SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 13-11-2026: ಶುಕ್ರವಾರದಂದು ಧೃತಿ ಯೋಗ.. ನಿಮ್ಮ ಇಂದಿನ ರಾಶಿ ಫಲ ಹೇಗಿದೆ!

Today Horoscope 13th November 2026: 13 ನವೆಂಬರ್ 2026ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Nov 13, 2026, 09:01 IST | Updated: Nov 13, 2026, 09:06 IST
Join

Shukravara 13th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಶುಕ್ರವಾರದ ಈ ದಿನ ಮೂಲಾ ನಕ್ಷತ್ರದಲ್ಲಿ, ಧೃತಿ ಯೋಗ, ವಣಿಜ ಕರಣ ಇರಲಿದೆ.

ಮೇಷ ರಾಶಿ:   ಇಂದು ನೀವು ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣುವೀರಿ. ಪ್ರಕೃತಿಯೊಂದಿಗೆ ಸಮಯ ಕಳೆಯುತ್ತೀರಿ. ಕುಟುಂಬದ ಶುಭ ಕಾರ್ಯಗಳ ಕುರಿತು ಚರ್ಚೆ ಮಾಡುವೀರಿ. ವೃತ್ತಿ ಜೀವನದಲ್ಲಿ ಅಚ್ಚುಕಟ್ಟಾಗಿ ಯೋಜನೆ ರೂಪಿಸಿದರೆ ಯಶಸ್ಸು ಖಂಡಿತ. ಪ್ರೀತಿ ಪಾತ್ರರ ಬೆಂಬಲ ನಿಮಗೆ ಏಳಿಗೆ ತರಲಿದೆ.

ವೃಷಭ ರಾಶಿ: ಇಂದು ಈ ರಾಶಿ ಅವರಿಗೆ ಧೃತಿ ಯೋಗದ ಪರಿಣಾಮ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಹೊಸ ಕೋರ್ಸ್‌ ಪ್ರಾರಂಭಿಸಲು ಮತ್ತು ನಿಮ್ಮ ಅಧ್ಯಯನದ ದಿಕ್ಕನ್ನು ಬದಲಾಯಿಸಲು ಒಳ್ಳೆಯ ಸಮಯವಾಗಿದೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆ ಇದೆ.

ಮಿಥುನ ರಾಶಿ:  ಆರ್ಥಿಕ ಸಲಹೆಗಳು ಸಿಗುವುದು ತುಸು ತಡವಾಗಬಹುದು. ತಾಳ್ಮೆ ಇರಲಿ. ವೃತ್ತಿ ಜೀವನದಲ್ಲಿ ಸೌಜನ್ಯದಿಂದ ವರ್ತಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ ಇಂದ ವರ್ತಿಸಿ. ದಿನಚರಿಯಲ್ಲಿ ಶಿಸ್ತು ಕಾಪಾಡಿಕೊಳ್ಳಿ. ವಿಶ್ರಾಂತಿಗೆ ಸಮಯ ಮೀಸಲಿಡಿ.

ಕರ್ಕಾಟಕ ರಾಶಿ: ಈ ರಾಶಿಯವರಿಗೂ ಧೃತಿ ಯೋಗದ ಭಾಗ್ಯ ಇದ್ದು, ಹಣಕಾಸಿನ ವಿಷಯದಲ್ಲಿ ಪರಿಹಾರ ಸಿಗುತ್ತದೆ. ಇದರಿಂದ ನಿಮ್ಮ ಮನಸ್ಸು ಹಗುರ ಮತ್ತು ಸಂತೋಷದಿಂದ ಕೂಡಿರುತ್ತದೆ. ದೀರ್ಘ ಕಾಲದ ಚಿಂತೆಯೊಂದು ಬಗೆಹರಿಯಲಿದೆ. ಇದು ನಿಮ್ಮ ಭವಿಷ್ಯದ ಯೋಜನೆಯನ್ನು ರೂಪಿಸಲು ಸಹಾಯಕವಾಗುತ್ತದೆ.

ಸಿಂಹ ರಾಶಿ: ಇಂದು ಧೃತಿ ಯೋಗದ ಪರಿಣಾಮದಿಂದ ನಿಮ್ಮ ಆದಾಯ ಮತ್ತು ಆತ್ಮವಿಶ್ವಾಸ ಎರಡೂ ಹೆಚ್ಚಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಉತ್ತಮ ಸಂವಹನದಿಂದ ಕೆಲಸ ಸುಲಭವಾಗಲಿದೆ. ಹಣಕಾಸಿನ ವಿಚಾರದಲ್ಲಿ ಅನುಕೂಲಕರ ಬೆಳವಣಿಗೆ ಕಂಡು ಬರುತ್ತದೆ. ಮಕ್ಕಳಿಂದ ಖುಷಿ ಸುದ್ದಿ ಕೇಳುವೀರಿ.

