ದಿನ ಭವಿಷ್ಯ 09-11-2026: ಸೋಮವಾರದಂದು ಸೌಭಾಗ್ಯ ಯೋಗ, ಇಂದಿನ ನಿಮ್ಮ ರಾಶಿಫಲ ಹೇಗಿದೆ?
Today Horoscope 09th November 2026: 09 ನವೆಂಬರ್ 2026ರಂದು ದೀಪಾವಳಿ ಅಮಾವಾಸ್ಯೆಯ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara 09th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಸೋಮವಾರದ ಈ ದಿನ ಸ್ವಾತಿ ನಕ್ಷತ್ರ, ಸೌಭಾಗ್ಯ ಯೋಗ, ಕಿಂಸ್ತುಘ್ನ ಕರಣ ಇರಲಿದೆ.
ಮೇಷ ರಾಶಿ:
ಸೌಭಾಗ್ಯ ಯೋಗವು ಮೇಷ ರಾಶಿಯ ಜನರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ಹೆಚ್ಚಿಸಲಿದೆ. ನಿಮಗಿಂದು ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶಗಳು ಸಿಗಬಹುದು. ಆದಾಯದ ಮೂಲಗಳು ಹೆಚ್ಚಾಗಲಿವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಆಫರ್ ಬರಬಹುದು. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಸೌಭಾಗ್ಯ ಯೋಗದ ಪ್ರಭಾವದಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ವಾಹನ, ಭೂಮಿ ಖರೀದಿಸುವ ಅವಕಾಶಗಳು ಸಿಗಬಹುದು. ಉದ್ಯಮಿಗಳು ನಿರೀಕ್ಷೆಯಂತೆ ಉತ್ತಮ ಲಾಭವನ್ನು ಗಳಿಸುವರು. ದಾಂಪತ್ಯ ಸುಖ ಹೆಚ್ಚಾಗಲಿದೆ.
ಮಿಥುನ ರಾಶಿ:
ಸೌಭಾಗ್ಯ ಯೋಗವು ಮಿಥುನ ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಇಂದು ನೀವು ಮಾಡುವ ಕೆಲಸದಲ್ಲಿ ಬಯಸಿದ ಫಲಿತಾಂಶವನ್ನು ಪಡೆಯುವಿರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಹಕಾರ ಸಿಗಲಿದೆ. ಉದ್ಯಮಿಗಳು ಪ್ರಮುಖ ಪ್ರಾಜೆಕ್ಟ್ ಪಡೆಯಲು ಹೆಚ್ಚು ಶ್ರಮಿಸಬೇಕಾಗುತ್ತದೆ.
ಕರ್ಕಾಟಕ ರಾಶಿ:
ದೀಪಾವಳಿ ಅಮಾವಾಸ್ಯೆಯ ದಿನ ಸೌಭಾಗ್ಯ ಯೋಗವು ಕರ್ಕಾಟಕ ರಾಶಿಯವರಿಗೆ ಶುಭ ಫಲಗಳನ್ನು ಹೆಚ್ಚಿಸಲಿದೆ. ಇಂದು ಉದ್ಯೋಗಸ್ಥರು ಬಡ್ತಿಯನ್ನು ನಿರೀಕ್ಷಿಸಬಹುದು. ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ.
ಸಿಂಹ ರಾಶಿ:
ಸೌಭಾಗ್ಯ ಯೋಗವು ಸಿಂಹ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು ಮಾಡುವ ಪ್ರತಿ ಕೆಲಸದಲ್ಲೂ ಅದೃಷ್ಟ ಕೈ ಹಿಡಿಯಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದಿನ ದಿನವು ಶುಭ ಫಲಗಳನ್ನು ಹೆಚ್ಚಿಸಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ತುಲಾ ರಾಶಿ:
ಸೌಭಾಗ್ಯ ಯೋಗವು ತುಲಾ ರಾಶಿಯ ಜನರಿಗೆ ಶುಭ ದಿನ ಎಂದು ಸಾಬೀತುಪಡಿಸಲಿದೆ. ಇಂದು ಕುಟುಂಬಸ್ಥರಿಂದ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನಿರೀಕ್ಷಿಸಬಹುದು. ಕುಟುಂಬ ಜೀವನದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ.
ವೃಶ್ಚಿಕ ರಾಶಿ:
ಸೌಭಾಗ್ಯ ಯೋಗವು ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆ ಇದೆ. ಕೆಲಸದಲ್ಲಿ ನಿಮ್ಮ ಶಕ್ತಿ, ಸಾಮರ್ಥ್ಯಗಳು ಹೆಚ್ಚಾಗಲಿವೆ. ಧೈರ್ಯದಿಂದ ವಿರೋಧಿಗಳನ್ನು ಎದುರಿಸಿ, ಅವರು ನಿಮ್ಮ ಮುಂದೆ ಮಂಡಿಯೂರುವರು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಆರೋಗ್ಯವೂ ಸುಧಾರಿಸಲಿದೆ.
ಧನು ರಾಶಿ:
ಸೌಭಾಗ್ಯ ಯೋಗವು ಧನು ರಾಶಿಯವರಿಗೆ ಹಲವು ಆಯಾಮಗಳಲ್ಲಿ ಗಮನಾರ್ಹ ಲಾಭಗಳನ್ನು ತರಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣವನ್ನು ಮರಳಿ ಪಡೆಯುವ ಸೂಚನೆಗಳಿವೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಕೆಲಸದಲ್ಲಿ ಎಲ್ಲರ ಬೆಂಬಲ ಪಡೆಯುವ ನಿರೀಕ್ಷೆ ಇದೆ. ಕುಟುಂಬದಲ್ಲೂ ಉತ್ತಮ ವಾತಾವರಣ ಇರಲಿದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸೂಚನೆಗಳಿವೆ. ಸೌಭಾಗ್ಯ ಯೋಗವು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ವೃತ್ತಿಪರರಿಗೆ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ಕುಂಭ ರಾಶಿ:
ಸೌಭಾಗ್ಯ ಯೋಗವು ಕುಂಭ ರಾಶಿಯ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ಇಂದು ನೀವು ನಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸೂಚನೆಗಳಿವೆ. ಹೊಸ ವ್ಯವಹಾರಗಳಲ್ಲಿ ಕೈ ಹಾಕುವಾಗ ತಾಳ್ಮೆಯಿಂದ ಇರಿ. ಹೂಡಿಕೆಗಳಿಂದ ದೂರ ಉಳಿದರೆ ಒಳಿತು. ಉದ್ಯೋಗಿಗಳಿಗೆ ಉತ್ತಮ ಫಲಿತಾಂಶ ಸಿಗಬಹುದು.
ಮೀನ ರಾಶಿ:
ಮೀನ ರಾಶಿಯವರಿಗೆ ಸೌಭಾಗ್ಯ ಯೋಗವು ಮಿಶ್ರ ಫಲಗಳನ್ನು ನೀಡಬಹುದು. ಇಂದು ನಿಮ್ಮ ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಉದ್ಯಮಿಗಲೂ ಹೊಸ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರೆ ಬಯಸಿದ ಫಲ ಸಿಗಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.