SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 03-10-2026: ಶನಿವಾರದಂದು ವರಿಯಾನ್‌ ಯೋಗ.. ಈ ರಾಶಿಯವರಿಗೆ ಅಪಾರ ಲಾಭ

Today Horoscope 03rd October 2026: 03 ಅಕ್ಟೋಬರ್ 2026ರಂದು ಗಂಡ ಯೋಗವು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Oct 03, 2026, 06:37 AM IST | Updated: Oct 03, 2026, 06:39 AM IST
Join

Shanivara 03rd October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಶನಿವಾರದ ಈ ದಿನ ಆರ್ದ್ರಾ ನಕ್ಷತ್ರ, ವರಿಯಾನ್‌ ಯೋಗ, ಗರಜ ಕರಣ ಇರಲಿದೆ.

ಮೇಷ ರಾಶಿ:
ಶನಿವಾರದ ದಿನ ವರಿಯಾನ್‌ ಯೋಗವು ಮೇಷ ರಾಶಿಯವರಿಗೆ ಎಲ್ಲಾ ರೀತಿಯಲ್ಲೂ ಶುಭದಾಯಕವಾಗಿದೆ. ಕುಟುಂಬದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಹೊಸ ಹೊಸ ಅವಕಾಶಗಳು ಸಿಗುವ ನಿರೀಕ್ಷೆ ಇದ್ದು, ವ್ಯವಹಾರದಲ್ಲೂ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ.

ವೃಷಭ ರಾಶಿ: 
ವೃಷಭ ರಾಶಿಯ ಜನರಿಗೆ ಇಂದಿನ ದಿನ ರೋಮಾಂಚನಕಾರಿ ಆಗಿರಲಿದೆ. ವರಿಯಾನ್‌ ಯೋಗವು ನಿಮಗೆ ಅದೃಷ್ಟವನ್ನು ತರಲಿದ್ದು ಕುಟುಂಬದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣುವಿರಿ. ನಿಮ್ಮ ದೀರ್ಘಕಾಲದ ಆಸೆಯೊಂದು ನೆರವೇರುವ ನಿರೀಕ್ಷೆ ಇದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ವಿರೋಧಿಗಳು ನಿಮ್ಮ ವಿರುದ್ಧ ಮಂಡಿ ಊರುವರು.

ಮಿಥುನ ರಾಶಿ: 
ಶನಿವಾರದ ಈ ದಿನ ಮಿಥುನ ರಾಶಿಯ ಜನರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಇಂದು ನೀವು ಯಾವುದೇ ಹೊಸ ವ್ಯವಹಾರಗಳಿಗೆ ಕೈ ಹಾಕುವಾಗ ತುಂಬಾ ಜಾಗರೂಕರಾಗಿರುವುದು ಒಳ್ಳೆಯದು. ಬಾಕಿ ಉಳಿದಿರುವ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತೋಷವನ್ನು ಕಾಣುವಿರಿ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಉದ್ಯಮಿಗಳು ವಿರೋಧಿಗಳಿಂದ ಹಲವು ಸವಾಲುಗಳನ್ನು ಎದುರಿಸಬಹುದು. ಉದ್ಯೋಗದಲ್ಲಿ ಇರುವವರು ನಿಮಗೆ ವಹಿಸಲಾದ ಕೆಲಸಗಳಲ್ಲಿ ವಿಶೇಷವಾದ ಗಮನ ಹರಿಸುವುದು ಒಳ್ಳೆಯದು. ಪ್ರೀತಿ ಜೀವನವು ಆನಂದದಾಯಕವಾಗಿರಲಿದೆ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಸಂತೋಷದಿಂದ ಕೂಡಿದ ದಿನವಾಗಿರುತ್ತದೆ. ವೃತ್ತಿ ಬದುಕಿನಲ್ಲಿ ನೆಮ್ಮದಿಯನ್ನು ಕಾಣುವಿರಿ. ಉದ್ಯೋಗಸ್ಥರು ಕಚೇರಿಯಲ್ಲಿ ನೀವು ಮಾಡುವ ಕೆಲಸಕ್ಕೆ ಮನ್ನಣೆಯನ್ನು ಪಡೆಯುವಿರಿ. ನಿಮ್ಮ ಹೊಸ ಯೋಜನೆಗಳಲ್ಲಿ ಯಶಸ್ಸು ಕೈ ಹಿಡಿಯಲಿದೆ. ಕುಟುಂಬದಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ. ಈ ದಿನ ಹಲವು ಕ್ಷೇತ್ರಗಳಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ನಿಮ್ಮ ಹಳೆಯ ಸಂಪರ್ಕಗಳಿಂದ ಉತ್ತಮ ಪ್ರಯೋಜನವನ್ನು ಪಡೆಯುವಿರಿ.

