• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 12-11-2026: ಗುರುವಾರದಂದು ಸುಕರ್ಮ ಯೋಗ, ಈ ರಾಶಿಯವರಿಗೆ ಗುರುರಾಯರ ಅನುಗ್ರಹ

ದಿನ ಭವಿಷ್ಯ 12-11-2026: ಗುರುವಾರದಂದು ಸುಕರ್ಮ ಯೋಗ, ಈ ರಾಶಿಯವರಿಗೆ ಗುರುರಾಯರ ಅನುಗ್ರಹ

Today Horoscope 12th November 2026: 12 ನವೆಂಬರ್ 2026ರ ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಲ್ಲಿ ಯಾವ ರಾಶಿಗೆ ಗುರು ರಾಘವೇಂದ್ರರ ಅನುಗ್ರಹ ಇರಲಿದೆ ಎಂದು ತಿಳಿಯೋಣ.

Written ByYashaswini V
Published: Nov 12, 2026, 09:24 IST|Updated: Nov 12, 2026, 09:28 IST
joinshare
ದಿನ ಭವಿಷ್ಯ 12-11-2026: ಗುರುವಾರದಂದು ಸುಕರ್ಮ ಯೋಗ, ಈ ರಾಶಿಯವರಿಗೆ ಗುರುರಾಯರ ಅನುಗ್ರಹ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Guruvara 12th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಗುರುವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಸುಕರ್ಮ ಯೋಗ, ವಣಿಜ ಕರಣ ಇರಲಿದೆ.

ಮೇಷ ರಾಶಿ: 
ಇಂದು ಈ ರಾಶಿ ಅವರಿಗೆ ಮಿಶ್ರ ಫಲ ದೊರೆಯಲಿದೆ. ಆದಾಯದ ವಿಚಾರದಲ್ಲಿ ಪ್ರಗತಿ ಸಾಧ್ಯ. ಹೂಡಿಕೆ ಮಾಡುವ ಮುನ್ನ ಯೋಚಿಸಿ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ವಿಶ್ರಾಂತಿ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ.

ವೃಷಭ ರಾಶಿ: 
ಅನಿರೀಕ್ಷಿತ ಕರ್ಚುಗಳು ಎದುರಾಗಬಹುದು. ಹಣಕಾಸು ವ್ಯವಹಾರದಲ್ಲಿ ಜಾಗರೂಕರಾಗಿರಿ. ಸಾಲ ನೀಡುವಾಗ ಎಚ್ಚರಿಕೆವಹಿಸಿ. ಕೆಲಸದ ಜವಾಬ್ದಾರಿ ಹೆಚ್ಚಾಗಬಹುದು. ಮಾತಿನಲ್ಲಿ ಸಂಯಮ ಇರಲಿ. ಮಾನಸಿಕ ಒತ್ತಡ ಮತ್ತು ದೈಹಿಕ ಆಯಾಸ ಕಾಡಬಹುದು.

ಮಿಥುನ ರಾಶಿ: 
ಈ ರಾಶಿಗೆ ಸುಕರ್ಮ ಯೋಗದ ಪ್ರಭಾವ ಇರುವುದರಿಂದ ಆದಾಯದ ವಿಚಾರದಲ್ಲಿ ಪ್ರಗತಿ ಕಾಣಿಸಲಿದೆ.ಈ ಶುಭ ಯೋಗದಿಂದಾಗಿ ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಲು ಇಂದು ಒಳ್ಳೆಯ ದಿನವಾಗಿದೆ.ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಿರಿ. ಇಂದು ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳಲಿದೆ.

ಕರ್ಕಾಟಕ ರಾಶಿ: 
ಇಂದು ನಿಮಗೆ ಕೆಲವು ಜವಾಬ್ದಾರಿಗಳು ಹೆಚ್ಚಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಮ್ಮ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಭಾವನೆಯನ್ನು ಹಂಚಿಕೊಳ್ಳಿ. ದೈಹಿಕ ಆಯಾಸ ನಿರ್ಲಕ್ಷಿಸಬೇಡಿ.

ಸಿಂಹ ರಾಶಿ: 
ಸುಕರ್ಮ ಯೋಗದ ಪರಿಣಾಮವಾಗಿ ಇಂದು ಸಾಕಷ್ಟು ಸುಧಾರಣೆ ಹೊಂದುವ ಸಾಧ್ಯತೆ ಇದೆ. ವೈವಾಹಿಕ ಜೀವನವು ಉತ್ತಮ ರೀತಿಯಲ್ಲಿ ಇರಲಿದೆ. ನಿಮ್ಮ ಸಾಹಸ ಮತ್ತು ಪರಕ್ರಮಗಳಿಗೆ ಗೆಲುವು ದೊರೆಯಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ  ಪ್ರಭಾವ ಹೆಚ್ಚಾಗಲಿದೆ. ಇಂದು ಧನ ಸಂಪತ್ತು ಗಳಿಸುವಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ.