ಕನ್ಯಾ ರಾಶಿ: ಮನೆ ಅಥವಾ ಆಸ್ತಿ ಸಂಬಂಧಿತ ವಿಚಾರಗಳಿಗೆ ಖರ್ಚು ಹೆಚ್ಚಾಗಬಹುದು ಜೋಕೆ. ಕೆಲಸದಲ್ಲಿ ಏಕಾಗ್ರತೆ ಅಗತ್ಯ. ಮನೆಯ ಹಿರಿಯರ ಸಲಹೆ ಮತ್ತು ಬೆಂಬಲ ದೊರೆಯಲಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರೇ ಆರೋಗ್ಯದ ಮೇಲೆ ಗಮನಹರಿಸಿ.

ತುಲಾ ರಾಶಿ:  ಇಂದು ವ್ಯಕ್ತಿತ್ವ ಮತ್ತು ಕೆಲಸದ ಶೈಲಿಯನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತೀರಿ. ಆದರೆ ಕೆಲಸದಲ್ಲಿ ಉದ್ವಿಗ್ನತೆ ಹಾಗೂ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ತಾಳ್ಮೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ.

ವೃಶ್ಚಿಕ ರಾಶಿ: ಆದಾಯ ಹೆಚ್ಚಿಸುವ ಅವಕಾಶಗಳು ಸಿಗಲಿದೆ. ಸಂಬಂಧಿಕರ ಮಾತಿನ ಮೂಲಕ ಮನಸ್ಸಿಗೆ ನೋವಾಗಬಹುದು. ಮಾನಸಿಕ ಒತ್ತಡ ಮತ್ತು ಆಯಾಸ ಕಾಡಬಹುದು. ವಿಶ್ರಾಂತಿ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.

ಧನು ರಾಶಿ: ಇಂದು ಈ ರಾಶಿಯವರಿಗೆ ಧೃತಿ ಯೋಗದ ಭಾಗ್ಯವಿದ್ದು, ನಿಮ್ಮ ಆದಾಯ ವೃದ್ದಿಸಲಿದೆ. ನಿಮ್ಮ ಆಲೋಚನೆಗಳಿಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುವೀರಿ. ನಿಮ್ಮ ನಿರ್ಧಾರಗಳಿಗೆ ಮನೆಯವರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವೀರಿ. ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿ.

ಮಕರ ರಾಶಿ: ಇಂದು ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ನೀಡಲು ಸಹಾಯ ಮಾಡುವ ಹಲವಾರು ಹೊಸ ಆಲೋಚನೆಗಳು ಮತ್ತು ಯೋಜನೆಗಳೊಂದಿಗೆ ನೀವು ಬರಬಹುದು. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಿವುದು ಒಳ್ಳೆಯ ಸಂಕೇತ. ಯಾರನ್ನಾದರೂ ಕುರುಡಾಗಿ ನಂಬುವುದು ಸೂಕ್ತವಲ್ಲ. ಏಕೆಂದರೆ ಕೆಲವರು ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬಹುದು.

ಕುಂಭ ರಾಶಿ:  ಇಂದು ನಿಮಗೆ ಸಕಾರಾತ್ಮಕ ಮತ್ತು ಪ್ರೋತ್ಸಾಹದಾಯಕ ದಿನವಾಗಬಹುದು.  ವಾಯು ಮಾಲಿನ್ಯದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಿ. ಆರ್ಥಿಕ ಪ್ರಗತಿ ಉತ್ತಮವಾಗಿದೆ. ನಿಮ್ಮ ಮಕ್ಕಳು ನಿಮ್ಮ ನಿರೀಕ್ಷೆಗಳನ್ನು ಪೂರೈಸಬಹುದು, ಇದು ನಿಮಗೆ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ.

ಮೀನ ರಾಶಿ: ಇಂದು, ನಿಮ್ಮ ಸುತ್ತಲೂ ಸಂತೋಷ ಮತ್ತು ಸಕಾರಾತ್ಮಕತೆಯ ವಾತಾವರಣ ನೆಲೆಸಬಹುದು. ಇಂದು ನೀವು ಷೇರು ಮಾರುಕಟ್ಟೆ ಮತ್ತು ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಿ. ವಿದೇಶಿ ಆಸ್ತಿ ಹೂಡಿಕೆ ಬಗ್ಗೆ ಎಚ್ಚರವಿರಲಿ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES