆ. ಉದ್ಯೋಗಿಗಳಿಗೆ ಬಡ್ತಿ ಸಂಬಂಧಿತ ಶುಭ ಸುದ್ದಿಗಳು ಸಿಗಬಹುದು.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆದಾಯದ ಹೊಸ ಮೂಲಗಳು ಹೊರಹೊಮ್ಮಲಿದ್ದು, ಹಳೆಯ ಹೂಡಿಕೆಗಳಿಂದ ಭರ್ಜರಿ ಲಾಭವನ್ನು ಕಾಣುವ ನಿರೀಕ್ಷೆ ಇದೆ. ಉದ್ಯಮಿಗಳು ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ವಿಶೇಷವಾದ ದಿನ ಎಂದು ಸಾಬೀತುಪಡಿಸಲಿದೆ. ಈ ದಿನ ವೃತ್ತಿ ಜೀವನದಲ್ಲಿ ಪ್ರಗತಿಯ ಲಕ್ಷಣಗಳಿವೆ. ಉದ್ಯಮಿಗಳು ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು. ಆದಾಯದ ಮೂಲಗಳು ಹೆಚ್ಚಾಗಲಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.