ತುಲಾ ರಾಶಿ: 
ಶನಿವಾರದಂದು ವರಿಯಾನ್‌ ಯೋಗದಿಂದ ತುಲಾ ರಾಶಿಯ ಜನರಿಗೆ ಅದೃಷ್ಟ ಖುಲಾಯಿಸಲಿದೆ. ಇಂದು ವೃತ್ತಿಯಲ್ಲಿ ಬಡ್ತಿ ಸಾಧ್ಯತೆ ಇದ್ದು, ವ್ಯವಹಾರ ವಿಸ್ತರಣೆಯ ಅವಕಾಶಗಳನ್ನು ಪಡೆಯುವಿರಿ. ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುವಿರಿ. ಉದ್ಯಮಿಗಳು ಹೂಡಿಕೆ ಬಗ್ಗೆ ಹುಷಾರಾಗಿರಿ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವಿರಗೆ ಇಂದು ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ವಿಶೇಷ ಕಾಳಜಿ ಅಗತ್ಯವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಫಲವನ್ನು ಪಡೆಯುವ ನಿರೀಕ್ಷೆ ಇದೆ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ.

ಧನು ರಾಶಿ:
ವರಿಯಾನ್‌ ಯೋಗವು ಧನು ರಾಶಿಯ ಜನರಿಗೆ ಅನುಕೂಲಕರವಾಗಿರಲಿದೆ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ವ್ಯವಹಾರದಲ್ಲಿ ಹೊಸ ಯೋಜನೆಗಳು ಕೈ ಸೇರಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಸೂಚನೆಗಳಿವೆ. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು.

ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ಶುಭ ದಿನ. ವೃತ್ತಿ ಬದುಕಿನಲ್ಲಿ ಪ್ರಗತಿಯ ಅವಕಾಶಗಳನ್ನು ಕಾಣುವಿರಿ. ಉದ್ಯೊಗದಲ್ಲಿ ಹೊಸ ಎತ್ತರಕ್ಕೆ ಏರುವ ಅವಕಾಶಗಳಿವೆ. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳು ಉತ್ತಮ ಲಾಭವನ್ನು ನೀಡಲಿವೆ. ನೀವು ಕಳೆದುಕೊಂಡಿದ್ದ ಅಮೂಲ್ಯವಾದ ವಸ್ತುವೊಂದು ಇಂದು ಮರಳಿ ನಿಮ್ಮ ಕೈ ಸೇರಲಿದೆ.

ಕುಂಭ ರಾಶಿ:
ವರಿಯಾನ್‌ ಯೋಗವು ಇಂದು ಕುಂಭ ರಾಶಿಯವರಿಗೆ ಶುಭದಾಯಕವಾಗಿದ್ದು ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆಯನ್ನು ತರಲಿದೆ. ಈ ದಿನ ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಆಫರ ಬರಬಹುದು. ಉದ್ಯಮಿಗಳು ದೊಡ್ಡ ಪ್ರಾಜೆಕ್ಟ್‌ಗೆ ಕೈ ಹಾಕುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ.

ಮೀನ ರಾಶಿ:
ಮೀನ ರಾಶಿಯವರಿಗೆ ವರಿಯಾನ್‌ ಯೋಗವು ತುಂಬಾ ವಿಶೇಷವಾಗಿದ್ದು ಈ ರಾಶಿಯ ಉದ್ಯೋಗಿಗಳಿಗೆ ಹಳೆಯ ಯೋಜನೆಗಳಿಗೆ ಉತ್ತಮ ಲಾಭವಾಗಲಿದೆ. ಉದ್ಯಮಿಗಳು ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆಯಲಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES