• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 06-11-2026: ಶುಕ್ರವಾರದಂದು ವಿಷ್ಕಂಭ ಯೋಗ, ಯಾವ ರಾಶಿಗೆ ಏನು ಫಲ!

ದಿನ ಭವಿಷ್ಯ 06-11-2026: ಶುಕ್ರವಾರದಂದು ವಿಷ್ಕಂಭ ಯೋಗ, ಯಾವ ರಾಶಿಗೆ ಏನು ಫಲ!

Today Horoscope 6th November 2026: 06 ನವೆಂಬರ್ 2026ರಂದು ವಿಷ್ಕಂಭ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Nov 06, 2026, 09:39 IST|Updated: Nov 06, 2026, 09:40 IST
joinshare
ದಿನ ಭವಿಷ್ಯ 06-11-2026: ಶುಕ್ರವಾರದಂದು ವಿಷ್ಕಂಭ ಯೋಗ, ಯಾವ ರಾಶಿಗೆ ಏನು ಫಲ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Shukravara 06th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಶುಕ್ರವಾರದ ಈ ದಿನ ಹಸ್ತ ನಕ್ಷತ್ರ, ವಿಷ್ಕಂಭ ಯೋಗ, ಗರಜ ಕರಣ ಇರಲಿದೆ.

ಮೇಷ ರಾಶಿ:  ಇಂದು ನಿಮಗೆ ಆರೋಗ್ಯದ ಸಮಸ್ಯೆಯಿಂದ ಚೇತರಿಕೆ ಆಗಲಿದೆ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಾಗ ಅಡೆತಡೆ ಉಂಟಾದರೂ ಕೊನೆಯಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಪ್ರಯಾಣದ ವೇಳೆ ಜಾಗರೂಕತೆ ವಹಿಸಿ. ಇಂದು ದೇವರ ದರ್ಶನ ಪಡೆಯಲಿದ್ದೀರಿ.

ವೃಷಭ ರಾಶಿ: ಇಂದು ಆರ್ಥಿಕ ಲಾಭ ಪಡೆಯಲಿದ್ದೀರಿ. ಕೆಲಸದ ಒತ್ತಡ ಹೆಚ್ಚಾಗಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬದ ಪ್ರೀತಿ ಮತ್ತು ಸಹಕಾರ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಆತ್ಮೀಯತೆ ಮತ್ತು  ಪ್ರೀತಿ ಹೆಚ್ಚಾಗಲಿದೆ.

ಮಿಥುನ ರಾಶಿ:  ಇಂದು ನೀವು ಉತ್ಸಾಹದಿಂದ ಮುನ್ನಡೆಯುವೀರಿ. ಆರ್ಥಿಕ ತೊಂದರೆಗಳು ಬಗೆಹರೆಯಲಿದೆ. ನಿರುದ್ಯೋಗಿಗಳಿಗೆ ಶುಭಸುದ್ದಿ ಸಿಗಲಿದೆ. ಇಂದು ಹೊಸ ಜನರ ಪರಿಚಯ ಆಗಲಿದೆ. ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನ. ಮಹಿಳೆಯರಿಗೆ ಮಾನಸಿಕ ಶಾಂತಿ ದೊರೆಯುತ್ತದೆ.

ಕರ್ಕಾಟಕ ರಾಶಿ: ಇಂಧು ನೀವು ಸಾಲ ತೆಗೆದುಕೊಳ್ಳುವ ಸ್ಥೀತಿ ಎದುರಾಗಬಹುದು. ಸಂಬಂಧಿಕರೊಂದಿಗೆ ಜಗಳವಾಗಬಹುದು. ವಿದ್ಯುತ್‌ ಉಪಕರಣಗಳು ಮತ್ತು ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಆರ್ಥಿಕ ಲಾಭ ದೊರೆಯುತ್ತದೆ. ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ.  ಸಂಗಾತಿಯೊಂದಿಗೆ ಆತ್ಮೀಯತೆ ಹೆಚ್ಚಾಗಲಿದೆ.  

ಸಿಂಹ ರಾಶಿ: ಆರ್ಥಿಕವಾಗಿ ಲಾಭ ಹೆಚ್ಚಾಗಿದ್ದರೂ ವೆಚ್ಚ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಮುನ್ನೆಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಆತ್ಮೀಯತೆ ಹೆಚ್ಚಾಗಲಿದೆ. ಅನಗತ್ಯ ಒತ್ತಡಕ್ಕೆ ಒಳಗಾಗಬೇಡಿ. ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ.

