ದಿನ ಭವಿಷ್ಯ 07-11-2026: ಶನಿವಾರ ಚಿತ್ರಾ ನಕ್ಷತ್ರದಲ್ಲಿ ಪ್ರೀತಿ ಯೋಗ.. ಈ ರಾಶಿಯವರಿಗೆ ಸ್ವಂತ ಮನೆ ಖರೀದಿ ಸುಯೋಗ
Today Horoscope 07th November 2026: 06 ನವೆಂಬರ್ 2026ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shanivara 07th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶನಿವಾರದ ಈ ದಿನ ಚಿತ್ರಾ ನಕ್ಷತ್ರ, ಪ್ರೀತಿ ಯೋಗ, ವಿಷ್ಟಿಸ ಕರಣ ಇರಲಿದೆ.
ಮೇಷ ರಾಶಿ:
ಪ್ರೀತಿ ಯೋಗದ ಪ್ರಭಾವದಿಂದ ಮೇಷ ರಾಶಿಯವರಿಗೆ ಇಂದು ಸ್ನೇಹಿತರಿಂದ ಬೆಂಬಲ ಸಿಗಲಿದೆ. ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿ ಲಾಭವಾಗಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಬಡ್ತಿ ಸೂಚನೆಗಳಿವೆ. ಆರೋಗ್ಯದಲ್ಲೂ ಸುಧಾರಣೆ ಕಾಣಬಹುದು.
ವೃಷಭ ರಾಶಿ:
ಸ್ವಂತ ಮನೆ ಖರೀದಿಸಲು ಪ್ರಯತ್ನಿಸುತ್ತಿರುವ ವೃಷಭ ರಾಶಿಯ ಜನರಿಗೆ ಪ್ರೀತಿ ಯೋಗವು ಫಲಪ್ರದವಾಗಿದೆ. ಇಂದು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶಗಳು ಸಿಗಬಹುದು. ಕೆಲಸಗಳಲ್ಲಿ ನಿಮ್ಮ ಶಕ್ತಿ ಸಾಮರ್ಥ್ಯ ಹೆಚ್ಚಾಗಲಿದೆ. ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು.
ಮಿಥುನ ರಾಶಿ:
ಮಿಥುನ ರಾಶಿಯ ಜನರಿಗೆ ಶನಿವಾರ ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನವಾಗಿರಲಿದೆ. ಇಂದು ನಿಮ್ಮ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭದ ನಿರೀಕ್ಷೆ ಇದೆ. ಮಕ್ಕಳಿಂದ ಸಿಹಿ ಸಮಾಚಾರ ಕೇಳುವಿರಿ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಉತ್ತಮ ಫಲಿತಾಂಶಗಳನ್ನು ಹೊತ್ತು ತರಲಿದೆ. ಪ್ರೇಮ ಜೀವನವು ಸಂತೋಷದಿಂದ ಕೂಡಿರಲಿದೆ. ಇಂದು ನಿಮಗೆ ಆದಾಯಕ್ಕಿಂತ ಖರ್ಚುಗಳು ಅಧಿಕಗೊಳ್ಳಲಿವೆ. ವ್ಯವಹಾರದಲ್ಲಿ ವಿರೋಧಿಗಳ ವಿರುದ್ಧ ಮೇಲುಗೈ ಸಾಧಿಸುವ ಲಕ್ಷಣಗಳಿವೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಇಂದು ಮಾಡುವ ಕೆಲಸಗಳಲ್ಲಿ ಮಾನಸಿಕ ನೆಮ್ಮದಿ ಸಿಗಲಿದೆ. ನೀವು ಮಾಡುವ ಕೆಲಸಗಳಿಗೆ ಹೆತ್ತವರ ಬೆಂಬಲ, ಆಶೀರ್ವಾದ ಸಿಗುವ ಸೂಚನೆಗಳಿವೆ. ನಿಮ್ಮ ಮಾತಿನಿಂದಲೇ ಇತರರನ್ನು ಮೆಚ್ಚಿಸುವಿರಿ. ಕುಟುಂಬದಲ್ಲಿ ಅನುಕೂಲಕರವಾದ ವಾತಾವರಣ ಇರಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಇಂದು ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲಿದ್ದರೆ ಭವಿಷ್ಯದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಹಾಗಾಗಿ, ಈ ಬಗ್ಗೆ ವಿಶೇಷ ಕಾಳಜಿವಹಿಸಿ. ಹಣಕಾಸಿನ ಪರಿಸ್ಥಿತಿಗಳು ಸುಧಾರಿಸಲಿವೆ. ನೀವು ಮಾಡುವ ಕೆಲಸದ ಬಗ್ಗೆ ಜಾಗರೂಕರಾಗಿರಿ.