ಕನ್ಯಾ ರಾಶಿ: 
ಈ ರಾಶಿಯವರಿಗೆ ಇಂದು ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮನೆಯವರೊಂದಿಗೆ ಚರ್ಚಿಸಿ. ತಾಳ್ಮೆಯಿಂದ ವರ್ತಿಸಿದರೆ ಸಮಸ್ಯೆ ಬಗೆಹರಿಯಲಿದೆ. ಕೆಲಸದಲ್ಲಿ ಏಕಾಗ್ರತೆ ಅಗತ್ಯ ಆರೋಗ್ಯದ ಮೇಲೆ ಗಮನ ಇರಲಿ.

ತುಲಾ ರಾಶಿ: 
ಇಂದು ನಿಮಗೆ ಆರ್ಥಿಕ ವಿಷಯದಲ್ಲಿ ಲಾಭ ದೊರೆಯಲಿದೆ. ಸಣ್ಣ ಪ್ರಯತ್ನದಿಂದ ಆದಾಯ ಹೆಚ್ಚಿಸುವ ಮಾರ್ಗ ದೊರೆಯಲಿದೆ. ಸಹೋದರ-ಸಹೋದರಿಯರಿಂದ ಸಹಾಯ ಸಿಗಲಿದೆ. ನಿಮ್ಮ ಮಾತುಕತೆಯಿಂದ  ಪ್ರಗತಿ ಸಾಧಿಸಬಹುದು.

ವೃಶ್ಚಿಕ ರಾಶಿ: 
ಇಂದು ಸುಕರ್ಮ ಯೋಗದಿಂದಾಗಿ ಸಾಹಸ ಮತ್ತು ಪರಾಕ್ರಮದಲ್ಲಿ ಸಾಕಷ್ಟು ವೃದ್ದಿಯನ್ನು ಹೊಂದಿರುತ್ತಾರೆ. ಈ ರಾಶಿಗೆ ಸೇರಿದ ಜನರ ಅಪೂರ್ಣ ಕೆಲಸಗಳೆಲ್ಲವೂ ಇಂದು ಯಶಸ್ವಿಯಾಗಿ ಪೂರ್ಣಗೊಳ್ಳಲು ಅನೇಕ ಉತ್ತಮ ಮಾರ್ಗಗಳನ್ನು ಪಡೆದುಕೊಳ್ಳುವಿರಿ. ಗುರುರಾಯರ ಅನುಗ್ರಹದಿಂದಾಗಿ ತಮ್ಮ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲವನ್ನು ಗಳಿಸಲಿದ್ದೀರಿ.

ಧನು ರಾಶಿ: 
ಧನು ರಾಶಿಗೆ ಸೇರಿದ ಜನರಿಗೆ ಇಂದು ಗುರುವಾರ ದಿನ ವಿಷ್ಣು ದೇವನ ಅನುಗ್ರಹದ ಪ್ರಾಪ್ತಿಯಾಗಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ದೊಡ್ಡ ಹೂಡಿಕೆ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ. ಹೊಸ ಯೋಜನೆಗಳನ್ನು ರೂಪಿಸಲು ಅವಕಾಶ ಸಿಗಬಹುದು.  ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ.

ಮಕರ ರಾಶಿ: 
ಈ ರಾಶಿಯವರಿಗೆ ತಾಳ್ಮೆ ಮತ್ತು ಸಂಯಮ ಅಗತ್ಯ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಬಹುದು. ನಿಮ್ಮ ಕೆಲಸವನ್ನು ಶಾಂತವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಳಿಸಿ.

ಕುಂಭ ರಾಶಿ: 
ಆದಾಯದಲ್ಲಿ ಸುಧಾರಣೆ ಕಂಡು ಬರಬಹುದು. ಹಳೆಯ ಬಾಕಿ ಹಣ ವಾಪಸ್ ಸಿಗುವ ಸಾಧ್ಯತೆಯಿದೆ. ಉಳಿತಾಯದ ಕಡೆ ಗಮನ ಕೊಡಿ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಯಮಿತ ವ್ಯಾಯಾಮ ಮತ್ತು ವಿಶ್ರಾಂತಿ ಅಗತ್ಯ.

ಮೀನ ರಾಶಿ: 
ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶಗಳು ಎದುರಾಗಬಹುದು. ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಅನುಕೂಲಕರ ಫಲ ದೊರೆಯಬಹುದು. ಮನೆಯ ಪ್ರಮುಖ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಕೆಲಸದ ಒತ್ತಡದಿಂದ ಆಯಾಸ ಉಂಟಾಗಬಹುದು. ಆರೋಗ್ಯಕರ ದಿನಚರಿ ಪಾಲಿಸಿ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Dina Bhavishya
Horoscope Today