ಕನ್ಯಾ ರಾಶಿ: ಇಂದು ಬಟ್ಟೆ, ಐಶಾರಾಮಿ ವಸ್ತು ಖರೀದಿಸುವೀರಿ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಇರಲಿದೆ. ಆರ್ಥಿಕ ತೊಂದರೆ ಎದುರಾಗುತ್ತವೆ. ಕಷ್ಟಪಟ್ಟು ಕೆಲಸ ಮಾಡಿದರೂ ಯಾವುದೇ ಪ್ರಯೋಜನ ಸಿಗುವುದಿಲ್ಲ. ಆದ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ಮನೆ ಮತ್ತು ವಾಹನ ಖರೀದಿಸುವಲ್ಲಿ ಅಡೆತಡೆ ಉಂಟಾಗಬಹುದು.

ತುಲಾ ರಾಶಿ: ಕೆಲಸದಲ್ಲಿ ಅಡೆತಡೆ, ಸಂಗಾಂತಿಯೊಂದಿಗೆ ಭಿನ್ನಾಭಿಪ್ರಾಯ, ಭೂ ವಿವಾದ ಸೃಷ್ಟಿಯಾಗಬಹುದು ಎಚ್ಚರಿಕೆಯಿಂದಿರಿ. ಐಟಿ ಉದ್ಯೀಗಿಗಳಿಗೆ ಮೇಲಾಧಿಕಾರಿಗಳು ಕಿರಿಕಿರಿ ನೀಡಬಹುದು. ಚಿನ್ನ- ಬೆಳ್ಳಿ ಮತ್ತು ಉಕ್ಕಿನ ವ್ಯಾಪಾರಿಗಳಿಗೆ ಲಾಭ ದೊರಯಲಿದೆ. ಆಯಾಸ ಮತ್ತು ಮಾನಸಿಕ ಒತ್ತಡ ಕಾಣಿಸಿಕೊಳ್ಳಬಹುದು.

ವೃಶ್ಚಿಕ ರಾಶಿ: ಇಂದು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸು ವಹಿವಾಟು ವೇಗ ಪಡೆಯಲಿದೆ. ಆಪ್ತ ಸ್ನೇಹಿತರೊಂದಿಗಿನ ವಿವಾದ ಬಗೆಹರೆಯಲಿದೆ. ನಿಮ್ಮ ಸಂಗಾತಿ ಉಡುಗೊರೆ ನೀಡಬಹುದು. ಒಡಹುಟ್ಟಿದವರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ.

ಧನು ರಾಶಿ: ಕೆಲಸದ ಸ್ಥಳಗಳಲ್ಲಿ ಲಾಭದಾಯಕ ಅವಕಾಶಗಳು ದೊರೆಯಬಹುದು. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ದೊರೆಯಲಿದೆ.  ಒಡಹುಟ್ಟಿದವರ ನಡುವೆ ಸಾಮರಸ್ಯ ಇರಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವದ ವಲಯ ವಿಸ್ತರಿಸಬಹುದು. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ.  

ಮಕರ ರಾಶಿ: ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಮನಸ್ಸಿಗೆ ಸಂತೋಷ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದೀರಿ. ನೆರೆಹೊರೆಯವರು ಅಥವಾ ಸ್ನೇಹಿತರು ಮನೆಗೆ ಭೇಟಿ ನೀಡುವುದರಿಂದ ಸಂತೋಷ ಹೆಚ್ಚಾಗಬಹುದು. ಕೆಲಸದ ವಿಚಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇದು ಅನುಕೂಲಕರ ಸಮಯ.

ಕುಂಭ ರಾಶಿ: ಆರ್ಥಿಕ ವಿಷಯದಲ್ಲಿ ಪ್ರಗತಿ ಕಂಡು ಬರಲಿದೆ. ಪ್ರತಿ ಸ್ಪರ್ಧಿಗಳೇ ನಿಮ್ಮ ಸ್ನೇಹಿತರಾಗುತ್ತಾರೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳು ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.

ಮೀನ ರಾಶಿ: ನೀವು ಉದ್ಯೋಗ ಅವಕಾಶದಲ್ಲಿ ತೃಪ್ತಿಕರರಾಗಿರುತ್ತೀರಿ. ಇಂದು ಅಚ್ಚರಿಯ ಘಟನೆ ನಡೆಯಬಹುದು. ವಾಹನ ಮತ್ತು ಆಭರಣ ಖರೀದಿಸಲಿದ್ದೀರಿ. ಐಟಿ ಉದ್ಯೋಗಿಗಳಿಗೆ ಇಂದು ಲಾಭಕರವಾದ ದಿನವಾಗಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Dina Bhavishya
Horoscope Today