ತುಲಾ ರಾಶಿ:
ತುಲಾ ರಾಶಿಯವರು ಇಂದು ನಿಮ್ಮ ವೈಯಕ್ತಿಕ ಹಣಕಾಸಿನ ಆದ್ಯತೆಗಳ ಬಗ್ಗೆ ವಿಶೇಷ ಗಮನಹಿರಿಸಿ. ಈ ದಿನ ನಿಮ್ಮ ವೆಚ್ಚಗಳು ಹೆಚ್ಚಾಗುವ ಸೂಚನೆಗಳಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸಿ. ಇಲ್ಲವೇ ಸಮಸ್ಯೆಗಳು ಉಲ್ಬಣಿಸಬಹುದು.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಚಿತ್ರಾ ನಕ್ಷತ್ರದಲ್ಲಿ ಪ್ರೀತಿ ಯೋಗವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸಲಿದೆ. ಮಾಡುವ ಕೆಲಸಗಳಲ್ಲಿ ಸ್ನೇಹಿತರಿಂದ ಅಗತ್ಯ ಬೆಂಬಲವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ವಾತಾವರಣವು ತಿಳಿಯಾಗಿರಲಿದೆ. ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ಧನು ರಾಶಿ:
ಧನು ರಾಶಿಯ ಜನರಿಗೆ ಪ್ರೀತಿ ಯೋಗವು ಸ್ನೇಹಿತರು ಮತ್ತು ಪರಿಚಯಸ್ಥರಿಂದ ಉತ್ತಮ ಆರ್ಥಿಕ ಲಾಭಗಳನ್ನು ತರಲಿದೆ. ತಪ್ಪು ದಾರಿಯಲ್ಲಿ ಮಾಡುವ ಕೆಲಸಗಳಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು ನಿಮ್ಮ ವೆಚ್ಚಗಳು ಅಧಿಕಗೊಳ್ಳಬಹುದು. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ನಿಮ್ಮ ಆದಾಯ ಹೆಚ್ಚಾಗಲಿದ್ದು ಸ್ವಂತ ಮನೆ ಖರೀದಿಸುವ ನಿಮ್ಮ ಕನಸು ನನಸಾಗುವ ಸೂಚನೆಗಳಿವೆ. ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸೂಚನೆಗಳಿವೆ. ಸಮಾಜದಲ್ಲಿ ನಿಮಗೆ ಮನ್ನಣೆ ಸಿಗಲಿದ್ದು, ಕಚೇರಿಯಲ್ಲೂ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.
ಕುಂಭ ರಾಶಿ:
ಪ್ರೀತಿ ಯೋಗವು ಕುಂಭ ರಾಶಿಯ ಜನರಿಗೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ಹೂಡಿಕೆಗಳು ಲಾಭದಾಯಕವಾಗಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ನಿರೀಕ್ಷೆ ಇದೆ. ಇಂದು ನೀವು ಪಾಲುದಾರಿಕೆ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ. ಉದ್ಯಮಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ.
ಮೀನ ರಾಶಿ:
ಮೀನ ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ದೀರ್ಘಾವಧಿಯ ಸಾಲಗಳಿಂದ ಮುಕ್ತರಾಗುವಿರಿ. ನಿಮ್ಮ ಕೆಲಸಗಳಲ್ಲಿ ಹಠಾತ್ ಬದಲಾವಣೆಯ ಸಾಧ್ಯತೆಗಳಿವೆ. ಉದ್ಯೋಗಿಗಳು ಕಚೇರಿಯಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.